Baburao Chinchansur: ತಳವಾರ, ಪರಿವಾರಗೆ ಎಸ್‌ಟಿ ಪತ್ರ: ಸಿಎಂಗೆ ಚಿಂಚನಸೂರು ಕೃತಜ್ಞತೆ

By Kannadaprabha News  |  First Published Jan 31, 2022, 8:19 AM IST

ಬಸವಕಲ್ಯಾಣ ಹಾಗೂ ಸಿಂದಗಿ ಉಪ ಚುನಾವಣೆಯಲ್ಲಿ ನೀಡಿದ್ದ ಭರವಸೆಯಂತೆಯೇ ತಳವಾರ ಮತ್ತು ಪರಿವಾರ ಸಮುದಾಯದವರಿಗೆ ಎಸ್ಟಿಜಾತಿ ಪ್ರಮಾಣ ಪತ್ರ ನೀಡುವಂತೆ ರಾಜ್ಯ ಸರ್ಕಾರ ಶನಿವಾರ ಹೊರಡಿಸಿರುವ ಸುತ್ತೋಲೆಯನ್ನು ರಾಜ್ಯ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ, ಕೋಲಿ ಸಮಾಜದ ಮುಖಂಡ ಬಾಬೂರಾವ್‌ ಚಿಂಚನಸೂರ್‌ ಸ್ವಾಗತಿಸಿದ್ದಾರೆ.


ಕಲಬುರಗಿ (ಜ.31): ಬಸವಕಲ್ಯಾಣ ಹಾಗೂ ಸಿಂದಗಿ ಉಪ ಚುನಾವಣೆಯಲ್ಲಿ ನೀಡಿದ್ದ ಭರವಸೆಯಂತೆಯೇ ತಳವಾರ ಮತ್ತು ಪರಿವಾರ ಸಮುದಾಯದವರಿಗೆ ಎಸ್ಟಿ ಜಾತಿ ಪ್ರಮಾಣ ಪತ್ರ ನೀಡುವಂತೆ ರಾಜ್ಯ ಸರ್ಕಾರ ಶನಿವಾರ ಹೊರಡಿಸಿರುವ ಸುತ್ತೋಲೆಯನ್ನು ರಾಜ್ಯ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ, ಕೋಲಿ ಸಮಾಜದ ಮುಖಂಡ ಬಾಬೂರಾವ್‌ ಚಿಂಚನಸೂರ್‌ (Baburao Chinchansur) ಸ್ವಾಗತಿಸಿದ್ದಾರೆ. ಇದಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹಾಗೂ ಸಚಿವ ಸಂಪುಟದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಈ ಸಂಬಂಧ ಭಾನುವಾರ ‘ಕನ್ನಡಪ್ರಭ’ದ (Kannada Prabha) ಜತೆಗೆ ಮಾತನಾಡಿದ ಅವರು, ಈಗಾಗಲೇ ಪರಿಶಿಷ್ಟ ಪಂಗಡ (ಎಸ್‌ಟಿ) ಪಟ್ಟಿಗೆ ಸೇರ್ಪಡೆಯಾಗಿರುವ ತಳವಾರ, ಪರಿವಾರ ಸಮುದಾಯಕ್ಕೆ ಇನ್ನು ಮುಂದೆ ಎಸ್ಟಿಜಾತಿ ಪ್ರಮಾಣ ಪತ್ರ ನೀಡುವುದರಿಂದ ರಾಜ್ಯದಲ್ಲಿರುವ ಕೋಲಿ ಸಮುದಾಯದ 60 ಲಕ್ಷಕ್ಕೂ ಹೆಚ್ಚು ಮಂದಿಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.

Tap to resize

Latest Videos

ಎಸ್ಟಿ ಸೇರ್ಪಡೆ ಭರವಸೆ ಹಿನ್ನೆಲೆಯಲ್ಲಿ ಬಸವಕಲ್ಯಾಣ ಹಾಗೂ ಸಿಂದಗಿಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಕೋಲಿ ಸಮಾಜ ಬೆಂಬಲಿಸಿ ಗೆಲ್ಲಿಸಿತ್ತು. ಸಿಂದಗಿಯಲ್ಲಿ ನಾನೂ ಸೇರಿದಂತೆ ಹಲವು ಬಿಜೆಪಿ (BJP) ಮುಖಂಡರು ಕೋಲಿ ಸಮಾಜವನ್ನು ಎಸ್ಟಿಗೆ ಸೇರಿಸುವ ಭರವಸೆ ನೀಡಿದ್ದೆವು. ಚುನಾವಣೆ ಬಳಿಕ 100ಕ್ಕೂ ಹೆಚ್ಚು ಪ್ರಮುಖರನ್ನೊಳಗೊಂಡ ನಿಯೋಗದ ಜತೆಗೆ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಎಸ್ಟಿಜಾತಿ ಪ್ರಮಾಣ ಪತ್ರಕ್ಕಾಗಿ ಮನವಿಯನ್ನೂ ಸಲ್ಲಿಸಲಾಗಿತ್ತು ಎಂದರು.

