ಶಿವಮೊಗ್ಗದಲ್ಲಿ ₹1 ಕೋಟಿ ಮೌಲ್ಯದ 335 ಅಡಿಕೆ ಚೀಲವುಳ್ಳ ಲಾರಿ ಕದ್ದ ಅಮೀರ್, ಸುಭಾನ್, ಫಯಾಜ್, ಸಾಧಿಕ್ ಅರೆಸ್ಟ್!

Published : Jan 17, 2025, 01:42 PM IST
ಶಿವಮೊಗ್ಗದಲ್ಲಿ ₹1 ಕೋಟಿ ಮೌಲ್ಯದ 335 ಅಡಿಕೆ ಚೀಲವುಳ್ಳ ಲಾರಿ ಕದ್ದ ಅಮೀರ್, ಸುಭಾನ್, ಫಯಾಜ್, ಸಾಧಿಕ್ ಅರೆಸ್ಟ್!

ಸಾರಾಂಶ

ಶಿವಮೊಗ್ಗದಲ್ಲಿ 1.22 ಕೋಟಿ ಮೌಲ್ಯದ 335 ಅಡಿಕೆ ಚೀಲಗಳನ್ನು ಹೊತ್ತ ಲಾರಿ ಕಳ್ಳತನವಾಗಿತ್ತು. ಈ ಕೇಸಿಗೆ ಸಂಬಂಧಿಸಿದಂತೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿ, ಲಾರಿ ಮತ್ತು ಅಡಿಕೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಶಿವಮೊಗ್ಗ (ಜ.17): ಕಳೆದ ತಿಂಗಳು 1.22 ಕೋಟಿ ಮೌಲ್ಯದ 335 ಅಡಿಕೆ ಚೀಲಗಳನ್ನು ಹೊಂದಿದ್ದ ಲೋಡ್ ಲಾರಿಯನ್ನು ಗುಜರಾತ್‌ಗೆ ಕಳಿಸಿದರೆ, ಐದು ಜನ ಬಂಧಿತ ಆರೋಪಿಗಳು ಅಡಿಕೆ ಸಮೇತ ಲಾರಿಯನ್ನೇ ಕದ್ದು ಪರಾರಿ ಆಗಿದ್ದರು. ಗುಜರಾತ್‌ಗೆ ಹೋಗಬೇಕಿದ್ದ ಲಾರಿಯನ್ನು ಹೊಳಲ್ಕೆರೆಯಲ್ಲಿ ನಿಲ್ಲಿಸಿ ಎಲ್ಲ ಅಡಿಕೆ ಚೀಲಗಳನ್ನು ಮಾರಾಟ ಮಾಡುವುದಕ್ಕೆ ಮೂದಾಗಿದ್ದರು. ಆದರೆ, ಅಡಿಕೆ ಮಾರಾಟಗಾರರ ಮೇಲೆ ಕಣ್ಣಿಟ್ಟಿದ್ದ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ಶಿವಮೊಗ್ಗದಲ್ಲಿ ಒಂದು ಲಾರಿ ಲೋಡು ಅಡಿಕೆ ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ, ತೀರ್ಥಹಳ್ಳಿ, ಚಿಕ್ಕಮಗಳೂರು, ಕಡೂರಿನಲ್ಲಿ ಐವರು ಆರೋಪಿಗಳನ್ನು ಬೀರೂರು ಪೊಲೀಸರು ಬಂಧಿಸಿದ್ದಾರೆ. ಈ ಖದೀಮರು 335 ಚೀಲ ಅಡಿಕೆ ಚೀಲವನ್ನು ತುಂಬಿರುವ ಒಂದು ಲೋಡೆಡ್ ಟ್ರಕ್ ಮತ್ತು 2.3 ಲಕ್ಷ ರೂ. ನಗದು ಸೇರಿದಂತೆ ಪ್ರಕರಣದಲ್ಲಿ 1.22 ಕೋಟಿ ರೂ. ಮೌಲ್ಯದ ಸ್ವತ್ತನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ತೀರ್ಥಹಳ್ಳಿಯ ಅಮೀರ್ ಹಮ್ಮದ್ (38), ಶಿವಮೊಗ್ಗದ ಟಿಪ್ಪು ನಗರದ ಮಹಮ್ಮದ್ ಘೌಸ್ (30), ಶಿವಮೊಗ್ಗದ ಮಹಮ್ಮದ್ ಸುಭಾನ್ ಗಬ್ಬರ್ (24), ಶಿವಮೊಗ್ಗದ ಮಹಮ್ಮದ್ ಫಯಾಜ್ (29) ಮತ್ತು ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಮಹಮ್ಮದ್ ಸಾದಿಕ್ (42) ಬಂಧಿತರಾಗಿದ್ದಾರೆ. 

