Shivamogga: ರಂಜಾನ್‌ ಪ್ರಾರ್ಥನೆ ಬೆನ್ನಲ್ಲೇ ಡಿಸಿ ಕಚೇರಿ ಎದುರಿನ ಖಾಲಿ ಜಾಗಕ್ಕೆ ಬೇಲಿ ಹಾಕಿದ ಮುಸ್ಲಿಂ ಸಮುದಾಯ!

ಶಿವಮೊಗ್ಗದಲ್ಲಿ ವಕ್ಫ್ ಆಸ್ತಿ ವಿವಾದ ಭುಗಿಲೆದ್ದಿದ್ದು, ಡಿಸಿ ಕಚೇರಿ ಎದುರಿನ ಮೈದಾನಕ್ಕೆ ಬೇಲಿ ಹಾಕಲಾಗಿದೆ. ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ.


ಶಿವಮೊಗ್ಗ(ಮಾ.2): ಕೇಂದ್ರ ಸರ್ಕಾರ ಇಂದು ಸಂಸತ್ತಿನಲ್ಲಿ ವಕ್ಫ್‌ ಮಸೂದೆ ಮಂಡನೆ ಆಗುತ್ತಿರುವ ನಡುವೆಯೇ, ಶಿವಮೊಗ್ಗದಲ್ಲಿ ವಕ್ಫ್‌ ಆಸ್ತಿ ವಿವಾದ ಬುಗಿಲೆದ್ದಿದೆ. ಶಿವಮೊಗ್ಗದ ಡಿಸಿ ಕಚೇರಿ ಎದುರಿಗೆ ಇರುವ 32 ಗುಂಟೆ, ಖಾಲಿ ಮೈದಾನಕ್ಕೆ ಮುಸ್ಲಿಮರು ಬೇಲಿ ಹಾಕಿದ್ದಾರೆ.  ಸುಮಾರು 32,670 ಚದರ ಅಡಿ ವಕ್ಫ್ ಆಸ್ತಿ ಎಂದು ಬೇಲಿ ಹಾಕಲಾಗಿದೆ. ರಂಜಾನ್ ಪ್ರಾರ್ಥನೆ ಬಳಿಕ ಪಾಲಿಕೆ ಜಾಗಕ್ಕೆ ಬೇಲಿ ನಿರ್ಮಿಸಲಾಗಿದೆ ಹಿಂದೂ ಪರ ಸಂಘಟನೆಗಳು ಆಕ್ರೋಶ ಹೊರಹಾಕಿವೆ.

10 ಅಡಿ ಎತ್ತರದ ಬೇಲಿ ನಿರ್ಮಿಸಿ ವಾಹನ ಮತ್ತು ಸಾರ್ವಜನಿಕ ಪ್ರವೇಶಕ್ಕೆ ಜಾಮಿಯಾ ಮಸೀದಿ ಕಮಿಟಿ ನಿಷೇಧ ಹೇರಿದೆ. ಇದು ನಗರ ಪಾಲಿಕೆಗೆ ಸೇರಿದ ಜಾಗ ಮುಸ್ಲಿಮರ ಪ್ರಾರ್ಥನೆಗೆ ನಾವು ಅಡ್ಡಿ ಪಡಿಸಿಲ್ಲ ಏಕಾಏಕಿ ಬೇಲಿ ಹಾಕಿದ್ದು ಸರಿಯಲ್ಲ ಎಂದ ಹಿಂದೂಪರ ಸಂಘಟನೆ ಪ್ರಮುಖರು ಹೇಳಿದ್ದಾರೆ.ವಿ ಎಚ್ ಪಿ ರಮೇಶ್ ಬಾಬು, ಬಜರಂಗದಳದ ದೀನದಯಾಳು ಮೊದಲಾದವರ ನೇತೃತ್ವದಲ್ಲಿ ಬೇಲಿ ತೆರವಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗಿದೆ.

