ಕೊಳಗೇರಿ ಅಭಿವೃದ್ಧಿ ಮಂಡಳಿ ದಾವಣಗೆರೆ ವಿಭಾಗದ ಇಂಜಿನಿಯರ್ ವಿರೇಶ್ ಬಾಬು ತಮ್ಮ ಸ್ವಂತ ಮನೆಯಲ್ಲಿನ ರೂಮ್ ನಲ್ಲಿ ಫ್ಯಾನ್ ಗೆ ನೇಣಿ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಚಳ್ಳಕೆರೆಯಲ್ಲಿ ನಿನ್ನೆ ನಡೆದಿದೆ. ಇನ್ನೂ ಆತ್ಮಹತ್ಯೆಗೆ ಸಂಬಂಧಿಸಿದಂತೆ ಇಂದು ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಘಟನೆಗೆ ಕಾರಣ ಕೆಲವರು ಮಾಡಿರುವ ಬ್ಲಾಕ್ ಮೇಲ್ ಎಂದು ಮೃತನ ಸಹೋದರ ದೂರು ನೀಡಿದ್ದಾರೆ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಆ.24): ಕೊಳಗೇರಿ ಅಭಿವೃದ್ಧಿ ಮಂಡಳಿ ದಾವಣಗೆರೆ ವಿಭಾಗದ ಇಂಜಿನಿಯರ್ ವಿರೇಶ್ ಬಾಬು ತಮ್ಮ ಸ್ವಂತ ಮನೆಯಲ್ಲಿನ ರೂಮ್ ನಲ್ಲಿ ಫ್ಯಾನ್ ಗೆ ನೇಣಿ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಚಳ್ಳಕೆರೆಯಲ್ಲಿ ನಿನ್ನೆ ನಡೆದಿದೆ. ಇನ್ನೂ ಆತ್ಮಹತ್ಯೆಗೆ ಸಂಬಂಧಿಸಿದಂತೆ ಇಂದು ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಘಟನೆಗೆ ಕಾರಣ ಕೆಲವರು ಮಾಡಿರುವ ಬ್ಲಾಕ್ ಮೇಲ್ ಎಂದು ಮೃತ ವಿರೇಶ್ ಬಾಬು ಸಹೋದರ ತಿಪ್ಪೇಸ್ವಾಮಿ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
undefined
ದಾವಣಗೆರೆ ವಿಭಾಗದ ಸ್ಲಂ ಬೋರ್ಡ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ವಿರೇಶ್ ಬಾಬು ಚಿತ್ರದುರ್ಗ ಜಿಲ್ಲೆ ಮತ್ತು ದಾವಣಗೆರೆ ಎರಡು ಕಡೆ ಕಾರ್ಯ ನಿರ್ವಹಿಸುತ್ತಿದ್ದರು. ಕೊಳಗೇರಿ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ ಮಾಡುವಲ್ಲಿ ಇವರ ಪಾತ್ರ ತುಂಬಾ ಮಹತ್ವದ್ದಾಗಿತ್ತು. ಸಾಕಷ್ಟು ಬಾರಿ ಬಡವರಿಗೂ ಯಾವುದೇ ನಿರೀಕ್ಷೆ ಇಲ್ಲದೇ ಕೆಲಸ ಮಾಡಿಕೊಟ್ಟಿರುವ ವ್ಯಕ್ತಿ ಇವರಾಗಿದ್ದರು. ಆದ್ರೆ ಹಕ್ಕು ಪತ್ರ ವಿತರಣೆಯ ಬಗ್ಗೆ ಕೆಲವರ ಆಕ್ಷೇಪ ಹಾಗೂ ಒತ್ತಡಗಳು ಇದ್ದವು ಎನ್ನಲಾಗ್ತಿತ್ತು. ಇದಕ್ಕೆಲ್ಲ ಜಗ್ಗದ ವಿರೇಶ್ ಬಾಬು ಹಲವಾರು ಬಡವರಿಗೆ ತಾವೇ ಖುದ್ದು ಮುಂದಾಳತ್ವ ವಹಿಸಿಕೊಂಡು ಹಕ್ಕು ಪತ್ರ ವಿತರಣೆ ಮಾಡಿದ್ದರು.
ಚಾಮರಾಜನಗರದಲ್ಲಿ ಮತ್ತೊಂದು ವಿಚಿತ್ರ ಕಾಯಿಲೆ ಬೆಳಕಿಗೆ; ಏನಿದು muscular dystrophies?
