ನಿರೀಕ್ಷಿಸಿದಷ್ಟು ಅಂಕ ಬಂದಿಲ್ಲ ಅಂತ ಫಸ್ಟ್ ಕ್ಲಾಸಲ್ಲಿ ಪಾಸಾದ ಬಾಲಕಿ ಸಾವಿಗೆ ಶರಣು: ಚಿತ್ರದುರ್ಗದಲ್ಲೇ ಫೇಲಾಗಿದ್ದಕ್ಕೆ ಬಾಲಕ ಸಾವು

Published : Apr 23, 2026, 06:47 PM IST
student suicide

ಸಾರಾಂಶ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನಿರೀಕ್ಷಿತ ಅಂಕ ಬಾರದ ಕಾರಣಕ್ಕೆ ಮೈಸೂರಿನಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದ ವಿದ್ಯಾರ್ಥಿನಿ ಹಾಗೂ ಚಿತ್ರದುರ್ಗದಲ್ಲಿ ಒಂದು ಅಂಕದಿಂದ ಫೇಲಾದ ವಿದ್ಯಾರ್ಥಿ ಆತ್ಮ*ಹತ್ಯೆಗೆ ಶರಣಾಗಿದ್ದಾರೆ. 

ಮೈಸೂರಲ್ಲಿ ಫಸ್ಟ್ ಕ್ಲಾಸಲ್ಲಿ ಪಾಸಾದ್ರೂ ಬಾಲಕಿ ಸಾವಿಗೆ ಶರಣು

ಮೈಸೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನಿರೀಕ್ಷೆ ಮಾಡಿದಷ್ಟು ಅಂಕ ಬಂದಿಲ್ಲ ಅಂತ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದ ವಿದ್ಯಾರ್ಥಿನಿಯೊಬ್ಬಳು ಸಾವಿಗೆ ಶರಣಾದಂತಹ ಬೇಸರದ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ. ಮೈಸೂರಿನ ನಂಜನಗೂಡು ನಗರದಲ್ಲಿರುವ ಶ್ರೀ ಗುರುಮಲ್ಲೇಶ್ವರ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ16 ವರ್ಷದ ತ್ರಿಶಾಲ ಸಾವಿಗೆ ಶರಣಾದ ವಿದ್ಯಾರ್ಥಿನಿ. ತ್ರಿಶಾಲಾಗೆ ಎಸ್‌ಎಸ್‌ಎಲ್‌ಸಿಯಲ್ಲಿ ನಿರೀಕ್ಷೆ ಮಾಡಿದಷ್ಟು ಅಂಕ ಬಾರದೇ ಹೋದರೂ ಕೂಡ ಆಕೆ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಳು. ಆದರೆ ಹೆಚ್ಚು ಅಂಕ ಬರಲಿಲ್ಲವೆಂದು ದುಡುಕಿದ ಬಾಲಕಿ ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದಾಳೆ.

ತ್ರಿಶಾಲಾ ನಂಜನಗೂಡು ತಾಲೂಕಿನ ಕುರಹಟ್ಟಿ ಗ್ರಾಮದ ಮಂಜು ಹಾಗೂ ಸವಿತಾ ದಂಪತಿಯ ಪುತ್ರಿಯಾಗಿದ್ದು, ಒಟ್ಟು 440 ಅಂಕಗಳನ್ನು ಗಳಿಸಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಳು. ಆದರೆ ಬಾಲಕಿ ಡಿಸ್ಟಿಂಕ್ಷನ್‌ನಲ್ಲಿ ಪಾಸಾಗಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದಳು. ಆದರೆ ಕೇವಲ ಫಸ್ಟ್‌ಕ್ಲಾಸ್ ಮಾರ್ಕ್‌ ಅಷ್ಟೇ ಬಂದಿದೆ ಎಂದು ಆಕೆ ಸಾವಿಗೆ ಶರಣಾಗಿದ್ದಾಳೆ. ಪರೀಕ್ಷೆಯನ್ನು ಡಿಸ್ಟಿಂಕ್ಷನ್ ಬರುವ ಮಟ್ಟಕ್ಕೆ ಬರೆದಿದ್ದೇನೆ ಎಂದು ಹೇಳಿದ್ದಳು. ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿ ಆಕೆ ಸಾವಿಗೆ ಶರಣಾಗಿದ್ದಾಳೆ.

ಚಿತ್ರದುರ್ಗದಲ್ಲಿ ಬಾಲಕ ಸಾವು

ಮತ್ತೊಂದೆಡೆ ಚಿತ್ರದುರ್ಗದಲ್ಲಿ ಎಸ್‌ಎಸ್‌ಎಲ್‌ ಪರೀಕ್ಷೆಯಲ್ಲಿ ಫೇಲಾಗಿದ್ದಕ್ಕೆ ವಿದ್ಯಾರ್ಥಿ ಸಾವಿಗೆ ಶರಣಾದಂತಹ ದುಃಖದ ಘಟನೆ ನಡೆದಿದೆ. ಚಿತ್ರದುರ್ಗದ ಹೊರಪೇಟೆಯಲ್ಲಿ ವಾಸವಾಗಿರುವ ಬಾಲಕ ಅಯಾನ್ ಬೇಗ್‌ ಮನೆಯಲ್ಲಿಯೇ ಸಾವಿಗೆ ಶರಣಾಗಿದ್ದಾನೆ. ಚಿತ್ರದುರ್ಗ ನಗರದ ಹೊರಪೇಟೆ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಬಾಲಕ ಆಯಾನ್ ಇಲ್ಲಿನ ಡಾನ್ ಬೊಸ್ಕೊ ಶಾಲೆಯಲ್ಲಿ ಓದುತ್ತಿದ್ದ. ಆದರೆ ಕೇವಲ ಒಂದೇ ಒಂದು ಅಂಕದಿಂದ ಕನ್ನಡದಲ್ಲಿ ಬಾಲಕ ಫೇಲ್ ಆಗಿದ್ದ ಇದರಿಂದ ನೊಂದು ಬಾಲಕ ಸಾವಿಗೆ ಶರಣಾಗಿದ್ದಾನೆ.

