Ravi Shankar Guruji: ಆರ್ಟ್‌ ಆಫ್‌ ಲಿವಿಂಗ್‌ನಿಂದ ಭಾರತಾದ್ಯಂತ 1 ಕೋಟಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ!

By Asianet Kannada  |  First Published Jun 6, 2024, 6:48 AM IST

ಆರ್ಟ್ ಆಫ್ ಲಿವಿಂಗ್ ನ ಹಚ್ಚಹಸಿರ, ಪರಿಶುಭ್ರ ಆವರಣದಲ್ಲಿ , ಜಾಗತಿಕ ಮಾನವತಾವಾದಿಗಳಾದ, ಆಧ್ಯಾತ್ಮಿಕ ನಾಯಕರಾದ ಗುರುದೇವ್ ಶ್ರೀ ಶ್ರೀ ರವಿಶಂಕರರು, ಉಪಯುಕ್ತವಾದ ಲಕ್ಷ್ಮೀತರು ಗಿಡಗಳನ್ನು ಅಪಾರವಾದ ಸಂಖ್ಯೆಯಲ್ಲಿ ನೆಟ್ಟು, ಬೃಹತ್ ಗಿಡನೆಡುವಿಕೆಯ ಕಾರ್ಯವನ್ನು ಆರಂಭಿಸಿದರು. 


ಬೆಂಗಳೂರು (ಜೂ.06): ಬುಧವಾರದಂದು ಆರ್ಟ್ ಆಫ್ ಲಿವಿಂಗ್ ನ ಹಚ್ಚಹಸಿರ, ಪರಿಶುಭ್ರ ಆವರಣದಲ್ಲಿ , ಜಾಗತಿಕ ಮಾನವತಾವಾದಿಗಳಾದ, ಆಧ್ಯಾತ್ಮಿಕ ನಾಯಕರಾದ ಗುರುದೇವ್ ಶ್ರೀ ಶ್ರೀ ರವಿಶಂಕರರು, ಉಪಯುಕ್ತವಾದ ಲಕ್ಷ್ಮೀತರು ಗಿಡಗಳನ್ನು ಅಪಾರವಾದ ಸಂಖ್ಯೆಯಲ್ಲಿ ನೆಟ್ಟು, ಬೃಹತ್ ಗಿಡನೆಡುವಿಕೆಯ ಕಾರ್ಯವನ್ನು ಆರಂಭಿಸಿದರು. ರಾಷ್ಟ್ರಾದ್ಯಂತ ನಡೆಯಲಿರುವ ಗಿಡ ನೆಡುವಿಕೆಯ ಕಾರ್ಯಕ್ರಮದಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಒಂದು ಕೋಟಿ ಗಿಡಗಳನ್ನು , ಭಾರತದ 22 ರಾಜ್ಯಗಳಲ್ಲಿ , 2300 ಸ್ವಯಂಸೇವಕರ , ಆರ್ಟ್ ಆಫ್ ಲಿವಿಂಗ್ ಶಿಕ್ಷಕರ ಸಹಯೋಗದೊಂದಿಗೆ ನೆಡಲಿದ್ದಾರೆ. ಇವರೊಡನೆ ಸಾವಿರಾರು ರೈತರು ಗಿಡಳನ್ನು  ತಮ್ಮ ತೋಟಗಳಲ್ಲಿ ಬೆಳೆಸಿ, ಈ ಕಾರ್ಯಕ್ರಮದ ಅಡಿಯಲ್ಲಿ ಗಿಡಗಳನ್ನು ನೆಡಲು ಸಹಾಯ ಮಾಡಲಿದ್ದಾರೆ. 

