Save Soil: ಮಾನವನ ಸಂತೋಷದಿಂದ ಮಣ್ಣಿನ ಅವನತಿ: ಸದ್ಗುರು

Published : Jun 11, 2022, 03:20 AM IST
Save Soil: ಮಾನವನ ಸಂತೋಷದಿಂದ ಮಣ್ಣಿನ ಅವನತಿ: ಸದ್ಗುರು

ಸಾರಾಂಶ

ಮನುಷ್ಯನ ಸಂತೋಷ ಮತ್ತು ಯೋಗಕ್ಷೇಮ ಮನಸ್ಥಿತಿಯೇ ಮಣ್ಣಿನ ಅವನತಿಗೆ ಕಾರಣವಾಗಿದೆ ಎಂದು ಈಶ ಫೌಂಡೇಶನ್‌ನ ಸದ್ಗುರು ತಿಳಿಸಿದರು. ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರೊಂದಿಗೆ ಭೋಪಾಲ್‌ನಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದರು.

ಬೆಂಗಳೂರು (ಜೂ.11): ಮನುಷ್ಯನ ಸಂತೋಷ ಮತ್ತು ಯೋಗಕ್ಷೇಮ ಮನಸ್ಥಿತಿಯೇ ಮಣ್ಣಿನ ಅವನತಿಗೆ ಕಾರಣವಾಗಿದೆ ಎಂದು ಈಶ ಫೌಂಡೇಶನ್‌ನ ಸದ್ಗುರು ತಿಳಿಸಿದರು. ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರೊಂದಿಗೆ ಭೋಪಾಲ್‌ನಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಮಣ್ಣಿನ ಅವನತಿಗೆ ಎಲ್ಲೋ ಕುಳಿತಿರುವ, ಯಾವುದೋ ದುಷ್ಟಶಕ್ತಿ ಕಾರಣವಲ್ಲ. ಮಾನವರ ಸಂತೋಷ ಮತ್ತು ಯೋಗಕ್ಷೇಮದ ಅನ್ವೇಷಣೆಯಿಂದಾಗಿ ಮಣ್ಣು ವಿನಾಶವಾಗುತ್ತಿದೆ. ಜಗತ್ತಿನ ಪ್ರತಿಯೊಬ್ಬರೂ ತಿಳಿದೋ ತಿಳಿಯದೆಯೋ ಈ ವಿನಾಶದಲ್ಲಿ ಪಾಲುದಾರಾಗಿದ್ದಾರೆ. 

ಇದಕ್ಕೆ ಪರಿಹಾರವಾಗಿ ನಾವೆಲ್ಲರೂ ಮಣ್ಣು ಉಳಿಸುವ ಕಾರ್ಯದಲ್ಲಿ ಪಾಲುದಾರರಾಗಬೇಕು. ಮಣ್ಣಿನ ವಿನಾಶಕ್ಕೆ ಯಾವುದೇ ಗಡಿಗಳಿಲ್ಲ. ಮಣ್ಣಿನ ವಿನಾಶ ತಡೆಯಲು ಎಲ್ಲರೂ ಒಗ್ಗಟ್ಟಿನಿಂದ ದನಿಗೂಡಲೇ ಬೇಕಿದೆ. ಈ ಮೂಲಕ ಮುಂದೆ ನಡೆಯುವ ಮಣ್ಣಿನ ವಿನಾಶ ದುರಂತವನ್ನು ತಡೆಯುವ ಪೀಳಿಗೆ ನಮ್ಮದಾಗಬೇಕಿದೆ ಎಂದು ಅಭಿಪ್ರಾಯಪಟ್ಟರು. ಬಳಿಕ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಮಾತನಾಡಿ, ಸದ್ಗುರುಗಳು ನಮಗೆ ನೀಡಿದ ಕಾರ್ಯನೀತಿಯ ಕೈಪಿಡಿಯನ್ನು ಸ್ವೀಕರಿಸಿದ್ದೇನೆ. ಈ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಲಾಗುತ್ತದೆ. 

