ಪ್ರಜಾಪ್ರಭುತ್ವದ ನಾಲ್ಕು ಅಂಗಗಳು ದುರ್ಬಲ; ಉಪಲೋಕಾಯುಕ್ತ ನ್ಯಾಯಮೂರ್ತಿ ಬೇಸರ

Published : Jan 17, 2025, 01:05 PM ISTUpdated : Jan 17, 2025, 01:17 PM IST
ಪ್ರಜಾಪ್ರಭುತ್ವದ ನಾಲ್ಕು ಅಂಗಗಳು ದುರ್ಬಲ; ಉಪಲೋಕಾಯುಕ್ತ ನ್ಯಾಯಮೂರ್ತಿ ಬೇಸರ

ಸಾರಾಂಶ

ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಪತ್ರಿಕಾರಂಗ ಸೇರಿದಂತೆ ಪ್ರಜಾಪ್ರಭುತ್ವದ ನಾಲ್ಕು ಅಂಗಗಳು ತಮ್ಮ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ. ನ್ಯಾಯಾಂಗದಲ್ಲಿ ಪ್ರಕರಣಗಳ ವಿಲೇವಾರಿ ವಿಳಂಬ, ಸುಳ್ಳು ಕೇಸ್‌ಗಳ ಹೆಚ್ಚಳ, ಸ್ವಾರ್ಥ ಹಾಗೂ ಮಾಧ್ಯಮಗಳಲ್ಲಿ ಅತ್ಯಾಚಾರ ಪ್ರಕರಣಗಳ ವೈಭವೀಕರಣದ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದರು.

ಬಳ್ಳಾರಿ (ಜ.17):  ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಪತ್ರಿಕಾ ರಂಗ ಸೇರಿದಂತೆ ಪ್ರಜಾಪ್ರಭುತ್ವ ನಾಲ್ಕು ಅಂಗಗಳು ತಮ್ಮ ಕಾರ್ಯಗಳ ಸಮಪರ್ಕವಾಗಿ ಮಾಡ್ತಿಲ್ಲ ದುರ್ಬಲವಾಗುತ್ತಿವೆ ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ  ಬೇಸರ ವ್ಯಕ್ತಪಡಿಸಿದರು.  

ಬಳ್ಳಾರಿಯಲ್ಲಿಂದು ಸಾರ್ವಜನಿಕ ಅಹವಾಲು, ಕುಂದುಕೊರತೆ ದೂರುಗಳ ಸ್ವೀಕಾರ ಕಾರ್ಯಕ್ರಮ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ಶಾಸಕಾಂಗ ಬಲಹೀನವಾಗಿದೆ. ಶಾಸಕಾಂಗದ ಕಾರ್ಯವೈಖರಿ ಬದಲಾಗಬೇಕಿದೆ. ಕಾರ್ಯಾಂಗದ ಕಾರ್ಯವೈಖರಿ ಬ್ರಿಟಿಷರ ಕಾಲ ಘಟ್ಟಕ್ಕೆ ಮರಳಿದೆ ವೇತನಕ್ಕೆ ತಕ್ಕಂತೆ ಯಾರೂ ಕೆಲಸ ಮಾಡ್ತಿಲ್ಲ. ಶಾಸಕಾಂಗ ಕಾರ್ಯಾಂಗದ ಅಸಹಕಾತೆಯಿಂದ  ಜನರು ನ್ಯಾಯಾಂಗದ ಕಡೆ ಬರುತ್ತಿದ್ದಾರೆ. ಅದ್ರೆ ನ್ಯಾಯಾಂಗ ವ್ಯವಸ್ಥೆಯಲ್ಲಿನ ಪ್ರಕರಣಗಳ ವಿಲೇವಾರಿ ವಿಳಂಬವಾಗ್ತಿದೆ. ದೇಶದಲ್ಲಿ 6ಕೋಟಿ ಪ್ರಕರಣ ಇನ್ನೂ ಬಾಕಿ ಇವೆ. 140 ಕೋಟಿ ಜನರಿಗೆ ನ್ಯಾಯಾಂಗ ವ್ಯವಸ್ಥೆಯಲ್ಲಿನ ಸಿಬ್ಬಂದಿ ವಕೀಲರು ಸಾಲುತ್ತಿಲ್ಲ. ಇನ್ನೂ ಪತ್ರಿಕಾರಂಗ ಕೂಡ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

Bengaluru: ಬಿಬಿಎಂಪಿ ಮೇಲೆ ಉಪಲೋಕಾಯುಕ್ತ ದಿಢೀರ್‌ ದಾಳಿ; ಅಮ್ಮನ ಬದಲು ಕಚೇರಿಯಲ್ಲಿ ಕೆಲಸ ಮಾಡ್ತಿದ್ದ ಮಗ!