ಈ ಹಳ್ಳಿಗಳಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಹಣ್ಣುಗಳ ಗಿಡಗಳನ್ನು ನೀಡಲಿದ್ದು, ಇದರಿಂದ ರೈತರಿಗೆ ಬಹಳ ಲಾಭವಾಗಿ, ಅವರ ಕುಟುಂಬಗಳೂ ಇದರಿಂದ ಬೆಂಬಲವನ್ನು ಪಡೆಯಲಿವೆ. ಕರ್ನಾಟಕದಾದ್ಯಂತ 4 ಲಕ್ಷ ಗಿಡಗಳನ್ನು ನೆಡಲಾಗುವುದು.ಈ ವರ್ಷದ ವಿಶ್ವ ವಾತಾವರಣ ದಿನದ ಗುರಿ, " ಲ್ಯಾಂಡ್ ರೆಸ್ಟೊರೇಷನ್ , ಡೆಸರ್ಟಿಫಿಕೇಷನ್ ಆಂಡ್  ಡ್ರಾಟ್ ರೆಸೀಲಿಯೆನ್ಸ್". ಆರ್ಟ್ ಆಫ್ ಲಿವಿಂಗ್ ಒಂದು ಸಾವಿರ ಜಲತಾರ ಪುನರ್ಜಲೀಕರಣದ ಕಟ್ಟಡಗಳನ್ನು, ಆರ್ಟ್ ಆಫ್ ಲಿವಿಂಗ್ ನ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿರ್ಮಿಸಲಿದ್ದು, ಇದರಿಂದ ಸುರುಯುವ ಮಳೆನೀರು ಹಾಗೆಯೇ ಪೋಲಾಗಿ ಹೋಗದಂತೆ ತಡೆಯುತ್ತದೆ. ಈ ಕಟ್ಟಡಗಳ ಮೂಲಕ ನೀರನ್ನು ಭೂಮಿಯು ಹೀರಿಕೊಂಡು,ಅಂತರ್ಜಲದ ನೀರಿನ ಮಟ್ಟವನ್ನು ಹೆಚ್ಚಿಸಲಿದೆ. 

Tap to resize

Latest Videos

undefined

ಪದತ್ಯಾಗ ಮಾಡಲು ಸಿಎಂ ಸಿದ್ದು ಸೂಚನೆ ಹಿನ್ನೆಲೆ: ಸಚಿವ ಬಿ.ನಾಗೇಂದ್ರ ಇಂದೇ ರಾಜೀನಾಮೆ?

ಈ ಕಾರ್ಯಕ್ರಮದಿಂದ ಆಶ್ರಮದ ಆವರಣದ ಜೈವಿಕ ವೈವಿಧ್ಯತೆಯು ಹೆಚ್ಚಲಿದೆ. ಪರಿಸರ ಸಂರಕ್ಷಣೆಯೊಡನೆ ಸಾಮಾಜಿಕ ಸಬಲೀಕರಣವನ್ನೂ ಒಳಗೊಂಡಿರುವಂತಹ " ಸೀಡ್ ರಾಖಿ ಯೋಜನೆ" ಯನ್ನೂ ಆರಂಭಿಸಲಿದೆ. ಇದರಿಂದ ಬುಡಕಟ್ಟು ಜನಾಂಗದ ಮಹಿಳೆಯರಿಗೆ ಲಾಭವಾಗಲಿದೆ. ಈ ಸಂದರ್ಭದಲ್ಲಿ ಮಾತನಾಡುತ್ತಾ ಗುರುದೇವ್ ಶ್ರೀ ಶ್ರೀ ರವಿಶಂಕರರು, " ಪ್ರಾಕೃತಿಕ ಕೃಷಿಗೆ ಮರಳಿ ಬಂದಿರುವಂತಹ ಅನೇಕ ರೈತರು , ತಾವು ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚು ಲಾಭವನ್ನು ಪಡೆದುಕೊಂಡಿರುವಂತಹ ಅನೇಕ ಉದಾಹರಣೆಗಳಿವೆ. ಇದರೊಡನೆ ಅವರು ಬಹು ಬೆಳೆಗಳನ್ನು ಬೆಳೆಯುವ ಅಭ್ಯಾಸವನ್ನು ಅಳವಡಿಸಿಕೊಳ್ಳಬೇಕೆಂದು ನಾವು ಸಲಹೆ ನೀಡುತ್ತೇವೆ. ಒಂದು ದೊಡ್ಡ ಕರೃ ಭೂಮಿಯಲ್ಲಿ ಒಮ್ಮೆಲೇ ರೈತರು ಐದು ರೀತಿಯ ಬೆಳೆಗಳನ್ನು ಬೆಳೆಸಬಹುದು. 

