ದರ್ಗಾ ಶರೀಫ್ ಉರ್ಸ್ ಮತ್ತು ಮುಂಬರುವ ಹಬ್ಬಗಳ ಪ್ರಯುಕ್ತ ನೈಋತ್ಯ ರೈಲ್ವೆಯ ಈ ನಿಲ್ದಾಣಗಳಲ್ಲಿ ಮಹತ್ವದ ಬದಲಾವಣೆ!

Published : Sep 18, 2026, 04:45 PM IST
Indian Railways

ಸಾರಾಂಶ

ದರ್ಗಾ ಶರೀಫ್ ಉರ್ಸ್ ಮತ್ತು ಮುಂಬರುವ ಹಬ್ಬಗಳ ಪ್ರಯುಕ್ತ ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ರೈಲ್ವೆ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ. ನಾಗಲಾವಿ ಮತ್ತು ರಾಣಿ ನಿಲ್ದಾಣಗಳಲ್ಲಿ ರೈಲುಗಳಿಗೆ ತಾತ್ಕಾಲಿಕ ನಿಲುಗಡೆ ಕಲ್ಪಿಸಲಾಗಿದೆ. ಅಲ್ಲದೆ, ವಿಶಾಖಪಟ್ಟಣಂ-ಎಸ್‌ಎಂವಿಟಿ ಬೆಂಗಳೂರು ವಿಶೇಷ ರೈಲಿನ ಸೇವೆಯನ್ನು ವಿಸ್ತರಿಸಲಾಗಿದೆ.

ಬೆಂಗಳೂರು: ದರ್ಗಾ ಶರೀಫ್ ಉರ್ಸ್ ಉತ್ಸವ ಹಾಗೂ ಮುಂಬರುವ ಪ್ರಮುಖ ಹಬ್ಬಗಳ ಸಾಲಿನಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು ದಕ್ಷಿಣ ಪಶ್ಚಿಮ ರೈಲ್ವೆ ಮತ್ತು ದಕ್ಷಿಣ ಕರಾವಳಿ ರೈಲ್ವೆ ವಿಭಾಗಗಳು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿವೆ. ಕೆಲವು ಪ್ರಮುಖ ರೈಲುಗಳಿಗೆ ತಾತ್ಕಾಲಿಕ ಹಾಗೂ ಪ್ರಾಯೋಗಿಕ ನಿಲುಗಡೆ ಕಲ್ಪಿಸುವುದರ ಜೊತೆಗೆ, ವಿಶೇಷ ರೈಲುಗಳ ಸೇವೆಯನ್ನು ವಿಸ್ತರಿಸಲಾಗಿದೆ. ಈ ಬಗ್ಗೆ ನೈಋತ್ಯ ರೈಲ್ವೆ ಹೇಳಿಕೆ ಬಿಡುಗಡೆ ಮಾಡಿದೆ.

1. ನಾಗಲಾವಿ ಹಾಲ್ಟ್ ನಿಲ್ದಾಣದಲ್ಲಿ ತಾತ್ಕಾಲಿಕ ನಿಲುಗಡೆ:

ಸೆಪ್ಟೆಂಬರ್ 09 ರಿಂದ ಸೆಪ್ಟೆಂಬರ್ 24 ರವರೆಗೆ ನಡೆಯಲಿರುವ ಐತಿಹಾಸಿಕ ದರ್ಗಾ ಶರೀಫ್ ಉರ್ಸ್ ಉತ್ಸವಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ನಾಗಲಾವಿ ಹಾಲ್ಟ್ ನಿಲ್ದಾಣದಲ್ಲಿ (Nagalavi Halt) ಕೆಳಗಿನ ದಿನನಿತ್ಯದ ರೈಲುಗಳಿಗೆ 1 ನಿಮಿಷದ ತಾತ್ಕಾಲಿಕ ನಿಲುಗಡೆ ನೀಡಲಾಗಿದೆ.

ರೈಲು ಸಂಖ್ಯೆ 17332 (ಎಸ್‌ಎಸ್‌ಎಸ್ ಹುಬ್ಬಳ್ಳಿ - ಮಿರಜ್ ಡೈಲಿ ಎಕ್ಸ್‌ಪ್ರೆಸ್): ಮಧ್ಯಾಹ್ನ 12:30 ಕ್ಕೆ ನಾಗಲಾವಿ ತಲುಪಿ, 12:31 ಕ್ಕೆ ಹೊರಡಲಿದೆ.

ರೈಲು ಸಂಖ್ಯೆ 20675 (ಬೆಳಗಾವಿ - ಮೈಸೂರು ವಿಶ್ವಮಾನವ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್): ಬೆಳಿಗ್ಗೆ 08:47 ಕ್ಕೆ ಆಗಮಿಸಿ, 08:48 ಕ್ಕೆ ನಿರ್ಗಮಿಸಲಿದೆ.

ರೈಲು ಸಂಖ್ಯೆ 20676 (ಮೈಸೂರು - ಬೆಳಗಾವಿ ವಿಶ್ವಮಾನವ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್): ಸಂಜೆ 18:09 ಕ್ಕೆ ಆಗಮಿಸಿ, 18:10 ಕ್ಕೆ ನಿರ್ಗಮಿಸಲಿದೆ.

ರೈಲು ಸಂಖ್ಯೆ 17331 (ಮಿರಜ್ - ಎಸ್‌ಎಸ್‌ಎಸ್ ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್): ಬೆಳಿಗ್ಗೆ 11:57 ಕ್ಕೆ ಆಗಮಿಸಿ, 11:58 ಕ್ಕೆ ನಿರ್ಗಮಿಸಲಿದೆ.

