ಏಷ್ಯಾದಲ್ಲೇ ಮೊದಲು: ಬೆಂಗ್ಳೂರು ಮಗುವಿಗೆ ಚೆನ್ನೈನಲ್ಲಿ ಕರುಳು ಕಸಿ

By Kannadaprabha NewsFirst Published Jan 5, 2022, 9:11 AM IST
Highlights

*  ಚೆನ್ನೈನ ರೇಲಾ ಆಸ್ಪತ್ರೆಯ ಯಶಸ್ವಿ ಶಸ್ತ್ರ ಚಿಕಿತ್ಸೆ
*  ಏಷ್ಯಾದಲ್ಲೇ ಅತಿ ಚಿಕ್ಕ ವಯಸ್ಸಿನ ಮಗುವಿಗೆ ನಡೆಸಿದ ಕಸಿ ಚಿಕಿತ್ಸೆ
*  ಏಷ್ಯಾ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ದಾಖಲು 

ಚೆನ್ನೈ(ಜ.05): ಬೆಂಗಳೂರಿನ 4 ವರ್ಷದ ಮಗುವಿಗೆ ಸಣ್ಣ ಕರುಳು ಕಸಿ ಶಸ್ತ್ರ ಚಿಕಿತ್ಸೆಯನ್ನು(Small Intestine Transplant Surgery) ಚೆನ್ನೈನ(Chennai) ರೇಲಾ ಆಸ್ಪತ್ರೆಯ(Rela Hospital ) ವೈದ್ಯರು ಯಶಸ್ವಿಯಾಗಿ ನಡೆಸಿದ್ದಾರೆ. ಇದು ಏಷ್ಯಾದಲ್ಲೇ(Asia) ಅತಿ ಚಿಕ್ಕ ವಯಸ್ಸಿನ ಮಗುವಿಗೆ ನಡೆಸಿದ ಕಸಿ ಚಿಕಿತ್ಸೆಯಾಗಿದೆ.

ಪದೇ ಪದೇ ವಾಂತಿಯಾಗುತ್ತಿದ್ದ ಕಾರಣ ಗುಹಾನ್‌ ಎಂಬ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಪಾಸಣೆಯ ವೇಳೆ ಸಣ್ಣ ಕರುಳಿಗೆ ರಕ್ತ ಪೂರೈಕೆಯಾಗುತ್ತಿಲ್ಲ(Blood Supply), ಹಾಗಾಗಿ ಕರಳು ಕಸಿ ಮಾಡಬೇಕೆಂದು ಇದಕ್ಕಾಗಿ ರೇಲಾ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಲಾಗಿತ್ತು. ರೇಲಾ ಆಸ್ಪತ್ರೆಯಲ್ಲಿ ಸತತ 7 ಗಂಟೆಗಳ ಶಸ್ತ್ರಚಿಕಿತ್ಸೆಯ ನಂತರ ಸಣ್ಣ ಕರುಳು ಕಸಿ ಮಾಡುವಲ್ಲಿ ವೈದ್ಯರು(Doctors) ಯಶಸ್ವಿಯಾಗಿದ್ದಾರೆ. ಇದು ಏಷ್ಯಾ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ(Asia Book of Records) ದಾಖಲಾಗಿದೆ. ಇದಕ್ಕೆ ಸಂಬಂಧಿಸಿದ ಪ್ರಮಾಣಪತ್ರವನ್ನು ಆಸ್ಪತ್ರೆಯ ಮುಖ್ಯಸ್ಥರಿಗೆ ಹಸ್ತಾಂತರಿಸಲಾಗಿದೆ.

