ಲಾಕ್ ಡೌನ್‌ನಿಂದ ಮುಚ್ಚಲಾಗಿದ್ದ ಬಾರ್ ಹಾಗೂ ಪಬ್‌ಗಳನ್ನು ತೆರೆಯುವ ಬಗ್ಗೆ ಸಚಿವ ನಾಗೇಶ್ ಸುಳಿವು ನೀಡಿದ್ದಾರೆ.
ಬೆಳಗಾವಿ (ಆ.30): ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಹೇರಲಾಗಿದ್ದ ಲಾಕ್‌ಡೌನ್ ವೇಳೆ ಬಂದ್ ಆಗಿದ್ದ ಬಾರ್ ಮತ್ತು ಪಬ್‌ಗಳು ಮುಂದಿನ ತಿಂಗಳಿಂದ ಪ್ರಾರಂಭವಾಗುವ ಸಾಧ್ಯತೆಗಳ ಬಗ್ಗೆ ಅಬಕಾರಿ ಸಚಿವ ಎಚ್. ನಾಗೇಶ ಸುಳಿವು ನೀಡಿದ್ದಾರೆ.
ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ತಿಂಗಳಿಂದ ಬಾರ್ ಮತ್ತು ಪಬ್‌ಗಳನ್ನು ಪ್ರಾರಂಭಿಸುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದೆ ಎಂದು ತಿಳಿಸಿದರು. ಇದೇವೇಳೆ ರಾಜ್ಯದಲ್ಲಿರುವ ಡ್ರಗ್ಸ್ ಜಾಲ ಭೇದಿಸುವ ಸಲುವಾಗಿ ಈಗಾಗಲೇ ಈಗಾಗಲೇ ಐಜಿಯೊಂದಿಗೆ ಮಾತುಕತೆ ನಡೆಸಲಾಗಿದ್ದು, ಪೊಲೀಸ್ ಮತ್ತು ಅಬಕಾರಿ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸುವಂತೆ ಸೂಚನೆ ನೀಡಲಾಗಿದೆ.
ರಾಜ್ಯದಲ್ಲಿ 900 ಹೊಸ ಮದ್ಯದಂಗಡಿ ತೆರೆಯಲು ಒಪ್ಪಿಗೆ...
ಅದರಲ್ಲೂ ಬೆಂಗಳೂರಿನಲ್ಲಿ ಅತಿ ಹೆಚ್ಚು ದಾಳಿ ಮಾಡಲು ಸೂಚನೆ ನೀಡಲಾಗಿದೆ. ಇದರೊಂದಿಗೆ ಶಾಲಾ, ಕಾಲೇಜು ಸುತ್ತಮುತ್ತಲಿನ ಪ್ರದೇಶದಲ್ಲಿಯೂ ಮಾದಕ ದ್ರವ್ಯ ಮಾರಾಟ ನಡೆಯುತ್ತಿದೆ ಎಂದು ಮಾಹಿತಿ ಸಿಕ್ಕಿದ್ದು ಶಾಲಾ ಆರಂಭದ ದಿನಗಳಲ್ಲಿ ಸುತ್ತಮುತ್ತಲಿನ ಪ್ರದೇಶ ಪರಿಶೀಲನೆಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಬೆಂಗಳೂರಿನಲ್ಲಿ ಮಾದಕ ವಸ್ತು ಮಾರಾಟ ಜಾಲ ಪತ್ತೆಯಾಗಿರುವ ಪ್ರಕರಣ ಸ್ಯಾಂಪಲ್ ಅಷ್ಟೇ. .2 ಕೋಟಿ ಮೌಲ್ಯದ ಮಾದಕ ವಸ್ತು ವಶಕ್ಕೆ ಪಡೆಯಲಾಗಿದೆ. ಇದರ ಜಾಲ ಇನ್ನಷ್ಟುಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಅಭಿಪ್ರಾಯಪಟ್ಟರು.