ಪ್ರತಿ 5 ಸೆಕೆಂಡಿಗೆ 1 ಫುಟ್‌ಬಾಲ್ ಮೈದಾನದಷ್ಟುಮಣ್ಣು ಮಲಿನ: ಸದ್ಗುರು ಆತಂಕ

By Kannadaprabha NewsFirst Published Dec 6, 2022, 11:37 AM IST
Highlights

ಮಣ್ಣಿನ ಮಾಲಿನ್ಯ ಮತ್ತು ಹವಾಮಾನ ಬದಲಾವಣೆಯಿಂದ ವಿಶ್ವದಾದ್ಯಂತ 2050ರ ಹೊತ್ತಿಗೆ ಅರ್ಧಕ್ಕರ್ಧದಷ್ಟುಆಹಾರ ಉತ್ಪಾದನೆ ಕಡಿಮೆ ಆಗುವ ಸಾಧ್ಯತೆಗಳಿದ್ದು, ಮಣ್ಣಿನ ಫಲವತ್ತತೆ ಹೆಚ್ಚಿಸುವ ನಿಟ್ಟಿನಲ್ಲಿ ನಮ್ಮ ಜವಾಬ್ದಾರಿ ಆರಂಭಿಸಬೇಕು ಎಂದು ಈಶಾ ¶ೌಂಡೇಶನ್‌ ಸದ್ಗುರು ತಿಳಿಸಿದರು.

ಬೆಂಗಳೂರು (ಡಿ.6) : ಮಣ್ಣಿನ ಮಾಲಿನ್ಯ ಮತ್ತು ಹವಾಮಾನ ಬದಲಾವಣೆಯಿಂದ ವಿಶ್ವದಾದ್ಯಂತ 2050ರ ಹೊತ್ತಿಗೆ ಅರ್ಧಕ್ಕರ್ಧದಷ್ಟುಆಹಾರ ಉತ್ಪಾದನೆ ಕಡಿಮೆ ಆಗುವ ಸಾಧ್ಯತೆಗಳಿದ್ದು, ಮಣ್ಣಿನ ಫಲವತ್ತತೆ ಹೆಚ್ಚಿಸುವ ನಿಟ್ಟಿನಲ್ಲಿ ನಮ್ಮ ಜವಾಬ್ದಾರಿ ಆರಂಭಿಸಬೇಕು ಎಂದು ಈಶಾ ¶ೌಂಡೇಶನ್‌ ಸದ್ಗುರು ತಿಳಿಸಿದರು.

ವಿಶ್ವ ಮಣ್ಣು ದಿನದ ಹಿನ್ನೆಲೆ ಸೋಮವಾರ ಬೆಂಗಳೂರಿನಲ್ಲಿ ಮಣ್ಣು ಉಳಿಸಿ ಜಾಥಾ ನಡೆಸಲಾಯಿತು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸದ್ಗುರು, ‘ಪ್ರತಿ 5 ಸೆಕೆಂಡಿಗೆ ಒಂದು ಫುಟ್‌ಬಾಲ… ಮೈದಾನದಷ್ಟುಮಣ್ಣು ಮಲೀನವಾಗಿ ಮರುಭೂಮಿಯಾಗುತ್ತಿದೆ. ಕಳೆದ 25 ವರ್ಷಗಳಲ್ಲಿ ಶೇ.10ರಷ್ಟುಮಣ್ಣು ಮರುಭೂಮೀಕರಣಗೊಂಡಿದೆ. ವ್ಯವಸಾಯ ಮಾಡುವ ಮಣ್ಣಿನಲ್ಲಿ ಶೇ.3ರಷ್ಟುಜೈವಿಕ ಅಂಶಗಳಿರಬೇಕು. ಆದರೆ, ವಿಶ್ವದ ಎಲ್ಲಾ 192 ದೇಶಗಳ ಮಣ್ಣುಗಳನ್ನು ಅಧ್ಯಯನ ಮಾಡಿದ್ದು, ಒಂದೇ ಒಂದು ದೇಶದಲ್ಲಿಯೂ ಶೇ.3ರಷ್ಟುಜೈವಿಕಾಂಶವಿಲ್ಲ. ಭಾರತದ ಮಣ್ಣಿನಲ್ಲಿ ಶೇ.0.68ರಷ್ಟುಮಾತ್ರ ಜೈವಿಕ ಅಂಶವಿದೆ. ಇದು ಅಪಾಯಕಾರಿ ಮಟ್ಟವಾಗಿದ್ದು, ಭವಿಷ್ಯದಲ್ಲಿ ಆಹಾರ ಉತ್ಪಾದನೆ ಮೇಲೆ ದೊಡ್ಡ ಪರಿಣಾಮ ಬೀರಲಿದೆ. 2050ರ ವೇಳೆಗೆ ಆಹಾರ ಉತ್ಪಾದನೆ ಶೇ.50 ರಷ್ಟುತಗ್ಗಲಿದ್ದು, ಮಾನವ ಸಂತತಿ ಕೇಡಾಗುವ ಸಾಧ್ಯತೆಗಳಿವೆ ಎಂದು ಕಳವಳ ವ್ಯಕ್ತಪಡಿಸಿದರು.

