ಬ್ರಹ್ಮಶ್ರೀ ನಾರಾಯಣ ಗುರು ಕ್ರಾಂತಿಕಾರಿ ಬದಲಾವಣೆ ತಂದವರು: ಸಿ.ಟಿ. ರವಿ

By Kannadaprabha News  |  First Published Aug 27, 2023, 11:03 PM IST

ಬ್ರಹ್ಮಶ್ರೀ ನಾರಾಯಣ ಗುರುಗಳು ನಿಜ ದೈವವನ್ನು ಪರಿಚಯಿಸಿದವರು. ಸಾಮಾಜಿಕ ಅನಿಷ್ಟಗಳಾದ ಜಾತೀಯತೆ ಮತ್ತು ಅಶ್ಪೃಷ್ಯತೆಯನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಕ್ರಾಂತಿಕಾರಿ ಬದಲಾವಣೆ ತಂದವರು ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.


ಚಿಕ್ಕಮಗಳೂರು (ಆ.27) :  ಬ್ರಹ್ಮಶ್ರೀ ನಾರಾಯಣ ಗುರುಗಳು ನಿಜ ದೈವವನ್ನು ಪರಿಚಯಿಸಿದವರು. ಸಾಮಾಜಿಕ ಅನಿಷ್ಟಗಳಾದ ಜಾತೀಯತೆ ಮತ್ತು ಅಶ್ಪೃಷ್ಯತೆಯನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಕ್ರಾಂತಿಕಾರಿ ಬದಲಾವಣೆ ತಂದವರು ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.

ಭಾನುವಾರ ನಾಗಲಕ್ಷ್ಮಿ ಚಿತ್ರ ಮಂದಿರದಲ್ಲಿ ಜಿಲ್ಲಾ ಬ್ರಹ್ಮ ಶ್ರೀ ನಾರಾಯಣಗುರು ಸಮಾಜ ಸೇವಾ ಸಂಘಗಳ ಒಕ್ಕೂಟ, ಜಿಲ್ಲಾ ಬಿಲ್ಲವ ಸಮಾಜ ಸೇವಾ ಸಂಘ, ಜಿಲ್ಲಾ ಆರ್ಯ ಈಡಿಗ ಸಂಘ ಹಾಗೂ ಜಿಲ್ಲಾ ಶ್ರೀ ನಾರಾಯಣಗುರು ಸಮಿತಿಯಿಂದ ಏರ್ಪಡಿಸಲಾಗಿದ್ದ ಶ್ರೀ ನಾರಾಯಣ ಗುರುಸ್ವಾಮಿ ಕನ್ನಡ ಚಲನಚಿತ್ರ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜ ಪರಿವರ್ತನೆಗೆ ಕ್ರಾಂತಿಕಾರಿ ಮುನ್ನುಡಿ ಬರೆದವರು. ಅವರ ಜೀವನ ಚರಿತ್ರೆ ಪರಿಚಯಿಸುವ ಚಲನಚಿತ್ರ ನಿರ್ಮಿಸಿ ಅವರನ್ನು ಜನರಿಗೆ ಇನ್ನಷ್ಟುಹತ್ತಿರ ವಾಗಿಸುವ ಕೆಲಸ ಶ್ಲಾಘನೀಯ. ಇದರಿಂದ ನಾರಾಯಣಗುರುಗಳ ಬದುಕಿನ ಪ್ರೇರಣೆ ಎಲ್ಲರಿಗೂ ಸಿಗುವಂತಾಗಿದೆ. ಇದೊಂದು ಕ್ರಾಂತಿಕಾರಿ ಹೆಜ್ಜೆಯಾಗಿದೆ. ಇದಕ್ಕಾಗಿ ರಾಜಶೇಖರ ಕೋಟ್ಯಾನ್‌ ಮತ್ತು ಅವರ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು.

Tap to resize

Latest Videos

undefined

ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಹಿಂದುಗಳ ಮೇಲೆ ದೌರ್ಜನ್ಯ ಹೆಚ್ಚಳ : ಚಕ್ರವರ್ತಿ ಸೂಲಿಬೆಲೆ

ಭಾರತದ ನೆಲ ಬರಡು ನೆಲವಲ್ಲ. ಇಲ್ಲಿ ಸಾವಿರಾರು ಸಂತ ಮಹಂತರು ಕಾಲಕಾಲಕ್ಕೆ ಸಮಾಜಕ್ಕೆ ಮಾರ್ಗದರ್ಶನ ಮಾಡುತ್ತಾ ಬಂದಿದ್ದಾರೆ. ಅನಿಷ್ಟದೂರ ಮಾಡುವಂತಹ ಮತ್ತು ನಿಜ ಧರ್ಮವನ್ನು ಜನರ ಮನದಲ್ಲಿ ಪ್ರತಿಷ್ಟಾಪಿಸುತ್ತಾ ಬಂದಿದ್ದಾರೆ. ನಾರಾಯಣಗುರುಗಳು ಅಂತಹ ಶ್ರೇಷ್ಟಸಂತರಲ್ಲಿ ಒಬ್ಬರು ಎಂದರು.

