ಶಕ್ತಿ ಯೋಜನೆ ಜಾರಿಯಾದ ಬಳಿಕ ಶುರುವಾದ ಅವಾಂತರಗಳು ಇನ್ನೂ ನಿಂತಿಲ್ಲ. ದಿನನಿತ್ಯ ಸೀಟಿಗಾಗಿ ಮಹಿಳೆಯರ ಹೊಡೆದಾಟ, ಕಿತ್ತಾಟದ ದೃಶ್ಯಗಳು ಸಾಮಾನ್ಯ ಎಂಬಂತಾಗಿದೆ. ಇದೀಗ ಅಂತಹದ್ದೇ ಮತ್ತೊಂದು ಘಟನೆಗೆ ಹುಬ್ಬಳ್ಳಿ ಸಾಕ್ಷಿಯಾಗಿದೆ.
ಹುಬ್ಬಳ್ಳಿ (ಡಿ.28) : ಶಕ್ತಿ ಯೋಜನೆ ಜಾರಿಯಾದ ಬಳಿಕ ಶುರುವಾದ ಅವಾಂತರಗಳು ಇನ್ನೂ ನಿಂತಿಲ್ಲ. ದಿನನಿತ್ಯ ಸೀಟಿಗಾಗಿ ಮಹಿಳೆಯರ ಹೊಡೆದಾಟ, ಕಿತ್ತಾಟದ ದೃಶ್ಯಗಳು ಸಾಮಾನ್ಯ ಎಂಬಂತಾಗಿದೆ. ಇದೀಗ ಅಂತಹದ್ದೇ ಮತ್ತೊಂದು ಘಟನೆಗೆ ಹುಬ್ಬಳ್ಳಿ ಸಾಕ್ಷಿಯಾಗಿದೆ.
ಚುನಾವಣೆ ಸಮೀಪಿಸಿದಂತೆ ಸೀಟ್‌ಗಾಗಿ ರಾಜಕಾರಣಿಗಳು ಹೊಡೆದಾಡುತ್ತಿದ್ದಾರೆ. ಇತ್ತ ಬಸ್ಸಿನ ಸೀಟ್‌ಗೋಸ್ಕರ್ ಮಹಿಳೆಯರು ಜಡೆ ಜಗಳಕ್ಕೆ ಇಳಿದಿದ್ದಾರೆ. ಶಕ್ತಿ ಯೋಜನೆ ಬಳಿ ಮಹಿಳೆಯರ ಪ್ರಯಾಣಿಕರು ಹೆಚ್ಚಾಗಿ ಹೊಡೆದಾಟ ನಡೆಯುತ್ತಿವೆ. ಒಂದು ಕಡೆ ಯಾವುದೇ ಬಸ್ ಹತ್ತಿದರೂ ಸೀಟು ಹಿಡಿಯುವುದಕ್ಕಾಗಿ ಮಹಿಳೆಯರು ಹರಸಾಸಹ ಪಡುತ್ತಿದ್ದಾರೆ. ಸೀಟಿಗಾಗಿ ಅವರು ಯಾವುದೇ ಕೃತ್ಯಕ್ಕೆ ಸಿದ್ಧ ಎಂಬಷ್ಟರ ಮಟ್ಟಿಗೆ ಕಾದಾಟಕ್ಕಿಳಿಯುತ್ತಿದ್ದಾರೆ.
ಹೆಸರಿಗಷ್ಟೇ ರಾಜಹಂಸ ಒಳಗಡೆ ಕುಳಿತರೆ ಡಗಡಗ ಅಂತಾ ಪರಮಹಿಂಸೆ ಕೊಡುತ್ತೆ ಬಸ್!
ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಒದಗಿಸಲು ಶಕ್ತಿ ಯೋಜನೆ ಜಾರಿಯಾದ ಬಳಿಕ ಸೀಟ್ ಗಾಗಿ ಮಹಿಳೆಯರ ಹೊಡೆದಾಟ ಸಾಮಾನ್ಯವಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಹುಬ್ಬಳ್ಳಿಯಲ್ಲಿಯೂ ಕೂಡ ಮಹಿಳೆಯರು ಪರಸ್ಪರ ಹೊಡೆದಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹುಬ್ಬಳ್ಳಿ ಹಳೇ ಬಸ್ ನಿಲ್ದಾಣದಿಂದ ಕಿಮ್ಸ್ ಹೋಗುವ ಬಸ್ಸಿನಲ್ಲಿ ಸೀಟ್ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳೆಯರು ಹೊಡೆದಾಡಿದ ಘಟನೆ ನಡೆದಿದ್ದು, ಸಾರ್ವಜನಿಕರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿದೆ ದೃಶ್ಯಗಳನ್ನು ಸೆರೆ ಹಿಡಿದು ವೈರಲ್ ಮಾಡಿದ್ದಾರೆ. ಮಹಿಳೆಯರ ಜಗಳದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪರವಿರೋಧ ಚರ್ಚೆಗಳಾಗುತ್ತಿವೆ .ಬಹುತೇಕರು ಸರ್ಕಾರ ಶಕ್ತಿ ಯೋಜನೆಯನ್ನು ದೂರಿದ್ದಾರೆ. ಶಕ್ತಿ ಯೋಜನೆ ಘೊಷಿಸಿರುವ ಸರ್ಕಾರ ಸಾಕಷ್ಟು ಬಸ್‌ಗಳನ್ನು ಬಿಡುತ್ತಿಲ್ಲ. ಅಲ್ಲದೇ ನಾಲ್ಕೈದು ಬಸ್‌ಗಳು ಓಡಾಡುವ ಮಾರ್ಗದಲ್ಲಿ ಒಂದೇ ಬಸ್ ಓಡಿಸುತ್ತಿರುವುದೇ ಪ್ರಯಾಣಿಕರ ನಡುವೆ ಹೊಡೆದಾಟಕ್ಕೆ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಕ್ತಿ ಯೋಜನೆಗೆ ಸರ್ಕಾರ ಮೀಸಲಿಟ್ಟಿದ್ದ ಅನುದಾನ ಖಾಲಿ! ಮುಂದೇನು?