ಹುಬ್ಬಳಿಯತ್ತ ಮೋದಿ: ಬಾಗಲಕೋಟೆಯಲ್ಲಿ ಸಿದ್ದು ಗುಟುರು!

By Web Desk  |  First Published Feb 10, 2019, 5:43 PM IST

ಹುಬ್ಬಳ್ಳಿಗೆ ಮೋದಿ ಎಂಟ್ರಿಗೂ ಮುನ್ನ ಟಾಂಗ್​ ಕೊಟ್ಟ ಸಿದ್ದರಾಮಯ್ಯ| ಬಿಜೆಪಿಯನ್ನು ಮುಸ್ಲಿಂ ವಿರೋಧಿ ಪಕ್ಷ ಎಂದು ತೆಗಳಿದ ಸಿದ್ದರಾಮಯ್ಯ|‘ ಶಾದಿ ಭಾಗ್ಯ ಯೋಜನೆ ಜಾರಿಗೆ ತಂದಾಗ ಯಡಿಯೂರಪ್ಪ ವಿರೋಧಿಸಿದ್ದರು’| ಕಾಂಗ್ರೆಸ್ ಎಲ್ಲ ಸಮುದಾಯದ ಪರ ಇದೆ ಎಂದ ಸಿದ್ದರಾಮಯ್ಯ


ಬಾಗಲಕೋಟೆ(ಫೆ.10): ಪ್ರಧಾನಿ ನರೇಂದ್ರ ಮೋದಿ ಹುಬ್ಬಳ್ಳಿಗೆ ಬರಲು ಕ್ಷಣಗಣನೆ ಆರಂಭವಾಗಿದೆ. ಈ ಮಧ್ಯೆ ಬಾಗಲಕೋಟೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮೋದಿ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

ಶೇ.14ರಷ್ಟು ಮುಸ್ಲಿಮರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಮೋದಿ ಕೇವಲ ಬಾಯಿ ಮಾತಿನಲ್ಲಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಂತಾರೆ ಎಂದ ಸಿದ್ದರಾಮಯ್ಯ, ತಾವು ಶಾದಿಭಾಗ್ಯ ಜಾರಿಗೆ ತಂದಾಗ ಯಡಿಯೂರಪ್ಪ ವಿರೋಧ ಮಾಡಿದ್ದರು ಎಂದು ಹೇಳಿದರು.

Tap to resize

Latest Videos

"

ನಾನು ಎಲ್ಲ ಧರ್ಮ, ಸಮುದಾಯದ ಪರ ಇದ್ದು, ಎಲ್ಲರಿಗೂ ಸಾಮಾಜಿಕ ನ್ಯಾಯ ಕಲ್ಪಿಸಲು ಹೋರಾಡಿದ್ದಾಗಿ ಸಿದ್ದರಾಮಯ್ಯ ಹೇಳಿದರು. ಆದರೆ ಮುಸ್ಲಿಂ ವಿರೋಧಿಯಾಗಿರುವ ಬಿಜೆಪಿ ತಮ್ಮ ಯೋಜನೆಗಳ ಕುರಿತು ಅಪಪ್ರಚಾರ ಮಾಡಿತು ಎಂದು ಮಾಜಿ ಸಿಎಂ ಹರಿಹಾಯ್ದರು.
 

click me!