South Western Railway: ಬೆಂಗಳೂರು-ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್ ವಿಶೇಷ ರೈಲು ಶಾಶ್ವತ ಸ್ಥಗಿತ!

By Gowthami K  |  First Published Jul 7, 2023, 9:29 PM IST

ಬೆಂಗಳೂರು-ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್ ವಿಶೇಷ ರೈಲನ್ನು (ರೈಲು ನಂ.07353/07354) ಜುಲೈ 16 ರಿಂದ ಶಾಶ್ವತವಾಗಿ  ನಿಲ್ಲಿಸಿ ಬಿಡಲು ನೈರುತ್ಯ ರೈಲ್ವೆ ಚಿಂತಿಸಿದೆ ಎಂದು ವರದಿ ತಿಳಿಸಿದೆ. 


ಬೆಂಗಳೂರು (ಜು.7):  ಪ್ರಯಾಣಿಕರ ಸಂಖ್ಯೆ ಕಡಿಮೆಯಾದ ಕಾರಣಕ್ಕೆ ಬೆಂಗಳೂರು-ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್ ವಿಶೇಷ ರೈಲನ್ನು (ರೈಲು ನಂ.07353/07354) ಜುಲೈ 16 ರಿಂದ ಶಾಶ್ವತವಾಗಿ  ನಿಲ್ಲಿಸಿ ಬಿಡಲು ನೈರುತ್ಯ ರೈಲ್ವೆ (South Western Railway) ಚಿಂತಿಸಿದೆ ಎಂದು ವರದಿ ತಿಳಿಸಿದೆ.  ನೈಋತ್ಯ ರೈಲ್ವೆಯು ಈ ದೈನಂದಿನ ಎಕ್ಸ್‌ಪ್ರೆಸ್ ವಿಶೇಷ ರೈಲನ್ನು 2023ರ ಮಾರ್ಚ್ 23 ರಂದು ಸೀಮಿತ ನಿಲುಗಡೆಗಳೊಂದಿಗೆ ಆರಂಭಿಸಿತು. ಎಕ್ಸ್‌ಪ್ರೆಸ್ ರೈಲು ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣವನ್ನು (KSR station) ತಲುಪುವ ಮೊದಲು ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು ಮತ್ತು ಯಶವಂತಪುರದಲ್ಲಿ ಪ್ರಯಾಣಿಕರಿಗೆ ನಿಲುಗಡೆ ಇತ್ತು.

ಬೆಂಗಳೂರು-ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್ ವಿಶೇಷ ರೈಲು ಬೆಂಗಳೂರಿನಿಂದ ಬೆಳಗ್ಗೆ 7:30ಕ್ಕೆ ಹೊರಟು ಮಧ್ಯಾಹ್ನ 2.30ಕ್ಕೆ ಹುಬ್ಬಳ್ಳಿಗೆ ತಲುಪುತ್ತಿತ್ತು. ಬಳಿಕ ಮಧ್ಯಾಹ್ನ 3.15 ಕ್ಕೆ ಹುಬ್ಬಳ್ಳಿಯಿಂದ ಹೊರಟು ರಾತ್ರಿ 11.10 ಕ್ಕೆ ಬೆಂಗಳೂರು ತಲುಪುತ್ತಿತ್ತು. ಈ ವಿಶೇಷ ರೈಲಿನಲ್ಲಿ ಮೂರು ಎಸಿ ಕೋಚ್‌ಗಳಿತ್ತು ಮತ್ತು ಏಳು ಸ್ಲೀಪರ್ ಕೋಚ್‌ಗಳು ಸೇರಿದಂತೆ ಒಟ್ಟು 16 ಕೋಚ್‌ಗಳನ್ನು ಹೊಂದಿತ್ತು.

Tap to resize

Latest Videos

undefined

ಧರೆಗೆ ಉರುಳಿದ ಹಾವೇರಿಯ ಐತಿಹಾಸಿಕ ದೊಡ್ಡ ಹುಣಸೆ ಮರ!

ನೈರುತ್ಯ ರೈಲ್ವೆ ಅಧಿಕಾರಿಗಳ ಹೇಳಿಕೆಯಂತೆ, ರೈಲಿನ ಶೇ.34 ಕ್ಕಿಂತ ಕಡಿಮೆ ಸೀಟುಗಳಷ್ಟೇ ತುಂಬಿರುತ್ತದೆ ಮತ್ತು ಪ್ರಯಾಣಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ರೈಲು ಪ್ರಾರಂಭವಾದಾಗಿನಿಂದ ಈ ರೈಲಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ ಮತ್ತು ನೈರುತ್ಯ ರೈಲ್ವೆಯು ಈ ರೈಲನ್ನು ನಷ್ಟದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಜುಲೈ 16ರಿಂದ ರೈಲನ್ನು ರದ್ದುಗೊಳಿಸಲು ನಿರ್ಧರಿಸಿದ್ದಾರೆ.

ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹೋಗುವಾಗ ರೈಲು ಶೇ.30.17 ರಷ್ಟು ಪ್ರಯಾಣಿಕರಿಂದ ತುಂಬಿದ್ದರೆ.  ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೋಗುವಾಗ ರೈಲು ಶೇ.37.15ರಷ್ಟು ಪ್ರಯಾಣಿಕರಿಂದ ತುಂಬಿರುತ್ತಿತ್ತು. ಜುಲೈ 5 ರವರೆಗೆ ಈ ರೈಲು ಒಟ್ಟು 94 ಟ್ರಿಪ್‌ಗಳನ್ನು ಪೂರ್ಣಗೊಳಿಸಿದೆ.

Bengaluru : ಮೆಟ್ರೋ ಪ್ರಯಾಣಿಕರಿಗೆ ಶಾಕ್‌, ಒಂದು ತಿಂಗಳು ಸಂಚಾರ ಸ್ಥಗಿತ

ಇತ್ತೀಚೆಗೆ ಈ ಮಾರ್ಗವಾಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕೂಡ ಆರಂಭಿಸಲಾಗಿದ್ದು, ಬೆಂಗಳೂರಿನಿಂದ ಬೆಳಗ್ಗೆ ಹೊರಟು ಮಧ್ಯಾಹ್ನದ ಮೊದಲು ಹುಬ್ಬಳ್ಳಿ ತಲುಪುತ್ತದೆ. ಹಿಂದಿರುಗುವಾಗ ಮಧ್ಯಾಹ್ನ ಹುಬ್ಬಳ್ಳಿಯಿಂದ ಹೊರಟು ಸಂಜೆ ಸ್ಪಲ್ಪ ತಡವಾಗಿ ಬೆಂಗಳೂರು ತಲುಪುತ್ತದೆ. ಜನಶತಾಬ್ದಿ ಎಕ್ಸ್‌ಪ್ರೆಸ್ ರೈಲು ಕೂಡ ಈ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂಬುದು ಗಮನಾರ್ಹ ಸಂಗತಿಯಾಗಿದೆ.

click me!