ಸಂತ್ರಸ್ತೆ ಅಪಹರಣ ಪ್ರಕರಣ: ಈಗ ಸಾ.ರಾ.ಮಹೇಶ್‌ಗೆ ಎಸ್‌ಐಟಿ ಸಂಕಷ್ಟ

By Kannadaprabha News  |  First Published May 31, 2024, 10:17 AM IST

ಆರೋಪಿಗಳ ಕುರಿತು ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಎಸ್‌ಐಟಿ ಸಲ್ಲಿಸಿದ ರಿಮ್ಯಾಂಡ್ ಅಪ್ಲಿಕೇಷನ್‌ನಲ್ಲಿ ಸಾ.ರಾ.ಮಹೇಶ್ ಹೆಸರು ಉಲ್ಲೇಖವಾಗಿದೆ. ಈ ಹಿನ್ನೆಲೆಯಲ್ಲಿ ಮಾಜಿ ಸಚಿವರಿಗೆ ಪ್ರಕರಣ ಕುರಿತು ನೋಟಿಸ್ ನೀಡಿ ಎಸ್‌ಐಟಿ ವಿಚಾರಣೆ ನಡೆಸಲಿದೆ. 


ಬೆಂಗಳೂರು(ಮೇ.31): ಸಂಸದ ಪ್ರಜ್ವಲ್ ವಿರುದ್ಧ ಲೈಂಗಿಕ ದೌರ್ಜನ್ಯ ಕೃತ್ಯದ ಸಂತ್ರಸ್ತೆ ಅಪಹರಣ ಪ್ರಕರಣ ಸಂಬಂಧ ಮೈಸೂರು ಜಿಲ್ಲೆಯ ಜೆಡಿಎಸ್ ಮುಖಂಡ ಹಾಗೂ ಮಾಜಿ ಸಚಿವ ಸಾ.ರಾ.ಮಹೇಶ್ ಅವರಿಗೆ ವಿಶೇಷ ತನಿಖಾ ದಳ (ಎಸ್‌ಐಟಿ)ದ ತನಿಖೆ ಸಂಕಷ್ಟ ಎದುರಾಗುವ ಸಾಧ್ಯತೆಗಳಿವೆ. 

ಈ ಪ್ರಕರಣದ ಆರೋಪಿಗಳ ಕುರಿತು ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಎಸ್‌ಐಟಿ ಸಲ್ಲಿಸಿದ ರಿಮ್ಯಾಂಡ್ ಅಪ್ಲಿಕೇಷನ್‌ನಲ್ಲಿ ಸಾ.ರಾ.ಮಹೇಶ್ ಹೆಸರು ಉಲ್ಲೇಖವಾಗಿದೆ. ಈ ಹಿನ್ನೆಲೆಯಲ್ಲಿ ಮಾಜಿ ಸಚಿವರಿಗೆ ಪ್ರಕರಣ ಕುರಿತು ನೋಟಿಸ್ ನೀಡಿ ಎಸ್‌ಐಟಿ ವಿಚಾರಣೆ ನಡೆಸಲಿದೆ ಎಂದು ವಿಶ್ವಸನೀಯ ಮೂಲಗಳು 'ಕನ್ನಡಪ್ರಭ'ಕ್ಕೆ ಮಾಹಿತಿ ನೀಡಿವೆ. 

Latest Videos

undefined

ಭವಾನಿಗೆ ಜೈಲಾ, ಬೇಲಾ?: ಇಂದು ತೀರ್ಪು, ಬಂಧನ ಭೀತಿಯಲ್ಲಿರುವ ರೇವಣ್ಣ ಪತ್ನಿಗೆ ಢವ ಢವ..!

ತಾನು ಅಪಹರಣವಾಗಿಲ್ಲವೆಂದು ಎಂದು ಮಾಧ್ಯಮಗಳಿಗೆ ಸಂತ್ರಸ್ತೆಯಿಂದ ಹೇಳಿಕೆ ಕೊಡಿಸಲು ಮಹೇಶ್ ಸೂಚನೆ ಮೇರೆಗೆ ರೇವಣ್ಣ ಬೆಂಬಲಿಗರು ಸಂತ್ರಸ್ತೆ ತಮ್ಮ ವಶದಲ್ಲಿದ್ದಾಗಲೇ ಸಿದ್ದರಾಗಿದ್ದರು. ಆದರೆ ಕೊನೆ ಕ್ಷಣದಲ್ಲಿ ಮಳೆಯಿಂದಾಗಿ ಸಂತ್ರಸ್ತೆಯ ಪತ್ರಿಕಾಗೋಷ್ಠಿ ರದ್ದಾಯಿತು ಎಂದು ಎಸ್‌ಐಟಿ ಮುಂದೆ ಆರೋಪಿಗಳು ಹೇಳಿಕೆ ನೀಡಿರುವುದು ಗೊತ್ತಾಗಿದೆ.

ಸಾ.ರಾ. ಅವರಿಗೆ ಅಪಹರಣ ಪ್ರಕರಣದಲ್ಲಿ ಬಂಧಿತ ರಾಗಿರುವ ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಮಾಜಿ ಜಿಪಂ ಸದಸ್ಯ ಕೀರ್ತಿ ಹಾಗೂ ಮನು ಸೇರಿ ಇತರೆ ಆರೋಪಿಗಳು ಆಪ್ತರಾಗಿದ್ದರು ಎಂದು ತಿಳಿದು ಬಂದಿದೆ. ಅಪಹರಣ ಪ್ರಕರಣ ಕುರಿತು ರೇವಣ್ಣ ಅವರ ಆಪ್ತ ಸಹಾ ಯಕ ರಾಜಗೋಪಾಲ್ ಹೇಳಿಕೆಯಲ್ಲಿ ಸಾ.ರಾ. ಹೆಸರು ಪ್ರಸ್ತಾಪವಾಗಿದೆ. ಮೇ 3ರಂದು ಕೀರ್ತಿ, ಇತರರು ತೋಟದ ಮನೆಗೆ ಬಂದು ಸಾ.ರಾ. ಅವರು ಮಹಿಳೆಯ ಪ್ರೆಸ್‌ಮೀಟ್ ಮಾಡಬೇಕೆಂದು ತಿಳಿಸಿದ್ದರು ಎಂದು ಉಲ್ಲೇಖಿಸಿದ್ದಾರೆ.

click me!