ಧರೆಗೆ ಉರುಳಿದ ಹಾವೇರಿಯ ಐತಿಹಾಸಿಕ ದೊಡ್ಡ ಹುಣಸೆ ಮರ!

By Gowthami K  |  First Published Jul 7, 2023, 7:16 PM IST

ಸವಣೂರು ಪಟ್ಟಣದ ಶ್ರೀ ದೊಡ್ಡಹುಣಸೆ ಕಲ್ಲ ಮಠದ ಆವರಣದಲ್ಲಿರುವ ಸಾವಿರಾರು ವರ್ಷಗಳ ಇತಿಹಾಸ ಇರುವ ಹಾವೇರಿಯ ದೊಡ್ಡ ಹುಣಸೆ ಮರ ಧರೆಗೆ ಉರುಳಿದೆ.


ಹಾವೇರಿ(ಜು.7): ಸಾವಿರಾರು ವರ್ಷಗಳ ಇತಿಹಾಸ ಇರುವ ಹಾವೇರಿಯ ದೊಡ್ಡ ಹುಣಸೆ ಮರ ಧರೆಗೆ ಉರುಳಿದೆ. ಸವಣೂರು ಪಟ್ಟಣದ ಶ್ರೀ ದೊಡ್ಡಹುಣಸೆ ಕಲ್ಲ ಮಠದ ಆವರಣದಲ್ಲಿರುವ ಈ ಮರವಿದೆ. ಸಾವಿರಾರು ವರ್ಷಗಳ ಹಿಂದೆ ಘೋರಕನಾಥ ತಪಸ್ವಿಗಳು ನೆಟ್ಟು ಹೋಗಿರುವ ಗಿಡ ಬೃಹತ್  ಮರವಾಗಿ ಬೆಳೆದು ಪ್ರವಾಸಿಗರ ಮೆಚ್ಚುಗೆ ಪಡೆದಿತ್ತು. ಇದೀಗ ವಿಪರೀತ ಮಳೆಯ ಕಾರಣದಿಂದ ಮರ ಧರೆಗುಳಿದೆ.

ಸುಂಟಿಕೊಪ್ಪ: ಭಾರಿ ಮಳೆಗೆ ಧರೆಗೆ ಉರುಳಿದ ವಿದ್ಯುತ್ ಕಂಬಗಳು!

Latest Videos

undefined

ಶ್ರೀ ಮಠದಲ್ಲಿದ್ದ ಈ ಮರ ಅನೇಕರ ಭಕ್ತಿಯ ಪ್ರತಿಕವಾಗಿತ್ತು. ದೊಡ್ಡ ಹುಣಸೆ ಮರ ನೋಡಲು ಅನೇಕರು ಮಠಕ್ಕೆ ಭೇಟಿ ನೀಡುತ್ತಿದ್ದರು. ಶ್ರೀ ಮಠದಲ್ಲಿ ಒಟ್ಟು ಮೂರು ದೊಡ್ಡ ಹುಣಸೆ ಮರಗಳಿವೆ. ಅದರ ಪೈಕಿ ಇಂದು ಒಂದು ಮರ  ಧರೆಗೆ ಉರುಳಿದೆ. ಸ್ಥಳಕ್ಕೆ ಅರಣ್ಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಮರವನ್ನು ಮತ್ತೆ ಯಥಾವತ್ತಾಗಿ ನೆಡಲು ಚಿಂತನೆ ನಡೆಸಿದ್ದಾರೆ.

KARNATAKA BUDGET 2023: ಕಾಂಗ್ರೆಸ್‌ನಿಂದ ಹೊಸ ಶಿಕ್ಷಣ ನೀತಿ, ನೇಮಕಾತಿಯಲ್ಲಿ ಡಿಜಿಲಾಕರ್ ಅಂಕಪಟ್ಟಿ ಕಡ್ಡಾಯ

ಜುಲೈ 8ರಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ತಜ್ಞರು ಭೇಟಿ ನೀಡಲಿದ್ದಾರೆ. ದೊಡ್ಡ ಹುಣಸೆ ಮರ ಕೇವಲ ಮರ ಆಗದೆ ನಮ್ಮ‌ಮಠದ ಅವಿಭಾಜ್ಯ ಅಂಗವಾಗಿತ್ತು. ಅನೇಕ ಭಕ್ತರ ಪ್ರತೀಕವಾಗಿದ್ದ ಈ ಮರ ಇಂದು ಧರೆಗೆ ಉರುಳಿದ್ದ ಮಠಕ್ಕೆ ದೊಡ್ಡ ನಷ್ಟವಾಗಿದೆ.  ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಮರವನ್ನು ಮತ್ತೆ ನೆಡಲು ಪ್ರಯತ್ನಿಸುತ್ತಿದ್ದೇವೆ. ಸವಣೂರು ದೊಡ್ಡಹುಣಸೆ ಕಲ್ಮಠದ ಚೆನ್ನ ಬಸವ ಸ್ವಾಮಿಜಿ ಹೇಳಿದ್ದಾರೆ.

click me!