Covid 3rd Wave: ಕರ್ನಾಟಕದಲ್ಲಿ ಸಕಾಲಿಕ ನಿರ್ಬಂಧದಿಂದ ಸೋಂಕಿನ ತೀವ್ರತೆ ತಗ್ಗಿದೆ: IISC

Kannadaprabha News   | Asianet News
Published : Jan 30, 2022, 09:10 AM IST
Covid 3rd Wave: ಕರ್ನಾಟಕದಲ್ಲಿ ಸಕಾಲಿಕ ನಿರ್ಬಂಧದಿಂದ ಸೋಂಕಿನ ತೀವ್ರತೆ ತಗ್ಗಿದೆ: IISC

ಸಾರಾಂಶ

*  ಈಗ ನಿರ್ಬಂಧ ಹಿಂಪಡೆದಿದ್ದರಿಂದ ಸೋಂಕು ಹೆಚ್ಚಲ್ಲ *  ಈವರೆಗಿನ ನಿರ್ಬಂಧ ಅಧ್ಯಯನ ನಡೆಸಿ ವರದಿ *  ಸೋಂಕು ಹರಡುವಿಕೆ ಪ್ರಮಾಣ ತಗ್ಗಿದೆ  

ಬೆಂಗಳೂರು(ಜ.30):  ರಾಜ್ಯದಲ್ಲಿ(Karnataka) ಕೊರೋನಾ ನಿರ್ಬಂಧಗಳನ್ನು ಸೂಕ್ತ ಸಂದರ್ಭದಲ್ಲಿ ಜಾರಿಗೊಳಿಸಿ ಪರಿಣಾಮ ಸೋಂಕಿನ ತೀವ್ರತೆ ಸಾಕಷ್ಟು ಕಡಿಮೆಯಾಗಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ (IISC) ಹಾಗೂ ಭಾರತೀಯ ಸಂಖ್ಯಾಶಾಸ್ತ್ರೀಯ ಸಂಸ್ಥೆಯ ಅಧ್ಯಯನ ವರದಿ ತಿಳಿಸಿದೆ. ಅಲ್ಲದೆ, ಈಗ ನಿರ್ಬಂಧ ಹಿಂಪಡೆದರೂ ಸಹ ಸೋಂಕು ಪ್ರಮಾಣ ಹೆಚ್ಚಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ತಜ್ಞರಾದ ಅನಿರುದ್ಧ್ ಅಡಿಗ, ಶಿವ ಆತ್ರೇಯ, ರಾಜೇಶ್‌ ಸುಂದರೇಶನ್‌ ನೇತೃತ್ವದಲ್ಲಿ ಬೆಂಗಳೂರಿನಲ್ಲಿ(Bengaluru) ವಾರಾಂತ್ಯ ಮತ್ತು ರಾತ್ರಿ ಕರ್ಫ್ಯೂ(Weekend and Night Curfew) ಸೇರಿದಂತೆ ಕೊರೋನಾ ನಿರ್ಬಂಧಗಳ(Corona Restrictions) ಪರಿಣಾಮಗಳನ್ನು ಅಧ್ಯಯನ ಮಾಡಲಾಗಿದೆ. ದಕ್ಷಿಣ ಆಫ್ರಿಕಾ(South Africa) ಮತ್ತು ಬೆಂಗಳೂರಿನಲ್ಲಿ ಒಮಿಕ್ರೋನ್‌(Omicron)  ರೂಪಾಂತರಿ ಸೋಂಕಿನ ಪರಿಣಾಮಗಳು ಒಂದೇ ರೀತಿ ಕಂಡು ಬಂದ ಹಿನ್ನೆಲೆ ಈ ಅಧ್ಯಯನವನ್ನು ನಡೆಸಲಾಗಿದೆ.