H.Anjaneya: ಸಮಯ ಸಾಧಕರನ್ನು ಕಾಂಗ್ರೆಸ್ಸಿಗೆ ಸೇರಿಸಿಕೊಳ್ಳಬೇಡಿ

ಇದಕ್ಕಾಗಿ ಮುಖ್ಯಮಂತ್ರಿ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ, ಸಂಪುಟದ ಹಿರಿಯ ಸಚಿವರಾದ ಗೋವಿಂದ ಕಾರಜೋಳ, ಕೋಟ ಶ್ರೀನಿವಾಸ ಪೂಜಾರಿ, ಸಿ.ಸಿ. ಪಾಟೀಲ್‌, ಸಂಸದ ಡಾ.ಉಮೇಶ ಜಾಧವ್‌, ಶಾಸಕ ಬಸವನಗೌಡ ಪಾಟೀಲ್‌ ಯಾತ್ನಾಳ್‌, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು. 2020ರಲ್ಲೇ ರಾಜ್ಯ ಸರ್ಕಾರ ಸಂಸತ್‌ ನಿರ್ಧಾರದಂತೆ ತಳವಾರ, ಪರಿವಾರ ಸಮುದಾಯದವರನ್ನು ಪರಿಶಿಷ್ಟಪಂಗಡಕ್ಕೆ ಸೇರಿಸಿ ಗೆಜೆಟ್‌ ಅಧಿಸೂಚನೆ ಹೊರಡಿಸಿದ್ದರೂ ತಾಂತ್ರಿಕ ಕಾರಣದಿಂದಾಗಿ ಎಸ್ಪಿ ಜಾತಿ ಪ್ರಮಾಣ ಪತ್ರ ಪಡೆಯುವುದು ಸಾಧ್ಯವಾಗಿರಲಿಲ್ಲ.

ತಮ್ಮದೇ ಸರ್ಕಾರದ ವಿರುದ್ಧವೇ ಗುಡುಗಿದ ಚಿಂಚನಸೂರು: ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವಧಿಯ ಕಾಂಗ್ರೆಸ್ ಸರ್ಕಾರದಲ್ಲಿ ಸಪ್ತ ಖಾತೆಯ ಸಚಿವನೆರೆಸಿಕೊಂಡು, ಮೊನ್ನೆಯ ಲೋಕಸಭಾ ಚುನಾವಣೆಯ ವೇಳೆ ಬಿಜೆಪಿ ಪಕ್ಷ ಸೇರ್ಪಡೆಗೊಂಡು, ಖರ್ಗೆ ಕುಟುಂಬದ ವಿರುದ್ಧ ಹರಿಹಾಯ್ದಿದ್ದ ಮಾಜಿ ಸಚಿವ, ನಿಜಶರಣ ಅಂಬಿಗರ ಚೌಡಯ್ಯ ನಿಗಮದ ಹಾಲಿ ಅಧ್ಯಕ್ಷ ಬಾಬುರಾವ್ ಚಿಂಚನಸೂರ್ ಇದೀಗ ರಾಜ್ಯ ಸರ್ಕಾರದ ಕಾರ್ಯವೈಖರಿ ವಿರುದ್ಧವೇ ಗರಂ ಆಗಿದ್ದಾರೆ. 

ತಮ್ಮನ್ನು ಸಂಪರ್ಕಿಸಿದ ‘ಕನ್ನಡಪ್ರಭ’ದೊಂದಿಗೆ  ಮಾತನಾಡಿದ ಅವರು, ತಮ್ಮದೇ ಸರ್ಕಾರದ ಆಡಳಿತವಿದ್ದಾಗ್ಯೂ ಕೂಡ, ಅಧಿಕಾರಿಗಳ್ಯಾರೂ ಮಾತೇ ಕೇಳ್ತಿಲ್ಲ ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು. ಸಮುದಾಯದ ದೃಷ್ಟಿಯಿಂದ ತಮ್ಮನ್ನು ಮುಂದಿಟ್ಟುಕೊಂಡು ಬಸವ ಕಲ್ಯಾಣ ಹಾಗೂ ಸಿಂದಗಿ ಬೈ ಎಲೆಕ್ಷನ್ ಗೆದ್ದರು. 20-30 ಸಾವಿರ ಮತಗಳ ಅಂತರದಲ್ಲಿ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಟ್ಟೆ. ಹಾಗೆಯೇ, ಲೋಕಸಭಾ ಚುನಾವಣೆಯಲ್ಲೂ ನನ್ನ ಪಾತ್ರ ದೊಡ್ಡದಿತ್ತು. ಹೀಗಿದ್ದಾಗ್ಯೂ ಕೂಡ, ಸರ್ಕಾರದಲ್ಲಿ ನನ್ನ ಮಾತುಗಳು ಕಿಮ್ಮತ್ತು ಸಿಗ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಚಿವ ಶ್ರೀರಾಮುಲುಗೆ ಶಾಕ್‌ ಕೊಟ್ಟ ಚಿಂಚನಸೂರ್‌..!

ನನ್ನ ಕಾರ್ಯಕರ್ತರು ಹಾಗೂ ಬೆಂಬಲಿಗರು ಮತ್ತು ಬಡಜನರ ಕೆಲಸಗಳು ಆಗುತ್ತಿಲ್ಲ. ಅನೇಕ ಬಾರಿ ಹೇಳಿದರೂ ಯಾರೂ ಕೇಳುತ್ತಿಲ್ಲ. ಬಿಜೆಪಿ ಸೇರ್ಪಡೆಗೊಂಡು ಮೂರು ವರ್ಷಗಳು ಕಳೆದಿವೆ. ನನ್ನ ಬಳಿ ಬಂದ ಅನೇಕ ಜನಪರ ಕೆಲಸಗಳನ್ನು ಮಾಡುವಂತೆ ಅಧಿಕಾರಿಗಳಿಗೆ ಹೇಳಿದರೂ ಕೇಳುತ್ತಿಲ್ಲ. ನನ್ನ ಮಾತಿಗೇ ಕಿಮ್ಮತ್ತು ಇಲ್ಲದಂತಾಗಿದೆ ಎಂದ ಅವರು, ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ನನ್ನ ಅಳಲನ್ನು ತೋಡಿಕೊಳ್ಳುತ್ತೇನೆ ಎಂದರು. 

click me!