Latest Videos

ರಾಜ್ಯ ಸರ್ಕಾರದಿಂದ ಅಂಗವಿಕಲರ ನಿರ್ಲಕ್ಷ್ಯ; ಹೊಸಪೇಟೆಯಿಂದ ಬೆಂಗಳೂರಿಗೆ ಪಾದಾಯಾತ್ರೆ ಹೊರಟ ವಿಶೇಷಚೇತನರು   

By Ravi JanekalFirst Published Oct 17, 2023, 10:43 AM IST
Highlights

ಸಾಮಾನ್ಯವಾಗಿ ತಮಗೆ ಇರುವ ಸಮಸ್ಯೆ ಬಗ್ಗೆ ಹೋರಾಟ ಮಾಡೋದು , ಪ್ರತಿಭಟನೆ ಮಾಡೋದು ಅಥವಾ ಬೇಡಿಕೆ ಈಡೇರಿಕೆಗೆ ಪಾದಯಾತ್ರೆ ಮಾಡೋರನ್ನು ನೀವು ನೋಡಿರುತ್ತೀರಾ..ಆದ್ರೇ ಇಲ್ಲಿರೋ ಬಹುತೇಕರಿಗೆ ಕಣ್ಣು ಕಾಣೋದಿಲ್ಲ. ಆದ್ರೇ, ಅವರ ತಮ್ಮ ಸಮಸ್ಯೆ ಜೊತೆಗೆ ಸಾರಿಗೆ ನೌಕರರ, ಅಂಗನವಾಡಿ, ಹೋಮ್ ಗಾರ್ಡ್ ಅಶಾ ಕಾರ್ಯಕರ್ತೆರ ಸಮಸ್ಯೆಗಳ ಈಡೇರಿಕೆಗೆ ಹೊಸಪೇಟೆಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಮಾಡಿದ್ದಾರೆ. 

ವರದಿ : ನರಸಿಂಹ ಮೂರ್ತಿ ಕುಲಕರ್ಣಿ

 ಬಳ್ಳಾರಿ (ಅ.17): ಸಾಮಾನ್ಯವಾಗಿ ತಮಗೆ ಇರುವ ಸಮಸ್ಯೆ ಬಗ್ಗೆ ಹೋರಾಟ ಮಾಡೋದು , ಪ್ರತಿಭಟನೆ ಮಾಡೋದು ಅಥವಾ ಬೇಡಿಕೆ ಈಡೇರಿಕೆಗೆ ಪಾದಯಾತ್ರೆ ಮಾಡೋರನ್ನು ನೀವು ನೋಡಿರುತ್ತೀರಾ..ಆದ್ರೇ ಇಲ್ಲಿರೋ ಬಹುತೇಕರಿಗೆ ಕಣ್ಣು ಕಾಣೋದಿಲ್ಲ. ಆದ್ರೇ, ಅವರ ತಮ್ಮ ಸಮಸ್ಯೆ ಜೊತೆಗೆ ಸಾರಿಗೆ ನೌಕರರ, ಅಂಗನವಾಡಿ, ಹೋಮ್ ಗಾರ್ಡ್ ಅಶಾ ಕಾರ್ಯಕರ್ತೆರ ಸಮಸ್ಯೆಗಳ ಈಡೇರಿಕೆಗೆ ಹೊಸಪೇಟೆಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಮಾಡಿದ್ದಾರೆ. 

 ಪಾದಯಾತ್ರೆ ಮಾಡಲು ಕಣ್ಣಿಲ್ಲದೇ ಇದ್ರೇನು ಕಾಲಿದೆಯಲ್ಲ:

ಹೀಗೆ ಒಬ್ಬರ ಕೈ ಮತ್ತೊಬ್ಬರು ಹಿಡಿದುಕೊಂಡು ಹೋಗ್ತಿರೋ ವಿಶೇಷಚೇತನರು ತಮ್ಮ ಸಮಸ್ಯೆ ಅಷ್ಟೇ ಅಲ್ಲದೇ ಇತರರ ಸಮಸ್ಯೆಗೂ ಪಾದಯಾತ್ರೆ ಮೂಲಕ ಹೋರಾಟ ಮಾಡ್ತಿದ್ದಾರೆ. ಹೌದು ಹೊಸಪೇಟೆಯ ಪುನೀತ್ ರಾಜಕುಮಾರ ಪುತ್ತಳಿಗೆ ಮಾಲಾರ್ಪಣೆ ಮಾಡೋ ಮೂಲಕ ಅವರ ಸ್ಪೂರ್ತಿಯಿಂದ ಪಾದಾಯಾತ್ರೆ ಮಾಡ್ತಿರೋ ಇವರಲ್ಲಿ ಬಹುತೇಕರಿಗೆ ಕಣ್ಣೇ ಕಾಣೋದಿಲ್ಲ. ಆದ್ರೇ ತಮಗಿರೋ ನ್ಯೂನತೆಯನ್ನು ಬದಿಗೊತ್ತಿ ಇದೀಗ ಹೋರಾಟದ ದಾರಿಯಲ್ಲಿದ್ದಾರೆ. ಅಂಗವಿಕಲರಿಗೆ ಅದರಲ್ಲೂ ವಿಶೇಷವಾಗಿ ಕಣ್ಣು ಕಾಣದೇ ಇರೋರಿಗೆ ಸರ್ಕಾರದ ಬರಬೇಕಾದ ಯಾವ ಸವಲತ್ತುಗಳು ಬರುತ್ತಿಲ್ಲ. ಕಚೇರಿಯಿಂದ ಕಚೇರಿ ಅಲೆದ ಇವರೆಲ್ಲರೂ ಇದೀಗ ಹೊಸಪೇಟೆಯಿಂದ  ಬೆಂಗಳೂರಿನವರೆಗೂ ಪಾದಯಾತ್ರೆ ಮಾಡೋ ಮೂಲಕ ಸರ್ಕಾರದ ಗಮನ ಸೆಳೆಯಲು ಮುಂದಾಗಿದ್ದಾರೆ. 

ತುಂಗಭದ್ರಾ ಎಡದಂಡೆ ಕಾಲುವೆ ನೀರು ಕಳ್ಳತನ ತಡೆಯಲು ಟಾಸ್ಕ್‌ಫೋರ್ಸ್ ರಚನೆ: ರಾಯಚೂರು ಜಿಲ್ಲಾಧಿಕಾರಿ ಆದೇಶ

ಕೇವಲ ತಮ್ಮ ಸಮಸ್ಯೆ ಅಷ್ಟೇ ಅಲ್ಲದೇ  ಸಾರಿಗೆ ನೌಕರರ, ಅಂಗನವಾಡಿ, ಆಶಾ ಕಾರ್ಯಕರ್ತೆಯರ, ಹೋಂಗಾರ್ಡ್ ನೌಕರರ ಖಾಯಂ ಮಾಡಬೇಕೆನ್ನುವದು ಸೇರಿದಂತೆ ಧ್ವನಿ ಇಲ್ಲದ 9 ವರ್ಗದ ಜನರ ಸಮಸ್ಯೆ ಪರಿಹಾರಕ್ಕಾಗಿ ಪಾದಯಾತ್ರೆ ಮಾಡ್ತಿರೋದಾಗಿ ಹೋರಾಟದ ನೇತೃತ್ವ ವಹಿಸಿರೋ ಸಂತೋಷ ಕುಮಾರ  ಹೇಳುತ್ತಾರೆ.

