ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ನೀರು ಕಳ್ಳತನ ತಡೆಗಟ್ಟಲು ರಾಯಚೂರು ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಟಾಸ್ಕ್ ಫೋರ್ಸ್ ತಂಡ ರಚನೆ ಮಾಡಿ ಆದೇಶ ಹೊರಡಿಸಿದ್ದಾರೆ.
ರಾಯಚೂರು (ಅ.17) ಕೊಪ್ಪಳ ರಾಯಚೂರು ಜಿಲ್ಲೆಗಳ ರೈತರ ಹೊಲಗಳಿಗೆ ಹಾಗೂ ಕುಡಿಯುಲು ನೀರು ಒದಗಿಸುವ ಉದ್ದೇಶದಿಂದ ತುಂಗಭದ್ರಾ ಎಡದಂಡೆ ಕಾಲುವೆ ಮೂಲಕ ಪ್ರತಿ ವರ್ಷ ನೀರು ಹರಿಸಲಾಗುತ್ತದೆ. ಆದರೆ ಕಾಲುವೆ ಮೇಲ್ಭಾಗದಲ್ಲಿ ರೈತರು ಕಾನೂನುಬಾಹಿರವಾಗಿ ನಿರಂತರವಾಗಿ ನೀರು ಕಳ್ಳತನ ಮಾಡುತ್ತಿದ್ದಾರೆ. ಇದರಿಂದ ಕೆಳಭಾಗದ ರೈತರಿಗೆ ಜಮೀನಿಗೆ ಬಿಡಿ ಕುಡಿಯಲೂ ನೀರು ತಲುಪದಂತಾಗಿದೆ. ಹೀಗಾಗಿ ನೀರು ಕಳ್ಳತನ ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಟ್ಕಾಸ್ ಫೋರ್ಸ್ ತಂಡ ರಚನೆಗೆ ಮುಂದಾಗಿದೆ.
ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ನೀರು ಕಳ್ಳತನ ತಡೆಗಟ್ಟಲು ರಾಯಚೂರು ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಟಾಸ್ಕ್ ಫೋರ್ಸ್ ತಂಡ ರಚನೆ ಮಾಡಿ ಆದೇಶ ಹೊರಡಿಸಿದ್ದಾರೆ.
undefined
ಮುಂಗಾರು ಹಂಗಾಮಿನ ಬೆಳೆ ನೀರು ಬಾರದೆ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ. ತುಂಗಭದ್ರಾ ಎಡದಂಡೆ ಕಾಲುವೆ ಮೈಲ್ 104 ಕೆಳಭಾಗದ ರೈತರು ಜಮೀನುಗಳಿಗೆ ನೀರು ಹರಿಸಬೇಕು, ನಿಗದಿತ ಗೇಜನ್ನು ನಿರಂತರವಾಗಿ ನಿರ್ವಹಣೆ ಮಾಡುವಂತೆ ಒತ್ತಾಯಿಸಿ ಸಂಚಾರ ತಡೆ ನಡೆಸಿದ ರೈತರು ರಾಜ್ಯ ಸರ್ಕಾರ, ಸಚಿವರು,ಶಾಸಕರು, ನೀರಾವರಿ ಇಲಾಖೆ ಅಧಿಕಾರಿ ಹಾಗೂ ಜಿಲ್ಲಾಡಳಿತದ ವಿರುದ್ಧ ಸೋಮವಾರ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು.
ಗ್ಯಾರೆಂಟಿ ಕೊಡುತ್ತೇವೆಂದು ಖಜಾನೆ ಖಾಲಿ ಮಾಡಿದ ಕಾಂಗ್ರೆಸ್ ಸರ್ಕಾರ : ಬಿಎಸ್‌ವೈ ವಾಗ್ದಾಳಿ
ಕಳೆದ ಮೂರು ತಿಂಗಳಿನಿಂದ ತುಂಗಭದ್ರಾ ಎಡದಂಡೆ ಕಾಲುವೆ ಮೈಲ್ 104 ಕೆಳಭಾಗದ ರೈತರ ಅಚ್ಚುಕಟ್ಟು ಪ್ರದೇಶಕ್ಕೆ ನೀರು ತಲುಪುತ್ತಿಲ್ಲ. ಇದರಿಂದಾಗಿ ಮೆಣಸಿನಕಾಯಿ, ಹತ್ತಿ ಸೇರಿ ಇತರೆ ಬೆಳೆಗಳು ಒಣಗಲಾರಂಭಿಸಿವೆ. ಮಳೆ ಅಭಾವ, ಬರದ ಛಾಯೆಯಿಂದ ಕಂಗಾಲಾಗಿರುವ ಸಮಯದಲ್ಲಿ ಕೆಳಭಾಗಕ್ಕೆ ನೀರು ಸಹ ಬರುತ್ತಿಲ್ಲ ಇದು ರೈತರ ದುಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಸಂಜೆಯಾಗುತ್ತಿದ್ದಂತೆ ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳು ಬಂದು ಮನವಿ ಸ್ವೀಕರಿಸಿ ರೈತರ ಹೋರಾಟಕ್ಕೆ ಸ್ಪಂದಿಸಿ ಟಾಸ್ಕ್ ಫೋರ್ಸ್ ತಂಡ ರಚನೆ ಮಾಡುವಂತೆ ಆದೇಶ ಹೊರಡಿಸಿದರು. ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಜಿಲ್ಲಾಡಳಿತ ಜವಾಬ್ದಾರಿ ನೀಡಿದೆ. ಕೆಳಭಾಗಕ್ಕೆ ನೀರು ತಲುಪುವುದಕ್ಕಾಗಿ ಅಗತ್ಯವಾದ ಗೇಜ್‌ನ್ನು ನಿರ್ವಹಣೆ ಮಾಡುವುದರ ಖಾತರಿ ನೀಡಿದ ಬಳಿಕ ಹೋರಾಟವನ್ನು ತಾತ್ಕಾಲಿಕವಾಗಿ ಕೈಬಿಡಲಾಯಿತು.
