ರಾಜ್ಯದಲ್ಲಿ ಸಿದ್ದರಾಮಯ್ಯನವರು 2ನೇ ಬಾರಿಗೆ ಮುಖ್ಯಮಂತ್ರಿಯಾಗಲಿ ಎಂದು ಸಂಕಲ್ಪ ಮಾಡಿದ್ದ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದ ಜಗದ್ಗುರು ರೇವಣ್ಣ ಸಿದ್ದೇಶ್ವರ ಸಿಂಹಾಸನ ಮಹಾಸಂಸ್ಥಾನ ಮಠಾಧ್ಯಕ್ಷ ಶರಭಯ್ಯ ಸ್ವಾಮೀಜಿ ತಮ್ಮ ಸಂಕಲ್ಪ ಈಡೇರಿರುವ ಹಿನ್ನೆಲೆಯಲ್ಲಿ ಮನಗೂಳಿಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಕೈಗೊಂಡಿದ್ದಾರೆ.
ತುಮಕೂರು (ಜು.9) : ರಾಜ್ಯದಲ್ಲಿ ಸಿದ್ದರಾಮಯ್ಯನವರು 2ನೇ ಬಾರಿಗೆ ಮುಖ್ಯಮಂತ್ರಿಯಾಗಲಿ ಎಂದು ಸಂಕಲ್ಪ ಮಾಡಿದ್ದ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದ ಜಗದ್ಗುರು ರೇವಣ್ಣ ಸಿದ್ದೇಶ್ವರ ಸಿಂಹಾಸನ ಮಹಾಸಂಸ್ಥಾನ ಮಠಾಧ್ಯಕ್ಷ ಶರಭಯ್ಯ ಸ್ವಾಮೀಜಿ ತಮ್ಮ ಸಂಕಲ್ಪ ಈಡೇರಿರುವ ಹಿನ್ನೆಲೆಯಲ್ಲಿ ಮನಗೂಳಿಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಕೈಗೊಂಡಿದ್ದಾರೆ.
ಸಿದ್ದರಾಮಯ್ಯ(Siddaramaiah)ನವರು ಮತ್ತೊಮ್ಮೆ ಮುಖ್ಯಮಂತ್ರಿಯಾಗುವಂತೆ ರೇವಣಸಿದ್ದೇಶ್ವ(Revanasiddeshwar math vijayapur)ರರಲ್ಲಿ ಮಾಡಿದ್ದ ಸಂಕಲ್ಪ ಈಡೇರಿರುವುದರಿಂದ ಹರಕೆ ತೀರಿಸುವ ಸಲುವಾಗಿ ಶ್ರೀಗಳು ಕೈಗೊಂಡಿರುವ ಪಾದಯಾತ್ರೆ ತುಮಕೂರು ತಲುಪಿದ್ದು, ನೆಲಮಂಗಲದ ಮೂಲಕ ಬೆಂಗಳೂರಿನತ್ತ ಹೆಜ್ಜೆ ಹಾಕಿದ್ದಾರೆ.
Karnataka Budget 2023: ಕೈ ಗ್ಯಾರಂಟಿಗೆ ಲಾಟ್ರಿ, 52 ಸಾವಿರ ಕೋಟಿ ಭರ್ಜರಿ!
ನಗರದ ಶಿರಾ ಗೇಟ್‌ನಲ್ಲಿರುವ ಕಾಳಿದಾಸ ಪ್ರೌಢಶಾಲೆಗೆ ಪಾದಯಾತ್ರೆಯಲ್ಲಿ ಆಗಮಿಸಿದ ಶ್ರೀಗಳನ್ನು ಬಿಂದುಶೇಖರ ಸ್ವಾಮೀಜಿಯವರು ಆತ್ಮೀಯವಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮನಗೂಳಿಯ ಶರಭಯ್ಯ ಸ್ವಾಮೀಜಿ ಅವರು, ಸಿದ್ದರಾಮಯ್ಯನವರು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಗಳಾಗಬೇಕು ಎಂದು ಜಗದ್ಗುರು ರೇವಣಸಿದ್ದೇಶ್ವರರಲ್ಲಿ ಸಂಕಲ್ಪ ಮಾಡಿದ್ದೆವು. ಅವರ ಕೃಪಾಶೀರ್ವಾದದಿಂದ ಸಿದ್ದರಾಮಯ್ಯನವರು 2ನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದಾರೆ. ಹಾಗಾಗಿ ಹರಕೆಯ ನಿಮಿತ್ತವಾಗಿ ಮನಗೂಳಿ ಮಠದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸುತ್ತಿರುವುದಾಗಿ ತಿಳಿಸಿದರು.
