ರಾಜ್ಯದಲ್ಲಿ ತಾಲೂಕು ಪಂಚಾಯತ್ ರದ್ಧತಿ : ಸಚಿವರಿಂದ ಸ್ಪಷ್ಟನೆ

By Suvarna NewsFirst Published Feb 7, 2021, 12:03 PM IST
Highlights

ರಾಜ್ಯದಲ್ಲಿ ಈಗಾಗಲೇ ತಾಲೂಕು ಪಂಚಾಯತ್ಗಳ ನಿಷೇಧದ ಬಗ್ಗೆ ಮಾತುಗಳು ಕೇಳಿಬರುತ್ತಿದ್ದು, ಈ ಬಗ್ಗೆ ಸ್ವತಃ ಸಚಿವರೇ ಸ್ಪಷ್ಟನನೀಡಿದ್ದಾರೆ. 

ಶಿರಸಿ (ಫೆ.07) : ತಾಲೂಕು ಪಂಚಾಯತ್ ರದ್ಧತಿ ಕೇವಲ ಊಹಾಪೋಹ. ಅದನ್ನು ರದ್ದು ಮಾಡಲು ರಾಜ್ಯ ಸರ್ಕಾರದಿಂದ ಸಾಧ್ಯವಿಲ್ಲ. ಆದ ಕಾರಣ ಈ ಬಾರಿಯೂ ಮೂರು ವಿಭಾಗದ ಪಂಚಾಯತ್ ರಾಜ್ ವ್ಯವಸ್ಥೆಯಡಿಯಲ್ಲಿಯೇ ಚುನಾವಣೆ ನಡೆಯಲಿದೆ ಎಂದು ಕಾರ್ಮಿಕ ಮತ್ತು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
 
ಶಿರಸಿಯಲ್ಲಿ ಮಾತನಾಡಿದ ಅವರು, ತಾಲೂಕು ಪಂಚಾಯತ್ ರದ್ಧತಿಗೆ ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ. ಇದನ್ನು ಗ್ರಾಮೀಣಾಭಿವೃದ್ಧಿ ಸಚಿವರೂ ತಿಳಿಸಿದ್ದಾರೆ ಎಂದರು.

ರಾಜ್ಯದಲ್ಲಿ ತಾಲೂಕು ಪಂಚಾಯತ್‌ಗಳ ರದ್ದತಿ ? ...

ಈಗಾಗಲೇ ತಾಲೂಕು ಪಂಚಾಯತ್ ರದ್ಧತಿ ಬಗ್ಗೆ ಮಾತುಗಳು ಕೇಳಿ ಬಂದಿದ್ದು ಈ ನಿಟ್ಟಿನಲ್ಲಿ, ಆದರೆ ಇದ್ಯಾವ ಚಿಂತನೆಯೂ ಇಲ್ಲ ಎಂದರು. ಅಲ್ಲದೇ ಮುಂದಿನ ಚುನಾವಣೆಯಲ್ಲಿ ತಾಲೂಕ್ ಪಂಚಾಯತ್, ಜಿಲ್ಲಾ ಪಂಚಾಯತ್‌ಗೆ ಚುನಾವಣೆ ನಡೆಯಲಿದೆ ಎಂದರು. 

ತಾವು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿ ಒಂದು ವರ್ಷವಾದ ಕುರಿತು ಮಾತನಾಡಿದ ಅವರು, ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ಇನ್ನೂ ಹಲವು ಕೆಲಸಗಳನ್ನು ಮಾಡಬೇಕಾಗಿದೆ. ಜನ ನಮ್ಮಿಂದ ಬಹಳ ಅಪೇಕ್ಷೆ ಇಟ್ಟುಕೊಂಡಿದ್ದು, ಅದಕ್ಕೆ ತಕ್ಕಂತೆ ಕೆಲಸ ಮಾಡುತ್ತೇನೆ ಎಂದರು. 

click me!