 

ಮಹಿಳೆ ಉಡುಗೆ ನಿರ್ಧರಿಸುವುದು ಧರ್ಮ, ಲಂಪಟರಲ್ಲ, ಇರಾನ್ ಹಿಜಾಬ್ ಪ್ರತಿಭಟನೆಗೆ ಸದ್ಗುರು ಸಂದೇಶ!

81 ದೇಶದಲ್ಲಿ ಮಣ್ಣಿಗಾಗಿ ನೀತಿ ಬದಲಾವಣೆ:

ಕಳೆದ ಜನವರಿಯಲ್ಲಿ ನಡೆದ ವಿಶ್ವ ಮಟ್ಟದ ಸಭೆಯಲ್ಲಿ ಹವಾಮಾನ ವಿಚಾರವಾಗಿ ಮಾತನಾಡಲಾಯಿತು. ಆದರೆ, ಮಣ್ಣಿನ ಬಗ್ಗೆ ಮಾತನಾಡಿರಲಿಲ್ಲ. 2022 ಮಾಚ್‌ರ್‍ 21 ರಿಂದ 8 ತಿಂಗಳು ವಿಶ್ವದಾದ್ಯಂತ ಮಣ್ಣು ಉಳಿಸಿ ಅಭಿಯಾನ ನಡೆಸಲಾಯಿತು. 81 ದೇಶಗಳಲ್ಲಿ ಮಣ್ಣಿನ ವಿಚಾರವಾಗಿ ಅಲ್ಲಿನ ಆಡಳಿತ ವರ್ಗಗಳು ನೀತಿ ನಿಯಮಗಳ ಬದಲಾವಣೆ ಮಾಡುತ್ತಿದ್ದು, ಹೊಸ ಕಾರ್ಯಕ್ರಮ ಹಮ್ಮಿಕೊಳ್ಳಲು ಮುಂದಾಗಿವೆ ಎಂದು ತಿಳಿಸಿದರು.

ಕಾವೇರಿ ಅಭಿಯಾನಕ್ಕೆ ಬೆಂಬಲ:

ಕಾವೇರಿ ಕೂಗು ಅಭಿಯಾನದಲ್ಲಿ ಸುಮಾರು 1,32,000 ರೈತರು ಮರ ಆಧಾರಿತ ಕೃಷಿಯನ್ನು ಒಳಗೊಂಡಿರುವ ಪುನರುತ್ಪಾದಕ ಕೃಷಿ ಪದ್ಧತಿಗೆ ಪರಿವರ್ತನೆಯಾಗಿದ್ದಾರೆ. ಇದರಿಂದ ಆದಾಯದಲ್ಲಿ ಶೇ.300 ರಿಂದ ಶೇ.800 ಹೆಚ್ಚಳವಾಗಿದೆ. ಈ ವರ್ಷದ ಸುಮಾರು ಶೇ.27-30 ರಷ್ಟುಸಸಿಗಳ ನೆಡುವಿಕೆಯು ಪ್ರೋತ್ಸಾಹ ಧನವಿಲ್ಲದೆ ನಡೆದಿವೆ. ಕೇಂದ್ರ ಸರ್ಕಾರವು ಮಣ್ಣನ್ನು ಉಳಿಸುವ ವಿಚಾರವಾಗಿ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿದೆ ಎಂದು ತಿಳಿಸಿದರು. ಇಸ್ರೋ ಮಾಜಿ ಅಧ್ಯಕ್ಷ ಕಿರಣ್‌ ಕುಮಾರ್‌, ಪರಿಸರವಾದಿ ರೇವತಿ ಕಾಮತ್‌ ಇದ್ದರು.

ಸದ್ಗುರು ಬೈಕ್‌ ಜಾಥಾ

ವಿಶ್ವ ಮಣ್ಣು ದಿನದ ಹಿನ್ನೆಲೆ ಬೆಂಗಳೂರಿನಲ್ಲಿ ಸದ್ಗುರು ಬೈಕ್‌ ಜಾಥಾ ನಡೆಸಿದರು. ಹೆಬ್ಬಾಳದಿಂದ ಆರಂಭವಾದ ಜಾಥ ಅರಮನೆ ಮೈದಾದನ, ಕುಮಾರಕೃಪಾ ರಸ್ತೆ, ರೇಸ್‌ ಕೋರ್ಸ್‌ ರಸ್ತೆ, ಶೇಷಾದ್ರಿ ರಸ್ತೆ, ಸ್ವಾತಂತ್ರ್ಯ ಉದ್ಯಾನ, ಕೆ.ಆರ್‌.ವೃತ್ತ , ವಿಧಾನಸೌಧ , ನೃಪತುಂಗ ರಸ್ತೆ, ಕಾರ್ಪೋರೇಷನ್‌ ವೃತ್ತ, ಕಬ್ಬನ್‌ ಉದ್ಯಾನ ಮೂಲಕ ವಿಠ್ಠಲ್‌ ಮಲ್ಯ ರಸ್ತೆಗೆ ಬಂದು ತಲುಪಿತು. ಸದ್ಗುರು ಸಾಗುವ ಮಾರ್ಗದುದ್ದಕ್ಕೂ ಸಾವಿರಾರು ಜನ ರಸ್ತೆ ಬದಿಗಳಲ್ಲಿ ಮಣ್ಣು ಉಳಿಸಿ ಭಿತ್ತಿಪತ್ರ ಹಿಡಿದು ನಿಂತು ಸದ್ಗುರು ಅವರನ್ನು ಸ್ವಾಗತಿಸಿದರು. ವಿಧಾನಸೌಧದ ಮುಂಭಾಗದಲ್ಲೂ ಮಣ್ಣು ಉಳಿಸಿ ಎಂದು ಫ್ಲೆಕ್ಸ್‌, ಬಲೂನ್‌ ಹಿಡಿದು ನೂರಾರು ಜನ ವಾಕಥಾನ್‌ ನಡೆಸಿದರು.