ತೆಗೆದುಕೊಳ್ಳುವ ವೇತನಕ್ಕೆ ಐದು ಪರ್ಸೆಂಟ್ ಕೆಲಸ ಕಾರ್ಯಂಗದವರು ಮಾಡ್ತಿಲ್ಲ. ಇನ್ನೂ ಸುಳ್ಳು ಕೇಸ್ ಗಳು ಹೆಚ್ಚಾಗಿವೆ ಇದರಿಂದ ಪ್ರಾಮಾಣಿಕ ಪ್ರಕಾರಗಳಲ್ಲಿ ನೋವು ಸಮಸ್ಯೆ ಮಾಯವಾಗುತ್ತಿವೆ. ಸುಳ್ಳು ಕೇಸ್ ಹಾಕುವ ಮೂಲಕ ನ್ಯಾಯಂಗದ ದಿಕ್ಕು ತಪ್ಪಿಸಲಾಗ್ತಿದೆ. ಪ್ರಜಾಪ್ರಭುತ್ವದ ನಾಲ್ಕು ಅಂಗಗಳು ವೀಕ್ ಅಗಿದೆ.  ಪ್ರಪಂಚದಲ್ಲಿ ಸ್ವಾರ್ಥಿಗಳೇ ಹೆಚ್ಚಾಗಿ ತುಂಬಿ ಹೋಗಿದ್ದಾರೆ. ಸ್ವಾರ್ಥದ ಗಳಿಕೆಗಾಗಿ ಫ್ಯಾಕ್ಟರಿಗಳು ಕೆಟ್ಟ ನೀರನ್ನು ಕೆಮಿಕಲ್ ಹೊರ ಬಿಡ್ತಿವೆ ಕಲುಷಿತ ನೀರಿನಲ್ಲಿ ಭತ್ತ ಬೆಳೆಯುತ್ತಾರೆ ಅದನ್ನು ನಾವೇ ತಿನ್ನುತ್ತೇವೆ. ಈ ಬಗ್ಗೆ ಅಧಿಕಾರಿಗಳು ರೆಸ್ಪಾನ್ಸ್ ಇಲ್ಲ. ನಿಷ್ಠವಂತರಾಗಿ ಕೆಲಸ ಮಾಡಿ   ವರ್ಗಾವಣೆಯಾಗಬಹುದು ಕೆಲಸ ಕಳೆಯೋದಕ್ಕೆ ಯಾರಿಂದ ಸಾದ್ಯವಿಲ್ಲ. ಸ್ವಾರ್ಥದ ಪ್ರೇಮದ ಮುಂದೆ ಸ್ವಾತಂತ್ರ್ಯ ಪ್ರೇಮ ಮರೆಯಾಗಿದೆ. ಬಲಿಷ್ಠ ಸಂವಿಧಾನವಿದೆ ಕಾನೂನು ಇದೆ ಇದನ್ನು ಇಂಪ್ಲಿಮಿಂಟ್ ಅಗ್ತಿಲ್ಲ.

ವಕ್ಫ್‌ ಆಸ್ತಿ ದುರ್ಬಳಕೆ: 150 ಕೋಟಿ ಆಮಿಷ, ತನಿಖಾ ವರದಿ ಕಡತವೇ ಈಗ ನಾಪತ್ತೆ?

ಅತ್ಯಾಚಾರ ಅನಾಚಾರ ಮಾಧ್ಯಮದಲ್ಲಿ ವೈಭವೀಕರಣ ಮಾಡಲಾಗ್ತಿದೆ. ಹೆಣ್ಣು ಮಕ್ಕಳು ಬಗ್ಗೆ ಸಮಾಜದಲ್ಲಿನ ಧೋರಣೆ ಸರಿಯಾಗಿಲ್ಲ ಕೆಟ್ಟ ಸಮಾಜ ನಾವು ಸೃಷ್ಟಿ ಮಾಡ್ತಿದ್ದೇವೆ. ಪ್ರೀತಿ ಪ್ರೇಮ ಮರೆಯಾಗ್ತಿದೆ. ಪ್ರೀತಿ ಪ್ರೇಮ ಇಲ್ಲ ಸ್ವಾರ್ಥತೆ ಹೆಚ್ಚಾಗಿದೆ.  ಕೊರೊನಾ ವೇಳೆ ಜನರಲ್ಲಿ ಮನಸ್ಸಿನ ಸ್ಥಿತಿ ಸ್ವಲ್ಪ ಬದಲಾವಣೆಯಾಗಿತ್ತು. ಆದರೆ ಇದೀಗ ಮತ್ತೊಮ್ಮೆ ಜನರು ಸ್ವಾರ್ಥಿಗಳಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!
'ಅಫಿಡವಿಟ್‌ನಲ್ಲಿ ಡಿಕ್ಲೇರ್ ಮಾಡಿದ್ದರೂ ಟೀಕೆ 'ಚಿಲ್ಲರ್ ಕೆಲಸ': ಸಿಎಂ ಡಿಸಿಎಂ ದುಬಾರಿ ವಾಚ್ ಬಗ್ಗೆ ಬಿಜೆಪಿ ಹೇಳಿಕೆಗೆ ಕಾಶೆಪ್ಪನವರು ಕಿಡಿ