ಬ್ರಹ್ಮಶ್ರೀ ನಾರಾಯಣಗುರುಸ್ವಾಮಿ ಚಲನಚಿತ್ರದ ನಾಯಕ ನಟ, ನಿರ್ದೇಶಕ, ನಿರ್ಮಾಪಕರಾದ ಡಾ.ರಾಜಶೇಖರ ಕೋಟ್ಯಾನ್‌ ಮಾತನಾಡಿ, ನಾರಾಯಣ ಗುರುಗಳ ತತ್ವಗಳು ಇಡೀ ದೇಶಕ್ಕೆ ಪರಿಚಯವಾಗಬೇಕು ಎನ್ನುವ ಉದ್ದೇಶದಿಂದ ಚಲನಚಿತ್ರ ನಿರ್ಮಿಸಲಾಗಿದೆ. ಈಗಾಗಲೇ ವಿದೇಶಗಳೂ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ 100 ಕ್ಕೂ ಹೆಚ್ಚು ಕಡೆ ಚಿತ್ರ ಪ್ರದರ್ಶನ ಕಂಡಿದೆ. ಇದೀಗ ಪ್ರತಿ ಊರುಗಳಲ್ಲಿ ಪ್ರದರ್ಶಿಸಲಾಗುತ್ತಿದೆ. ಇದು ರಾಜ್ಯ ಪ್ರಶಸ್ತಿ ಗಳಿಸಿದ ಚಿತ್ರವಾಗಿದೆ ಎಂದು ತಿಳಿಸಿದರು.

ಶ್ರೀನಾರಾಯಣಗುರು ಸಮಾಜ ಸೇವಾ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಎಚ್‌.ಎಂ.ಸತೀಶ್‌ ಮಾತನಾಡಿ, ನಾರಾಯಣ ಗುರುಗಳು ಬದುಕಿದ ರೀತಿ ಮತ್ತು ಅವರು ಕೊಟ್ಟಸಂದೇಶಗಳು ಇಂದಿಗೂ ಜೀವಂತ. ಅವರು ಈ ದೇಶಕಂಡ ಅತ್ಯುತ್ತಮ ಸಂತ. ಯುವ ಜನತೆ ಅವರ ಸಂದೇಶಗಳಿಂದ ಪ್ರಭಾವಿತರಾಗಬೇಕು ಎನ್ನುವ ಕಾರಣಕ್ಕೆ ಈ ಚಲನಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಕಾಂಗ್ರೆಸ್‌ನ ಯಾವ ನಾಯಿ ಕೂಡ ತುರ್ತು ಪರಿಸ್ಥಿತಿ ವೇಳೆ ಹೋರಾಟ ಮಾಡಿಲ್ಲ: ಸಿಟಿ ರವಿ

ಈ ಸಂದರ್ಭದಲ್ಲಿ ನಾರಾಯಣಗುರು ಸಮಿತಿ ಗೌರವಾಧ್ಯಕ್ಷ ಶಾಂತಕುಮಾರ್‌, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಾಸು ಪೂಜಾರಿ, ಜಿಲ್ಲಾ ಬಿಲ್ಲವ ಸಂಘದ ಅಧ್ಯಕ್ಷ ಗುಣಶೇಖರ್‌, ಆರ್ಯ ಈಡಿಗ ಸಂಘದ ಅಧ್ಯಕ್ಷ ಚಂದ್ರಶೇಖರ್‌, ಉಪಾಧ್ಯಕ್ಷ ಕೆ.ರಾಜು, ಬಿಲ್ಲವ ಸಂಘದ ಗೌರವಾಧ್ಯಕ್ಷ ವಿಠ್ಠಲ್‌, ನಾರಾಯಣಗುರು ಸಮಿತಿ ಅಧ್ಯಕ್ಷ ಕೃಷ್ಣಪ್ಪ ಉಪಸ್ಥಿತರಿದ್ದರು.

click me!