ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಬಹುತೇಕ ನಗರಗಳಲ್ಲಿ ರಸ್ತೆಗುಂಡಿಗಳ ಹಾವಳಿ ಹೆಚ್ಚಾಗಿವೆ. ಈ ಗುಂಡಿಗಳನ್ನು ಮುಚ್ಚುವಲ್ಲಿ ಪಾಲಿಕೆ ಅಧಿಕಾರಿಗಳು ವಿಫಲವಾಗಿದ್ದಾರೆ. ಆದರೆ, ಪಾಲಿಕೆ ವಿಫಲತೆಯನ್ನು ಸವಾಲಾಗಿ ಸ್ವೀಕರಿಸುವ ಸಾಮಾಜಿಕ ಕಾರ್ಯಕರ್ತರು ದಾವಣಗೆರೆಯಲ್ಲಿ ತಮ್ಮ ಸ್ವಂತ ಹಣ ಮತ್ತು ಜನರಿಂದ ಚಂದಾ ಸಂಗ್ರಹಿಸಿ ರಸ್ತೆಗುಂಡಿಗಳನ್ನು ಮುಚ್ಚುತ್ತಿದ್ದಾರೆ.
ವರದಿ : ವರದರಾಜ್ ಏಷ್ಯಾನೆಟ್ ಸುವರ್ಣನ್ಯೂಸ್
ದಾವಣಗೆರೆ (ನ.14) ಸ್ಮಾರ್ಟ್ ಸಿಟಿ ದಾವಣಗೆರೆಯಲ್ಲಿ ಸಾಮಾಜಿಕ ಕಾರ್ಯಕರ್ತರಿಂದ ಹೊಸ ಅಭಿಯಾನವೊಂದು ಆರಂಭಗೊಂಡಿದೆ. ದಾವಣಗೆರೆ ನಗರದ ವಿವಿಧ ಬಡಾವಣೆ ರಸ್ತೆಗಳಲ್ಲಿ ಗುಂಡಿ ಹೆಚ್ಚಾದ ಕಾರಣ ಸಾಮಾಜಿಕ ಕಾರ್ಯಕರ್ತರೇ ಸ್ವಯಂ ಪ್ರೇರಿತರಾಗಿ ಗುಂಡಿ ಮುಚ್ಚುವ ಕೆಲಸಕ್ಕೆ ಮುಂದಾಗಿದ್ದಾರೆ. ಕಳೆದ ಎರಡು ದಿನಗಳಿಂದ ರಾತ್ರಿ ಸಾರಿಗೆ ಸಂಚಾರ ಸ್ತಬ್ಧವಾದ ನಂತರ 10ಕ್ಕೂ ಹೆಚ್ಚು ಸಾಮಾಜಿಕ ಕಾರ್ಯಕರ್ತರು ತಾವೇ ಎಂ.ಸ್ಯಾಂಡ್, ಸಿಮೆಂಟ್, ಜಲ್ಲಿಕಲ್ಲು ಇತರ ಸಲಕರಣಗಳಿಂದ ಗುಂಡಿ ಮುಚ್ಚುತ್ತಿದ್ದಾರೆ.
ಮಳೆಗಾಲದ (Rain Season) ನಂತರ ದಾವಣಗೆರೆ ನಗರದ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಗುಂಡಿ ಬಿದ್ದಿವೆ. ನಗರದಲ್ಲೆಡೆ ಸಿಗ್ನಲ್ ಗಳಿರುವುದರಿಂದ ಸಮಯದ ಮಿತಿಯಲ್ಲಿ ವಾಹನಗಳು ಸಂಚರಿಸುವುದರಿಂದ ಬೈಕ್ ಸವಾರರು ಆಟೋ ಸವಾರರಿಗೆ ವಾಹನ ಚಾಲನೆ ಮಾಡುವುದು ತುಂಬಾ ಕಷ್ಟ ಆಗುತ್ತಿದೆ. ಮಹಾನಗರ ಪಾಲಿಕೆ (Palike) ಇಂಜಿನಿಯರ್ ಗಳು (Engineers) ರಸ್ತೆ ಗುಂಡಿ ಮುಚ್ಚಲು ಹಣ ಬಂದಿಲ್ಲ, ಟೆಂಡರ್ (Tender) ಆಗಬೇಕು ಹೀಗೆ ಹಣಕ್ಕಾಗಿ ಕಾದುಕುಳಿತಿದ್ದಾರೆ. ಆದ್ದರಿಂದ ದಿನೇ ದಿನೇ ವಾಹನ ಸವಾರರಿಗೆ ಕಷ್ಟ ಆಗುತ್ತಿದ್ದು ಕೆಲವೆಡೆ ಅಪಘಾತಗಳು (Accidents) ಸಂಭವಿಸಿವೆ. ಅಪಘಾತವಾದ್ರೆ ಜೀವಕ್ಕೆ ಯಾರು ಹೊಣೆ ಎಂದು ರಸ್ತೆ ಗುಂಡಿ ಮುಚ್ಚುವ ಅಭಿಯಾನಕ್ಕೆ ಸಾಮಾಜಿಕ ಕಾರ್ಯಕರ್ತ ಎಂ.ಜಿ. ಶ್ರೀಕಾಂತ್, ದೇವರಮನೆ ಗಿರೀಶ್, ಶಿವನಗೌಡ ಪಾಟೀಲ್, ರಾಘವೇಂದ್ರ ಶೆಟ್ಟಿ, ರೋಹಿತ್ ಜೈನ್, ನಿಧಿ ಸೇರಿದಂತೆ ಹಲವರು ರಸ್ತೆ ಗುಂಡಿ ಮುಚ್ಚುವ ಕೆಲಸಕ್ಕೆ (Pothole Filling Work) ಮುಂದಾಗಿದ್ದಾರೆ.