ಇನ್ನೂ ಈ ಘಟನೆ ನಿನ್ನೆ ಚಿತ್ರದುರ್ಗ ಜಿಲ್ಲೆ ಚಳ್ಳ ಕೆರೆ ಪಟ್ಟಣದ ತ್ಯಾಗರಾಜ ನಗರದ ಮೃತ ವಿರೇಶ್ ಮನೆಯಲ್ಲಿ ನಡೆದಿತ್ತು. ಘಟನೆಗೆ ಸೂಕ್ತ ಕಾರಣಗಳನ್ನು ಪೊಲೀಸರು ಕೆದಕಿದಾಗ, ಮೃತ ವಿರೇಶ್ ಸಹೋದರ ನೀಡಿದ ಮಾಹಿತಿಯಿಂದ ಇಡೀ ಕೇಸ್ ಗೆ ಬಿಗ್ ಟ್ವಿಸ್ಟ್ ಸಿಕ್ಕಂತಾಗಿದೆ. ಮೃತ ಇಂಜಿನಿಯರ್ ವಿರೇಶ್ ಬಾಬು ಗೆ ಚಿತ್ರದುರ್ಗ ಮೂಲದ ಸೋ ಕಾಲ್ಡ್ ಸಂಘಟನೆಗಳಲ್ಲಿ ಕಾರ್ಯ ನಿರ್ವಹಸುತ್ತಿದ್ದ ರುದ್ರಮುನಿ, ಅವಿನಾಶ್, ಕುಮಾರ್ ಎಂಬ ಮೂವರು ಪ್ರತಿನಿತ್ಯ ಕಾಲ್ ಮಾಡಿ ಹಣ ಕೊಡುವಂತೆ ಸಾಕಷ್ಟು ಬ್ಲಾಕ್ ಮೇಲ್ ಮಾಡಿ ಮಾನಸಿಕ ಹಿಂಸೆ ನೀಡುತ್ತಿದ್ದರು. ಇದೆಲ್ಲರ ಪರಿಣಾಮವೇ ನನ್ನ ಸಹೋದರ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಸಹೋದರ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮನೆ ವಿತರಣೆಯಲ್ಲಿ ಇಂಜಿನಿಯರ್ ವಿರೇಶ್ ಹಣ ವಸೂಲಿ ಮಾಡುತ್ತಿದ್ದರು ಎಂದು ಸುಳ್ಳು ಆರೋಪ ಮಾಡುತ್ತಿದ್ದರು. ಅಲ್ಲದೇ ಮೂರು ಲಕ್ಷ ಹಣ ನೀಡುವಂತೆ ರುದ್ರಮುನಿ ಡಿಮ್ಯಾಂಡ್ ಮಾಡುವ ಮಾಡಿದ್ದಾನೆ.
ಅದೇ ರೀತಿ ಅವಿನಾಶ್ ಮತ್ತು ಕುಮಾರ್ ಕೂಡ ೨೫ ಲಕ್ಷ ರೂ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ನೀಡದಿದ್ದರೆ ಕೊಳಗೇರಿ ಅಭಿವೃದ್ಧಿ ಮಂಡಳಿಗೆ ದೂರು ನೀಡ್ತೀವಿ, ನಿಮ್ಮ ಕಳಪೆ ಕಾಮಗಾರಿ ಬಯಲು ಮಾಡ್ತೀವಿ ಎಂದು ಬೆದರಿಕೆ ಹಾಕಿದ್ದರಂತೆ. ಇನ್ನೂ ಇಷ್ಟಕ್ಕೆ ಸುಮ್ಮನಾಗದ ಸೋ ಕಾಲ್ಡ್ ಹೋರಾಟಗಾರ ಎನಿಸಿಕೊಂಡಿರುವ ಅವಿನಾಶ್ ಮತ್ತು ಕುಮಾರ್ ನಿಮ್ಮ ಬಗ್ಗೆ ವಿಡಿಯೋ ಮಾಡಿ ಯೂಟ್ಯೂಬ್ ಗೆ ಬಿಡ್ತೀವಿ, ಲೋಕಾಯುಕ್ತಕ್ಕೆ ದೂರು ನೀಡ್ತೀವೆಂದು ಬೆದರಿಕೆ ಹಾಕಿದ್ದರಂತೆ. ಅಲ್ಲದೇ ನೀನಾಗಿ ನೀನೆ ಸಾಯುವಂತೆ ಮಾಡುತ್ತೀವೆ ಎಂದು ಆರೋಪ ಕೇಳಿ ಬಂದಿದೆ. ಇದೆಲ್ಲವನ್ನೂ ಸಾಯುವ ಮುನ್ನ ನನ್ನ ಬಳಿ ನೋವು ತೋಡಿಕೊಂಡಿದ್ದರು ಎಂದು ಮೃತ ವಿರೇಶ್ ಸಹೋದರ ತಿಪ್ಪೇಸ್ವಾಮಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇನ್ನೂ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಈ ಮೂವರು ಖತರ್ನಾಕ್ ಖದೀಮರ ವಿರುದ್ದ ಐಪಿಸಿ ಕಲಂ 384,306, RW 34 ಅಡಿಯಲ್ಲಿ ಕೇಸ್ ದಾಖಲಾಗಿದೆ.
ಚಿತ್ರದುರ್ಗ: ಕೆಟ್ಟು ನಿಂತ ಶುದ್ಧ ನೀರಿನ ಘಟಕಗಳು, ಕುಡಿಯುವ ನೀರಿಗಾಗಿ ಜನರ ಪರದಾಟ..!
ಒಟ್ಟಾರೆ ಅದೇನೆ ಇರ್ಲಿ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುವುದಕ್ಕೂ ಕೆಲ ಸಂಘಟನೆಗಳು ಬಿಡ್ತಿಲ್ಲ ಎಂಬುದು ನಿನ್ನೆ ಮೊನ್ನೆಯ ಆರೋಪವಲ್ಲ. ಆದ್ರೆ ಅಧಿಕಾರಿಗಳು ಸಾಯುವ ಮಟ್ಟಕ್ಕೆ ಇವರು ಬ್ಲಾಕ್ ಮೇಲ್ ಮಾಡ್ತಾರೆ ಎಂದ್ರೆ ಇವರು ಇನ್ನಷ್ಟು ಕ್ರೂರಿಗಳು ಆಗಿರಬೇಡ ಹೇಳ್ರಿ, ಈ ಬಗ್ಗೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಮೃತರ ಕುಟುಂಬಕ್ಕೆ ನ್ಯಾಯ ಒದಗಿಸಬೇಕಿದೆ