ರೈಲಿಗೆ ಕೆಲ್ಲೆಸೆವ ಪುಂಡಾಟಿಕೆ ಈಗ ಇಳಿಮುಖ..!

Published : May 19, 2023, 06:01 AM IST
ರೈಲಿಗೆ ಕೆಲ್ಲೆಸೆವ ಪುಂಡಾಟಿಕೆ ಈಗ ಇಳಿಮುಖ..!

ಸಾರಾಂಶ

ದಕ್ಷಿಣ ಭಾರತದ ಏಕೈಕ ‘ವಂದೇ ಭಾರತ್‌’ ರೈಲೊಂದಕ್ಕೇ ಈವರೆಗೆ ಬೆಂಗಳೂರು ವಲಯದಲ್ಲಿ 18 ಬಾರಿ ಕಲ್ಲೆಸೆದ ಪ್ರಕರಣಗಳು ದಾಖಲಾಗಿವೆ. 25ಕ್ಕೂ ಹೆಚ್ಚು ಕಿಟಕಿ ಗಾಜುಗಳು ಸಂಪೂರ್ಣ ಒಡೆದಿವೆ. ಇತರೆ ವಲಯಗಳೂ ಸೇರಿ ಸುಮಾರು 54 ಕಿಟಕಿ ಗಾಜು ಪುಡಿಯಾಗಿವೆ. ಎರಡು ಬಾರಿ ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದಾರೆ. 

ಮಯೂರ್‌ ಹೆಗಡೆ

ಬೆಂಗಳೂರು(ಮೇ.19):  ರೈಲುಗಳ ಕಿಟಕಿ ಗಾಜುಗಳಿಗೆ ಕಲ್ಲು ಎಸೆದು ಹಾನಿ ಮಾಡುತ್ತಿದ್ದ ಕಿಡಿಗೇಡಿಗಳ ವಿರುದ್ಧ ರೈಲ್ವೆ ಇಲಾಖೆ ಕೈಗೊಂಡ ಕಠಿಣ ಕ್ರಮಗಳು ಫಲ ನೀಡಿವೆ. ಆಯ್ದ ಸ್ಥಳಗಳಲ್ಲಿ ಗಸ್ತು, ಜಾಗೃತಿ ಮೂಡಿಸಿದ ಪರಿಣಾಮ ಇಂತಹ ಪ್ರಕರಣಗಳ ಸಂಖ್ಯೆ ಸಾಕಷ್ಟು ಕಡಿಮೆಯಾಗಿದೆ. ಜನವರಿಯಲ್ಲಿ 21 ಕಲ್ಲೆಸೆತ ಪ್ರಕರಣ ದಾಖಲಾಗಿದ್ದರೆ, ಏಪ್ರಿಲ್‌ನಲ್ಲಿ 8ಕ್ಕೆ ಇಳಿಕೆಯಾಗಿವೆ. ಮೇ ತಿಂಗಳಿನಲ್ಲಿ ಕೇವಲ 2 ಪ್ರಕರಣ ವರದಿಯಾಗಿವೆ.

ದಕ್ಷಿಣ ಭಾರತದ ಏಕೈಕ ‘ವಂದೇ ಭಾರತ್‌’ ರೈಲೊಂದಕ್ಕೇ ಈವರೆಗೆ ಬೆಂಗಳೂರು ವಲಯದಲ್ಲಿ 18 ಬಾರಿ ಕಲ್ಲೆಸೆದ ಪ್ರಕರಣಗಳು ದಾಖಲಾಗಿವೆ. 25ಕ್ಕೂ ಹೆಚ್ಚು ಕಿಟಕಿ ಗಾಜುಗಳು ಸಂಪೂರ್ಣ ಒಡೆದಿವೆ. ಇತರೆ ವಲಯಗಳೂ ಸೇರಿ ಸುಮಾರು 54 ಕಿಟಕಿ ಗಾಜು ಪುಡಿಯಾಗಿವೆ. ಎರಡು ಬಾರಿ ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಮಾಲೂರು, ದೇವನಗೊಂದಿಯಿಂದ ದಂಡು ನಿಲ್ದಾಣದವರೆಗೆ ಹೆಚ್ಚಿನ ಕಲ್ಲೆಸೆತವಾಗಿದೆ. ಈಚೆಗೆ ಮಂಡ್ಯ, ರಾಮನಗರ, ಚನ್ನಪಟ್ಟಣದ ಬಳಿ ಕಿಡಿಗೇಡಿಗಳು ರೈಲಿಗೆ ಕಲ್ಲು ಎಸೆದ ಪ್ರಕರಣ ವರದಿಯಾಗಿದೆ. ಉಳಿದಂತೆ ನಾಯಂಡಹಳ್ಳಿ, ಕೃಷ್ಣದೇವರಾಯ ನಿಲ್ದಾಣದ ಬಳಿಯೂ ಪ್ರಕರಣಗಳು ಜರುಗಿವೆ.