Covid 3rd Wave: ಬೆಂಗ್ಳೂರಲ್ಲಿ ದಾಖಲೆಯ 46,000 ಮಂದಿ ಗುಣಮುಖ

ಈ ಹಿಂದೆ ಮೂರನೇ ಅಲೆಯ(Covid 3rd Wave) ಆರಂಭದ ದಿನಗಳಲ್ಲಿ, ‘ರಾಜ್ಯದಲ್ಲಿ ಸೋಂಕು ಹೊಸ ಪ್ರಕರಣಗಳು ನಿತ್ಯ ಒಂದು ಲಕ್ಷ ಗಡಿದಾಟಬಹುದು, ಸರ್ಕಾರದ ನಿರ್ಬಂಧಗಳಿಂದ 40-50 ಸಾವಿರದಷ್ಟು ವರದಿಯಾಗಬಹುದು’ ಎಂದು ಐಐಎಸ್ಸಿ ಅಂದಾಜಿಸಿತ್ತು. ಆ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ವಾರದ ದಿನ, ವಾರಾಂತ್ಯದಲ್ಲಿ ಜನರ ಚಲನವಲನ ಅದಕ್ಕೆ ತಕ್ಕಂತೆ ಸೋಂಕಿನ ಏರಿಳಿತ ಕುರಿತು ಕಳೆದ 1 ತಿಂಗಳು ನಿರಂತರ ಅವಲೋಕನ ಮಾಡಿ ವರದಿ ನೀಡಿದೆ.

ಸೋಂಕು ಲಕ್ಷಕ್ಕಿಂತ ಹೆಚ್ಚಲಿಲ್ಲ ಏಕೆ?:

ಕೊರೋನಾ ರೂಪಾಂತರಿಗಳು ಆರಂಭದಲ್ಲಿಯೇ ಸದ್ದಿಲ್ಲದೇ ವೇಗವಾಗಿ ಹರಡುತ್ತವೆ. ಅದಕ್ಕೆ ಅವಕಾಶ ನೀಡಬಾರದು. ಆರಂಭದಲ್ಲಿಯೆ ಕಡಿವಾಣ ಅಗತ್ಯವಾಗಿರುತ್ತದೆ. ರಾಜ್ಯದಲ್ಲಿ ಸೋಂಕು ಏರಿಕೆ ಡಿಸೆಂಬರ್‌ ಅಂತ್ಯಕ್ಕೆ ಆರಂಭವಾಯಿತು. ಆದರೆ, ಡಿಸೆಂಬರ್‌ 28ರಿಂದ ರಾಜ್ಯ ಸರ್ಕಾರವು ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ವಾಣಿಜ್ಯ ಚಟುವಟಿಕೆ ನಿರ್ಬಂಧ, ರಾತ್ರಿ ಕರ್ಫ್ಯೂ, ವಾರಾಂತ್ಯದ ಕರ್ಫ್ಯೂ ಜಾರಿ ಮಾಡಿತು. ಇದರಿಂದ ಬೆಂಗಳೂರಿನಲ್ಲಿ ಕರ್ಫ್ಯೂ ಪೂರ್ವದ ಸಾಮಾನ್ಯದಿನಗಳಿಗಿಂತ ಕರ್ಫ್ಯೂ ಜಾರಿ ದಿನಗಳಲ್ಲಿ ಜನರ ಚಲನವಲನ ಸಾಕಷ್ಟು ತಗ್ಗಿತು.

ವಾರಾಂತ್ಯಗಳಲ್ಲಿ ಅತ್ಯಂತ್ಯ ಕಡಿಮೆ ಜನದಟ್ಟಣೆ ಇತ್ತು. ಇದರಿಂದ ಸೋಂಕು ಒಮ್ಮೆಗೆ ಹರಡಲಿಲ್ಲ. ಒಮ್ಮೆ ಹೆಚ್ಚಳವಾಗುವುದರಿಂದ ಹೊಸ ಪ್ರಕರಣಗಳು ಶೀಘ್ರ ದ್ವಿಗುಣವಾಗುತ್ತಾ ಸಾಗಿ ಒಂದು ಲಕ್ಷಕ್ಕೆ ಹೆಚ್ಚಳವಾಗುವ ಸಾಧ್ಯತೆಗಳಿದ್ದವು. ನಿರ್ಬಂಧಗಳಿಂದ ಹರಡುವಿಕೆ ಸಾಕಷ್ಟು ಕಡಿಮೆಯಾಗಿ, ನಿಧಾನವಾಗಿ ಹೊಸ ಪ್ರಕರಣಗಳು ಏರಿಕೆಯಾದವು. ಹೀಗಾಗಿಯೇ ಪ್ರಕರಣಗಳು ಲಕ್ಷ ಗಡಿಗೆ ಹೆಚ್ಚಳವಾಗಿಲ್ಲ ಎಂದು ಐಐಎಸ್ಸಿ ತಜ್ಞರ ಅಧ್ಯಯನದಿಂದ ಸಾಬೀತಾಗಿದೆ ಎಂದು ತಾಂತ್ರಿಕ ಸಲಹಾ ಸಮಿತಿ ಸದಸ್ಯರು ತಿಳಿಸಿದರು.