ವಿವಾದದ ಹಿನ್ನೆಲೆಯಲ್ಲಿ ಎಸ್‌ಪಿ ಮಿಥುನ್‌ ಕುಮಾರ್‌ ಸ್ಥಳಕ್ಕೆ ಆಗಮಿಸಿದ್ದರು. ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಗಮನಿಸಿದ ಎಸ್‌ಪಿ  ಸಂಜೆಯೊಳಗೆ ಬೇಲಿ ತೆರೆವುಗೊಳಿಸುವ ಭರವಸೆ ನೀಡಿದ್ದಾರೆ. ವಿವಾದದ ಹಿನ್ನೆಲೆ ಮೈದಾನದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಎಸ್ ಪಿ ಕಚೇರಿಯಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ಹಾಗೂ ಸಂಘಟನೆಗಳೊಂದಿಗೆ ಮಿಥುನ್‌ ಕುಮಾರ್‌ ಮಾತುಕತೆ ನಡೆಸಿದ್ದಾರೆ.

Latest Videos

ವಕ್ಫ್ ಆಸ್ತಿ ವಿವಾದವನ್ನು ಡಿಸಿ  ಜೊತೆ ಸಭೆ ನಡೆಸಿದ ಬಳಿಕ ತೀರ್ಮಾನ ಕೈಗೊಳ್ಳುವಂತೆ ಮುಸ್ಲಿಂ ಮುಖಂಡರಿಗೆ ಎಸ್‌ಪಿ ಸೂಚನೆ ನೀಡಿದ್ದಾರೆ. ಸಂಜೆ ವೇಳೆಗೆ ಪೊಲೀಸ್ ಭದ್ರತೆಯಲ್ಲಿ ಪಾಲಿಕೆ ಸಿಬ್ಬಂದಿಯಿಂದ ಬೇಲಿ ತೆರವು ಮಾಡಲಾಗಿದೆ. ಜಾಮಿಯಾ ಮಸೀದಿ ಸಮಿತಿಯವರು ಹಾಕಿದ್ದ ಬೇಲಿ ತೆರುವುಗೊಳಿಸಿ ಅದೇ ಜಾಗದಲ್ಲಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದಾರೆ. ಬೇಲಿ ತೆರವು ವೇಳೆ ಮೈದಾನದ ಸುತ್ತಮುತ್ತಲಿನ ಅಂಗಡಿ ಮುಗ್ಗಟ್ಟುಗಳನ್ನು  ಪೊಲೀಸರು ಬಂದ್‌ ಮಾಡಿಸಿದ್ದರು.

ಏನಿದು ವಿವಾದ: ಈ ಖಾಲಿ ಮೈದಾನದ ಒಂದು ಭಾಗದಲ್ಲಿ 10 ಅಡಿ ಉದ್ದ ಮತ್ತು ಎತ್ತರ ಹಾಗೂ ಎರಡು ಅಡಿ ಅಗಲವಿರುವ ಈದ್ಗಾ ಗೋಡೆ ಇದೆ. ಇದೇ ಜಾಗದಲ್ಲಿ ವರ್ಷದಲ್ಲಿ ಎರಡು ಬಾರಿ ರಂಜಾನ್ ಮತ್ತು ಬಕ್ರೀದ್ ಹಬ್ಬಗಳಂದು ಮುಸ್ಲಿಮರು ಪ್ರಾರ್ಥನೆ ಮಾಡುತ್ತಾರೆ. ಇದೀಗ ಈ ಜಾಗ ವಕ್ಫ್ ಗೆ ಸೇರಿದ್ದು ಎಂದು ಮುಸ್ಲಿಂ ಸುನ್ನಿ ಜಮಾತೆಯ ಜಾಮಿಯಾ ಮಸೀದಿ ಕಮಿಟಿ ವಾದ ಮಾಡಿದೆ.

