ಹಾವೇರಿ ಗ್ಯಾಂಗ್‌ ರೇಪ್ ಸಂತ್ರಸ್ತೆ ಬಗ್ಗೆ ಮಾನವೀಯತೆಯನ್ನೂ ತೋರಿಸದ ಸಿಎಂ ಸಿದ್ದರಾಮಯ್ಯ!

By Sathish Kumar KHFirst Published Jan 15, 2024, 1:31 PM IST
Highlights

ಹಾವೇರಿ ಹಾನಗಲ್ ಗ್ಯಾಂಗ್‌ ರೇಪ್‌ ಸಂತ್ರಸ್ತೆ ಕುಟುಂಬಸ್ಥರಿಂದ ಮನವಿ ಅರ್ಜಿ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ, ಈಗ ಆರೋಪಿಗಳನ್ನು ಬಂಧಿಸಲಾಗಿದ್ದು, ಈಗ ತನಿಖೆ ನಡೆಯುತ್ತಿದೆ ಎಂದು ಹಾರಿಕೆ ಉತ್ತರ ನೀಡಿದರು.

ಹಾವೇರಿ (ಜ.15): ಗ್ಯಾಂಗ್‌ ರೇಪ್‌ಗೆ ಒಳಗಾದ ಸಂತ್ರಸ್ತೆಯ ಸಹೋದರಿ ಹಾಗೂ ಸಂಬಂಧಿಕರು ನ್ಯಾಯ ಕೊಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಮನವಿ ಮಾಡಿದರು. ಆದರೆ, ಮನವಿ ಅರ್ಜಿ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ ಅವರು ಯಾರು ಆರೋಪಿಗಳಿದ್ದಾರೆ ಎಲ್ಲರೂ ಅರೆಸ್ಟ್ ಆಗಿದಾರೆ. ತನಿಖೆ ನಡೆಯುತ್ತಿದೆ. ಯಾರನ್ನೂ ಕಾನೂನು ಕೈಗೆ ತಗೊಳೋಕೆ ಬಿಡಲ್ಲ ಎಂದು ಹಾರಿಕೆ ಉತ್ತರವನ್ನು ನೀಡಿದ್ದಾರೆ. ಮಾನವೀಯತೆಗಾದರೂ ಸಂತ್ರಸ್ತೆ ಆರೋಗ್ಯ ಸ್ಥಿತಿ ಹೇಗಿದೆ, ಅವರಿಗೆ ಭದ್ರತೆ ಇದೆಯಾ ಎಂದೆಲ್ಲ ಕನಿಷ್ಠ ವಿಚಾರವನ್ನೂ ಮಾಡದೇ ಅಲ್ಲಿಂದ ಹೊರಟು ಹೋಗಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಯಾರು ಆರೋಪಿಗಳಿದ್ದಾರೆ ಎಲ್ಲರೂ ಅರೆಸ್ಟ್ ಆಗಿದಾರೆ. ತನಿಖೆ ನಡೆಯುತ್ತಿದೆ. ಯಾರನ್ನೂ ಕಾನೂನು ಕೈಗೆ ತಗೊಳೋಕೆ ಬಿಡಲ್ಲ. ಯಾವುದೇ ಧರ್ಮಕ್ಕೆ ಸೇರಿದವರಾಗಲಿ ಜಾತಿಗೆ ಸೇರಿದವರೂ ಆಗಿರಲಿ. ಮಾತಾಡಿದರೆ ಮಾತ್ರ ಕ್ರಮಾನಾ? ಮಾತಾಡದೇ ಕ್ರಮ ತಗೊಳೋಕೆ ಆಗಲ್ಲವಾ?" ಈ ಕೇಸ್ ನಲ್ಲೂ ಯಾರೇ ಕಾನೂನು ಕೈಗೆ ತಗೊಂಡ್ರೂ ಶಿಕ್ಷೆ ಕೊಡಿಸ್ತೇವೆ. ಯಾರನ್ನೂ ಇದರಲ್ಲಿ ರಕ್ಷಣೆ ಮಾಡೋ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಹಾವೇರಿ ಗ್ಯಾಂಗ್‌ರೇಪ್ ಸಂತ್ರಸ್ತೆಗೆ ಜೀವ ಭಯವಿದ್ದರೂ, ಒಂಟಿಯಾಗಿ ಮನೆಗೆ ಬಿಟ್ಟು ಹೋದ ಪೊಲೀಸರು

