ಸಮಾಜದ ವಿವಿಧ ಗಣ್ಯರು, ಹಿರಿ-ಕಿರಿಯ ಕಲಾವಿದರು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ನಡುವೆ ದಕ್ಷಿಣ ಭಾರತದ ಸುದ್ದಿವಾಹಿನಿಗಳ ಪ್ರತಿಭಾನ್ವಿತ ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬೆಂಗಳೂರು (ಆ.19): ಸಮಾಜದ ವಿವಿಧ ಗಣ್ಯರು, ಹಿರಿ-ಕಿರಿಯ ಕಲಾವಿದರು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ನಡುವೆ ದಕ್ಷಿಣ ಭಾರತದ ಸುದ್ದಿವಾಹಿನಿಗಳ ಪ್ರತಿಭಾನ್ವಿತ ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅರಮನೆ ಮೈದಾನದ ಕಿಂಗ್ಸ್ ಕೋರ್ಟ್‌ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ಹಾಗೂ ವಿವಿಧ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ದಕ್ಷಿಣ ಭಾರತೀಯ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ವಿಜೃಂಭಣೆಯಿಂದ ಜರುಗಿತು. ಪತ್ರಿಕೋದ್ಯಮದ ಸಾಧಕರು ಹಾಗೂ ರಾಜಕೀಯ ನಾಯಕರನ್ನು ದಕ್ಷಿಣ ಭಾರತದ ಪ್ರಖ್ಯಾತ ಚಂಡೆ ವಾದ್ಯದ ಪ್ರಸ್ತುತಿಯಲ್ಲಿ ಸ್ವಾಗತಿಸಲಾಯಿತು. ಕಿಂಗ್ಸ್ ಕೋರ್ಟ್ ಆವರಣವೂ ಆಕರ್ಷಕ ದೀಪಗಳಿಂದ ಅಲಂಕಾರಗೊಳಿಸಲಾ ಗಿತ್ತು. ಕನ್ನಡ ಚಲನಚಿತ್ರರಂಗದ ಹಿರಿಯ ಕಲಾವಿದರು ಒಂದೇ ವೇದಿಕೆಯಲ್ಲಿ ಸೇರಿರುವುದರಿಂದ ಕಾರ್ಯಕ್ರಮದ ಸೊಬಗು ಇನ್ನಷ್ಟು ಹೆಚ್ಚಿದಂತಾಯಿತು.
ಪ್ರಶಸ್ತಿಗೆ ಅರ್ಹರಾದವರ ಕುಟುಂಬದ ಸದಸ್ಯರು, ಸ್ನೇಹಿತರು ಆಗಮಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.ಸಿನಿ ತಾರೆಯರುಜೊತೆಫೋಟೊತೆಗೆಸಿಕೊಳ್ಳಲು ಅಭಿಮಾನಿಗಳು ಸೆಲ್ಸಿಗೆ ಮುಗಿಬಿದ್ದ ದೃಶ್ಯಗಳು ಕಂಡುಬಂದವು. ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಬಿಡುವಿನ ಸಮಯದಲ್ಲಿ ಭರತನಾಟ್ಯ, ಕಥಕ್, ಯಕ್ಷಗಾನ ಸೇರಿದಂತೆ ವಿವಿಧ ನೃತ್ಯ ಪ್ರದರ್ಶನಗಳನ್ನು ವಿವಿಧ ನೃತ್ಯ ಕಲಾ ತಂಡಗಳಿಂದ ಪ್ರದರ್ಶಿಸಲಾಯಿತು. ವಿಶೇಷ ಅಲಂಕಾರಿಕ ಉಡುಗೆಯಲ್ಲಿ ಮಿಂಚಿದ್ದ ನೃತ್ಯ ತಂಡಗಳು ಅಲ್ಲಿ ನೆರೆದಿದ್ದವರ ಮನ ಸೆಳೆಯುವಂತಿತ್ತು. ಪ್ರಶಸ್ತಿ ಸ್ವೀಕರಿಸಿದ ಸಾಧಕರು ತಮ್ಮ ಕುಟುಂಬದ ಸದಸ್ಯರೊಂದಿಗೆ ಹಾಗೂ ಸಹೋದ್ಯೋಗಿಗಳ ಜೊತೆಯಲ್ಲಿ ಸಂಭ್ರಮದ ಕ್ಷಣವನ್ನು ಸಂಭ್ರಮಿಸಿದರು.
