ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ವಿರುದ್ಧ ಹರಿಹಾಯ್ದ ಪ್ರಮೋದ್ ಮುತಾಲಿಕ್| ರಾಜ್ಯ ರಾಜಕೀಯ ಅಸಹ್ಯಕರ ಎಂದ ಶ್ರೀರಾಮಸೇನೆ ಮುಖ್ಯಸ್ಥ| ಮೂರೂ ಪಕ್ಷಗಳನ್ನು ತಿರಸ್ಕರಿಸುವ ಕಾಲ ಸನ್ನಿಹಿತ ಎಂದ ಮುತಾಲಿಕ್| ಹಿಂದುತ್ವ ಮರೆತಿರುವ ಬಿಜೆಪಿಗೆ ತಕ್ಕ ಪಾಠ ಕಲಿಸಲು ಕರೆ| ಜನರ ತೆರಿಗೆ ಹಣದಿಂದ ರೆಸಾರ್ಟ್ ರಾಜಕೀಯ ಎಂದು ಗುಡುಗಿದ ಮುತಾಲಿಕ್
ಉಡುಪಿ(ಫೆ.10): ರಾಜ್ಯ ರಾಜಕೀಯ ಅಸಹ್ಯವಾಗಿದ್ದು, ದೇಶ ಹಾಗೂ ರಾಜ್ಯದ ಅಭಿವೃದ್ಧಿ ಹಿತಾದೃಷ್ಠಿಯಿಂದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷವನ್ನು ಜನರು ತಿರಸ್ಕರಿಸುವ ಕಾಲ ಸನ್ನಿಹಿತವಾಗಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಧರ್ಮ ಸಭೆಯ ಅಂಗವಾಗಿ ಉಡುಪಿಗೆ ಆಗಮಿಸಿರುವ ಮುತಾಲಿಕ್, ಒಬ್ಬರು ಆಡಿಯೋ ಬಿಡುಗಡೆ ಮಾಡುತ್ತಾರೆ. ಇನ್ನೊಬ್ಬರು ನಾಳೆ ವೀಡಿಯೊ ಬಿಡುಗಡೆ ಮಾಡುತ್ತೇನೆ ಎನ್ನುತ್ತಾರೆ. ಇಂತಹ ಹೊಲಸು ರಾಜಕೀಯ ವಾತಾವರಣದಲ್ಲಿ ನಾವು ಬದುಕುತ್ತಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.
undefined
ಇದೇ ವೇಳೆ ಬಿಜೆಪಿ ವಿರುದ್ಧ ಗುಡುಗಿದ ಮುತಾಲಿಕ್, ನಿಮ್ಮ ಬಳಿ ವೀಡಿಯೋ ಇದ್ದು ಮೊದಲೇ ಯಾಕೆ ಬಿಡುಗಡೆ ಮಾಡಿಲ್ಲ? ನೀವು ಸತ್ಯವಂತರು ಹಾಗೂ ನ್ಯಾಯದ ಪರವಾಗಿದ್ದರೆ ನ್ಯಾಯಾಲಯಕ್ಕೆ ಹೋಗಿ ಎಂದು ಸವಾಲು ಹಾಕಿದರು.
ಜನಸಂಘ ಕಾಲದ ಬಿಜೆಪಿಯ ಪ್ರಾಮಾಣಿಕತೆ ಈಗ ಎಲ್ಲಿಗೆ ಹೋಗಿದೆ ಎಂದು ಪ್ರಶ್ನಿಸಿದ ಮುತಾಲಿಕ್, ಹಿಂದುತ್ವದ ಹೋರಾಟ ಮರೆತಿರುವ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದು ಹೇಳಿದರು.
ಜನಪ್ರತಿನಿಧಿಗಳು ಅಧಿಕಾರದ ಆಸೆಗಾಗಿ ಕೋಟಿ ಕೋಟಿ ಡೀಲ್ ಮಾಡಿಕೊಳ್ಳುತ್ತಿದ್ದಾರೆ. ಆ ಹಣ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಾಯಕರ ಅಪ್ಪನ ಹಣವೇ? ಈ ರಾಜ್ಯದ ಜನ ಕೊಟ್ಟಿರುವ ತೆರಿಗೆ ಹಣ ರೆಸಾರ್ಟ್ ಮತ್ತು ಡೀಲ್‍ಗೆ ದುರುಪಯೋಗ ಆಗುತ್ತಿದೆ ಎಂದು ವಾಗ್ದಾಳಿ ಮುತಾಲಿಕ್ ನಡೆಸಿದರು.