ರೈತ ಸರ್ಕಾರಿ ನೌಕರನಾಗಿದ್ದರೂ ಸಿಗುತ್ತೆ 3 ಲಕ್ಷ ಬಡ್ಡಿ ರಹಿತ ಕೃಷಿ ಸಾಲ

By Kannadaprabha NewsFirst Published May 23, 2020, 7:50 AM IST
Highlights

ಸರ್ಕಾರಿ ನೌಕರರೂ ಆಗಿರುವ ರೈತರು ಹಾಗೂ ಒಂದೇ ರೈತ ಕುಟುಂಬದಲ್ಲಿ ಒಬ್ಬರಿಗಿಂತ ಹೆಚ್ಚು ಮಂದಿ ಬಡ್ಡಿ ರಹಿತ ಸಾಲ ಪಡೆಯಲು ಅಡ್ಡಿಯಾಗಿದ್ದ ಷರತ್ತುಗಳನ್ನು ಸಡಿಲಗೊಳಿಸಿ ಸಹಕಾರ ಇಲಾಖೆ ಶುಕ್ರವಾರ ಪರಿಷ್ಕೃತ ಆದೇಶ ಹೊರಡಿಸಿದೆ.

ಬೆಂಗಳೂರು(ಮೇ 23): ಸರ್ಕಾರಿ ನೌಕರರೂ ಆಗಿರುವ ರೈತರು ಹಾಗೂ ಒಂದೇ ರೈತ ಕುಟುಂಬದಲ್ಲಿ ಒಬ್ಬರಿಗಿಂತ ಹೆಚ್ಚು ಮಂದಿ ಬಡ್ಡಿ ರಹಿತ ಸಾಲ ಪಡೆಯಲು ಅಡ್ಡಿಯಾಗಿದ್ದ ಷರತ್ತುಗಳನ್ನು ಸಡಿಲಗೊಳಿಸಿ ಸಹಕಾರ ಇಲಾಖೆ ಶುಕ್ರವಾರ ಪರಿಷ್ಕೃತ ಆದೇಶ ಹೊರಡಿಸಿದೆ.

ಪರಿಷ್ಕೃತ ಆದೇಶದಿಂದಾಗಿ ಒಂದೇ ಕುಟುಂಬದಲ್ಲಿರುವ ಅಣ್ಣ ತಮ್ಮಂದಿರೂ ಪ್ರತ್ಯೇಕ ಪಹಣಿ, ಗೇಣಿ, ಸಾಗುವಳಿ ಪತ್ರ ಹೊಂದಿದ್ದರೆ ಸಾಲ ಪಡೆಯಬಹುದು. ಸರ್ಕಾರಿ ನೌಕರರಾಗಿರುವ ರೈತರು ಕೂಡ 2019-20ನೇ ಸಾಲಿನಲ್ಲಿ 3 ಲಕ್ಷ ರು.ವರೆಗೆ ಶೂನ್ಯ ಬಡ್ಡಿ ದರದ ಸಾಲ ಪಡೆಯಬಹುದಾಗಿರುತ್ತದೆ.

RBI ರೆಪೋ ದರ ಕಡಿತದ ಬೆನ್ನಲ್ಲೇ ಜೆಕೆ ಟೈಯರ್ಸ್ ಮಹತ್ವದ ಪ್ರಕಣೆ!

ರಾಜ್ಯ ಸಹಕಾರ ಇಲಾಖೆಯು ಕಳೆದ ಮಾ.30ರಂದು 2019-20ನೇ ಸಾಲಿನ ಸಹಕಾರಿ ಸಂಸ್ಥೆಗಳಲ್ಲಿನ 3 ಲಕ್ಷ ರು.ವರೆಗಿನ ಬಡ್ಡಿ ರಹಿತ ಸಾಲ ಸೌಲಭ್ಯ ಪಡೆಯಲು ಒಂದು ರೈತ ಕುಟುಂಬದ ಒಬ್ಬ ರೈತ ಮಾತ್ರ ಅರ್ಹ ಹಾಗೂ ರೈತರು ಸರ್ಕಾರಿ ಅಥವಾ ಸರ್ಕಾರಿ ಸ್ವಾಮ್ಯದ ಸಂಸ್ಥೆಯ ನೌಕರರಾಗಿದ್ದರೆ, ಮಾಸಿಕ 20 ಸಾವಿರ ರು.ಗಿಂತ ಹೆಚ್ಚು ವೇತನ, ಪಿಂಚಣಿ ಪಡೆಯುತ್ತಿದ್ದರೆ ಮತ್ತು ಕಳೆದ ಮೂರು ವರ್ಷಗಳಿಂದ ಆದಾಯ ತೆರಿಗೆ ಪಾವತಿಸುತ್ತಿದ್ದರೆ ಸಾಲ ಸೌಲಭ್ಯಕ್ಕೆ ಅರ್ಹರಲ್ಲ ಎಂದು ಆದೇಶ ಹೊರಡಿಸಿತ್ತು.

ರಾಜ್ಯದ ರೈತರಿಗೆ ಸಿಹಿ ಸುದ್ದಿ ಕೊಟ್ಟ ಯಡಿಯೂರಪ್ಪ

ಇದಕ್ಕೆ, ರೈತ ಸಮೂಹದಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಕೂಡಲೇ ಇಂತಹ ನಿಬಂಧನೆಗಳನ್ನು ವಾಪಸ್‌ ಪಡೆಯಬೇಕೆಂದು ರೈತ ಸಂಘಟನೆಗಳು ಆಗ್ರಹಿಸಿದ್ದವು. ಹೀಗಾಗಿ ಸರ್ಕಾರ ಹೊಸದಾಗಿ ಕೆಲವು ಮಾರ್ಪಾಡು ಮಾಡಿದ ಷರತ್ತುಗಳೊಂದಿಗೆ ಸಾಲ ನೀಡಿಕೆಯ ಆದೇಶ ನೀಡಿದೆ.

click me!