- ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಜೂ.23) : ರಾಜ್ಯ ಸರ್ಕಾರ ಮಹಿಳೆಯರಿಗೆ ಅನುಕೂಲವಾಗಲಿ ಎಂದು ಶಕ್ತಿಯೋಜನೆ ಜಾರಿಗೆ ತಂದಿದೆ. ಶಕ್ತಿ ಯೋಜನೆಯ ಮೂಲಕ ಮಹಿಳೆಯರಿಗೆ ಬಲ ತುಂಬುವ ಕಾರ್ಯವನ್ನ ಸರ್ಕಾರ ಮಾಡ್ತಿದೆ. ಶಕ್ತಿ ಯೋಜನೆ ಜಾರಿಯಾದ ಬೆನ್ನಲ್ಲೆ ಸರ್ಕಾರಿ ಬಸ್ ಗಳು ಮಹಿಳೆಯರಿಂದ ತುಂಬಿ ಹೋಗ್ತಿವೆ. ಬಸ್ ಗಳು ಪುಲ್ ತುಂಬಿಯೇ ಓಡಾಡ್ತಿದೆ. ಇನ್ನು ನೂಕು ನುಗ್ಗಲಲ್ಲೆ ಸಾರ್ವಜನಿಕರು ಬಸ್ ಗಳಲ್ಲಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಬಸ್ ರಶ್ ಇರುವ ಪರಿಣಾಮ ಜನರು ಬಸ್ ಗಳನ್ನ ಹತ್ತುವ ವೇಳೆಯಲ್ಲಿ ಎಟಿಎಂ, ಆಧಾರ್ ಕಾರ್ಡ್, ಓಟರ್ ಸೇರಿದಂತೆ ಮಹತ್ವದ ದಾಖಲೆಗಳನ್ನ ಕಳೆದುಕೊಳ್ತಿದ್ದಾರೆ..
ಬಾಗಿಲಲ್ಲೆ ನಿಂತು ಪುರುಷರ ಪ್ರಯಾಣ..!
ಬಸ್ ಸಂಚಾರ ಉಚಿತ ಅಂತ ಘೋಷಣೆ ಆದ್ಮೇಲೆ, ಬಸ್ ನಲ್ಲಿ ಮಹಿಳೆಯರ ಓಡಾಟ ತುಸು ಜಾಸ್ತಿಯಾಗಿದೆ. ದೇವಸ್ಥಾನ, ಮಾರುಕಟ್ಟೆ, ಪ್ರವಾಸ ಅಂತೆಲ್ಲ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಸ್ ಗಳಲ್ಲಿ ಓಡಾಟ ನಡೆಸುತ್ತಿದ್ದಾರೆ. ಹೀಗಾಗಿ ಬಸ್ ಗಳು ರಶ್ ಆಗ್ತಿರೋದ್ರಿಂದ ಪುರುಷ ಪ್ರಯಾಣಿಕರು ಬಾಗಿಲಲ್ಲೆ ನಿಂತುಕೊಂಡ ಪ್ರಯಾಣಿಸಬೇಕಾದ ಪರಿಸ್ಥಿತಿ ಇದೆ. ಇನ್ನು ನೂಕು ನುಗ್ಗಲಲ್ಲೆ ಬಸ್ ಏರಬೇಕಾದ ಸ್ಥಿತಿಯೂ ಇದೆ. ಈ ನೂಕು ನುಗ್ಗಲಲ್ಲಿ ಅನೇಕರು ತಮ್ಮ ಕಿಸೆಯಲ್ಲಿಟ್ಟ ಮಹತ್ವದ ವಸ್ತುಗಳನ್ನೆ ಕಳೆದುಕೊಳ್ತಿದ್ದಾರೆ.
ವಿಜಯಪುರ: ಕಳ್ಳರ ಕೈಚಳಕ, ಕುಡಿವ ನೀರಿಗೆ ಕಂಟಕ..!