ಇನ್ನೂ ಅಂಗವಿಕಲರ ಈ ಹೋರಾಟಕ್ಕೆ ಇತರೆ ಸಂಘ ಸಂಸ್ಥೆಗಳು ಬೆಂಬಲ ನೀಡೋ ಮೂಲಕ ಸುದೀರ್ಘ ಈ ಪಾದಯಾತ್ರೆಯಲ್ಲಿ ಅಲ್ಲಲ್ಲಿ ಜೊತೆಗೂಡಲಿದ್ದಾರೆ. ಸಾಮಾನ್ಯವಾಗಿ ಅಂಗವಿಕಲರ ಹೋರಾಟವೆಂದ್ರೇ, ಸಾಂಕೇತಿಕವಾಗಿ ಜಿಲ್ಲಾಧಿಕಾರಿ ಕಚೇರಿ ಮುಂದೆಯೋ ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ಮಾಡೋದು ವಾಡಿಕೆ. ಅದರಲ್ಲೂ ಅಂಗವಿಕಲರೆಂದ್ರೇ ಶಕ್ತಿಯಲ್ಲದವರು ಇವರ ಹೋರಾಟವಿಷ್ಟೇ ಇರುತ್ತದೆ ಎಂದು ಹಂಗಿಸುವವರೇ ಹೆಚ್ಚು. ಅಂಥವರಿಗೆಲ್ಲ ಪಾದಯಾತ್ರೆ ಮೂಲಕ ವಿಶೇಷ ಚೇತನರು ಸಂದೇಶ ನೀಡಿದ್ದಾರೆ. ಒಂದೂವರೆ ತಿಂಗಳ ಕಾಲ ನಡೆಯೋ ಈ ಪಾದಯಾತ್ರೆ ಪೂರ್ಣಗೊಳಿಸೋದು ಅಷ್ಟು ಸುಲಭದ ಮಾತಲ್ಲ. ಕಣ್ಣಿದ್ದವರೇ ಎಡವೋ ಈ ಕಾಲದಲ್ಲಿ ಸರಿ ಸುಮಾರು ಮೂನ್ನೂರ ಐವತ್ತು ಕಿ.ಲೋ ಮೀಟರ್ ವರೆಗೂ ಕಣ್ಣಿಲ್ಲದೇ ಸಾಗುವ ಈ ಪಾದಯಾತ್ರೆ  ನಿಜಕ್ಕೂ ಸಾಧನೆ  ಮಾಡಿದಂತೆಯೇ ಎನ್ನುಬಹುದು ಎನ್ನುತ್ತಾರೆ ಕಣ್ಣು ಕಾಣದ ಜ್ಞಾನೇಶ್ವರಿ 

ಪಿಂಚಣಿ ಬಾರದೆ ಸಾವಿರಾರು ಫಲಾನುಭವಿಗಳ ಪರದಾಟ

ಇತರರ ಸಮಸ್ಯೆಗೂ ಸ್ಪಂದಿಸುವ ಮನಸ್ಸು ಇರೋದೇ ವಿಶೇಷ

 ದೇಹದ ಎಲ್ಲಾ ಅಂಗಾಂಗಗಳು ಸರಿಯಾಗಿದ್ರೂ ಅದು ಸರಿಯಿಲ್ಲ. ಇದು ಸರಿಯಿಲ್ಲ ಎನ್ನುವ ಮೂಲಕ ವ್ಯವಸ್ಥೆ ಬಗ್ಗೆ ಮಾತನಾಡಿ ಕೈಕಟ್ಟಿ ಕುಳಿತುಕೊಳ್ಳುವ ಅದೆಷ್ಟೋ ಜನರ ಮಧ್ಯೆ, ಈ ಅಂಗವಿಕಲರ ಹೋರಾಟ ಮತ್ತು ಪಾದಯಾತ್ರೆ ಮಾದರಿ ಮತ್ತು ಸ್ಪೂರ್ತಿಯಾಗಿದೆ. ಸರ್ಕಾರ ಇವರ ಬೇಡಿಕೆಗೆ ಸರ್ಕಾರ ಎಷ್ಟರಮಟ್ಟಿಗೆ ಸ್ಪಂದನೆ ನೀಡ್ತದೆಯೋ ಇಲ್ವೋ ಗೊತ್ತಿಲ್ಲ ಆದ್ರೇ ಇವರ ಪಾದಯಾತ್ರೆ ಮಾತ್ರ ಇತಿಹಾಸ ಪುಟ ಸೇರಲಿದೆ..

click me!