ಇದನ್ನೂ ಓದಿ: ಸಾಲಬಾಧೆ: ಮುದ್ದಿನ ಶ್ವಾನಕ್ಕೆ ವಿಷನೀಡಿ ತಾನು ಸಾವಿಗೆ ಶರಣಾದ 33 ವರ್ಷದ ಪ್ರಾಪರ್ಟಿ ಡೀಲರ್

ಮಕ್ಕಳೇ ಪರೀಕ್ಷೆಯ ಜೀವನವಲ್ಲ: ಸಾವಿಗೆ ಶರಣಾಗದಿರಿ

ಕೇವಲ ಪರೀಕ್ಷೆ ಫೇಲಾದವೆಂದು ಮಕ್ಕಳು ಸಾವಿನ ದಾರಿ ಹಿಡಿಯುತ್ತಿರುವುದು ಬೇಸರ ಮೂಡಿಸಿದೆ. ಪರೀಕ್ಷೆ ಜೀವನದ ಒಂದು ಭಾಗವಷ್ಟೇ ಪರೀಕ್ಷೆಯೇ ಜೀವನವಲ್ಲ, ಹಿಂದೆ ಪರೀಕ್ಷೆಯಲ್ಲಿ ಫೇಲಾದ ಅನೇಕರು ಜೀವನದಲ್ಲಿ ಮುಂದೆ ಯಶಸ್ವಿ ವ್ಯಕ್ತಿಗಳಾದ ಹಲವು ನಿದರ್ಶನಗಳಿವೆ. ಹೀಗಾಗಿ ಮಕ್ಕಳೇ ಪರೀಕ್ಷೆಯಲ್ಲಿ ಫೇಲಾಗಿದ್ದೇನೆ, ಕಡಿಮೆ ಅಂಕ ಬಂದಿದೆ ಎಂದು ಸಾವಿಗೆ ಶರಣಾಗದಿರಿ. ನಿಮ್ಮನ್ನು ನಂಬಿ ಬದುಕುವ, ಪೋಷಕರಿಗೆ ನೀವೇ ಪ್ರಪಂಚ. ಅವರನ್ನು ಜೀವನಪೂರ್ತಿ ಕೊರಗುವಂತೆ ಮಾಡದಿರಿ. ಪೋಷಕರು ಅಷ್ಟೇ ಕಡಿಮೆ ಅಂಕ ಬಂತು ಅಥವಾ ಫೇಲಾದರು ಅಂತ ಮಕ್ಕಳಿಗೆ ಹೀಯಾಳಿಸದಿರಿ, ಬೇರೆಯವರೊಂದಿಗೆ ಹೋಲಿಕೆ ಮಾಡದಿರಿ. ಡಿಸ್ಟಿಂಕ್ಷನ್‌ನಲ್ಲಿ ಪಾಸಾದವರೆಲ್ಲ ಜೀವನದಲ್ಲಿ ಯಶಸ್ವಿಯಾಗಿಲ್ಲ. ಹಾಗೆಯೇ ಫೇಲಾದವರೆಲ್ಲಾ ಬದುಕಿನಲ್ಲಿ ಫೇಲಾಗಿಲ್ಲ, ಮಕ್ಕಳಿಗೆ ಧೈರ್ಯ ಹೇಳಿ…

ಇದನ್ನೂ ಓದಿ: 2ನೇ ಮದುವೆಗೂ ನನಗೆ 'ಕನ್ಯೆ'ಯೇ ಬೇಕು ಎಂದ ವಿಚ್ಛೇದಿತ ಐಐಟಿ ಪದವೀಧರನ ಬೇಡಿಕೆಗೆ ಮ್ಯಾಚ್‌ ಮೇಕರ್ ಗರಂ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಜ್ಯದಲ್ಲಿ ಇಂಧನ ಬಿಕ್ಕಟ್ಟು ಬಗ್ಗೆ ಇಂಡಿಯನ್ ಆಯಿಲ್ ಕಾರ್ಪೊರೇಶನ್‌ನ ಸ್ಟೇಟ್ ಕೋ-ಆರ್ಡಿನೇಟರ್ ಸ್ಪಷ್ಟನೆ
ಗೃಹ ಸಚಿವ ಪರಮೇಶ್ವರ್‌ ₹500 ಬೆಟ್ಟಿಂಗ್ ಸಂಕಷ್ಟಕ್ಕೆ ರಿಲೀಫ್ ಕೊಟ್ಟ ಹೈಕೋರ್ಟ್! ಅಷ್ಟಕ್ಕೂ ಆಗಿದ್ದೇನು?