ವಿಜಯಪುರ ಕೇಂದ್ರ ನಿಲ್ದಾಣದಲ್ಲಿ ರಾಶಿ-ರಾಶಿ ಎಟಿಎಂ..!
ಬಸ್ ಗಳಲ್ಲಿ ಜನರು ನೂಕುನುಗ್ಗಲಲ್ಲೆ ಅಡ್ಡಾಡ್ತಿರೋದ್ರಿಂದ ಮಹತ್ವದ ದಾಖಲೆಗಳನ್ನ ಕಳೆದುಕೊಳ್ತಿದ್ದಾರೆ. ರಶ್ ಲ್ಲಿ ಬಸ್ ಏರುವಾಗ ಹಿಂಬದಿ ಪ್ಯಾಂಟ್ ಕಿಸೆಯಲ್ಲಿಟ್ಟ, ಮೇಲ್ಬಾಗದ ಶರ್ಟ್ ಕಿಸೆಯಲ್ಲಿಟ್ಟ ಎಟಿಎಂ ಕಾರ್ಡ್(ATM Card) ಗಳು ಕೆಳಗೆ ಬೀಳ್ತಿವೆ. ನೂಕುನುಗ್ಗಲಲ್ಲಿ ಪ್ರಯಾಣಿಕರು ಹಾಗೇ ಬಸ್ ಗಳಲ್ಲಿ ಪ್ರಯಾಣ ಮಾಡ್ತಿದ್ದಾರೆ. ಹೀಗೆ ಕೆಳಗೆ ಬಿದ್ದ ಅದೇಷ್ಟೋ ಎಟಿಎಂ ಕಾರ್ಡ್ ಗಳು ವಿಜಯಪುರ ಬಸ್ ನಿಲ್ದಾಣ(Vijayapur bus station)ದಲ್ಲಿ ಬಿದ್ದಿವೆ. ರಾಶಿ-ರಾಶಿ ಎಟಿಎಂ ಕಾರ್ಡಗಳು ವಾರಸುದಾರರು ಇಲ್ಲದೆ ವಿಚಾರಣೆ ವಿಭಾಗದಲ್ಲಿ ಕೊಳೆಯುತ್ತಿವೆ.. SBI Bank ಬ್ಯಾಂಕ್ ಆಫ್ ಇಂಡಿಯಾ (Bank of India), ಕೆನರಾ-ಸಿಂಡಿಕೇಟ್(Canar-syndicate bank) ಹೀಗೆ ತರಹೇವಾರಿ ಎಟಿಎಂಗಳು ವಿಚಾರಣೆ ವಿಭಾಗದಲ್ಲಿಯೇ ವಾರಸುದಾರರಿಗಾಗಿ ಕಾಯ್ತಿವೆ. ಎಟಿಎಂ ಕಾರ್ಡ್ ಕಳೆದುಕೊಂಡವರು ವಾಪಸ್ ವಿಚಾರಿಸೋದಕ್ಕು ಬಾರದೆ ಕಾರ್ಡಗಳು ವಿಚಾರಣೆ ವಿಭಾಗದಲ್ಲಿ ಹಾಗೇ ಇವೆ..
ಬಿದ್ದು ಕೊಳೆಯುತ್ತಿವೆ ಆಧಾರ್-ಓಟರ್ ಐಡಿಗಳು..!