ಕಳೆದ ಡಿಸೆಂಬರ್‌ನಲ್ಲಿ ಕಡೂರು ತಾಲ್ಲೂಕಿನ ಬೀರೂರಿನಿಂದ ಗುಜರಾತಿಗೆ ತಲಾ 79 ಕೆಜಿ ತೂಕದ 350 ಅಡಿಕೆ ಚೀಲ ತುಂಬಿದ್ದ ಲಾರಿಯನ್ನು  ಐವರು ಕಳ್ಳರು ಸೇರಿಕೊಂಡು ಪ್ಲ್ಯಾನ್ ಮಾಡಿ ಕಳ್ಳತನ ಮಾಡಿದ್ದರು. ಬೀರೂರಿನ ದೇವಗಿರಿ ಟ್ರೇಡರ್ಸ್‌ನಿಂದ 350 ಚೀಲ ಹೊತ್ತು  ಗುಜರಾತ್‌ಗೆ ಹೊರಟಿದ್ದ ಟ್ರಕ್ ಅನ್ನು ಆರೋಪಿಗಳು ಅಜ್ಞಾತ ಸ್ಥಳಕ್ಕೆ ಕೊಂಡೊಯ್ದಿದ್ದರು. ಬಳಿಕ ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದರು. ಅಡಿಕೆ ವಿಚಾರದಲ್ಲಿ ಆರೋಪಿಗಳು ಹಲವು ಕಥೆಗಳನ್ನು ಕಟ್ಟಿದ್ದರು. ಇದರಿಂದ ಸುಮಾರು 1 ಕೋಟಿ ರೂ. ಕಳೆದುಕೊಂಡ ಅಡಿಕೆ ವ್ಯಾಪಾರಿ ಪೊಲೀಸರ ಮೊರೆ ಹೋಗಿದ್ದರು.

ಇದನ್ನೂ ಓದಿ: ಶಿವಮೊಗ್ಗ ಮೃಗಾಲಯದ ಪ್ರವಾಸಿಗರ ನೆಚ್ಚಿನ ಹುಲಿ ಅಂಜನಿ ಇನ್ನಿಲ್ಲ

ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮಾಡಿದಾಗ ಆರೋಪಿಗಳು ಅಡಿಕೆ ಕದಿಯುವುದಕ್ಕೆ ಹೊಂಚು ಹಾಕಿದ್ದರು. ಅದರಂತೆ, ಲಾರಿ ಡ್ರೈವರ್‌ನನ್ನು ಬಲೆಗೆ ಬೀಳಿಸಿಕೊಂಡು ಬೀರೂರಿನಿಂದ ಹೊರಟಿದ್ದ ಲಾರಿಯನ್ನು ಗುಜರಾತ್‌ಗೆ ಬದಲಾಗಿ ಹೊಳಲ್ಕೆರೆಗೆ ತೆಗೆದುಕೊಂಡು ಹೋಗಿದ್ದರು. ಅಲ್ಲಿ ಅಡಿಕೆ ಅನ್‌ಲೋಡ್ ಮಾಡಿ, ಸುಮಾರು 1 ಕೋಟಿ ಮೌಲ್ಯದ ಅಡಿಕೆ ಮಾಲನನ್ನು ಅಲ್ಲಿನ ವ್ಯಾಪಾರಿಗಳಿಗೆ ಮಾರಾಟ ಮಾಡಲು ಯತ್ನಿಸಿದ್ದರು. ಆದರೆ, ಅಡಿಕೆ ಕಳವಾಗಿರುವ ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು, ಬೃಹತ್ ಮೊತ್ತದ ಅಡಿಕೆ ಮಾಡಲು ಮಾರುಕಟ್ಟೆಗೆ ತಂದವರನ್ನು ಪರಿಶೀಲಿಸಿದಾಗ ಕಳ್ಳಲು ಸಿಕ್ಕಿಬಿದ್ದಿದ್ದಾರೆ. ಈ ಸಂಬಂಧ ಆರೋಪಿಗಳನ್ನು ಬಂಧಿಸಿದ ಪೊಲೀಸರು  ತನಿಖೆ ನಡೆಸಿದ್ದಾರೆ. 

ಪೊಲೀಸರು ಬಂಧಿಸಿದ ಖತರ್ನಾಕ್ ಕಳ್ಳರು ಬೀರೂರಿನ ಅಡಿಕೆ ಲಾರಿ ಕದ್ದಿರುವುದು ಮಾತ್ರವಲ್ಲದೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೊಲೆ, ಕಳ್ಳತನ ಮತ್ತು ಸುಲಿಗೆ ಪ್ರಕರಣಗಳಲ್ಲಿ ಬೇಕಾಗಿದ್ದವರು ಎಂಬುದು ತಿಳಿದುಬಂದಿದೆ. ರಾಜ್ಯದ ಹಾಸನ, ಶಿವಮೊಗ್ಗ, ಉಡುಪಿ, ಉತ್ತರ ಕನ್ನಡ, ವಿಜಯನಗರ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧರೆ ಅಪರಾಧ ನಡೆಸಿದ್ದಾರೆ. ಇವರು ಹಲವು ಪ್ರಕರಣದ ಪ್ರಮುಖ ಆರೋಪಿಗಳು ಎಂಬುದು ತಿಳಿದಿದ್ದು, ಪೊಲೀಸರು ಎಲ್ಲ ಕೇಸುಗಳಿಗೆ ಸಂಬಂಧಿಸಿದಂತೆ ವಿಚಾರಣೆ ಮಾಡಿ ಬಾಯಿ ಬಿಡಿಸುತ್ತಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ: ಧೂಳು ಹಿಡಿದು ನಿಂತಿದ್ದ ಯುದ್ಧ ಟ್ಯಾಂಕರ್‌ಗೆ ಸ್ಥಳ ನಿಗದಿ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ
ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