Covid 3rd Wave: ಸೋಂಕಿತರ ಸಾವು ಏರಲು ವಿಳಂಬ ಚಿಕಿತ್ಸೆಯೇ ಕಾರಣ..!

ನಿರ್ಬಂಧದಿಂದ ಇನ್ನು ಪ್ರಯೋಜನವಿಲ್ಲ:

ದಕ್ಷಿಣ ಆಫ್ರಿಕಾದಲ್ಲಿ ಸೋಂಕು ಹೆಚ್ಚಿದ್ದರೂ ನಿರ್ಬಂಧದಿಂದ ವಿನಾಯ್ತಿ ನೀಡಿದ್ದಾರೆ. ಸದ್ಯ ರಾಜ್ಯದಲ್ಲಿ ಸೋಂಕು ಹೊಸ ಪ್ರಕರಣಗಳು 50 ಸಾವಿರಕ್ಕೆ ಹೆಚ್ಚಳವಾಗಿವೆ. ಮುಂದಿನ ದಿನಗಳಲ್ಲಿಯೂ ನಿರ್ಬಂಧ ಮುಂದುವರೆಸಿದರೆ 2-3 ಸಾವಿರದಷ್ಟುಹೊಸ ಪ್ರಕರಣಗಳು ತಗ್ಗಬಹುದೇ ಹೊರತು ಹೆಚ್ಚಿನ ವ್ಯತ್ಯಾಸವಾಗುವುದಿಲ್ಲ. ಹೀಗಾಗಿಯೇ, ದಕ್ಷಿಣ ಆಫ್ರಿಕಾದಂತೆ ರಾಜ್ಯದಲ್ಲಿಯೂ ನಿರ್ಬಂಧಗಳನ್ನು ತೆರವು ಮಾಡಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಸೋಂಕು ಹರಡುವಿಕೆ ಪ್ರಮಾಣ ತಗ್ಗಿದೆ

ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಪ್ರಮಾಣ (R Value) 5 ರಿಂದ 1ಕ್ಕೆ ತಗ್ಗಿದೆ. ಒಬ್ಬರಿಂದ ಒಬ್ಬರಿಗೆ ಮಾತ್ರ ಸೋಂಕು ಹರಡಿದರೆ ಆರ್‌ವ್ಯಾಲ್ಯೂ ಒಂದು ಎಂದರ್ಥ. ಮೂರನೇ ಅಲೆಯ ಆರಂಭದ ದಿನಗಳಲ್ಲಿ ಬೆಂಗಳೂರನಲ್ಲಿ ಆರ್‌ವ್ಯಾಲ್ಯೂ 5 ಇತ್ತು. ಕಳೆದ ನಾಲ್ಕು ವಾರದಿಂದ ಇಳಿಕೆಯಾಗುತ್ತಾ ಬಂದು ಸದ್ಯ 1ಕ್ಕೆ ತಗ್ಗಿದೆ ಅಂತ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ.ಎಂ.ಕೆ.ಸುದರ್ಶನ್‌ ತಿಳಿಸಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: BBK 12 - ಸ್ಪಂದನಾ ಸೋಮಣ್ಣ ಮುಂದೆ ರಜತ್‌ ಅಸಭ್ಯ ವರ್ತನೆ ಮಾಡಿದ್ರು - ಧ್ರುವಂತ್‌ ವಿರುದ್ಧ ರಜತ್‌ ಆರೋಪ