ಇನ್ನು ಇದೆ ರೀತಿ ಕಿಸೆಯಲ್ಲಿಟ್ಟುಕೊಂಡಿದ್ದ ಆಧಾರ್, ಓಟರ್ ಐಡಿ(Adhar card and voter ID)ಗಳು ಸಹ ಬಸ್ ನಿಲ್ದಾಣದಲ್ಲಿ ಪತ್ತೆಯಾಗ್ತಿವೆ. ಐಡಿಗಳು, ಎಟಿಎಂಗಳು ಸಿಗ್ತಿದ್ದಂತೆ ಕೆಲವರು ಅವುಗಳನ್ನ ತಂದು ವಿಚಾರಣೆ ವಿಭಾಗದಲ್ಲಿ ಕೊಟ್ಟು ಹೋಗ್ತಿದ್ದಾರೆ. ವಾರಸುದಾರರು ಬಂದ್ರೆ ಅವರಿಗೆ ಮುಟ್ಟಿಸಿಬಿಡಿ ಎಂದು ಕೊಟ್ಟು ಹೋಗ್ತಿದ್ದಾರೆ. ಹೀಗೆ ಸಂಗ್ರವಾದ ಆಧಾರ್ ಕಾರ್ಡ್, ಓಟರ್ ಐಡಿ ಸೇರಿ ಹಲವು ದಾಖಲಾತಿಗಳು ವಿಚಾರಣೆ ವಿಭಾಗದಲ್ಲಿವೆ.. ಇನ್ನು ಡ್ರೈವಿಂಗ್ ಲೈಸನ್ಸ್ ಸೇರಿದಂತೆ ಜೇಬಿನಲ್ಲಿ ಇಡಬಲ್ಲ ಮಹತ್ವ ದಾಖಲೆಗಳು ಸಾಕಷ್ಟು ಸಂಖ್ಯೆಯಲ್ಲಿ ಇಲ್ಲಿ ಸಂಗ್ರಹಣೆಗೊಂಡಿವೆ.
ಶಕ್ತಿ ಯೋಜನೆ ಎಫೆಕ್ಟ್ ಹೈರಾಣಾದ ವಿದ್ಯಾರ್ಥಿಗಳು.....
ದಾಖಲಾತಿ ಕೊಂಡೊಯ್ಯಲು ಬಾರದ ವಾರಸುದಾರರು..!
ಹೀಗೆ ಬಸ್ ನಿಲ್ದಾಣದಲ್ಲಿ ಕಳೆದು ಹೋದ ಎಟಿಎಂ, ಆಧಾರ್, ಓಟರ್ ಐಡಿ ಸೇರಿ ಹಲವು ದಾಖಲಾತಿಗಳನ್ನೇನೋ ಸಾರ್ವಜನಿಕರು ವಿಚಾರಣೆ ವಿಭಾಗದಲ್ಲಿ ಕೊಟ್ಟು ಹೋಗ್ತಿದ್ದಾರೆ. ಆದ್ರೆ ಅವುಗಳನ್ನ ವಾಪಸ್ ಕೊಂಡೊಯ್ಯಲು, ಅಥವಾ ಈ ಬಗ್ಗೆ ವಿಚಾರಿಸೋದಕ್ಕೆ ವಾರಸುದಾರರೇ ವಿಚಾರಣೆ ವಿಭಾಗದಲ್ಲಿ ತಲೆ ಹಾಕ್ತಿಲ್ಲ. ಇನ್ನು ಬಸ್ ನಿಲ್ದಾಣದಲ್ಲಿ ನೂಕುನುಗ್ಗಲಲ್ಲಿ ಕಳೆದುಕೊಂಡು ಇನ್ನೇಲ್ಲೋ ವಸ್ತುಗಳನ್ನ ಕಳೆದಕೊಂಡಿದ್ದೇವೋ ಏನೋ ಎಂದು ಪ್ರಯಾಣಿಕರು ಕನ್ಪ್ಯೂಜ್ ಆಗಿ ವಿಚಾರಿಸಲು ಬಾರದೆ ಇರೋ ಇದೆ.. ಇನ್ನು ಇಷ್ಟೊಂದು ಸಂಖ್ಯೆಯಲ್ಲಿ ಸಿಕ್ಕಿರುವ ದಾಖಲಾತಿ, ಎಟಿಎಂ ಕಾರ್ಡಗಳನ್ನ ವಾರಸುದಾರರಿಗೆ ತಲುಪಿಸೋದು ಹೇಗೆ ಎನ್ನುವ ಜಿಜ್ಞಾಸೆಯಲ್ಲಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಇದ್ದಾರೆ..