ವೈದ್ಯ ಗಿರಿಧರ್‌ ಕಜೆ ಬಳಿ ಆಯುರ್ವೇದ ಮೆಡಿಸಿನ್‌ ತೆಗೆದುಕೊಂಡೆ: ಕೊರೋನಾ ಗೆದ್ದ ಸಚಿವ ಸಿ. ಟಿ. ರವಿ!

By Kannadaprabha News  |  First Published Jul 25, 2020, 7:58 AM IST

ರೋಗಿಗೆ ಪ್ರೀತಿ ಬೇಕೆ ಹೊರತು ಭೀತಿಯಲ್ಲ: ಸಿ.ಟಿ.ರವಿ| ವೈದ್ಯ ಗಿರಿಧರ್‌ ಕಜೆ ಬಳಿ ಮೆಡಿಸಿನ್‌ ತೆಗೆದುಕೊಂಡ ಸಚಿವ| ಮೆಡಿಸಿನ್‌ ಜೊತೆಗೆ ದಿನ ನಿತ್ಯ ಯೋಗ, ಪ್ರಾಣಾಯಾಮ


ಚಿಕ್ಕಮಗಳೂರು(ಜು.25): ‘ಕೊರೋನಾ ಪಾಸಿಟಿವ್‌ ಬಂದಿದ್ದಾಗ ಮನೆಯಲ್ಲಿ ಹೋಂ ಕ್ವಾರಂಟೈನ್‌ ಆಗಿದ್ದೆ. ಈ ಸಂದರ್ಭದಲ್ಲಿ ವೈದ್ಯ ಗಿರಿಧರ್‌ ಕಜೆ ಅವರು ಕೊಟ್ಟಿದ್ದ ಮೆಡಿಸಿನ್‌ ತೆಗೆದುಕೊಳ್ಳುತ್ತಿದ್ದೆ’ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರೆ.

"

Tap to resize

Latest Videos

ನಗರದ ತಮ್ಮ ನಿವಾಸದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನಾ ರೋಗಿಗಳಿಗೆ ಪ್ರೀತಿಯ ಅವಶ್ಯಕತೆ ಇದೆಯೇ ಹೊರತು, ಭೀತಿಯಲ್ಲ. ನನಗೆ ಆ ಪ್ರೀತಿ ನನ್ನ ಮನೆಯಲ್ಲಿ ಸಿಕ್ಕಿತು. ಇದರ ಜೊತೆಗೆ ಯೋಗ, ಪ್ರಾಣಾಯಾಮ ಮಾಡುತ್ತಿದ್ದರಿಂದ ಬೇಗ ಗುಣಮುಖನಾಗಿದ್ದೇನೆ. ಜನರಿಗೆ ಈಗ ಬೇಕಾಗಿರುವುದು ಪ್ರೀತಿ, ವಿಶ್ವಾಸ. ಇದರಿಂದ ಕೊರೋನಾವನ್ನು ಸುಲಭವಾಗಿ ಎದುರಿಸಬಹುದು. ಬೇರೆ ಕಾಯಿಲೆಯಿಂದ ಬಳಲುತ್ತಿರುವವರು ಧೈರ್ಯದಿಂದ ಕೊರೋನಾ ಎದುರಿಸಬೇಕು. ನನಗೆ ಮನೆಯವರು ಸ್ವತಃ ಅಡುಗೆ ಮಾಡಿ ಬಡಿಸಿದ್ದಾರೆ. ಅವರಲ್ಲಿ ಯಾವುದೇ ಭೀತಿ ಇರಲಿಲ್ಲ ಎಂದು ತಮ್ಮ ಅನುಭವ ಹಂಚಿಕೊಂಡರು.

ಗುಡ್‌ ನ್ಯೂಸ್: ಡಾ| ಕಜೆ ಕೋವಿಡ್‌ ಔಷಧ ಯಶಸ್ವಿ, ರೋಗಿಗಳು ಪೂರ್ಣ ಗುಣಮುಖ!