ಕನ್ನಡ ಚಿತ್ರರಂಗದ ಉಳಿವು, ಬೆಳವಣಿಗೆಯಲ್ಲಿ ಮಾಧ್ಯಮಗಳ ಪಾತ್ರ ದೊಡ್ಡದು: ನಟ ರಿಷಬ್ ಶೆಟ್ಟಿ
ಸಾಧಕರನ್ನು ಗುರುತಿಸುವ ಟಿಎನ್‌ಐಟಿ: ದಿ ನ್ಯೂ ಇಂಡಿಯನ್ ಟೈಮ್ಸ್ (ಟಿಎನ್ ಐಟಿ) ಒಂಬತ್ತು ವರ್ಷಗಳನ್ನು ಪೂರೈಸಿದೆ. ಸಂಸ್ಥೆಯ ಸ್ಥಾಪಕ ಹಾಗೂ ಸಿಇಒ ಎ.ರಾಘವೇಂದ್ರ (ರಘು ಭಟ್) ಅವರ ಕನಸಿನ ಕೂಸಾದ ಟಿಎನ್‌ಐಟಿ, ಸತತ ಏಳು ವರ್ಷಗಳಿಂದ ಕರ್ನಾಟಕದ ಮಾಧ್ಯಮಗಳ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿತ್ತು. ಈ ವರ್ಷದಿಂದ ದಕ್ಷಿಣ ಭಾರತದ ಕೇರಳ, ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಕರ್ನಾಟಕದ ಮಾಧ್ಯಮಗಳ ಸಾಧಕ ಪತ್ರಕರ್ತರನ್ನು ಗುರುತಿಸಿ ಪ್ರಶಸ್ತಿ ಕೊಡುವಷ್ಟರ ಮಟ್ಟಕ್ಕೆ ಬೆಳೆದಿರುವುದು ಸಾಧನೆಯೇ ಸರಿ. ನಿತ್ಯವೂ ಬ್ರೇಕಿಂಗ್ ಸುದ್ದಿಗಳ ಜಂಜಾಟದಲ್ಲಿ ತಮ್ಮನ್ನು ತಾವು ಮರೆತ ಪತ್ರಕರ್ತರು ಒಳಗೊಂಡಂತೆ ಮಾಧ್ಯಮ ಸಂಸ್ಥೆಯ ಎಲ್ಲ ವರ್ಗದವರನ್ನು ಗುರುತಿಸುವ ಮಹತ್ವದ ಕಾರ್ಯವನ್ನು ದಿ ನ್ಯೂ ಇಂಡಿಯನ್ ಟೈಮ್ಸ್ ಮಾಡುತ್ತಿದೆ. ಹೀಗೆ ಹಂತ ಹಂತವಾಗಿ ಸಾಧನೆಯ ಶಿಖರವೇರುತ್ತಿರುವ ಟಿಎನ್‌ಐಟಿ ಇನ್ನೂ ವಿಸ್ತಾರವಾಗಿ ಬೆಳೆಯುತ್ತಿದೆ.
ದಿ ನ್ಯೂ ಇಂಡಿಯನ್ ಟೈಮ್ಸ್ ಪ್ರಶಸ್ತಿ ಪುರಸ್ಕೃತರು: ದಕ್ಷಿಣ ಭಾರತದ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ರಾಜ್ಯಗಳ ದೃಶ್ಯ ಮಾಧ್ಯಮಗಳ ಸಾಧಕರನ್ನು ಗುರುತಿಸಿ 'ದಿನ್ಯೂ ಇಂಡಿಯನ್ ಟೈಮ್ಸ್ ಕೊಡಮಾಡುವ2024-25ನೇ ಸಾಲಿನ ಅತ್ಯುತ್ತಮ ಸುದ್ದಿವಾಹಿನಿ ಪ್ರಶಸ್ತಿಗೆ ಏಷ್ಯಾನೆಟ್ ನ್ಯೂಸ್-ಮಲಯಾಳಂ ಭಾಜವಾಗಿದೆ. ಜೊತೆಗೆ ಕನ್ನಡದ 'ಏಷ್ಯಾನೆಟ್ಸು ವರ್ಣನ್ಯೂಸ್ 'ನಾಲ್ವರು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆದುಕೊಂಡರು. ಇದರೊಂದಿಗೆ ಸುಮಾರು 40ಕ್ಕೂ ಹೆಚ್ಚು ಪತ್ರಕರ್ತರು ವಿವಿಧ ಪ್ರಶಸ್ತಿಗಳಿಗೆ ಪಾತ್ರರಾದರು.
ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಉತ್ತಮ ನಿರೂಪಕಿ ವಿಭಾಗದಲ್ಲಿ ಶ್ವೇತಾ ಆಚಾರ್ಯ, ಉತ್ತಮ ಮೆಟ್ರೊ ಪತ್ರಕರ್ತೆ ವಿಭಾಗದಲ್ಲಿ ಬಿ.ಎನ್. ವಿದ್ಯಾಶ್ರೀ, ಉತ್ತಮ ವಿಡಿಯೋ ಎಡಿಟರ್ ವಿಭಾಗದಲ್ಲಿ ಆರ್.ಜಿ. ಮಧುಸೂಧನ ರಾವ್, ಉತ್ತಮ ವಾಯ್ಸ್ ಓವರ್ (ಕನ್ನಡ) ವಿಭಾಗದಲ್ಲಿ ಅಶ್ವತ್ ಹೆಗಡೆ ಅವರು ಪ್ರಶಸ್ತಿ ಸ್ವೀಕರಿಸಿದರು. ಟಿಎನ್‌ಐಟಿ ಗ್ರೇಟ್ ಕಾಂಟ್ರಿಬ್ಯೂಷನ್ ಪ್ರಶಸ್ತಿ- ಶಶಿಧರ ಭಟ್, ಫೈರ್ ಬ್ಯಾಂಡ್ ಜರ್ನಲಿಸ್ಟ್ ಆಫ್ ದಿ ಇಯರ್- ರಾಕೇಶ್ ಶೆಟ್ಟಿ, ಜೀವಮಾನ ಸಾಧನೆ- ಹಮೀದ್ ಪಾಳ್ಯ, ಮಂಜುಳಾ ಕೃಷ್ಣಮೂರ್ತಿ, ಬೆಸ್ಟ್ ಮೆಮೊರೆಬಲ್ ಆ್ಯಂಕರ್- ಸಿ.ಎನ್.ಪ್ರಕಾಶ್‌ಕುಮಾರ್, ಟಿಎನ್‌ಐಟಿ ಐಕಾನ್ ಆಫ್ ದಿ ಕನ್ನಡ ಜರ್ನಲಿಸಂ- ರಾಧಾ ಹಿರೇಗೌಡರ್.
ಟಿಎನ್‌ಐಟಿ ಪ್ರೈಡ್ ಆಫ್ ಕರ್ನಾಟಕ- ಅಪರ್ಣ ವಸ್ತಾರೆ, ಅತ್ಯುತ್ತಮ ನಿರೂಪಣೆ- ಹರೀಶ್ ನಾಗರಾಜ್, ಶ್ವೇತಾ ಆಚಾರ್, ವರ್ಷದ ಅತ್ಯುತ್ತಮ ಸಂಪಾದಕೀಯ ಡಿ.ಪರುಶುರಾಮ, ವರ್ಷದ ಉತ್ತಮಸುದ್ದಿವಾಹಿನಿ- ಟಿವಿ9 ಕನ್ನಡ, ಫಾಸ್ಟೆಸ್ಟ್ ಗೋಯಿಂಗ್ ಚಾನಲ್ - ರಿಪಬ್ಲಿಕ್ ಕನ್ನಡ, ಉತ್ತಮ ತನಿಖಾ ವರದಿಗಾರ- ಸುನೀಲ್ ಧರ್ಮಸ್ಥಳ, ವರ್ಷದ ಟಿಎನ್‌ಐಟಿ ವಿಶೇಷ ನಿರೂಪಕಿ- ಶೃತಿ ಕಿತ್ತೂರು, ಉತ್ತಮ ನಿರೂಪಣೆ- ರಂಜಿತ್ ಶಿರಿಯಾರ್, ವಸಂತಕುಮಾರ್, ಎಸ್.ವಿ.ಶಕುಂತಲಾ, ಬೆಸ್ ಫಿಲಂ ಜರ್ನಲಿಸ್ಟ್- ಡಿ.ಎಸ್.ಯತೀಶ್, ಮಂಗಳ ರಾಜ್ ಗೋಪಾಲ್, ಉತ್ತಮ ರಾಜಕೀಯ ವರದಿಗಾರ- ಜೆ.ಆರ್. ವಿಜಯ್, ಜಿ.ಮಂಜುನಾಥ್, ಉತ್ತಮ ಮೆಟ್ರೋ ವರದಿಗಾರ- ಬಿ.ವಿ.ಅಭಿಷೇಕ್, ಕಾರ್ತಿಕ್ ನಾಯ್ಕ, ಬಿ.ಎನ್. ವಿದ್ಯಾಶ್ರೀ, ದೀಪ್ತಿ, ಬೆಸ್ಟ್ ಜರ್ನಲಿಸ್ಟ್- ವಿಷ್ಣು ಪ್ರಸಾದ್.
