ಆರ್‌ಎಸ್‌ಎಸ್‌ ಮುಖಂಡನಿಗೆ ಹೃದಯಾಘಾತ: ಕಾರಲ್ಲಿ ಕುಳಿತುಕೊಂಡೇ ಪ್ರಾಣಬಿಟ್ರು

By Sathish Kumar KH  |  First Published Oct 7, 2023, 2:46 PM IST

ಬಾಗಲಕೋಟೆಯಲ್ಲಿ ಕಾರಿಗೆ ಡೀಸೆಲ್ ಹಾಕಿಸಲು ಪೆಟ್ರೋಲ್‌ ಬಂಕ್‌ಗೆ ಬಂದಾಗ ಎದೆನೋವೆಂದು ಒದ್ದಾಡಿದ ಆರ್‌ಎಸ್‌ಎಸ್‌ ಮುಖಂಡ ತೀವ್ರ ಹೃದಯಾಘಾತದಿಂದ ಕುಳಿತಲ್ಲಿಯೇ ಪ್ರಾಣ ಬಿಟ್ಟಿದ್ದಾರೆ.


ಬಾಗಲಕೋಟೆ (ಅ.07): ಬಾಗಲಕೋಟೆಯಲ್ಲಿ ಕಾರಿಗೆ ಡೀಸೆಲ್ ಹಾಕಿಸಲು ಪೆಟ್ರೋಲ್‌ ಬಂಕ್‌ಗೆ ಬಂದಾಗ ಎದೆನೋವೆಂದು ಒದ್ದಾಡಿದ ಆರ್‌ಎಸ್‌ಎಸ್‌ ಮುಖಂಡ ತೀವ್ರ ಹೃದಯಾಘಾತದಿಂದ ಕುಳಿತಲ್ಲಿಯೇ ಪ್ರಾಣ ಬಿಟ್ಟಿದ್ದಾರೆ.

ಇನ್ನು ಬಾಗಲಕೋಟೆ ಜಿಲ್ಲೆಯ ಲೋಕಾಪುರ ಪಟ್ಟಣದಲ್ಲಿ ನಿನ್ನೆ ರಾತ್ರಿ ಘಟನೆ ನಡೆದಿದೆ. ಸಿದ್ದು ಚಿಕ್ಕದಾನಿ (45) ಹೃದಯಾಘಾತದಿಂದ ಮೃತಪಟ್ಟಿರುವ ಆರ್‌ಎಸ್‌ಎಸ್ ಜಿಲ್ಲಾ ಮುಖಂಡನಾಗಿದ್ದಾನೆ.  ಮೃತ ಸಿದ್ದು ಚಿಕ್ಕದಾನಿ ಮುಧೋಳ ನಗರದ ನಿವಾಸಿ ಆಗಿದ್ದಾರೆ. ಹೃದಯಾಘಾತದಿಂದ ಕಾರಿನಲ್ಲಿ ಕುಳಿತಲ್ಲೇ ಪ್ರಾಣಬಿಟ್ಟಿದ್ದಾರೆ. ರಾತ್ರಿ ಕಾರಿಗೆ ಡಿಸೆಲ್ ಹಾಕಿಸಿ, ಹೊರಡುವ ವೇಳೆ ಪೆಟ್ರೋಲ್ ಪಂಪ್ ಆವರಣದಲ್ಲೇ ಹೃದಯಾಘಾತ ಸಂಭವಿಸಿದೆ. ಈ ವೇಳೆ ಯಾರೊಬ್ಬರೂ ಸಹಾಯಕ್ಕೆ ಬಂದಿಲ್ಲ. ಹಾಗಾಗಿ, ತೀವ್ರ ಎದೆನೋವು ಕಾಣಿಸಿಕೊಂಡು ಕಾರಿನಲ್ಲಿಯೇ ಪ್ರಾಣ ಬಿಟ್ಟಿದ್ದಾರೆ. ಬೆಳಗ್ಗೆವರೆಗೂ ಯಾರೊಬ್ಬರೂ ಅವರನ್ನು ಗಮನಿಸಿಲ್ಲ.

Latest Videos

undefined

Father of the Year 2023 ಆಯ್ಕೆ ಮಾಡಿದ ನೆಟ್ಟಿಗರು: ನಿಮ್ಮ ಆಯ್ಕೆಯೂ ಇವರೇನಾ ನೋಡಿ...!

ರಾತ್ರಿ ವೇಳೆ ಪೆಟ್ರೋಲ್‌ ಬಂಕ್‌ನ ಸಿಬ್ಬಂದಿ ಕೂಡ ಕಾರಿನ ಮಾಲೀಕ ನಿದ್ದೆ ಬಂದು ಮಲಗಿರಬೇಕು ಎಂದು ಸುಮ್ಮನಾಗಿದ್ದಾರೆ. ಆದರೆ, ಬೆಳಗ್ಗೆ ಸುಮಾರು 7 ಗಂಟೆಯಾದರೂ ಕಾರನ್ನು ತೆಗೆಯದ ಹಿನ್ನೆಲೆಯಲ್ಲಿ ಅವರನ್ನು ಎಬ್ಬಿಸಲು ಮುಂದಾಗಿದ್ದಾರೆ. ಆದರೆ, ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ಇವರೇ ಬಾಗಿಲು ತೆರೆದು ಮಾತನಾಡಿಸಿದ್ದಾರೆ. ಆಗ ಸಾವನ್ನಪ್ಪಿರುವುದು ಕಂಡುಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಮೃತ ದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆರ್‌ಎಸ್‌ಎಸ್‌ ಮುಖಂಡನ ಸಾವಿನ ಹಿನ್ನೆಲೆಯಲ್ಲಿ ಅನುಮಾನ ಕೂಡ ವ್ಯಕ್ತಪಡಿಸಿದ್ದು, ಮರಣೋತ್ತರ ಪರೀಕ್ಷೆ ನಂತರ ಸಾವಿಗ ಕಾರಣ ಸ್ಪಷ್ಟವಾಗಿ ತಿಳಿಯಲಿದೆ ಎಂದು ತಿಳಿದುಬಂದಿದೆ. 

