Karnataka CM: ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ನಗರ ಪೊಲೀಸ್ ಇಲಾಖೆ ಭರ್ಜರಿ ಮ್ಯಾಪಿಂಗ್!

By Ravi Janekal  |  First Published May 19, 2023, 10:57 AM IST

ನಾಳೆ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಹಿನ್ನೆಲೆ ನಗರ ಪೊಲೀಸ್ ಇಲಾಖೆ ಕಾರ್ಯಕ್ರಮಕ್ಕೆ ಭರ್ಜರಿ ಮ್ಯಾಪಿಂಗ್ ನಡೆಸಿದ್ದಾರೆ. 


ಬೆಂಗಳೂರು (ಮೇ.19) : ನಾಳೆ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಹಿನ್ನೆಲೆ ನಗರ ಪೊಲೀಸ್ ಇಲಾಖೆ ಕಾರ್ಯಕ್ರಮಕ್ಕೆ ಭರ್ಜರಿ ಮ್ಯಾಪಿಂಗ್ ನಡೆಸಿದ್ದಾರೆ. 

ನಾಳೆ ನಡೆಯಲಿರುವ ಐತಿಹಾಸಿಕ ಕಾರ್ಯಕ್ರಮಕ್ಕೆ ರಾಮನಗರ, ಮೈಸೂರು, ಉತ್ತರ ಕರ್ನಾಟಕ ಹಾಗೂ ಕೋಲಾರದಿಂದ ಲಕ್ಷಾಂತರ ಮಂದಿ ಆಗಮನ ಬಗ್ಗೆ ಗುಪ್ತಚರ ಇಲಾಖೆಯಿಂದ ಪೊಲೀಸರಿಗೆ ಮಾಹಿತಿ ಬಂದ ಹಿನ್ನೆಲೆ ಅಲರ್ಟ್ ಆಗಿದ್ದಾರೆ. ಮುಖ್ಯಮಂತ್ರಿಗಳ ಪ್ರಮಾಣವಚನ ಕಾರ್ಯಕ್ರಮ  ಕಂಠೀರವ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಹಿನ್ನೆಲೆ ನಾಳೆ ಅಷ್ಟ ದಿಕ್ಕುಗಳಲ್ಲಿ ಖಾಕಿ ಬಿಗಿಭದ್ರತೆಗೆ ಏರ್ಪಡಿಸಲು ಪ್ಲಾನ್ ಹಾಕಿಕೊಂಡಿದೆ. ಎಲ್ಲಿಯೂ ಅಹಿತಕರ ಘಟನೆಗಳಾಗದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದೆ.

Tap to resize

Latest Videos

 

ಸಿದ್ದು ಕ್ಯಾಬಿನೆಟ್ ಸಚಿವರ ಸಂಭಾವ್ಯ ಪಟ್ಟಿ, ಸವದಿ, ಲಕ್ಷ್ಮಿ ಹೆಬ್ಬಾಳ್ಕರ್ ಸೇರಿ ಹಲವರಿಗೆ ಸ್ಥಾನ!

ಪ್ರಮುಖವಾಗಿ ಕಂಠೀರವ ಸ್ಟೇಡಿಯಂ(kantirava stadium)ನ ಎರಡು ಗೇಟ್‌ಗಳಲ್ಲಿ ವಿವಿಐಪಿಗೆ ಮಾತ್ರ ವಾಹನಗಳ ಎಂಟ್ರಿಗೆ ಅವಕಾಶ ನೀಡಲಾಗಿದೆ, ವಿವಿಐಪಿ(VVIP)ಗೆ ಪ್ರತ್ಯೇಕವಾಗಿ ಒಳಗೆ ಹೋಗಲು ವ್ಯವಸ್ಥೆ ಮಾಡಲಿರುವ ಪೊಲೀಸರು.

ಪೊಲೀಸ್ ಕಮಿಷನರ್, ಟ್ರಾಫಿಕ್ ಸ್ಪೆಷಲ್ ಕಮಿಷನರ್, ಜಂಟಿ ಇಬ್ಬರು ಪೊಲೀಸ್ ಆಯುಕ್ತರು ಸೇರಿ ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಎಂಟು ಮಂದಿ ಡಿಸಿಪಿ ಭದ್ರತೆಗೆ ನಿಯೋಜನೆಗೊಳ್ಳಲಿದ್ದಾರೆ.

