ಚಿತ್ರದುರ್ಗದ ಮುರುಘಾ ಮಠದ ಶರಣರಿಗೆ ಚಿಕಿತ್ಸೆ ನೀಡಿ ಬೇರೆ ಸೀನ್ ಕ್ರಿಯೇಟ್ ಮಾಡಿದ್ದ ವೈದ್ಯರಿಗೆ ಇದೀಗ ಸಂಕಷ್ಟ ಎದುರಾಗಿದೆ.
ಬೆಂಗಳೂರು, (ಸೆಪ್ಟೆಂಬರ್,05): ಮುರಘಾ ಮಠದ ಶ್ರೀಗಳಿಗೆ ಚಿಕಿತ್ಸೆ ನಿಡಿದ್ದ ವೈದ್ಯಾಧಿಕಾರಿ ಸೇರಿ ಮೂವರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ.
ಚಿತ್ರದುರ್ಗ ಜಿಲ್ಲಾ ಆಸ್ಪತ್ರೆ ವೈದ್ಯಾಧಿಕಾರಿ ಡಾ.ರಂಗನಾಥ್, ಆಸ್ಪತ್ರೆಯ ಸರ್ಜನ್ ಡಾ.ಎಸ್.ಕೆ ಬಸವರಾಜ್, ಕಾರಾಗೃಹ ಅಧಿಕಾರಿ ಎಂ.ಎಂ ಮರಕಟ್ಟಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ಎನ್ನುವವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
undefined
Murugha Seer Police Custody ಮುರುಘಾ ಶ್ರೀ ರಕ್ಷಿಸುವ ಪ್ಲಾನ್ ಉಲ್ಟಾ, ಚಿತ್ರದುರ್ಗ ಕೋರ್ಟ್‌ನಲ್ಲಿ ನಡೆದಿದ್ದೇನು?
ಈ ಮೂವರು ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದು, ಕರ್ತವ್ಯಲೋಪ ಎಸಗಿದ್ದಾರೆ. ಪ್ರಭಾವಿ ಆರೋಪಿಯ ರಕ್ಷಣೆ ಮಾಡುವ ಹುನ್ನಾರವನ್ನೂ ನಡೆಸಿದ್ದಾರೆ. ಹಾಗಾಗಿ ಇವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ದೊಡ್ಡ ಸೀನ್ ಕ್ರಿಯೇಟ್ ಮಾಡಿದ್ದ ವೈದ್ಯರು
ಶ್ರೀಗಳ ಬಂಧನ ಮಾಡಿ ಎರಡನೇ ದಿನಕ್ಕೆ ಅವರ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಅಲ್ಲಿ ಅವರ ಎದೆನೋವು ಸಮಸ್ಯೆ ಇದೆ ಎಂದು ವೈದ್ಯರು ಐಸಿಯುಗೆ ಶಿಫ್ಟ್ ಮಾಡಿದ್ದರು. ಅಲ್ಲದೇ ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಶಿಫ್ಟ್ ಮಾಡಲು ಎಲ್ಲಾ ತಯಾರಿ ನಡೆದಿತ್ತು. ಇದರೊಂದಿಗೆ ತನಿಖೆಯಿಂದ ತಪ್ಪಿಸುವ ಎಲ್ಲಾ ಪ್ಲಾನ್‌ಗಳು ನಡೆದಿದ್ದವು ಎನ್ನಲಾಗಿತ್ತು. ಆದ್ರೆ, ಆ ಎಲ್ಲಾ ಪ್ಲಾನ್‌ಗಳನ್ನು ಕೋರ್ಟ್ ಉಲ್ಟಾ ಮಾಡಿತ್ತು.
ಹೌದು.. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಎಂದು ಖಡಕ್ ಆಗಿ ಹೇಳಿತ್ತು. ಆ ವೇಳೆ ಶ್ರೀಗಳು ಆರಾಮಾಗಿ ಮೆಟ್ಟಿಲು ಹತ್ತಿಕೊಂಡು ಮೊದಲ ಮಹಡಿಯಲ್ಲಿರುವ ಕೋರ್ಟ್‌ಗೆ ಹಾಜರಾದರೂ. ಇದನ್ನು ಗಮನಿಸಿದ ಕೋರ್ಟ್, ಆರೋಪಿ ಫಿಟ್ ಇದ್ದಾರೆ ಎಂದು ಪೊಲೀಸ್ ಕಸ್ಟಡಿಗೆ ನೀಡಿತ್ತು. ವೈದ್ಯರ ಈ ನಡೆಗೆ ವ್ಯಾಪಕ ಅನುಮಾನಗಳು ವ್ಯಕ್ತವಾಗಿದ್ದವು. ಅಲ್ಲದೇ ನೆಟ್ಟಿಗರು ವೈದ್ಯರ ಮೇಲೆ ಕಿಡಿಕಾರಿದ್ದರು.
