ಬೆಂಗಳೂರು ಮಾತ್ರವಲ್ಲ  ಶಿವಮೊಗ್ಗದಿಂದ ಗೋವಾ-ತಿರುಪತಿ-ಹೈದರಾಬಾದ್​ಗೂ ವಿಮಾನಯಾನ, ಬುಕ್ಕಿಂಗ್ ಆರಂಭ

By Gowthami K  |  First Published Oct 17, 2023, 10:55 AM IST

ಮಲೆನಾಡ ಜನತೆಗೆ ಮತ್ತೊಂದು ಸಂತಸದ ಸುದ್ದಿ ಇದೆ. ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಮಾತ್ರ ಇದ್ದ ವಿಮಾನಯಾನವನ್ನು ಇದೀಗ ಮತ್ತಷ್ಟು  ವಿಸ್ತರಣೆ ಮಾಡಲಾಗಿದೆ.  ಶಿವಮೊಗ್ಗದಿಂದ ಗೋವಾ, ತಿರುಪತಿ, ಹೈದರಾಬಾದ್​ಗೂ ವಿಮಾನಯಾನ  ಶುರುವಾಗಲಿದೆ. 


ಶಿವಮೊಗ್ಗ (ಅ.17): ಮಲೆನಾಡ ಜನತೆಗೆ ಮತ್ತೊಂದು ಸಂತಸದ ಸುದ್ದಿ ಇದೆ. ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಮಾತ್ರ ಇದ್ದ ವಿಮಾನಯಾನವನ್ನು ಇದೀಗ ಮತ್ತಷ್ಟು  ವಿಸ್ತರಣೆ ಮಾಡಲಾಗಿದೆ.  ಶಿವಮೊಗ್ಗದಿಂದ ಗೋವಾ, ತಿರುಪತಿ, ಹೈದರಾಬಾದ್​ಗೂ ನೇರ ವಿಮಾನಯಾನ ಸೇವೆ ಶುರುವಾಗಲಿದೆ. 

ಇಂಡಿಗೋ ವಿಮಾನಯಾನ ಸಂಸ್ಥೆ ಜೊತೆಗೆ ಸ್ಟಾರ್ ಏರ್ಲೈನ್ಸ್ ಸಂಸ್ಥೆ ಕೂಡ ಎಂಟ್ರಿ ಕೊಟ್ಟಿದ್ದು, ಶಿವಮೊಗ್ಗದಿಂದ ಗೋವಾ, ಹೈದರಾಬಾದ್ ಹಾಗೂ ತಿರುಪತಿಗೆ ಸಂಪರ್ಕ ಕಲ್ಪಿಸುತ್ತಿದೆ. ಹೀಗಾಗಿ ಇದೀಗ ಸ್ಟಾರ್ ಏರ್ಲೈನ್ಸ್ ನಿಂದ ಬುಕ್ಕಿಂಗ್ ಕೂಡ ಆರಂಭ ವಾಗಿದೆ. 

Tap to resize

Latest Videos

ಶಿವಮೊಗ್ಗದಿಂದ ತಿರುಪತಿ, ಗೋವಾ ಮತ್ತು ಹೈದರಾಬಾದ್‌ಗೆ ವಾರದಲ್ಲಿ ಆರು ದಿನ ವಿಮಾನಯಾನ ಸೇವೆ ಇರಲಿದೆ. ನವೆಂಬರ್‌ 17 ರಿಂದ ಸ್ಟಾರ್‌ ಏರ್‌ಲೈನ್ಸ್  ಸೇವೆ ಆರಂಭವಾಗುತ್ತಿದ್ದು, ಆಸಕ್ತರು ಸಂಸ್ಥೆಯ ವೆಬ್​ಸೈಟ್​ನಲ್ಲಿ ಟಿಕೆಟ್‌  ಬುಕ್ಕಿಂಗ್ ಮಾಡಿಕೊಳ್ಳಬಹುದು.\

ಶಿವಮೊಗ್ಗದಿಂದ ಗೋವಾ, ತಿರುಪತಿ ಮತ್ತು ಹೈದರಾಬಾದ್‌ಗೆ  ಈ ಚಳಿಗಾಲದ  ಅಕ್ಟೋಬರ್ 29 ರಿಂದ ಪ್ರಾರಂಭ ಮಾಡಲು ಚಿಂತನೆ ನಡೆಸಲಾಗಿದೆ. ಎಂದು ಸ್ಟಾರ್ ಏರ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿಮ್ರಾನ್ ಸಿಂಗ್ ತಿವಾನಾ ಹೇಳಿದ್ದಾರೆ.

