ಕೇಂದ್ರ ಸರ್ಕಾರ ಉಡಾನ್ ಯೋಜನೆಯಡಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮೂರು ಹೊಸ ಮಾರ್ಗ ಸೇರ್ಪಡೆ ಮಾಡಲಾಗಿದೆ. ಶಿವಮೊಗ್ಗದಿಂದ ಗೋವಾ, ತಿರುಪತಿ ಹಾಗೂ ಹೈದರಾಬಾದ್ ವಿಮಾನ ಸೇವೆ ಲಭ್ಯವಾಗಲಿದೆ.
ಬೆಂಗಳೂರು (ಜೂ.28): ರಾಜ್ಯದ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ವಿಮಾನಗಳೇ ಬರುವುದಿಲ್ಲ ಎಂಬ ದೂರುಗಳು ಬಂದ ಬೆನ್ನಲ್ಲೇ ಕೇಂದ್ರ ಸರ್ಕಾರ ಉಡಾನ್ ಯೋಜನೆಯಡಿ ಮೂರು ಹೊಸ ವಿಮಾನಗಳ ಸಂಚಾರವನ್ನು ಆರಂಭಿಸಲಾಗಿದೆ. ಶಿವಮೊಗ್ಗದಿಂದ ಗೋವಾ, ತಿರುಪತಿ ಹಾಗೂ ಹೈದರಾಬಾದ್ ಹೊಸ ಮಾರ್ಗಗಳನ್ನು ಸೇರ್ಪಡೆ ಮಾಡಲಾಗಿದೆ.
ರಾಜ್ಯದಲ್ಲಿ 13ಕ್ಕೂ ಅಧಿಕ ವಿಮಾನ ನಿಲ್ದಾಣಗಳಿವೆ. ಇತ್ತೀಚೆಗೆ ಉದ್ಘಾಟನೆ ಮಾಡಲಾದ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕೆಲವೇ ವಿಮಾನ ಮಾರ್ಗಗಳ ಸಂಪರ್ಕ ಕಲ್ಪಿಸಲಾಗಿತ್ತು. ಆದರೆ, ಈಗ ಉಡಾನ್ ಯೋಜನೆಯ 5.0 ಅಡಿಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮತ್ತೆ ಹೊಸದಾಗಿ ಮೂರು ಮಾರ್ಗಗಳನ್ನು ಸೇರ್ಪಡೆ ಮಾಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಶಿವಮೊಗ್ಗದಿಂದ ಗೋವಾ, ತಿರುಪತಿ ಹಾಗೂ ಹೈದರಾಬಾದ್ ಹೊಸ ಮಾರ್ಗಗಳನ್ನು ಸೇರ್ಪಡೆ ಮಾಡಿರುವ ಬಗ್ಗೆ ಕರ್ನಾಟಕ ಇಂಡೆಕ್ಸ್ ಎಂಬ ಟ್ವಿಟರ್ ಪೇಜ್‌ನಿಂದ ಟ್ವೀಟ್ ಮಾಡಲಾಗಿದೆ. ಈ ಟ್ವೀಟ್ ಅನ್ನು ಸ್ವತಃ ಸಂಸದ ಬಿ.ವೈ. ರಾಘವೇಂದ್ರ ರಿಟ್ವೀಟ್ ಮಾಡಿಕೊಂಡಿದ್ದಾರೆ. ಶೀಘ್ರ ಅಧಿಕೃತ ಘೋಷಣೆಯಾಗಲಿದೆ ಎಂದು ಸಂಸದರು ತಿಳಿಸಿದ್ದಾರೆ.