(ಗಮನಿಸಿ: ಈ ಮೂರು ದಿನಗಳ ಅವಧಿಯಲ್ಲಿ ತಮ್ಮ ಪ್ರಾರಂಭಿಕ ನಿಲ್ದಾಣಗಳಿಂದ ಹೊರಡುವ ರೈಲುಗಳಿಗೆ ಮಾತ್ರ ಈ ನಿಲುಗಡೆ ಅನ್ವಯವಾಗುತ್ತದೆ).

2. ರಾಣಿ ನಿಲ್ದಾಣದಲ್ಲಿ ಪ್ರಾಯೋಗಿಕ ನಿಲುಗಡೆ ವಿಸ್ತರಣೆ:

ರಾಣಿ ನಿಲ್ದಾಣದಲ್ಲಿ (Rani Station) 'ಜೋಧ್‌ಪುರ - ಕೆಎಸ್‌ಆರ್ ಬೆಂಗಳೂರು - ಜೋಧ್‌ಪುರ' ಸಾಪ್ತಾಹಿಕ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16533/16534) ರೈಲಿಗೆ ನೀಡಲಾಗಿದ್ದ ಪ್ರಾಯೋಗಿಕ ನಿಲುಗಡೆಯನ್ನು ಮುಂದಿನ ಆದೇಶದವರೆಗೆ ಯಥಾವತ್ತಾಗಿ ಮುಂದುವರಿಸಲು ರೈಲ್ವೆ ಮಂಡಳಿ ನಿರ್ಧರಿಸಿದೆ.

3. ಹಬ್ಬಗಳ ಸಾಲಿನಲ್ಲಿ ವಿಶಾಖಪಟ್ಟಣಂ-ಎಸ್‌ಎಂವಿಟಿ ಬೆಂಗಳೂರು ವಿಶೇಷ ರೈಲು ವಿಸ್ತರಣೆ:

ದಸರಾ, ದೀಪಾವಳಿ ಮತ್ತು ಛತ್ ಪೂಜೆ ಹಬ್ಬಗಳ ಪ್ರಯುಕ್ತ ಪ್ರಯಾಣಿಕರ ದಟ್ಟಣೆ ಹೆಚ್ಚಾಗುವುದನ್ನು ಮನಗಂಡು, 'ವಿಶಾಖಪಟ್ಟಣಂ - ಎಸ್‌ಎಂವಿಟಿ ಬೆಂಗಳೂರು - ವಿಶಾಖಪಟ್ಟಣಂ' ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 08581/08582) ಸೇವೆಯ ಅವಧಿಯನ್ನು ವಿಸ್ತರಿಸಲಾಗಿದೆ. ಈ ರೈಲುಗಳು ಸದ್ಯದ ವೇಳಾಪಟ್ಟಿ, ನಿಲುಗಡೆ ಹಾಗೂ ಬೋಗಿಗಳ ಸಂಯೋಜನೆಯೊಂದಿಗೆ ಕಾರ್ಯನಿರ್ವಹಿಸಲಿವೆ.

ರೈಲು ಸಂಖ್ಯೆ 08581 (ವಿಶಾಖಪಟ್ಟಣಂ - ಎಸ್‌ಎಂವಿಟಿ ಬೆಂಗಳೂರು ಸಾಪ್ತಾಹಿಕ ರೈಲು): ಪ್ರತಿ ಶುಕ್ರವಾರ ಹೊರಡುವ ಈ ರೈಲಿನ ಸೇವೆಯನ್ನು ಈ ಹಿಂದೆ 25.09.2026 ರವರೆಗೆ ನಿಗದಿಪಡಿಸಲಾಗಿತ್ತು. ಈಗ ಅದನ್ನು 02.10.2026 ರಿಂದ 27.11.2026 ರವರೆಗೆ ವಿಸ್ತರಿಸಲಾಗಿದೆ.

ರೈಲು ಸಂಖ್ಯೆ 08582 (ಎಸ್‌ಎಂವಿಟಿ ಬೆಂಗಳೂರು - ವಿಶಾಖಪಟ್ಟಣಂ ಸಾಪ್ತಾಹಿಕ ರೈಲು): ಪ್ರತಿ ಶನಿವಾರ ಹೊರಡುವ ಈ ರೈಲಿನ ಸೇವೆಯನ್ನು ಈ ಹಿಂದೆ 26.09.2026 ರವರೆಗೆ ನಿಗದಿಪಡಿಸಲಾಗಿತ್ತು. ಈಗ ಅದನ್ನು 03.10.2026 ರಿಂದ 28.11.2026 ರವರೆಗೆ ವಿಸ್ತರಿಸಲಾಗಿದೆ.

ವಿಸ್ತರಿಸಲಾದ ಈ ಅವಧಿಯಲ್ಲಿ ಈ ವಿಶೇಷ ರೈಲುಗಳು ಎರಡೂ ದಿಕ್ಕುಗಳಲ್ಲಿ ತಲಾ 9 ಹೆಚ್ಚುವರಿ ಸಂಚಾರಗಳನ್ನು (Trips) ನಡೆಸಲಿದ್ದು, ಹಬ್ಬದ ಸಾಲಿನಲ್ಲಿ ಊರಿಗೆ ತೆರಳುವ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇದು ಬರೀ ಬಿಸಿಲಲ್ಲ, ಭವಿಷ್ಯದ ಭೀಕರ ಎಚ್ಚರಿಕೆ! ನಾವೀಗಲೇ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಖಚಿತ!
ನಂದಿನಿ ಹಾಲಿನ ದಿಢೀರ್ ₹10 ಏರಿಕೆಗೆ ಆಗ್ರಹ! ಸರ್ಕಾರಕ್ಕೆ 3 ದಿನ ಗಡುವು ಕೊಟ್ಟ ಬಮುಲ್ ನಿರ್ದೇಶಕರು!