Covid 19 Treatment : ಶ್ವಾಸಕೋಶ ಕಸಿ ಇಲ್ಲದೇ ಗುಣಮುಖ: ಏಷ್ಯಾದಲ್ಲೇ ಮೊದಲು

ಅಂಗಾಂಗ ಕಸಿ ಆಸ್ಪತ್ರೆ ನಿರ್ಮಾಣಕ್ಕಿದ್ದ ತಡೆ ನಿವಾರಣೆ

ಬೆಂಗಳೂರು(Bengaluru): ಎಸ್‌ಡಿಎಸ್‌ ಕ್ಷಯ ರೋಗ ಮತ್ತು ರಾಜೀವ್‌ ಗಾಧಿ ಎದೆರೋಗಗಳ ಆಸ್ಪತ್ರೆಯ ಆವರಣದಲ್ಲಿ ‘ಗ್ಯಾಸ್ಟ್ರೋ ಎಂಟಾಲಜಿ ಮತ್ತು ಆರ್ಗನ್ಸ್‌ ಟ್ರಾನ್ಸ್‌ಪ್ಲಾಂಟೇಷನ್‌ ಆಸ್ಪತ್ರೆ’ ಕಟ್ಟಡ ನಿರ್ಮಾಣ ಮಾಡಲು ರಾಜ್ಯ ಸರ್ಕಾರ(Government of Karnataka) ಕೈಗೊಂಡಿದ್ದ ನಿರ್ಧಾರ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌(High Court) ವಜಾಗೊಳಿಸಿದೆ. ಸರ್ಕಾರದ ನಿರ್ಧಾರ ಪ್ರಶ್ನಿಸಿ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಆರ್‌.ಚಂದ್ರಶೇಖರ ಮತ್ತು ವೈದ್ಯ ಬಿ.ರುದ್ರಪ್ಪ ಅವರು 2017ರಲ್ಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಮಂಗಳವಾರ ಅರ್ಜಿ ಕುರಿತು ಕೆಲ ಕಾಲ ವಾದ-ಪ್ರತಿವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ, ಯಾವ ಜಾಗದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಬೇಕು ಎಂಬ ಬಗ್ಗೆ ಸರ್ಕಾರ, ಸಂಬಂಧಪಟ್ಟ ಸರ್ಕಾರಿ ಇಲಾಖೆಗಳು ಮತ್ತು ತಜ್ಞರು ನಿರ್ಧಾರ ಮಾಡಬೇಕು. ಉದ್ದೇಶಿತ ಆಸ್ಪತ್ರೆ ನಿರ್ಮಾಣಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಆದ್ದರಿಂದ ಅರ್ಜಿ ಪುರಸ್ಕರಿಸಲು ಯಾವುದೇ ಸೂಕ್ತ ಕಾರಣ ಇಲ್ಲ ಎಂದು ತಿಳಿಸಿತು.

ಅಲ್ಲದೆ, ಉದ್ದೇಶಿತ ಗ್ಯಾಸ್ಟ್ರೋ ಎಂಟಾಲಜಿ ಮತ್ತು ಆರ್ಗನ್ಸ್‌ ಟ್ರಾನ್ಸ್‌ಪ್ಲಾಂಟೇಷನ್‌ ಆಸ್ಪತ್ರೆ ನಿರ್ಮಾಣ ಕಾಮಗಾರಿಯನ್ನು ಕೂಡಲೇ ಆರಂಭಿಸಬೇಕು ಮತ್ತು ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್‌ ಇದೇ ವೇಳೆ ನಿರ್ದೇಶಿಸಿ ಅರ್ಜಿ ವಜಾಗೊಳಿಸಿತು.

Bagalkot: ಕುಮಾರೇಶ್ವರ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಉಚಿತ ಹೃದಯ ಶಸ್ತ್ರ ಚಿಕಿತ್ಸೆ