Seer Shivamurthy Arrest ಶ್ರೀಗಳ ರಕ್ಷಣೆಗೆ ಪೊಲೀಸರಿಂದಲೇ ನಡೆದಿತ್ತಾ ಹೈಡ್ರಾಮಾ? ತನಿಖೆಯಲ್ಲಿ ವೈಫಲ್ಯದ ವಾಸನೆ!
ದೂರಿನಲ್ಲಿ ಏನಿದೆ?
ಚಿತ್ರದುರ್ಗ ಜಿಲ್ಲೆಯ ಮುರಘಾ ಮಠದಲ್ಲಿನ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಮೊದಲನೇ ಆರೋಪಿ ನ್ಯಾಯಾಂಗ ಬಂಧನಲ್ಲಿದ್ದರು. ಈ ವೇಳೆ ತುಂಬಾ ಎದೆ ನೋವಿದೆ ಎಂದ ತಕ್ಷಣ ನ್ಯಾಯಾಲಯದ ಗಮನಕ್ಕೂ ತರದೆ ಚಿತ್ರದುರ್ಗ ಜಿಲ್ಲಾಸತ್ರೆಗೆ ಮುಂಜಾನೆ ದಾಖಲಿಸಿ ಚಿಕಿತ್ಸೆ ನಿಡಲು ಮುಂದಾಗಿದ್ದರು. ಚಿಕಿತ್ಸೆ ನೀಡುವ ಹಂತದಲ್ಲಿ ಅಲ್ಲಿನ ವೈದ್ಯಾಧಿಕಾರಿ ಇವರಿಗೆ ತೀವ್ರ ತರವಾದ ಹೃದಯ ಸಂಬಂಧಿ ಕಾಯಿಲೆ ಇದೆ ಎಂದು ಸುಳ್ಳು ಹೇಳಿ, ದಾಖಲೆಗಳನ್ನೂ ಸೃಷ್ಟಿಸಿ ದಾವಣಗೆರೆಯ ಖಾಸಗಿ ಹೃದಯ ತಜ್ಞರನ್ನು ಕರೆಸಿ ಆರೋಪಿಗೆ ತೀವ್ರತರವಾದ ಎದೆ ನೋವಿದೆ, ಹೃದಯಕ್ಕೆ ಘಾಸಿಯಾಗಿದೆ. ಈ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲು ಹೆಚ್ಚಿನ ವೈದ್ಯಕೀಯ ಸೌಲಭ್ಯವಿಲ್ಲ, ಇವರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ವಿಶೇಷ ಚಿಕಿತ್ಸೆ ನೀಡಬೇಕೆಂದು ಹೇಳಿದ್ದಾರೆ. ತಕ್ಷಣ ಆರೋಪಿಯನ್ನು ಐಸಿಯುನಲ್ಲಿ ದಾಖಲಿಸಿ, ಹೆಲಿಕಾಪ್ಟರ್ ಮೂಲಕ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸುವ ಹುನ್ನಾರವನ್ನೂ ನಡೆಸಿದ್ದರು.
ಪ್ರಭಾವಿ ಸ್ಥಾನದಲ್ಲಿರುವ ಆರೋಪಿಯ ರಕ್ಷಣೆಗೆ ನಿಂತ ಈ ಸರ್ಕಾರದ ಅಧಿಕಾರಿಗಳಾದ ಜಿಲ್ಲಾ ಕಾರಾಗೃಹ ಅಧೀಕ್ಷಕಿ ಎಂ.ಎಂ ಮರಕಟ್ಟಿ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ರಂಗನಾಥ್, ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ.ಎಸ್.ಕೆ ಬಸವರಾಜ್ ಕರ್ತವ್ಯ ಲೋಪವೆಸಗಿ ಆರೋಪಿಯ ಜೊತೆ ಶಾಮೀಲಾಗಿ ಬೃಹತ್ ನಾಟಕ ಆಡಿರುತ್ತಾರೆ. ಇಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.