ಕಲಬುರಗಿ- ಮಂಗಳೂರು ವಿಮಾನ ಸಂಚಾರ ಬಗ್ಗೆ ಚರ್ಚಿಸುವೆ: ಶೋಭಾ ಕರಂದ್ಲಾಜೆ

ಟಿಕೆಟ್‌ ದರ ಮಾಹಿತಿ:
ಗೋವಾ, ತಿರುಪತಿ ಹಾಗೂ ಹೈದ್ರಾಬಾದ್​ಗೆ ಸರಿಸುಮಾರು ಒಂದೆ ರೀತಿಯ ದರಪಟ್ಟಿ ಇದೆ.  ಇವತ್ತೇ ಬುಕ್​ ಮಾಡಿದರೆ, 12,305 ದಿಂದ  14,545 ರೂಪಾಯಿಗಳವರೆಗೆ ಟಿಕೆಟ್ ಲಭ್ಯವಿದೆ.

ಹೊರಡುವ ಸಮಯ ಮತ್ತು ತಲುಪುವ ಸಮಯ:
ವಿಮಾನ ಬೆಳಗ್ಗೆ 9.30ಕ್ಕೆ ಹೈದರಾಬಾದ್‌ನಿಂದ ಹೊರಡಲಿದೆ. ಬೆಳಗ್ಗೆ 10.35ಕ್ಕೆ ಶಿವಮೊಗ್ಗ ತಲುಪಲಿದೆ.
ಬೆಳಗ್ಗೆ 11ಕ್ಕೆ ಶಿವಮೊಗ್ಗದಿಂದ ಹೊರಟು ಮಧ್ಯಾಹ್ನ 12ಕ್ಕೆ ತಿರುಪತಿ ತಲುಪಲಿದೆ. 
ತಿರುಪತಿಯಿಂದ ಮಧ್ಯಾಹ್ನ 12.35ಕ್ಕೆ ಹೊರಟು ಮಧ್ಯಾಹ್ನ 1.40ಕ್ಕೆ ಶಿವಮೊಗ್ಗಕ್ಕೆ ಆಗಮಿಸಲಿದೆ. 
ಮಧ್ಯಾಹ್ನ 1.55ಕ್ಕೆ ಶಿವಮೊಗ್ಗದಿಂದ ಹೊರಟು ಮಧ್ಯಾಹ್ನ 2.45ಕ್ಕೆ ಗೋವಾ ತಲುಪಲಿದೆ.

ಏರ್ ಇಂಡಿಯಾ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ವರ್ಶ, ಮಾನವೀಯತೆ ಮೆರೆದ ಪಾಕಿಸ್ತಾನ!

779 ಎಕರೆ ವಿಸ್ತಾರದಲ್ಲಿ ನಿರ್ಮಿಸಿರುವ ವಿಮಾನ ನಿಲ್ದಾಣದಲ್ಲಿ ಮೂಲಯೋಜನೆಯ ವಿನ್ಯಾಸವನ್ನು ಪರಿಷ್ಕರಿಸಿ, ಏರ್‌ ಬಸ್-320 ಮಾದರಿಯ ವಿಮಾನಗಳು ಕೂಡ ಬಂದಿಳಿಯುವ ಮತ್ತು ರಾತ್ರಿ ವೇಳೆ ಇಳಿಯುವ ಸೌಲಭ್ಯಗಳನ್ನು ಕೂಡ ಕಲ್ಪಿಸಲಾಗುತ್ತಿದೆ. ಇನ್ನು ಸದ್ಯಕ್ಕೆ ಶಿವಮೊಗ್ಗದಿಂದ ಬೆಂಗಳೂರಿಗೆ ಕನೆಕ್ಟಿಂಗ್ ವಿಮಾನಯಾನ ಸೇವೆ ಲಭ್ಯವಿದೆ.  ಬೆಂಗಳೂರಿನಿಂದ ಚೆನ್ನೈ, ಮುಂಬೈ ಮತ್ತು ದೆಹಲಿಗೆ ತೆರಳಲಿರುವ ಇಂಡಿಗೋ ಸಂಸ್ಥೆಯ ವಿಮಾನಗಳ ಮೂಲಕ ಪ್ರಯಾಣವನ್ನು ಮುಂದುವರಿಸಲಾಗುತ್ತಿತ್ತು. ಇದೀಗ  ಸ್ಟಾರ್ ಏರ್ಲೈನ್ಸ್ ಸಂಸ್ಥೆ ಕೂಡ ಜೊತೆಯಾಗಿದೆ.  ಇನ್ನು ಮುಂದಿನ ಒಂದು ವರ್ಷ ಕಾಲ ಶಿವಮೊಗ್ಗ- ಬೆಂಗಳೂರು ನಡುವೆ ಪ್ರಯಾಣಿಸುವ ಪ್ರತಿಯೊಬ್ಬ ಪ್ರಯಾಣಿಕರ ಟಿಕೆಟ್ ಮೇಲೆ ರಾಜ್ಯ ಸರ್ಕಾರ   500 ರೂ ಸಬ್ಸಿಡಿ ನೀಡುತ್ತಿದೆ.

click me!