ಮಣ್ಣು ಉಳಿಸಿ: ಸದ್ಗುರು ಜತೆ ಯೋಗಿ ಸರ್ಕಾರ ಒಪ್ಪಂದ

ರಾಜ್ಯದ ಮಣ್ಣಿನಲ್ಲಿ ಶೇ.3-6ರಷ್ಟು ಜೈವಿಕ ಅಂಶವನ್ನು ಕಾಯ್ದುಕೊಳ್ಳಲು ಸಂಪೂರ್ಣ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತೇವೆ. ಪ್ರಸ್ತುತ ರಾಜ್ಯದ 7.5 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ರಾಸಾಯನಿಕ ಗೊಬ್ಬರಗಳನ್ನು ಬಳಸದೆ, ಜೈವಿಕ ಕೃಷಿಯನ್ನು ಅಳವಡಿಸಿಕೊಳ್ಳುತ್ತಿರುವ ಬಗ್ಗೆ ವಿವರಿಸಿದರು. ಸದ್ಗುರುಗಳು ಒಬ್ಬ ಆಧ್ಯಾತ್ಮಿಕ ವ್ಯಕ್ತಿಯಾದರೂ, ಅವರು ಪರಿಸರ ಕಾಳಜಿ ಶ್ಲಾಘನೀಯ ಎಂದರು. ಸಾವಿರಾರು ಜನತೆಯ ಸಮ್ಮುಖದಲ್ಲಿ ಸದ್ಗುರುಗಳು ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರಿಗೆ ಮಣ್ಣು ಉಳಿಸಿ ಕಾರ್ಯನೀತಿಯ ಕೈಪಿಡಿಯನ್ನು ನೀಡಿದರು.

ಮಣ್ಣಿನ ನಾಶ ಸಂಪೂರ್ಣ ನಿಲ್ಲುವವರೆಗೂ ಧ್ವನಿ ಎತ್ತಿ: ಸದ್ಗುರು

ರಾಜ್ಯ ಯಾತ್ರೆ: ಯುರೋಪ್‌, ಮಧ್ಯ ಏಷ್ಯಾ ಬೈಕ್‌ ಯಾತ್ರೆ ಬಳಿಕ ಭಾರತದ 9 ರಾಜ್ಯಗಳಲ್ಲಿ ತಮ್ಮ ಯಾತ್ರೆಯನ್ನು ಸದ್ಗುರು ಮುಂದುವರೆಸಿದ್ದಾರೆ. ಗುಜರಾತ್‌, ರಾಜಸ್ಥಾನ, ಹರಿಯಾಣ ಮತ್ತು ನವದೆಹಲಿಗೆ ಭೇಟಿ ನೀಡಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಈಗಾಗಲೇ ಗುಜರಾತ್‌ ಮತ್ತು ರಾಜಸ್ಥಾನ ಸರ್ಕಾರಗಳು ತಮ್ಮ ರಾಜ್ಯದಲ್ಲಿ ಮಣ್ಣು ಉಳಿಸಲು ಒಡಂಬಡಿಕೆಗೆ ಸಹಿ ಹಾಕಿವೆ. ಅಭಿಯಾನವು ಇಲ್ಲಿಯವರೆಗೆ 250 ಕೋಟಿ ಜನರನ್ನು ತಲುಪಿದೆ, ಜೊತೆಗೆ 74 ದೇಶಗಳು ತಮ್ಮ ರಾಷ್ಟ್ರಗಳ ಮಣ್ಣನ್ನು ಉಳಿಸಲು ಕಾರ್ಯ ನಿರ್ವಹಿಸಲು ಸಿದ್ಧವಾಗಿವೆ. ಉತ್ತರ ಪ್ರದೇಶದ 25 ಜಿಲ್ಲೆಗಳ 300ಕ್ಕೂ ಹೆಚ್ಚು ಶಾಲೆಗಳ 65,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಧಾನಿಯವರಿಗೆ ಪತ್ರ ಬರೆದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