ರಾಯಚೂರು: 2ನೇ ಪುಣ್ಯಸ್ಮರಣೆ, ಭತ್ತದ ಪೈರಿನಲ್ಲಿ ಅರಳಿದ ಪುನೀತ್ ರಾಜ್‌ಕುಮಾರ್..!
ರೈತರು ಹೋರಾಟ ಎಚ್ಚರಿಕೆ:
ಮುಂದಿನ ದಿನಗಳಲ್ಲಿ ಕೆಳಭಾಗಕ್ಕೆ ನೀರು ಹರಿಸುವುದರಲ್ಲಿ ನಿರ್ಲಕ್ಷ್ಯ ತೋರಿದ್ದೇ ಆದಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರತರದ ಮಟ್ಟಕ್ಕೆ ತೆಗೆದುಕೊಂಡು ಹೋಗುವುದಾಗಿ ರೈತರು ಜಿಲ್ಲಾಡಳತಕ್ಕೆ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಶಾಸಕ ಡಾ.ಶಿವರಾಜ ಪಾಟೀಲ್, ಸಮಿತಿ ಪ್ರಮುಖರಾದ ಮಹಾಂತೇಶ ಪಾಟೀಲ್ ಅತ್ತನೂರು, ಶರಣಪ್ಪ ಕಲ್ಮಲಾ, ಸಿದ್ದನಗೌಡ ನೆಲಹಾಳ, ರೈತ ಮುಖಂಡರಾದ ಪ್ರಭಾಕರ ಪಾಟೀಲ್ ಇಂಗಳದಾಳ, ಅನಿತಾ ಬಸವರಾಜ, ಬಸವರಾ ಕಲ್ಲೂರು, ರಾಮು ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು,ಸದಸ್ಯರು, ರಾಜಕೀಯಪಕ್ಷಗಳ ಕಾರ್ಯಕರ್ತರು, ವಿವಿಧ ಗ್ರಾಮಗಳಿಂದ ಆಗಮಿಸಿದ್ದ ರೈತರು ಭಾಗವಹಿಸಿದ್ದರು.
ಪಂಪ್‌ಸೆಂಟ್‌ಗಳಿಗೆ ವಿದ್ಯುತ್ ಕಡಿತಕ್ಕೆ ಸಿಡಿದೆದ್ದ ರೈತರು:
ಕೈಯಲ್ಲಿ ತಟ್ಟೆ ಹಿಡಿದು ಭಿಕ್ಷಾಟನೆ.. ವಿಷದ ಬಾಟಲ್ ಹಿಡಿದು ಪ್ರತಿಭಟನೆ. ಮತ್ತೊಂದ್ಕಡೆ ಒಣಗಿದ ಭತ್ತದ ಗಿಡಗಳ ಕಟ್ಟು ಹಿಡಿದು ಜೆಸ್ಕಾಂ ಕಚೇರಿಗೆ ಮುತ್ತಿಗೆ ಯತ್ನ. ಪವರ್ ಕಟ್ ವಿರುದ್ಧ ರಾಯಚೂರು ನಗರದ ಜೆಸ್ಕಾಂ ಕಚೇರಿ ಎದುರು ರೈತರು ಸಿಡಿದೆದ್ದ ಪರಿಯಾಗಿದೆ. ಮಳೆಯಿಲ್ಲ.. ಕಾಲುವೆ ನೀರೂ ಬರ್ತಿಲ್ಲ.. ಹೋಗ್ಲಿ ಪಂಪ್ಸೆಟ್ ಮೂಲಕವಾದ್ರೂ ಬೆಳೆಗಳಿಗೆ ನೀರುಣಿಸೋಣ ಅಂದ್ರೆ ಕಳೆದ ಒಂದು ವಾರದಿಂದ ಕರೆಂಟ್ ಕಣ್ಣಾಮುಚ್ಚಾಲೆ ಆಡುತ್ತಿದೆ.. ಇದೆಲ್ಲದರಿಂದ ಬೇಸತ್ತಿದ್ದ ರೈತರಿಗೆ ಜೆಸ್ಕಾಂ ಸರ್ಕಾರ ಮತ್ತೊಂದು ಶಾಕ್ ಕೊಟ್ಟಿದೆ. ಪಂಪ್ಸೆಟ್ಗಳಿಗೆ 5 ತಾಸು ಮಾತ್ರ ಕರೆಂಟ್ ನೀಡುವ ಆದೇಶ ಹೊರಡಿಸಿದೆ. ಸರ್ಕಾರದ ಈ ಆದೇಶಕ್ಕೆ ಸಿಡಿದೆದ್ದ ರಾಯಚೂರು ರೈತರು ಜೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದ್ರು. ಜೆಸ್ಕಾಂ ಕಚೇರಿ ಎದುರಿನ ಮುಖ್ಯರಸ್ತೆ ಬಂದ್ ಮಾಡಿ ಧರಣಿ ನಡೆಸಿ ಉರುಳು ಸೇವೆ ಮಾಡಿ ಸಿಟ್ಟು ಹೊರಹಾಕಿದ್ರು.