ಸೋಂಕಿತರು ಧೈರ್ಯವಾಗಿರಬೇಕು:

ಸಚಿವ ಸಿ.ಟಿ.ರವಿ ಅವರ ಪತ್ನಿ ಪಲ್ಲವಿ ರವಿ ಮಾತನಾಡಿ, ನನ್ನ ಪತಿಗೆ ಕೊರೋನಾ ಸೋಂಕು ಬಂದಾಗ ಹೆದರಿಕೆಯಾಗಿತ್ತು. ನಂತರ ಏನೂ ಭಯವಾಗಲಿಲ್ಲ. ಕೊರೋನಾ ಬಂದವರು ಧೈರ್ಯದಿಂದ ಇದ್ದರೆ ಅವರ ಮನೆಯವರು ಕೂಡ ಧೈರ್ಯದಿಂದ ಇರಬಹುದು ಎಂದು ತಿಳಿಸಿದರು.

ಕೊರೊನಾದಿಂದ ಚೇತರಿಸಿಕೊಂಡ ನಂತರ ಮೊದಲ ಪತ್ರಿಕಾಗೋಷ್ಠಿಯನ್ನು ಇಂದು ನನ್ನ ನಿವಾಸದಲ್ಲಿ ನಡೆಸಿ ಗೃಹ ನಿರ್ಬಂಧದ ವೇಳೆ ನಾನು ಪಾಲಿಸಿದ ನಿಯಮಗಳು, ಸೇವಿಸಿದ ಡಾ. ಗಿರಿಧರ ಕಜೆ ಅವರ ಆಯುರ್ವೇದಿಕ ಔಷಧಿ, ಮನೆ ಮದ್ದುಗಳ ಬಗ್ಗೆ ಮಾತನಾಡಿದೆ. ಈ ವೇಳೆ ಜಿಲ್ಲೆಯಲ್ಲಿ ಸದ್ಯದ ಕೊರೊನಾ ಪರಿಸ್ಥಿತಿ ಬಗ್ಗೆ ಮಾತನಾಡಿ ಮುಂದಿನ ಕೆಲಸಗಳ ಮಾಹಿತಿ ನೀಡಿದ್ದೇನೆ. pic.twitter.com/VwO5QiunvT

— C T Ravi 🇮🇳 ಸಿ ಟಿ ರವಿ (@CTRavi_BJP)

ಅವರಿಗೆ ನೀಡುತ್ತಿದ್ದ ಊಟದಲ್ಲಿ ಯಾವುದೇ ವ್ಯತ್ಯಾಸ ಇರಲಿಲ್ಲ. ನಾನೇ ಅಡುಗೆ ಮಾಡಿ ಊಟ ಬಡಿಸುತ್ತಿದ್ದೆ. ಅವರ ರೂಂ ಕೂಡ ನಾನೇ ಕ್ಲೀನ್‌ ಮಾಡುತ್ತಿದ್ದೆ. ಕೊರೋನಾಕ್ಕೆ ಯಾರೂ ಹೆದರುವುದು ಬೇಡ, ಧೈರ್ಯದಿಂದ ಎದುರಿಸಬೇಕು ಎಂದು ತಿಳಿಸಿದರು.

ಕೊರೋನಾಗೆ ಅಮೆರಿಕದಲ್ಲೂ ಆಯುರ್ವೇದ ಪ್ರಯೋಗ!

ಕೊರೋನಾ ವಾರಿಯರ್ಸ್‌ಗೆ ಧನ್ಯವಾದ ತಿಳಿಸುತ್ತೇನೆ. ಅವರು ಪಿಪಿಇ ಕಿಟ್‌ ಅನ್ನು ಹಾಕಿಕೊಂಡು ದಿನವೆಲ್ಲ ಹೇಗೆ ಇರುತ್ತಾರೋ ಗೊತ್ತಿಲ್ಲ. ನನಗೆ ಪಿಪಿಇ ಕಿಟ್‌ ಧರಿಸಿ ಅರ್ಧ ಗಂಟೆಯೂ ಇರಲಾಗಲಿಲ್ಲ. ನಿಜವಾಗಿಯೂ ಕೊರೋನಾ ವಾರಿಯರ್ಸ್‌ ಗ್ರೇಟ್‌ ಎಂದು ಪ್ರಶಂಸಿಸಿದರು.

click me!