ಇನ್ನು ನಾಳೆ ನಡೆಯಲಿರುವ ಮುಖ್ಯಮಂತ್ರಿಗಳ ಪ್ರಮಾಣವಚನ ಕಾರ್ಯಕ್ರಮವನ್ನೇ ಶಕ್ತಿ ಪ್ರದರ್ಶನ ವೇದಿಕೆಯನ್ನಾಗಿಸಿ ಕಹಳೆ ಮೊಳಗಿಸಲು ಕಾಂಗ್ರೆಸ್(Karnataka congress) ಕೂಡ ಭರ್ಜರಿ ಸಿದ್ಧತೆ ನಡೆಸಿದೆ. ಅದಕ್ಕಾಗಿಯೇ ಹಲವು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಗಣ್ಯರಿಗೆ ಆಹ್ವಾನ ನೀಡಿದ್ದು. ಐತಿಹಾಸಿಕ ಕಾರ್ಯಕ್ರಮವನ್ನಾಗಿಸಲು ಸಿದ್ಧತೆ ನಡೆಸಿದೆ. ಇನ್ನೂ ಈ ಕಾರ್ಯಕ್ರಮ ಯಶಸ್ವಿಗೆ ಸರ್ವಸನ್ನದ್ಧವಾಗಿರು ಪೊಲೀಸ್ ಇಲಾಖೆ ಸುಮಾರು 1500ಮಂದಿ ಪೊಲೀಸ್ರನ್ನು ಭದ್ರತೆಗೆ ನಿಯೋಜನೆ ಮಾಡಲಿದೆ.

8 ಗೇಟ್‌ಗಳಲ್ಲಿ ಓರ್ವ ಎಸಿಪಿ ಮಟ್ಟದ ಅಧಿಕಾರಿಗಳಿಂದ ಭದ್ರತಾ ವ್ಯವಸ್ಥೆ ಜೊತೆಗೆ  ಹತ್ತು ಮಂದಿ ಎಸಿಪಿ, 28 ಮಂದಿ ಇನ್ಸ್ ಪೆಕ್ಟರ್  ಗಳ ನೇತೃತ್ವದಲ್ಲಿ ಭದ್ರತಾ ವ್ಯವಸ್ಥೆ ಮಾಡಲಾಗುತ್ತದೆ. ಇನ್ನೊಂದೆಡೆ ರಾಜ್ಯಾದ್ಯಂತ ಲಕ್ಷಾಂತರ ಜನರು ಆಗಮಿಸಲಿರುವ ಹಿನ್ನೆಲೆ ಸುಮಾರು 500 ಸಂಚಾರಿ ಪೊಲೀಸರು ಸಂಚಾರ ದಟ್ಟಣೆಯಾಗದಂತೆ ರೋಡ್ ಡೈವರ್ಷನ್ ಮಾಡಲಿದ್ದಾರೆ. ಹಲಸೂರು, ಎಂಜಿ ರೋಡ್, ರಿಚ್ ಮಂಡ್ ನಿಂದ ಕಾರ್ಪೊರೇಷನ್ ಮೂಲಕ  ಬರುವ ವಾಹನಗಳನ್ನ ಹಲಸೂರು ಕೆರೆ ಮೂಲಕ ಶಿವಾಜಿನಗರ, ವಿಧಾನಸೌಧ ಮೆಜೆಸ್ಟಿಕ್, ಮಾರ್ಕೆಟ್ ಮೂಲಕ ಬರುವ ವಾಹನಗಳನ್ನ ರಿಚ್ಮಂಡ್  ರೋಡ್ ನಿಂದ ಲಾಲ್ ಬಾಗ್ ರೋಡ್ ಮೂಲಕ ಸಂಪರ್ಕ ಕಲ್ಪಿಸಲಾಗುತ್ತದೆ.