ಅರ್ಜಿದಾರರ ಪರ ವಕೀಲರರು ವಾದಿಸಿ, ರಾಜೀವ್‌ ಗಾಂಧಿ ಎದೆರೋಗಗಳ ಆಸ್ಪತ್ರೆಯ ಖಾಲಿ ಜಾಗದಲ್ಲಿ ಮತ್ತೊಂದು ಆಸ್ಪತ್ರೆ ನಿರ್ಮಾಣ ಮಾಡಿದರೆ ಅಲ್ಲಿ ಈಗಾಗಲೇ ಚಿಕಿತ್ಸೆ ಪಡೆವ ಕ್ಷಯ ರೋಗಿಗಳ ಮೇಲೆ ದುಷ್ಪರಿಣಾಮ ಬೀರಲಿದೆ. ಕ್ಷಯ ರೋಗಿಗಳಿಗೆ ಶುದ್ಧ ಹಾಗೂ ಸ್ವಚ್ಛ ಗಾಳಿ ಪಡೆಯಲು ಸಾಧ್ಯವಾಗುವುದಿಲ್ಲ. ಆಸ್ಪತ್ರೆಯು(Hospital) ತನ್ನ ಜಾಗವನ್ನು ಕಳೆದುಕೊಳ್ಳಬೇಕಾಗುತ್ತದೆ. ರಾಜ್ಯ ಸರ್ಕಾರವು ಬೇರೊಂದು ಪ್ರದೇಶದಲ್ಲಿ ಗ್ಯಾಸ್ಟೊ್ರೕಎಂಟಾಲಜಿ ಮತ್ತು ಆರ್ಗನ್ಸ್‌ ಟ್ರಾನ್ಸ್‌ಪ್ಲಾಂಟೇಷನ್‌ ಆಸ್ಪತ್ರೆಯ ಕಟ್ಟಡ ನಿರ್ಮಾಣ ಮಾಡಬಹುದು. ರಾಜೀವ್‌ ಗಾಂಧಿ ಎದೆರೋಗಗಳ ಆಸ್ಪತ್ರೆ ಆವರಣದಲ್ಲಿಯೇ ನಿರ್ಮಾಣ ಮಾಡುವ ಅಗತ್ಯ ಇಲ್ಲ ಎಂದು ತಿಳಿಸಿದರು.

ಸರ್ಕಾರಿ ವಕೀಲರು ವಾದ ಮಂಡಿಸಿ, ‘ಗ್ಯಾಸ್ಟ್ರೋ ಎಂಟಾಲಜಿ ಮತ್ತು ಆರ್ಗನ್ಸ್‌ ಟ್ರಾನ್ಸ್‌ಪ್ಲಾಂಟೇಷನ್‌ ಆಸ್ಪತ್ರೆಯ(Gastroenterology and Organ Transplantation Hospital) ಕಟ್ಟಡ ನಿರ್ಮಾಣ ಮಾಡುವುದು ಅತ್ಯಗತ್ಯವಾಗಿದೆ. ಕರ್ನಾಟಕವೊಂದರಲ್ಲೇ(Karnataka) 2000 ಯಕೃತ್‌(Liver) ಸಮಸ್ಯೆಯಿಂದ ನರಳುತ್ತಿರುವ ರೋಗಿಗಳು ಮತ್ತು 1,700 ಕಿಡ್ನಿ ಸಮಸ್ಯೆ ಹೊಂದಿರುವ ರೋಗಿಗಳು ಕಸಿಗೆ ಕಾಯುತ್ತಿದ್ದಾರೆ. ಆದರೆ ಕಳೆದ ವರ್ಷದಲ್ಲಿ ರಾಜ್ಯದಲ್ಲಿ ಕೇವಲ 60 ಅಂಗಾಂಗ ಕಸಿ ನಡೆದಿದೆ. ಈ ಹಿನ್ನೆಲೆಯಲ್ಲಿ ರಾಜೀವ್‌ ಗಾಂಧಿ ಎದೆರೋಗಗಳ ಆಸ್ಪತ್ರೆಯ(Rajiv Gandhi Heart Hospital) ಆವರಣದಲ್ಲಿ ಹೊಸದಾಗಿ 200ರಿಂದ 500 ಬೆಡ್‌ ಸಾಮರ್ಥ್ಯದ ಅಂಗಾಂಗ ಕಸಿ ಆಸ್ಪತ್ರೆ(Organ Transplant Hospital) ನಿರ್ಮಾಣ ಮಾಡಲು ಘೋಷಣೆ ಮಾಡಿತು. ಈ ಆಸ್ಪತ್ರೆ ನಿರ್ಮಾಣಗೊಂಡರೆ ಯಕೃತ್‌ ಮತ್ತು ಕಿಡ್ನಿ ಕಸಿ ಚಿಕಿತ್ಸೆಯ(Kidney Transplant Treatment) ವೆಚ್ಚ ಕಡಿಮೆಯಾಗಲಿದ್ದು, ಸಾರ್ವಜನಿಕರಿಗೆ ದೊಡ್ಡ ಮಟ್ಟದಲ್ಲಿ ಅನುಕೂಲವಾಗಲಿದೆ ಎಂದು ತಿಳಿಸಿದರು.
 

click me!