ಮನಗೂಳಿಯಿಂದ ಕೈಗೊಂಡಿರುವ ಪಾದಯಾತ್ರೆಯು ನಿಡಗುಂದಿ, ಬಾಗಲಕೋಟೆ, ಬಾದಾಮಿ, ಮುಂಡರಗಿ, ಹರಪ್ಪನಹಳ್ಳಿ, ದಾವಣಗೆರೆ, ಚಿತ್ರದುರ್ಗ, ಹಿರಿಯೂರು, ಶಿರಾ ಮಾರ್ಗದ ಮೂಲಕ ತುಮಕೂರು ತಲುಪಿದ್ದೇವೆ. ಇಲ್ಲಿಂದ ನೆಲಮಂಗಲ ಮಾರ್ಗವಾಗಿ ಬೆಂಗಳೂರಿಗೆ ತೆರಳಲಾಗುವುದು. ನೆಲಮಂಗಲದಲ್ಲಿ ವಾಸ್ತವ್ಯ ಹೂಡಿ, ಮತ್ತೆ ಮರುದಿನ ಬೆಳಗ್ಗೆ ಬೆಂಗಳೂರಿನ ಸಿದ್ದರಾಮಯ್ಯನವರ ನಿವಾಸಕ್ಕೆ ಪಾದಯಾತ್ರೆಯಲ್ಲಿ ತೆರಳಿ ಅವರನ್ನು ಅಭಿನಂದಿಸಲಾಗುವುದು ಎಂದು ಅವರು ತಿಳಿಸಿದರು.
ನನ್ನ ಪುತ್ರನ ಭ್ರಷ್ಟಾಚಾರ ಎಚ್‌ಡಿಕೆ ಕಲ್ಪನಾ ವಿಲಾಸ: ಸಿಎಂ ಸಿದ್ದರಾಮಯ್ಯ
ಬಿಂದುಶೇಖರ್ ಒಡೆಯರ್ ಮಾತನಾಡಿ, ಭ್ರಷ್ಟರಹಿತ, ಕಳಂಕ ರಹಿತ, ಸಾಮಾಜಿಕ ನ್ಯಾಯ ಒದಗಿಸುವಂತಹ ಆಡಳಿತಕ್ಕೆ ನಾಂದಿ ಹಾಡಬೇಕು, ಸ್ಥಿರ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂದು ಮಾಡಿದ್ದ ಸಂಕಲ್ಪ ಈಡೇರಿರುವುದರಿಂದ ಶ್ರೀಗಳು ಮನಗೂಳಿ ಮಠದಿಂದ ಬೆಂಗಳೂರಿನ ಸಿದ್ದರಾಮಯ್ಯನವರ ನಿವಾಸಕ್ಕೆ ಪಾದಯಾತ್ರೆ ಕೈಗೊಂಡಿದ್ದು, ಈ ಮೂಲಕ ಹರಕೆ ತೀರಿಸುವ ಕೆಲಸವನ್ನು ಮಾಡುತ್ತಿದ್ದಾರೆ. ನೆಲಮಂಗಲದಿಂದ ಭಾರಿ ಜನಸ್ತೋಮದೊಂದಿಗೆ ಪಾದಯಾತ್ರೆ ಮುಂದುವರೆಯಲಿದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಕುರುಬ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.