
ಮೈಸೂರು(ಜು.31): ಮುಡಾದಲ್ಲಿ 5 ಸಾವಿರ ಕೋಟಿ ರು. ಹಗರಣವಾಗಿದ್ದು, ಇದಕ್ಕೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ನೇರ ಕಾರಣ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ
ಮಾತನಾಡಿ, ವಾಲ್ಮೀಕಿ ನಿಗಮದ ಹಗರಣದಲ್ಲಿ ತಲೆದಂಡವಾದ ಮಾಜಿ ಸಚಿವ ಬಿ.ನಾಗೇಂದ್ರ ರೀತಿಯಲ್ಲಿಯೇ ಮುಡಾ ಹಗರಣಕ್ಕೆ ಕಾರಣರಾದ ಬೈರತಿ ಸುರೇಶ್, ಆಯುಕ್ತರಾಗಿದ್ದ ನಟೇಶ್, ದಿನೇಶ್ ಕುಮಾರ ಅವರನ್ನು ನೀವು (ಸಿದ್ದರಾಮಯ್ಯ) ಜೈಲಿಗೆ ಕಳುಹಿಸಬೇಕು ಎಂದು ಒತ್ತಾಯಿಸಿದರು.
ಸುಳ್ಳು ಸಂಶೋಧಕ ಸಿದ್ದರಾಮಯ್ಯನವರೇ, ನಿಮ್ಮ ಮುಖದ ಮೇಲಿನ ಕೊಳಕನ್ನು ನನ್ನ ಮೇಲೆ ಸಿಡಿಸಬೇಡಿ: ಹೆಚ್.ಡಿ. ಕುಮಾರಸ್ವಾಮಿ
ಸುರೇಶ್ ನಿಮ್ಮ ಸಮುದಾಯದವನು ಅಂತ ಜೈಲಿಗೆ ಕಳುಹಿಸಿಲ್ಲವೇ? ಇದು ಯಾವ ನ್ಯಾಯ ಸಿದ್ದರಾಮಯ್ಯ? ಎರಡು ಬಾರಿ ಸಿಎಂ ಆಗಿದ್ದು, ಒಬ್ಬರಿಗೂ ನಿವೇಶನ ಕೊಡಲಿಲ್ಲ. ಕಷ್ಟಕ್ಕೆ ಅಹಿಂದ ಬೇಕು ಸುಖಕ್ಕೆ ಬೇಡವೇ? ಮರ್ಯಾದೆಯಿಂದ ಮುಡಾ ನಿವೇಶನಗಳನ್ನು ಮರಳಿಸಿ. ಇಲ್ಲವೇ ಆ ಜಾಗದಲ್ಲಿ ಮಕ್ಕಳಿಗೆ ಶಾಲೆ ಕಟ್ಟಿಕೊಡಿ ಎಂದು ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ಮಾಡಿದರು.
ಕರ್ನಾಟಕ ಭ್ರಷ್ಟ ರಾಜ್ಯ ಎಂದು ಬಿಂಬಿಸುವ ಯತ್ನ: ಬಿಜೆಪಿಯವರು ಮನೆ ಮುರುಕರು, ಸಿಎಂ ಸಿದ್ದು ವಾಗ್ದಾಳಿ
ಮುಡಾ ಮತ್ತು ವಾಲ್ಮೀಕಿ ಹಗರಣದಿಂದ ರಾಜ್ಯ ಸರ್ಕಾರ ತತ್ತರಿಸಿ ಹೋಗಿದೆ. ಸಿದ್ದರಾಮಯ್ಯ ಏಕಾಂಗಿಯಾಗಿದ್ದು, ಏನೇನೋ ಮಾತನಾಡುತ್ತಿದ್ದಾರೆ. ರಾಜ್ಯದ ವಾಲ್ಮೀಕಿ ನಿಗಮದ ಹಣ ತೆಲಂಗಾಣ, ಆಂಧ್ರ ಪ್ರದೇಶದ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗೆ ಹೋಗಿದೆ. ಈ ಹಗರಣಕ್ಕೆ ಹಣಕಾಸು ಸಚಿವರೂ ಆಗಿರುವ ಸಿದ್ದರಾಮಯ್ಯ ನೇರ ಹೊಣೆಗಾರರು ಎಂದರು.
ಸರ್ಕಾರದ ಕೃಪಾಕಟಾಕ್ಷ:
ರಾಜ್ಯದಲ್ಲಿ ಹಿಂದೆಂದೂ ಇಷ್ಟೊಂದು ದೊಡ್ಡ ಭ್ರಷ್ಟಾಚಾರ ನಡೆದಿರಲಿಲ್ಲ. ತಪ್ಪಿತಸ್ಥರಿಗೆ ಸರ್ಕಾರದ ಕೃಪಾಕಟಾಕ್ಷ ಇದ್ದು, ಈಗಲೂ ಅಕ್ರಮ ಮುಂದುವರಿಸಿದ್ದಾರೆ. ಮುಡಾ ಹಗರಣದ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಹಮ್ಮಿಕೊಂಡಿರುವ ಪಾದಯಾತ್ರೆಯಲ್ಲಿ ನಾನು ಕೂಡ ಭಾಗಿಯಾಗುತ್ತೇನೆ ಎಂದು ವಿಶ್ವನಾಥ್ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