ಮೆಜೆಸ್ಟಿಕ್ ಮಾರ್ಗದಿಂದ ಕಾರ್ಪೊರೇಷನ್ ಗೆ ಬರುವ ವಾಹನಗಳು ವಿಧಾನಸೌಧ ಮೂಲಕ ತಿಮ್ಮಯ್ಯ ರೋಡ್, ಇನ್ ಪೆಂಟ್ರಿ ರೋಡ್ ಮೂಲಕ ಸಂಚಾರ. ಕೇಂದ್ರ ಭಾಗದಲ್ಲಿ ಹೆಚ್ಚು ಸಂಚಾರ ದಟ್ಟಣೆಯಾಗುವ ಹಿನ್ನಲೆ ಮೈಸೂರ್ ಬ್ಯಾಂಕ್ ಸರ್ಕಲ್ ,ರಿಚ್ಮಂಡ್ ರೋಡ್,ಟೌನ್ ಹಾಲ್ ರಸ್ತೆ ಸಂಪೂರ್ಣಾವಾಗಿ ತಮ್ಮ ಸುಪರ್ದಿಗೆ ತೆಗೆದುಕೊಳ್ಳಲಿರುವ ಪೊಲೀಸರು. 

ಗಣ್ಯರ ಭದ್ರತೆಗೆ ಸಿಬ್ಬಂದಿ ಕೊರತೆ:

ನಾಳೆ ಪ್ರಮಾಣವಚನ ಕಾರ್ಯಕ್ರಮಕ್ಕೆ ಹಲವು ರಾಜ್ಯಗಳ ಮುಖ್ಯಮಂತ್ರಿ, ಗಣ್ಯರಿಗೆ ಆಗಮಿಸುತ್ತಿರುವ ಹಿನ್ನೆಲೆ ಕಾರ್ಯಕ್ರಮಕ್ಕೆ ಆಗಮನಿಸುವ ಗಣ್ಯರಿಗೆ ಭದ್ರತೆ ವಹಿಸುವ ವಿವಿಐಪಿ ಸೆಕ್ಯುರಿಟಿ ಸಿಬ್ಬಂದಿ ಕೊರತೆ ಎದುರಾಗಿದೆ. ಸಿಬ್ಬಂದಿ ಕೊರತೆ ನಿವಾರಿಸಲು ಸಿಎಆರ್ ಘಟಕಗಳಿಂದ ಸಿಬ್ಬಂಧಿ ನಿಯೋಜನೆ ಮಾಡಲಾಗುತ್ತಿದೆ. Z+ ಹಾಗೂ Z ಶ್ರೇಣಿಯ ಭದ್ರತೆ ಹೊಂದಿರುವ ಹಲವು ಗಣ್ಯರು.  ಕಾರ್ಯಕ್ರಮಕ್ಕೆ ಬರುವ 11 ಮಂದಿ Z+ ಶ್ರೇಣಿಯ ಭದ್ರತೆ ಹೊಂದಿದ್ದಾರೆ. ಹೀಗಾಗಿ ಶ್ರೇಣಿಗೆ ತಕ್ಕಂತೆ ಭದ್ರತೆ ನೀಡಲು ಮುಂದಾಗಿರುವ ನಗರ ಪೊಲಿಸರು. ಇದಕ್ಕಾಗಿ ನಗರದ ಸಿಎಆರ್ ಘಟಕದಿಂದ ಸಿಬ್ಬಂದಿ ನಿಯೋಜನೆ ಮಾಡಲು ನಿರ್ಧಾರ.

2024ರ ಲೋಕಸಭಾ ಚುನಾವಣೆ ಬಳಿಕ ಡಿಕೆ ಶಿವಕುಮಾರ್ ಮುಖ್ಯಮಂತ್ರಿ? ಅಧಿಕಾರ ಹಂಚಿಕೆ ಸುಳಿವು!

ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯರು ಹಾಗೂ ಅವರ ಶ್ರೇಣಿ

ರಾಹುಲ್ ಗಾಂಧಿ Z+, ಸೋನಿಯಾ ಗಾಂಧಿ ಽ+, ಪ್ರಿಯಾಂಕ ಗಾಂಧಿ ವಾದ್ರಾZ+, ಮಮತಾ ಬ್ಯಾನರ್ಜಿ Z+, ಅಶೋಕ್ ಗೆಹಲೋಟ್ Z+, ಭೂಪೇಶ್ ಭಗೇಲ್ Z+, ನಿತೀಶ್ ಕುಮಾರ್ Z+, ಸುಕವಿಂದರ್ ಸಿಂಗ್ Z+, ಎನ್ ರಂಗಸ್ವಾಮಿ Z+, ಎಂ ಕೆ ಸ್ಟಾಲಿನ್ Z+, ಹೇಮಂತ್ ಸೋರೆನ್ Z+

click me!