ಬೆಂಗಳೂರು (ಅ.07): ರಾಜ್ಯ ರಾಜಧಾನಿ ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಇಂಗ್ಲೀಷ್‌ ಪ್ರಾಧ್ಯಾಪಕರೇ ಓವರ್‌ ಸ್ಟೀಡ್‌ ಆಗಿ ಕಾರು ಚಾಲನೆ ಮಾಡಿದ್ದು, ಇಬ್ಬರು ವಿದ್ಯಾರ್ಥಿಗಳು ಹಾಗೂ ಒಬ್ಬರು ಪ್ರಾಧ್ಯಾಪಕರಿಗೆ ಗಂಭೀರ ಗಾಯವಾಗಿದೆ. 

ಬೆಂಗಳೂರು ಮಹಾರಾಣಿ ಕಾಲೇಜಿನಲ್ಲಿ ಶನಿವಾರ ಬೆಳಗ್ಗೆ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಹಾಗೂ ಮ್ಯೂಸಿಕ್ ಟೀಚರ್ ಜ್ಯೋತಿ ಅವರಿಗೂ ಗಾಯವಾಗಿದೆ. ಬಿಕಾಂ ವಿದ್ಯಾರ್ಥಿನಿ ಅಶ್ವಿನಿ ಹಾಗೂ ಮತ್ತೊಬ್ಬ ವಿದ್ಯಾರ್ಥಿನಿಗೆ ಗಂಭೀರ ಗಾಯವಾಗಿದೆ. ಈ ಪೈಕಿ ಅಶ್ವಿನಿ ಎಂಬ ವಿದ್ಯಾರ್ಥಿನಿಗೆ ಗಂಭೀರ ಗಾಯವಾಗಿದ್ದು, ಹತ್ತಿರದ ಸೆಂಟ್ ಮಾರ್ಥಾಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಕಾರು ಗುದ್ದಿದ ಸ್ಥಳದಲ್ಲಿ ತೀವ್ರ ರಕ್ತಸ್ರಾವ ಉಂಟಾಗಿದ್ದು, ವಿದ್ಯಾರ್ಥಿನಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

Bengaluru ಮಹಾರಾಣಿ ಕಾಲೇಜು ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳಿಗೆ ಗುದ್ದಿದ ಕಾರು: ಗಾಯಾಳುಗಳು ಆಸ್ಪತ್ರೆಗೆ ದಾಖಲು

ಇನ್ನು ಅಪಘಾತ ಮಾಡಿದ ವ್ಯಕ್ತಿಯನ್ನು ಹೆಚ್. ನಾಗರಾಜ್ ಇಂಗ್ಲೀಷ್ ಪ್ರೊಫೆಸರ್‌ ಎಂದು ಗುರುತಿಸಲಾಗಿದೆ. ಕಾಲೇಜು ಕ್ಯಾಂಪಸ್ ಆವರಣದಲ್ಲೇ ಓವರ್ ಸ್ಪೀಡ್ ನಲ್ಲಿ ಚಾಲನೆ ಮಾಡಿದ್ದರಿಂದ ದುರ್ಘಟನೆ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಿದ್ದಾರೆ. ಇನ್ನು ಕಾಲೇಜು ಆವರಣದಲ್ಲಿ ಎಲ್ಲ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ನಡೆದುಕೊಂಡು ಹೋಗುತ್ತಾರೆ. ಇಲ್ಲಿ ತೀವ್ರ ನಿಧಾನಗತಿಯಲ್ಲಿ ವಾಹನ ಚಾಲನೆ ಮಾಡಬೇಕು. ಆದರೆ, ಪ್ರೊಫೆಸರ್‌ ನಾಗರಾಜು ಅತಿ ವೇಗದಿಂದ ಚಾಲನೆ ಮಾಡಿದ್ದು, ಮುಂದೆ ಹೋಗುತ್ತಿದ್ದ ವಿದ್ಯಾರ್ಥಿನಿಗಳಿಗೆ ಡಿಕ್ಕಿ ಹೊಡೆದಿದೆ. ನಂತರ, ಮುಂದೆ ನಿಧಾನವಾಗಿ ಹೋಗುತ್ತಿದ್ದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದ್ದು, ಆ ಕಾರು ಮರಕ್ಕೆ ಹೋಗಿ ಡಿಕ್ಕಿ ಹೊಡೆದು ಜಖಂ ಆಗಿದೆ.

click me!