ಚಿಕ್ಕಬಳ್ಳಾಪುರ ಈಶಾ ಯೋಗಕೇಂದ್ರ ಜ.15ಕ್ಕೆ ಚಾಲನೆ:

ಚಿಕ್ಕಬಳ್ಳಾಪುರ ಸಮೀಪ ನಿರ್ಮಿಸುತ್ತಿರುವ ಈಶಾ ¶ೌಂಡೇಶನ್‌ನ ಆದಿಯೋಗಿ ಮೂರ್ತಿ 112 ಅಡಿ ಎತ್ತರವಿದೆ. ಎಲ್ಲಾ ಪ್ರಕಾರದ ಯೋಗಗಳನ್ನು ಒಳಗೊಂಡ ದೊಡ್ಡ ಯೋಗ ಕೇಂದ್ರವು ಇರಲಿದೆ. 2023 ಜ.15ಕ್ಕೆ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಸದ್ಗುರು ಮಾಹಿತಿ ನೀಡಿದರು.

ಮಣ್ಣಿನ ಅವಶ್ಯಕತೆ ಭಾರತಕ್ಕೆ ಹೆಚ್ಚಿದೆ

ಭಾರತ ಸೇರಿದಂತೆ ಯೂರೋಪ್‌, ಅಮೇರಿಕಾ, ಮಧ್ಯ ಏಷ್ಯಾ ಬಹುತೇಕ ದೇಶಗಳಲ್ಲಿ ವ್ಯವಸಾಯ ವಲಯದಲ್ಲಿಯೇ ಅತಿ ಹೆಚ್ಚು ಆತ್ಮಹತ್ಯೆಗಳಾಗುತ್ತಿವೆ. ಸದ್ಯ ಭಾರತದ ಅರ್ಧಕ್ಕಿಂತಲೂ ಹೆಚ್ಚು ಮಂದಿ ವ್ಯವಸಾಯ ಮಾಡುತ್ತಿದ್ದು, ನೇರವಾಗಿ ಮಣ್ಣನ್ನು ಅವಲಂಬಿಸಿದ್ದಾರೆ. ಅಲ್ಲದೇ, ವಿಶ್ವದ ಶೇ.4 ರಷ್ಟುಭೂ ಭಾಗವನ್ನು ಮಾತ್ರ ಹೊಂದಿರುವ ಭಾರತದಲ್ಲಿ ವಿಶ್ವದ ಶೇ.17.6ರಷ್ಟುಜನರು ಜೀವಿಸುತ್ತಿದ್ದಾರೆ. ಅವರೆಲ್ಲರಿಗೂ ಸದ್ಯ ಮತ್ತು ಭವಿಷ್ಯದಲ್ಲಿ ಆಹಾರ ಒದಗಿಸಬೇಕಿದೆ. ಈ ನಿಟ್ಟಿನಲ್ಲಿ ಫಲವತ್ತಾದ ಮಣ್ಣಿನ ಅವಶ್ಯಕತೆ ಭಾರತಕ್ಕೆ ಹೆಚ್ಚಿದೆ. ಮಣ್ಣನ್ನು ಕಳೆದುಕೊಂಡದರೆ ದೇಶವನ್ನೆ ಕಳೆದುಕೊಂಡಂತೆ ಎಂದು ಅಭಿಪ್ರಾಯಪಟ್ಟರು.

Sadhguru Exclusive Interview; ಸಾವಯವ ಕೃಷಿ ಎಂಬುದೇ ಇಲ್ಲ

… ಮಾತನಾಡಿ, ಮಣ್ಣಿನಲ್ಲಿರುವ ಇಂಗಾಲದ ಅಂಶವೇ ಅವರ ಫಲವತ್ತತೆಯನ್ನು ನಿರ್ಧರಿಸುತ್ತೆ. ಮಣ್ಣಿನ ಮಾಲಿನ್ಯ ಮತ್ತು ಫಲವತ್ತತೆ ಹೆಚ್ಚಿನಸುವ ಅವಶ್ಯಕತೆ ಹೆಚ್ಚಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಮುಂದುವರೆದರೂ ಪರಿಸರವನ್ನು ಉಳಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸದ್ಗುರು ನಡೆಸುತ್ತಿರುವ ಮಣ್ಣು ಉಳಿಸಿ ಅಭಿಯಾನ ಮಹತ್ತರದ್ದಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ

click me!