ಆ.11ರಿಂದ ಶಿವಮೊಗ್ಗದಿಂದ ವಿಮಾನ ಹಾರಾಟ ಆರಂಭ, ಟಿಕೆಟ್ ದರ ಮಾಹಿತಿ ಇಲ್ಲಿದೆ
ಮಲೆನಾಡು ಜನರಿಗೆ ಭರ್ಜರಿ ಕೊಡುಗೆ: ಮಲೆನಾಡು ಜನರಿಗೆ ಸಿಹಿ ಸುದ್ದಿ ಸಿಕ್ಕಿದೆ. ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟಕ್ಕೆ ಮುಹೂರ್ತ ನಿಗದಿಯಾಗಿದೆ. ಫೆಬ್ರವರಿಯಲ್ಲಿ 27 ರಂದು ಪ್ರಧಾನಿ ನರೇಂದ್ರ ಮೋದಿ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿದ್ದರು. ಆದರೆ ಇಲ್ಲಿಯ ತನಕ ಪ್ರಯಾಣಿಕ ವಿಮಾನಗಳ ಸಂಚಾರ ಆರಂಭವಾಗಿರಲಿಲ್ಲ. ಈವರೆಗೆ ಶಿವಮೊಗ್ಗದಿಂದ ಬೆಂಗಳೂರು, ಚನ್ನೈ ಹಾಗೂ ದೆಹಲಿಗೆ ವಿಮಾನ ಮಾರ್ಗ ಸಂಪರ್ಕ ಕಲ್ಪಿಸಲಾಗಿತ್ತು. ಹೀಗಾಗಿ, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ವಿಮಾನಗಳೇ ಬರುವುದಿಲ್ಲ ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದರು.
ಬೆಂಗಳೂರಿಗೆ ಮೊದಲ ವಿಮಾನ ಸಂಚಾರ: ಆಗಸ್ಟ್ 11ರಂದು ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟ ನಡೆಯಲಿದೆ. ಬೆಂಗಳೂರು-ಶಿವಮೊಗ್ಗ ನಡುವೆ ಇಂಡಿಗೋ ಸಂಸ್ಥೆಯ ವಿಮಾನ ಹಾರಾಟ ಆರಂಭಿಸಲಿದೆ. ಕೆಲವೇ ದಿನಗಳಲ್ಲಿ ಬುಕ್ಕಿಂಗ್ ಸಹ ಆರಂಭವಾಗಲಿದೆ. ಆಗಸ್ಟ್ 11ರಂದು ಶಿವಮೊಗ್ಗದ ಸೊಗಾನ ವಿಮಾನ ನಿಲ್ದಾಣದಿಂದ ಸಂಸ್ಥೆಯ ಮೊದಲ ವಿಮಾನ ಬೆಂಗಳೂರಿಗೆ ಹಾರಾಟ ನಡೆಸಲಿದೆ ಎಂದು ಹೇಳಲಾಗಿದೆ. ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣ (kuvempu airport shivamogga) ಉದ್ಘಾಟನೆಗೊಂಡು ನಾಲ್ಕೈದು ತಿಂಗಳು ಕಳೆದರೂ ಈವರೆಗೆ ಒಂದೇ ಒಂದು ವಿಮಾನ ಹಾರಾಟ ಸಹ ಮಾಡಿಲ್ಲ. ಈ ಮಧ್ಯೆ ಸರ್ಕಾರ ಬದಲಾವಣೆಯಿಂದ ವಿಮಾನ ಹಾರಾಟ ಇನ್ನಷ್ಟು ವಿಳಂಬವಾಗಲಿದೆ ಎಂದು ಹೇಳಲಾಗಿತ್ತು. ಆದರೆ ಆ.11ರಿಂದಲೇ ಶಿವಮೊಗ್ಗ- ಬೆಂಗಳೂರು ನಡುವೆ ವಿಮಾನ ಸಂಚಾರ ಅಧಿಕೃತವಾಗಿ ಆರಂಭಗೊಳ್ಳುವುದು ಖಚಿತವಾಗಿದೆ.
ಕಬ್ಬು ಬೆಳಗಾರರಿಗೆ ಸಿಹಿ ಸುದ್ದಿ: ಎಫ್‌ಆರ್‌ಪಿ ದರ ಹೆಚ್ಚಿಸಿದ ಕೇಂದ್ರ ಸರ್ಕಾರ
gets new routes under UDAN 5.0
Shivamogga - Goa
Shivamogga - Hyderabad
Shivamogga - Tirupathi pic.twitter.com/IReKLG7XvD