SKAL India congress 2023: ಮೈಸೂರಿನ ಪ್ರವಾಸೋದ್ಯಮ ಇನ್ನಷ್ಟುಅಭಿವೃದ್ಧಿಯಾಗಬೇಕು -ಸಂಸದ ಪ್ರತಾಪ್ ಸಿಂಹ

Published : Jun 27, 2023, 09:18 PM IST
SKAL India congress 2023: ಮೈಸೂರಿನ ಪ್ರವಾಸೋದ್ಯಮ ಇನ್ನಷ್ಟುಅಭಿವೃದ್ಧಿಯಾಗಬೇಕು -ಸಂಸದ ಪ್ರತಾಪ್ ಸಿಂಹ

ಸಾರಾಂಶ

ಮೈಸೂರಿನ ಪ್ರವಾಸೋದ್ಯಮ ಇನ್ನಷ್ಟುಅಭಿವೃದ್ಧಿಯಾಗಬೇಕು. ಪ್ರವಾಸಿಗರು ಮೈಸೂರಿಗೆ ಬಂದು ಹೆಚ್ಚು ದಿನಗಳ ಕಾಲ ಇರುವಂತಾಗಬೇಕು. ಈ ನಿಟ್ಟಿನಲ್ಲಿ ಸ್ಕಾಲ್‌ ಇಂಡಿಯಾ ಕಾಂಗ್ರೆಸ್‌ ಬಹಳಷ್ಟುಸಹಕಾರಿಯಾಗಲಿದೆ ಎಂದು ಸಂಸದ ಪ್ರತಾಪ್‌ ಸಿಂಹ ತಿಳಿಸಿದರು.

ಮೈಸೂರು (ಜೂ.27): ಮೈಸೂರಿನ ಪ್ರವಾಸೋದ್ಯಮ ಇನ್ನಷ್ಟುಅಭಿವೃದ್ಧಿಯಾಗಬೇಕು. ಪ್ರವಾಸಿಗರು ಮೈಸೂರಿಗೆ ಬಂದು ಹೆಚ್ಚು ದಿನಗಳ ಕಾಲ ಇರುವಂತಾಗಬೇಕು. ಈ ನಿಟ್ಟಿನಲ್ಲಿ ಸ್ಕಾಲ್‌ ಇಂಡಿಯಾ ಕಾಂಗ್ರೆಸ್‌ ಬಹಳಷ್ಟುಸಹಕಾರಿಯಾಗಲಿದೆ ಎಂದು ಸಂಸದ ಪ್ರತಾಪ್‌ ಸಿಂಹ ತಿಳಿಸಿದರು.

ನಗರದ ಹೋಟೆಲ್‌ ರಿಯೋ ಮೆರಿಡಿಯನ್‌ ಹೊಟೇಲ್‌(Rio Meridien Hotel mysuru) ಸಭಾಂಗಣದಲ್ಲಿ ಮಂಗಳವಾರ ನಡೆದ ಸ್ಕಾಲ್‌ ಇಂಡಿಯಾ ಕಾಂಗ್ರೆಸ್‌(SKAL India congress 2023)ನ ಕರ್ಟನ್‌ ರೇಸರ್‌ ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೈಸೂರು ಹಿಂದೆಂದಿಗಿಂತಲೂ ವೇಗವಾಗಿ ಬೆಳೆಯುತ್ತಿದೆ. ರೈಲು, ರಸ್ತೆ ಹಾಗೂ ವಿಮಾನ ಮಾರ್ಗ ಅಭಿವೃದ್ಧಿಯಾಗುತ್ತಿದೆ. ಇದರಿಂದ ಮೈಸೂರಿಗೆ ಸಂಪರ್ಕ ಸುಲಭವಾಗಿದೆ. ಈ ಸಮಯದಲ್ಲಿ ಪ್ರವಾಸೋದ್ಯಮ ಇನ್ನಷ್ಟುಬೆಳೆಯಲು ಬಹಳಷ್ಟುಅವಕಾಶಗಳಿವೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಾಯಕರ ಮಧ್ಯೆ ಅಂತರ್ಯುದ್ಧ, ಕಾಲೆಳೆಯುವ ಕಾಳಗ: ಬಿಜೆಪಿ ದಂಗೆಗೆ "ಬಾಂಬೆ ಬಾಯ್ಸ್" ಕಾರಣ ಅಂದ್ರು ಈಶ್ವರಪ್ಪ..!