2019ರಲ್ಲಿ 30 ಗುಂಟೆಯ  ಸುಮಾರು 32,670 ಚದರ ಅಡಿ ಜಾಗ ವಕ್ಫ್ ಹೆಸರಿಗೆ ಖಾತೆಯಾಗಿದೆ. ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಹೆಸರಿನಲ್ಲಿ  ವಕ್ಫ್ ಹೆಸರಿಗೆ ಖಾತೆ ಇದೆ . ಕಳೆದ ನಾಲ್ಕೈದು ವರ್ಷಗಳಿಂದ ಕಂದಾಯ ಪಾವತಿ ಮಾಡುತ್ತಿದ್ದೇವೆ ಎಂದು ಮುಸ್ಲಿಂ ಜಮಾತೆ ಹೇಳುತ್ತಿದ. ಇದು ವಕ್ಫ್ ಆಸ್ತಿ ಎಂದುಮುಸ್ಲಿಂ ಸಂಘಟನೆಗಳು ಹಕ್ಕು ಮಂಡನೆ ಮಾಡಿದ. 

ಧರ್ಮದ ಆಧಾರದಲ್ಲಿ ಮೀಸಲಿಗೆ ಅವಕಾಶವಿಲ್ಲ : ಆರ್‌ಎಸ್‌ಎಸ್‌ ಸರ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ

ಇನ್ನೊಂದೆಡೆ ಇದು ಮಹಾನಗರ ಪಾಲಿಕೆಗೆ ಸೇರಿದ ಜಾಗ. ವರ್ಷದಲ್ಲಿ ಎರಡು ಬಾರಿ ಮಾತ್ರ ಮುಸ್ಲಿಮರಿಗೆ ಪ್ರಾರ್ಥನೆಗೆ ಅವಕಾಶ ಎಂದು ಹಿಂದೂಪರ ಸಂಘಟನೆಗಳು ಹೇಳುತ್ತಿವೆ. ಈ ವಿವಾದವನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸುದಾಗಿ ಹೇಳಿದ ಹಿಂದೂಪರ ಸಂಘಟನೆ ಮುಖಂಡರು ತಿಳಿಸಿದ್ದಾರೆ. ಯಾರದೋ ಒತ್ತಡಕ್ಕೆ ಮಣಿದು ಅಧಿಕಾರಿಗಳು ಕೆಲಸ ಮಾಡಿದ್ದಾರೆ ಎಂದು ಹಿಂದೂ ಪರ ಸಂಘಟನೆಗಳ ಆರೋಪಿಸಿದ್ದಾರೆ.

ಸೌಹಾರ್ದತೆ ನೆಲೆಸಲು ಯಾವ ಹಂತಕ್ಕೂ ಹೋಗಲು ನಾನು ಸಿದ್ಧ: ಯು.ಟಿ. ಖಾದರ್‌

ಸಾರ್ವಜನಿಕ ಜಾಗಕ್ಕೆ ಮುಕ್ತ ಅವಕಾಶ ಕಲ್ಪಿಸುವಂತೆ ಸಂಘಟನೆಗಳ ಆಗ್ರಹಿಸಿದ್ದು, ಇಂದು ಡಿಸಿ ಗುರುದತ್ತ ಹೆಗಡೆ ನೇತೃತ್ವದಲ್ಲಿ ಮುಸ್ಲಿಂ ಸಂಘಟನೆಗಳ ಜೊತೆ ಸಭೆ ನಡೆಯಲಿದ. ಸಭೆಯಲ್ಲಿ  ವಕ್ಫ್ ವಿವಾದದ ಬಗ್ಗೆ  ಡಿಸಿ ಗುರುದತ್ತ ಹೆಗಡೆ  ಚರ್ಚೆ ನಡೆಸಲಿದ್ದಾರೆ. ವಕ್ಫ್ ವಿವಾದದ ಹಿನ್ನೆಲೆ ಮೈದಾನದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

click me!