ಟ್ರೈನ್ ಲೇಟಾಗಿ ಬಂದ್ರೆ ಟೆನ್ಶನ್ ಬೇಡ, ಪ್ರಯಾಣಿಕರಿಗೆ ಈ ಸೌಲಭ್ಯ ಸಂಪೂರ್ಣ ಉಚಿತ

ಗಾಜು ಒಡೆದಾಗ ಅದರ ದುರಸ್ತಿಗಾಗಿ ‘ವಂದೇ ಭಾರತ್‌’ ರೈಲಿಗೆ ಬಿಡುವಿರುವ ಬುಧವಾರ ಚೆನ್ನೈನ ಐಸಿಎಫ್‌ನಲ್ಲೇ ದುರಸ್ತಿ ಮಾಡಲಾಗುತ್ತಿದೆ. ಒಂದು ಗಾಜು ಬದಲಿಸಲು ಅಥವಾ ದುರಸ್ತಿಗೆ ಕನಿಷ್ಠ .30 ಸಾವಿರ ವ್ಯಯವಾಗುತ್ತಿದೆ. ಇದು ವಿಶೇಷವಾದ ಗಾಜು, ಸುಲಭವಾಗಿ ಲಭ್ಯವಿರುವುದಿಲ್ಲ. ಇದೇ ಹೊರಗಿನವರಿಂದ ರಿಪೇರಿ ಮಾಡಿಸಿದಲ್ಲಿ ಒಂದು ಗಾಜಿಗೆ .80 ಸಾವಿರ ತಗುಲುತ್ತದೆ ಎಂದು ಎಂದು ನೈಋುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಇತರೆ ರೈಲಿಗೂ ಸಮಸ್ಯೆ

ವಂದೇ ಭಾರತ್‌ ರೈಲಿಗೆ ಮಾತ್ರವಲ್ಲದೇ ಸಾಮಾನ್ಯ ರೈಲುಗಳಿಗೂ ಕಿಡಿಗೇಡಿಗಳು ಕಲ್ಲು ಎಸೆಯುತ್ತಿದ್ದಾರೆ. ಈ ವರ್ಷ ಇಲ್ಲಿವರೆಗೆ ಇಂತಹ ಸುಮಾರು 65ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ. ಕೊಡಿಗೇಹಳ್ಳಿ, ಲೊಟ್ಟಗೊಲ್ಲಹಳ್ಳಿ, ಚನ್ನಸಂದ್ರ, ಯಲಹಂಕ, ಚಿಕ್ಕಬಾಣಾವರ, ಯಶವಂತಪುರ, ಕಾರ್ಮೆಲ್‌ರಾಮ್‌, ಬಾಣಸವಾಡಿ, ಹೊಸೂರು, ತುಮಕೂರು ಸೇರಿ ಹಲವೆಡೆ ಕಲ್ಲು ಎಸೆಯುವುದನ್ನು ಆರ್‌ಪಿಎಫ್‌, ರಾಜ್ಯ ರೈಲ್ವೆ ಪೊಲೀಸರು ಗುರುತಿಸಿದ್ದಾರೆ.