ಉಳಿದ ಸ್ಥಳವನ್ನು ಪುನಃ ಅರಣ್ಯೀಕರಣಕ್ಕಾಗಿ ಬಳಸಬಹುದು ಮತ್ತು ಆಹಾರವನ್ನೂ ಬೆಳೆಯಬಹುದು. ಸಾಧ್ಯವಾದಷ್ಟು ಎಲ್ಲರೂ ಫ್ರಿಡ್ಜ್ ಅನ್ನು ಕಡಿಮೆಯಾಗುತ್ತದೆ ಯಾಗಿ ಬೆಳೆಸಿ, ವಾಹನಗಳನ್ನು ಕಡಿಮೆಯಾಗಿ ಬಳಸಿ ಮತ್ತು ಅದರ ಬದಲಿಗೆ ಹೆಚ್ಚಾಗಿ ನಡೆಯಿರಿ‌ ಎಂಬುದೇ ನಮ್ಮ ಸಲಹೆ. ಮನೆಯಲ್ಲಿ ಟೊಮಾಟೊ, ಕುಂಬಳಕಾಯಿ, ಸೌತೇಕಾಯಿಯನ್ನು ಬೆಳೆಸಬಹುದು. ಇದು ಹೆಚ್ಚು ಸ್ಥಳವನ್ನು ತೆಗೆದುಕೊಳ್ಳುವುದಿಲ್ಲ. ಕಲುಷಿತ ಹವೆಯು ಹೆಚ್ಚುತ್ತಲಿದ್ದು, ಅದರ ವಿಪರೀತ ಪರಿಣಾಮವನ್ನು ಈಗಾಗಲೇ ಅನುಭವಿಸುತ್ತಿದ್ದೇವೆ. ನಮ್ಮ ಕಣ್ಣುಗಳನ್ನು ಮುಚ್ಚಿಕೊಂಡು ಬೇರೆ ಯಾರೋ ಬಂದು ವಿಷಯಗಳನ್ನು ಬದಲಿಸುತ್ತಾರೆ " ಎಂದು ಕಾದುಕುಳಿತಿರಲು ಸಾಧ್ಯವಿಲ್ಲ" ಎಂದರು. ದುವರೆಗೂ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು 81.2 ಮಿಲಿಯನ್ ಗಿಡಗಳನ್ನು 36 ದೇಶಗಳಲ್ಲಿ ಹಾಗೂ 26 ಭಾರತದ ರಾಜ್ಯಗಳಲ್ಲಿ ನೆಟ್ಟಿದೆ. ಇದರೊಡನೆ 70 ನದಿಗಳ ಪುನಶ್ಚೇತನ ಕಾರ್ಯದಲ್ಲಿ ತೊಡಗಿದೆ. 

ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸಲ್ಲ: ಸಿಎಂ ಸಿದ್ದರಾಮಯ್ಯ

ಈ ನದಿಗಳೆಲ್ಲವೂ ಹಿಂದು ದಾಖಲೆಗಳಲ್ಲಿ ಮಾತ್ರ ಇದ್ದವು. ಇದರಿಂದ 19,000 ಹಳ್ಳಿಗಳ 34.5 ಮಿಲಿಯನ್ ಜನರಿಗೆ ಲಾಭವಾಗಿದೆ. ದೇಶಾದ್ಯಂತ 22 ಲಕ್ಷ ರೈತರಿಗೆ ಪ್ರಾಕೃತಿಕ ಕೃಷಿಯ ತರಬೇತಿಯನ್ನು ನೀಡಲಾಗಿದ್ದು, ಇದಕ್ಕೆ ಶೂನ್ಯ ವೆಚ್ಚ ತಗಲುತ್ತದೆ. ತ್ಯಾಜ್ಯದ ಮರಬಳಕೆ, ಬರ ಹಾಗೂ ಪ್ರವಾಹವನ್ನು ತಡೆಯುವಂತಹ ಕೃಷಿ ಪದ್ಧತಿಗಳನ್ನು ರೈತರಿಗೆ ಹೇಳಿಕೊಡಲಾಗುತ್ತಿದೆ. ಗುರುದೇವರು, " ,ಆಗಿಂದಾಗ ಭೂಮಿತಾಯಿ, ಪುನಶ್ಚೇತಕ್ಕೆ ಅತೀ ಕಡಿಮೆ ಯತ್ನ ಹಾಕಿದರೂ ಸಾಕು, ನಮ್ಮ ಅವಶ್ಯಕತೆಗಳನ್ನು ಸದಾ ಪೂರೈಸುತ್ತದೆ ಎಂದು ನಮಗೆ ತೋರಿಸಿಕೊಟ್ಟಿದೆ. ನಮ್ಮ ಧೋರಣೆಯಲ್ಲಿ ಸ್ವಲ್ಪ ಮಾನವೀಯತೆಯಿದ್ದು, ನಮ್ಮ ಪರಿಸರವನ್ನು ನೋಡಿಕೊಳ್ಳಬೇಕು" ಎನ್ನುತ್ತಾರೆ.

click me!