ವರ್ಷಾಂತ್ಯಕ್ಕೆ ಕೇರಳಕ್ಕೆ ವಿಶೇಷ ಎಕ್ಸ್‌ಪ್ರೆಸ್‌ ರೈಲು ಸಂಚಾರ

By Kannadaprabha NewsFirst Published Dec 25, 2019, 9:23 AM IST
Highlights

ಕ್ರಿಸ್‌ಮಸ್‌ ಹಾಗೂ ಶಬರಿಮಲೆ ಪೂಜೆ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಡಿ.28ರಂದು ನಗರದ ಮೆಜೆಸ್ಟಿಕ್‌ (ಕೆಎಸ್‌ಆರ್‌) ರೈಲು ನಿಲ್ದಾಣದಿಂದ ಕೇರಳದ ಎರ್ನಾಕುಲಂಗೆ ವಿಶೇಷ ಎಕ್ಸ್‌ಪ್ರೆಸ್‌ ರೈಲು ಸಂಚಾರ ಮಾಡಲಿದೆ.

ಬೆಂಗಳೂರು [ಡಿ.25]: ನೈಋುತ್ಯ ರೈಲ್ವೆಯು ಕ್ರಿಸ್‌ಮಸ್‌ ಹಾಗೂ ಶಬರಿಮಲೆ ಪೂಜೆ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಡಿ.28ರಂದು ನಗರದ ಮೆಜೆಸ್ಟಿಕ್‌ (ಕೆಎಸ್‌ಆರ್‌) ರೈಲು ನಿಲ್ದಾಣದಿಂದ ಕೇರಳದ ಎರ್ನಾಕುಲಂಗೆ ವಿಶೇಷ ಎಕ್ಸ್‌ಪ್ರೆಸ್‌ ರೈಲು ಸಂಚಾರದ ವ್ಯವಸ್ಥೆ ಮಾಡಿದೆ.

ಬೆಂಗಳೂರು ಕೆಎಸ್‌ಆರ್‌-ಎರ್ನಾಕುಲಂ ವಿಶೇಷ ಎಕ್ಸ್‌ಪ್ರೆಸ್‌ ರೈಲು (ಸಂಖ್ಯೆ 06547) ಡಿ.8ರಂದು ಸಂಜೆ 6.45ಕ್ಕೆ ಹೊರಟು ಮರುದಿನ ಬೆಳಗ್ಗೆ 6 ಗಂಟೆಗೆ ಎರ್ನಾಕುಲಂ ತಲುಪಲಿದೆ. 

ಇನ್ಮುಂದೆ ಹುಬ್ಬಳ್ಳಿ-ಬೆಂಗಳೂರು ರೈಲು ಪ್ರಯಾಣಕ್ಕೆ ಐದೇ ತಾಸು?...

ಎರ್ನಾಕುಲಂನಿಂದ ಡಿ.9ರಂದು ಸಂಜೆ 5 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 6.50ಕ್ಕೆ ಕೆ.ಆರ್‌.ಪುರಂ ತಲುಪಲಿದೆ. ಈ ವಿಶೇಷ ರೈಲು ಹೋಗುವ ಮತ್ತು ಬರುವ ಮಾರ್ಗದಲ್ಲಿ ವೈಟ್‌ಫೀಲ್ಡ್‌, ಬಂಗಾರಪೇಟೆ, ಕುಪ್ಪಂ, ಸೇಲಂ, ಈರೋಡ್‌, ತಿರುಪ್ಪೂರ್‌, ಕೊಯಂಬತ್ತೂರು, ಪಾಲಕ್ಕಾಡ್‌, ತ್ರಿಶೂರು ಮತ್ತು ಅಲುವಾದಲ್ಲಿ ನಿಲುಗಡೆ ನೀಡಲಿದೆ. ಈ ರೈಲು ಪ್ರಯಾಣಕ್ಕೆ ವಿಶೇಷ ದರ ನಿಗದಿಗೊಳಿಸಲಾಗಿದೆ ಎಂದು ನೈಋುತ್ಯ ರೈಲ್ವೆ ತಿಳಿಸಿದೆ.

click me!