 

ಮೈಸೂರಿನಲ್ಲಿ ಎಲ್ಲಾ ವಯೋಮಾನದವರಿಗೂ ಸರಿಹೊಂದುವ ಪ್ರವಾಸಿ ಆಕರ್ಷಣೆಗಳಿವೆ. ಸಣ್ಣ ಮಕ್ಕಳಿಂದ ಮೊದಲುಗೊಂಡು ವಿವಿಧ ಆಸಕ್ತಿಗಳಿರುವ ಎಲ್ಲರಿಗೂ ಮೈಸೂರು ಹೇಳಿಮಾಡಿಸಿದ ಸ್ಥಳ. ಮೈಸೂರಿನಲ್ಲಿ ನೈಟ್‌ ಲೈಫ್‌ ಆರಂಭವಾಗಬೇಕು. ಸ್ಕಾಲ್‌ ಅಂತಹ ಸಂಸ್ಥೆಗಳಿಂದ ನಮ್ಮ ಊರಿನ ಪ್ರವಾಸೋದ್ಯಮ ಇನ್ನಷ್ಟುಅಭಿವೃದ್ಧಿಯಾಗಲಿ ಎಂದು ಅವರು ಆಶಿಸಿದರು.

ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಸವಿತಾ ಮಾತನಾಡಿ, ಸ್ಕಾಲ್‌ ಇಂಡಿಯಾ ಕಾಂಗ್ರೆಸ್‌ನ ಪರಿಕಲ್ಪನೆ, ಯೋಜನೆ ಕೇಳಿದರೆ ಖುಷಿಯಾಗುತ್ತಿದೆ. ಇಂತಹ ಕಾರ್ಯಕ್ರಮಗಳು ಇನ್ನಷ್ಟುನಡೆಯಬೇಕು. ಇದಕ್ಕೆ ನಮ್ಮ ಸಹಕಾರ ಇದೆ ಎಂದು ತಿಳಿಸಿದರು.

ಸ್ಕಾಲ್‌ ಇಂಡಿಯಾ ಕಾಂಗ್ರೆಸ್‌ನ ಅಧ್ಯಕ್ಷ ಸುದೀಪ್ತಾ ದೇಬ್‌ ಮಾತನಾಡಿ, ಕರ್ನಾಟಕ ಎರಡು ಅತಿದೊಡ್ಡ ನಗರಗಳಾದ ಬೆಂಗಳೂರು ಹಾಗೂ ಮೈಸೂರಿನಲ್ಲಿ ಅಕ್ಟೋಬರ್‌ 4 ರಿಂದ 8 ರವರೆಗೆ ಸ್ಕಾಲ್‌ ಇಂಡಿಯಾ ಕಾಂಗ್ರೆಸ್‌ ನಡೆಯಲಿದೆ. ಸ್ಕಾಲ್‌ನ ಇತಿಹಾಸದಲ್ಲೇ ಇದೊಂದು ವಿನೂತನ ಪ್ರಯತ್ನ. ಎರಡೂ ನಗರಗಳನ್ನು ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯನ್ನಾಗಿ ಮಾಡಲು ಈ ಕಾರ್ಯಕ್ರಮ ಸಹಕಾರಿಯಾಗಲಿದೆ. ಇದರ ಭಾಗವಾಗಿ ಚರ್ಚೆಗಳು, ಎಕ್ಸಿಬಿಷನ್‌ಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿವರಿಸಿದರು.

 

ಜಾರಕಿಹೊಳಿ ಹೇಳಿಕೆ ಅಸಂಬದ್ಧ, ಇವರಿಗೆಲ್ಲಾ ಪುನಶ್ಚೇತನ ಶಿಬಿರ ಅಗತ್ಯವಿದೆ: ಪ್ರತಾಪ್‌ ಸಿಂಹ

ಇದೇ ವೇಳೆ ಸ್ಕಾಲ್‌ ಇಂಡಿಯಾ ಕಾಂಗ್ರೆಸ್‌ನ ಲೋಗೋ, ವೆಬ್‌ಸೈಟ್‌ ಅನ್ನು ಬಿಡುಗಡೆಗೊಳಿಸಲಾಯಿತು. ಸ್ಕಾಲ್‌ ಇಂಟರ್‌ನ್ಯಾಷನಲ್‌ ಇಂಡಿಯಾದ ಅಧ್ಯಕ್ಷ ಕಾಲ್‌ರ್‍ ವಾಝ್‌, ಬೆಂಗಳೂರು ವಿಭಾಗದ ಅಧ್ಯಕ್ಷ ಅಯ್ಯಪ್ಪ ಸೋಮಯ್ಯ, ಮೈಸೂರು ವಿಭಾಗದ ಅಧ್ಯಕ್ಷ ಬಿ.ಎಸ್‌. ಪ್ರಶಾಂತ್‌, ಉಪಾಧ್ಯಕ್ಷ ಸಿ.ಎ. ಜಯಕುಮಾರ್‌ ಮೊದಲಾದವರು ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್