ಸಂತ್ರಸ್ಥೆ ಕಡೆಯವರು ಈಗ ತಾನೆ ಅರ್ಜಿ ಕೊಟ್ಟಿದಾರೆ. ಈಗ ತನಿಖೆ ಮಾಡಿದವರೂ ಪೊಲೀಸರೇ, ಎಸ್ ಐ ಟಿಯವರೂ ಪೊಲೀಸರು ಆಗಿದ್ದಾರೆ. ಪ್ರಾಥಮಿಕ ವರದಿ ಬರಲಿ. ಯಾವುದನ್ನೂ ಮುಚ್ಚಿ ಹಾಕೋ ಪ್ರಶ್ನೆಯೇ ಇಲ್ಲ. ನಮ್ಮ ಶಾಸಕ ಶಿವಣ್ಣವನರ ಭೇಟಿಯಾಗಿ ಬಂದಿದಾರೆ. ಶಾಸಕ ಶಿವಣ್ಣನವರ ಮಾಜಿ ಮಂತ್ರಿಯಾಗಿದ್ದವರು. ಪೊಲೀಸರು ಸಂತ್ರಸ್ತೆ ಶಿರಸಿಗೆ ಶಿಪ್ಟ್ ಮಾಡಿದ ವಿಚಾರವನ್ನು ಶಿವಣ್ಣನವರ ಜೊತೆ ಮಾತಾಡಿ ನಿರ್ಧಾರ ಮಾಡ್ತೀನಿ. ಮುಂದಿನ ಕ್ರಮ ತಗೊಳ್ತೀವಿ ಎಂದು ಹೇಳಿದರು.

ಅನಂತ್ ಕುಮಾರ್ ಹೇಳಿಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಮರ್ಥನೆ ಮಾಡಿಕೊಂಡ ವಿಚಾರವಾಗಿ ಮಾತನಾಡಿ, ಅವರು ರಾಜಕೀಯವಾಗಿ ಆರೋಪ ಮಾಡ್ತಾರೆ. ಅನಂತ್ ಕುಮಾರ್ ಇಷ್ಟ ದಿನ ನಾಪತ್ತೆ ಆಗಿದ್ದರು. ಅವರು ಎನಾದರೂ ಮಾಡಿದಾರಾ ಕ್ಷೇತ್ರಕ್ಕೆ, ಬಡವರ ಕಷ್ಟ ಕೇಳಿದಾರಾ? ಪ್ರಹ್ಲಾದ್ ಜೋಶಿಗೂ ಸಂಸ್ಕೃತಿ ಇಲ್ಲ ಅಂತ ಆಯಿತು. ಸಂಸ್ಕೃತಿ ಅಂದರೆ ಮನುಷ್ಯತ್ವ, ಮನುಷ್ಯತ್ವ ಇಂಪಾರ್ಟೆಂಟ್ ಎಂದು ಹೇಳಿದರು. 

ಗೃಹ ಸಚಿವರು ಸಮುದಾಯ ನೋಡಿ ಕೇಸು ಹಾಕಲು ಸೂಚನೆ ಕೊಟ್ಟಿದ್ದಾರೆ; ಮಾಜಿ ಸಿಎಂ ಬೊಮ್ಮಾಯಿ ಆರೋಪ

ಗ್ಯಾಂಗ್‌ ರೇಪ್ ಅನ್ನು ನೈತಿಕ ಪೊಲೀಸ್‌ಗಿರಿ ಅಂತ ಮುಚ್ಚಿ ಹಾಕಲಾಗ್ತಿದೆ: ಹಾವೇರಿಯ ಹಾನಗಲ್ ನ  ಗ್ಯಾಂಗ್ ರೇಪ್ ಪ್ರಕರಣದ ಕುರಿತು ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ಗ್ಯಾಂಗ್ ರೇಪ್ ನಡೆದ್ರು ನೈತಿಕ ಪೋಲೀಸ್ ಗಿರಿ ಎಂದು ಹೆಸರು ಕೊಟ್ಟು ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ. ಸ್ವತಃ ಸಂತ್ರಸ್ಥೆ ಹೇಳಿಕೆ ಕೊಟ್ರು ಸರಿಯಾದ ತನಿಖೆಯಾಗ್ತಿಲ್ಲ. ಹೇಳಿಕೆಗಳು ದಾಖಲಾಗ್ತಿಲ್ಲ. ತುಷ್ಠಿಕರಣ ಶುರುವಾದಲ್ಲಿ ಪಂಡಾಮೆಂಟಲಿಸಮ್ ಜಾಸ್ತಿಯಾಗ್ತಿದೆ. ಈ ಪ್ರಕರಣಕ್ಕೆ ಒಂದು ಎಸ್ಐಟಿ ಯನ್ನ ರಚಿಸಬೇಕು. ಇಂತಹ ಘಟನೆಗಳು ಪುನರಾವರ್ತನೆ ಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
 

click me!