ಆರೋಪ ಬಂದ ತಕ್ಷಣ ಪತ್ರಕರ್ತರನ್ನು ಬಂಧಿಸಿದ್ರೆ ಹೇಗೆ?: ಖಾರವಾಗಿಯೇ ಮಾತಾಡಿದ ಸಚಿವ ಪರಮೇಶ್ವರ್
ಬೆಸ್ಟ್ ಸ್ಪೋರ್ಟ್ಸ್ ಜರ್ನಲಿಸ್ಟ್- ಜಿ.ಎಸ್. ಗಂಗಾಧರ್, ಬೆಸ್ಟ್ ಕ್ಯಾಮೆರಾಮೆನ್- ಎಂ. ನಾಗೇಶ್, ಎಂ.ಆರ್. ನಾಗೇಶ್, ಬೆಸ್ಟ್ ವಿಡಿಯೋ ಎಡಿಟರ್‌ಬಸವರಾಜ್ ದೊತಿಹಾಳ್, ಆರ್. ಜಿ.ಮಧುಸೂಧನ್ ರಾವ್, ರಾಧಿಕಾ, ಬೆಸ್ಟ್ ವಾಯ್ ಓವರ್- ನಿತಿನ್ ಶೆಟ್ಟಿ, ಅಶ್ವತ್ ಹೆಗಡೆ, ಪೂರ್ಣಿಮಾ ಗೌಡ, ಬೆಸ್ಟ್ ರಾಕ್ ನಾರ್ಥ್ ಜರ್ನಲಿಸ್ಟ್- ಪ್ರಕಾಶ್ ನೂಲ್ವಿ, ಬೆಸ್ಟ್ ರಾಕ್ ಜರ್ನಲಿಸ್ಟ್- ರಾಮ್, ಟಿಎನ್‌ಟಿಐ ಪ್ರೊಮಿಸಿಂಗ್ ಫೇಸ್ - ವಾಸುದೇವ್ ಭಟ್, ಪವಿತ್ರ ಸೂರ್ಯ ವಂಶಿ, ಟಿಎನ್‌ಐಟಿ ಫೇಸ್ ಆಫ್ ದಿ ಇಯರ್ - ಸಿಂಧೂರ ಗಂಗಾಧರ, ವರ್ಷದ ಉತ್ತಮ ಕಾರ್ಯಕ್ರಮ- ದಿ ಲೀಡರ್, ಬೆಸ್ಟ್ ಡಿಪಾರ್ಟ್ ಮೆಂಟ್ ಆಫ್ ಜರ್ನಲಿಸಂ- ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ಕುವೆಂಪು ವಿಶ್ವವಿದ್ಯಾಲಯ ಶಿವಮೊಗ್ಗ. ವರ್ಷದ ಉತ್ತಮ ಜ್ಯೋತಿಷಿ- ಆನಂದ್ ಗುರೂಜಿ ಅವರು ಪ್ರಶಸ್ತಿ ಪಡೆದುಕೊಂಡಿದ್ದಾರೆ.