ಪ್ಯಾಟ್ರೋಲಿಂಗ್‌, ಕೌನ್ಸೆಲಿಂಗ್‌:

ರೈಲಿಗೆ ಕಲ್ಲೆಸೆತ ತಡೆಯಲು ಆರ್‌ಪಿಎಫ್‌, ರಾಜ್ಯ ರೈಲ್ವೆ ಪೊಲೀಸರು ತಮ್ಮ ದಿನನಿತ್ಯದ ಕೆಲಸ ಬಿಟ್ಟು ಸಿವಿಲ್‌ ಧಿರಿಸಿನಲ್ಲಿ ಟ್ರ್ಯಾಕ್‌ಮೆನ್‌ಗಳಂತೆ ಗಸ್ತು ತಿರುಗುತ್ತಿದ್ದಾರೆ. ಗುರುತಿಸಲಾದ ಸ್ಥಳಗಳ ಸುತ್ತಮುತ್ತಲ ಜನವಸತಿ ಸ್ಥಳಕ್ಕೆ ತೆರಳಿ ಕಲ್ಲೆಸೆಯುವವರಿಗೆ ತಿಳಿ ಹೇಳುತ್ತಿದ್ದಾರೆ. ಒಂದಿಷ್ಟುಯುವಕರು, ಮಕ್ಕಳಿಗೆ ಕೌನ್ಸೆಲಿಂಗ್‌ ಮಾಡಿದ್ದಾರೆ.

Indian Railways: ರೈಲಿನಲ್ಲಿ ಈಗ ಉಚಿತ ಆಹಾರವೂ ಲಭ್ಯ, ಕಂಡೀಷನ್ಸ್ ಅಪ್ಲೈ

ಈವರೆಗೆ ನಾಲ್ವರ ಬಂಧನ

ಈವರೆಗೆ ವಂದೇ ಭಾರತ್‌ ರೈಲಿಗೆ ಕಲ್ಲೆಸೆದ ಪ್ರಕರಣದಲ್ಲಿ ನಾಲ್ವರನ್ನು ಆರ್‌ಪಿಎಫ್‌ ಬಂಧಿಸಿ ರಾಜ್ಯ ರೈಲ್ವೇ ಪೊಲೀಸರಿಗೆ ಹಸ್ತಾಂತರ ಮಾಡಿದೆ. ಕಳೆದ ಏಪ್ರಿಲ್‌ನಲ್ಲಿ ಒಬ್ಬ ಮಾನಸಿಕ ಅಸ್ವಸ್ಥನನ್ನು ಕೂಡ ಪೊಲೀಸರು ವಶಕ್ಕೆ ಪಡೆದು ಬುದ್ಧಿ ಹೇಳಿದ್ದಾರೆ. ಅಲ್ಲದೆ, ಸುಮಾರು 50ಕ್ಕೂ ಹೆಚ್ಚು ಯುವಕರಿಗೆ ಎಚ್ಚರಿಕೆ ನೀಡಿದ್ದಾರೆ.

ಪ್ರಕರಣಗಳು ಕುಸಿತ: ತಿಂಗಳು ಕಲ್ಲೆಸೆತ ಪ್ರಕರಣ ದಾಖಲು

ಜನವರಿ 21
ಫೆಬ್ರವರಿ 13
ಮಾರ್ಚ್‌ 18
ಏಪ್ರಿಲ್‌ 8
ಮೇ 2 (ಈವರೆಗೆ)

ನೀವೂ ಮಾಹಿತಿ ಕೊಡಿ

ರೈಲಿಗೆ ಕಲ್ಲೆಸೆತ ತಡೆಯಲು ಅಗತ್ಯ ಕ್ರಮ ವಹಿಸಿದ್ದೇವೆ. ಜನತೆ ಇದನ್ನು ಕಂಡರೆ ಪೊಲೀಸರಿಗೆ ಮಾಹಿತಿ ನೀಡಿ. ಸಹಾಯವಾಣಿ 139ಗೆ ಕರೆಮಾಡಿ ತಿಳಿಸಿ ಅಂತ ನೈಋುತ್ಯ ರೈಲ್ವೆ, ಬೆಂಗಳೂರು ವಲಯ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಕುಸುಮಾ ಹರಿಪ್ರಸಾದ್‌ ತಿಳಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