ಶತ್ರುವಿನ ಗುಂಡಿಗೆ ಅಲ್ಲ, ರಸ್ತೆ ಗುಂಡಿಗೆ ಬಲಿಯಾದ ಯೋಧ!
ಪಾಲಿಕೆಗೆ ಇರಿಸು-ಮುರಿಸು:
ಕಳೆದ ಎರಡು ದಿನಗಳಲ್ಲಿ ದಾವಣಗೆರೆ ರೈಲ್ವೇ ನಿಲ್ದಾಣಕ್ಕೆ (Railway Station)ಹೊಂದಿಕೊಂಡಿರುವ ಎರಡು ರಸ್ತೆಗಳಲ್ಲಿದ್ದ ಗುಂಡಿ ಮುಚ್ಚಿದ್ದಾರೆ. ರೇಣುಕಾಮಂದಿರದ (Renuka Mandir)ಪಕ್ಕದ ರಸ್ತೆ, ಮಹಾನಗರ ಪಾಲಿಕೆ ಎದುರಿನ ಅಂಡರ್ ಬ್ರಿಡ್ಜ್ ರಸ್ತೆಯಲ್ಲಿ ಗುಂಡಿ ಮುಚ್ಚಿ ಮಹಾನಗರ ಪಾಲಿಕೆಗೆ ಇರಿಸು ಮುರಿಸು ಉಂಟು ಮಾಡುತ್ತಿದ್ದಾರೆ. ಇನ್ನು ಮುಂದಿನ ದಿನಗಳಲ್ಲಾದರೂ ಪಾಲಿಕೆ ಎಚ್ಚೆತ್ತುಕೊಂಡು ರಸ್ತೆ ಗುಂಡಿ ಮುಚ್ಚುವ ಕಾರ್ಯವನ್ನು ಕೈಗೆತ್ತಿಕೊಳ್ಳಲಿದೆಯೇ ಎಂಬುದನ್ನು ಕಾದುನೋಡಬೇಕಿದೆ. ರಾಜ್ಯದ ಬಹುತೇಕ ನಗರಗಳಲ್ಲಿ ಇದೇ ಪರಿಸ್ಥಿತಿ ಉಂಟಾಗಿದ್ದು, ನಗರಸಭೆ (Nagarasabhe) ಮತ್ತು ಪಟ್ಟಣ ಪಂಚಾಯಿತಿಗಳಲ್ಲಿರುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮೇಲೆ ಭಾರಿ ಪ್ರಮಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
Narendra Modi ಬರ್ತಿದ್ದಾರೆ ಅಂತಾ ರಸ್ತೆ ಗುಂಡಿ ಮುಚ್ಚಿದ್ದಕ್ಕೆ ಸಂತೋಷ: ಡಿಕೆಶಿ
ರಸ್ತೆ ಗುಂಡಿ ಮುಚ್ಚಲು ಹಣ ಸಂಗ್ರಹ:
ಈ ಸಾಮಾಜಿಕ ಕಾರ್ಯಕರ್ತರು (Social Workers) ಕೆಲವರು ಸ್ವಂತ ಹಣ, ಸಾರ್ವಜನಿಕವಾಗಿ ನಿಧಿ ಸಂಗ್ರಹಿಸಿ (Fund Collect) ಅದರಿಂದ ಬರುವ ಹಣದಿಂದ ಕಚ್ಚಾ ಸಾಮಾಗ್ರಿಗಳನ್ನು ಖರೀದಿಸಿ ತಂದು ರಸ್ತೆ ಗುಂಡಿಗಳನ್ನು ಮುಚ್ಚುತ್ತಿದ್ದಾರೆ. ಸಾಮಾಜಿಕ ಕಾರ್ಯಕರ್ತರ ಕೆಲಸಕ್ಕೆ ಎಲ್ಲೆಡೆ ಉತ್ತಮ ಸ್ಪಂದನೆ (Good Response)ವ್ಯಕ್ತವಾಗಿದೆ. ಬಹುತೇಕರು ಗುಂಡಿ ಮುಚ್ಚುವ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ಸೂಚಿಸಿ ಗುಡ್ ವರ್ಕ್ ಎಂದಿದ್ದಾರೆ. ಇನ್ನು ಕೆಲವರು ದೇಣಿಗೆ ನೀಡಿ ಅಭಿಯಾನ ಮುಂದುವರಿಸಿ ಎಂದು ಹೇಳುತ್ತಿದ್ದಾರೆ. ಈ ಕಾರ್ಯ ಮಹಾನಗರಪಾಲಿಕೆಯ ಆಡಳಿತಾರೂಢ ಬಿಜೆಪಿ (BJP) ಪ್ರತಿನಿಧಿಗಳಿಗೆ ಇರಿಸುಮುರಿಸು ತಂದಿದೆ. ಪಾಲಿಕೆ ಇಂಜಿನಿಯರಿಂಗ್ ವಿಭಾಗಕ್ಕೆ ಆದಷ್ಟು ಬೇಗ ಗುಂಡಿ ಮುಚ್ಚಿ ಎಂದು ಮೇಯರ್ ಸೂಚನೆ ನೀಡಿದ್ದಾರೆ.