*ಬೆಂಗಳೂರನ್ನು ಪ್ರತ್ಯೇಕ ರಾಜ್ಯವೆಂದು ಪರಿಗಣಿಸಿ ನಿಯಮ
*ಸೋಂಕಿತರು ಆಸ್ಪತ್ರೆ ಸೇರುವ ಮುನ್ನ ಟ್ರಯಾಜಿನ್ ಸೆಂಟರಲ್ಲಿ ತಪಾಸಣೆ
*ವಿದೇಶದಿಂದ ಬಂದವರಲ್ಲಿ ಸೋಂಕು ದೃಢಪಟ್ಟರೆ ಐಸೋಲೇಷನ್
ಬೆಂಗಳೂರು (ಜ. 5): ಮೆಟ್ರೋಗಳಲ್ಲೇ ಒಮಿಕ್ರೋನ್ ಸೋಂಕು (Omicron Variant) ವಿಪರೀತ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರನ್ನೇ (Bengaluru) ಒಂದು ಪ್ರತ್ಯೇಕ ರಾಜ್ಯವೆಂಬಂತೆ ಪರಿಣಗಣಿಸಿ ಸೋಂಕು ನಿರ್ವವಣೆಗೆ ಪ್ರತ್ಯೇಕ ವ್ಯವಸ್ಥೆ ರೂಪಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ ಕೆ.ಸುಧಾಕರ್ ತಿಳಿಸಿದರು.ಮಂಗಳವಾರ ಮುಖ್ಯಮಂತ್ರಿಗಳ ಸಭೆ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ರಾಜ್ಯ ಸೋಂಕು ಹೊಸ ಪ್ರಕರಣಗಳ ಪೈಕಿ ಶೇ.85ರಷ್ಟುವರದಿಯಾಗುತ್ತಿರುವುದು ಬೆಂಗಳೂರಿನಲ್ಲಿ. ಹೀಗಾಗಿ ಈ ನಗರಕ್ಕೆ ಪ್ರತ್ಯೇಕ ನಿಯಮ ಜಾರಿಗೆ ತರಲಾಗಿದೆ.
ಆಸ್ಪತ್ರೆಗಳಲ್ಲಿ ಅಗತ್ಯ ಹಾಸಿಗೆ ವ್ಯವಸ್ಥೆ !
ನಗರವನ್ನು ಎಂಟು ವಲಯವಾಗಿ ವಿಂಗಡಿಸಿ ಐಪಿಎಸ್/ಐಎಎಸ್ ಅಧಿಕಾರಿಗಳನ್ನು ನೇಮಿಸಿ ಕೊರೋನಾ ಸೋಂಕಿತರ ಚಿಕಿತ್ಸೆ ನಿರ್ವಹಣೆ ಮಾಡಲಾಗುತ್ತದೆ. ಆಸ್ಪತ್ರೆಗಳಲ್ಲಿ ಅಗತ್ಯ ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಆಸ್ಪತ್ರೆ ಸೇರುವ ಮುನ್ನ ಕಡ್ಡಾಯವಾಗಿ ಟ್ರಯಾಜಿನ್ ಸೆಂಟರ್‌ನಲ್ಲಿ ವೈದ್ಯರ ತಪಾಸಣೆಗೆ ಕ್ರಮವಹಿಸಲಾಗಿದೆ. ಜತೆಗೆ ಕ್ಷೇತ್ರವಾರು ಕೊರೋನಾ ಆರೈಕೆ ಕೇಂದ್ರ, ಎರಡು ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸಹಾಯವಾಣಿಗಳನ್ನು ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: Weekend Curfew ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಜಾರಿ, ಬೆಂಗ್ಳೂರಲ್ಲಿ 2 ವಾರ ಶಾಲಾ-ಕಾಲೇಜು ಬಂದ್
ವಿದೇಶದಿಂದ ಬಂದರಲ್ಲಿ ಸೋಂಕು ಹೆಚ್ಚಾಗುತ್ತಿದ್ದು, ಅವರೆಲ್ಲರನ್ನು ಕಡ್ಡಾಯವಾಗಿ ಪರೀಕ್ಷೆಗೊಳಪಡಿಸಿ ಸೋಂಕು ದೃಢಪಟ್ಟರೆ ಹೋಟೆಲ್, ಆಸ್ಪತ್ರೆಗಳಲ್ಲಿ ಐಸೋಲೇಷನ್ ಕಡ್ಡಾಯಗೊಳಿಸಲಾಗಿದೆ. ಇದಕ್ಕಾಗಿ ಸ್ಟಾರ್, ಬಜೆಟ್ ಹೋಟೆಲ್‌ಗಳಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಕಠಿಣ ನಿಯಮಗಳಿಂದ ಸಾರ್ವಜನಿಕರು ಗಾಬರಿಯಾಗದೇ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು. ಎಲ್ಲ ರೀತಿಯ ಸಮಾರಂಭಗಳಿಗೆ ಕಡಿವಾಣ ಹಾಕಲಾಗಿದೆ. ಮುಂದಿನ ಎರಡು ವಾರದವರೆಗೂ ಸಾರ್ವಜನಿಕರು ಸರ್ಕಾರದ ಜತೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಮಂಗಳವಾರ 2053 ಜನರಲ್ಲಿ ಸೋಂಕು ಪತ್ತೆಯಾಗುವ ಮೂಲಕ ನಗರದಲ್ಲಿ ಸಕ್ರಿಯ ಸೋಂಕಿತ ಪ್ರಕರಣಗಳ ಸಂಖ್ಯೆ 11,423ಕ್ಕೆ ಏರಿಕೆಯಾಗಿದೆ. ಸೋಂಕಿಗೆ ಮೂವರು ಬಲಿಯಾಗಿದ್ದಾರೆ. ಜೂ.12ರಂದು 2454 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಈವರೆಗಿನ ಅತ್ಯಧಿಕ ಗರಿಷ್ಠ ಸಂಖ್ಯೆಯಾಗಿತ್ತು. ನಂತರದ ದಿನಗಳಲ್ಲಿ ಸೋಂಕು ಇಳಿಕೆಯಾಗಿದ್ದು, 201 ದಿನಗಳಲ್ಲಿ ಯಾವತ್ತೂ ಎರಡು ಸಾವಿರದ ಗಡಿ ದಾಟಿರಲಿಲ್ಲ. ಹೊಸ ಪ್ರಕರಣಗಳ ಪತ್ತೆಯಿಂದ ಈವರೆಗಿನ ಸೋಂಕಿತರ ಸಂಖ್ಯೆ 12,68,445ಕ್ಕೆ ಏರಿಕೆಯಾಗಿದೆ
ರಾಜ್ಯಗಳಲ್ಲಿ ಸೋಂಕು ಏರುಮುಖ
ಭಾರತದಲ್ಲಿ 3ನೇ ಅಲೆ ಆರಂಭವಾಗಿದೆ ಎಂಬ ವಾದಗಳ ಬೆನ್ನಲ್ಲೇ, ಮಂಗಳವಾರವೂ ರಾಷ್ಟ್ರ ರಾಜಧಾನಿ ದೆಹಲಿ, ಕೇರಳ, ಮಹಾರಾಷ್ಟ್ರ ಸೇರಿದಂತೆ ಇನ್ನಿತರ ರಾಜ್ಯಗಳ ಭಾರೀ ಪ್ರಮಾಣದ ಮಂದಿಗೆ ಸೋಂಕು ದೃಢಪಟ್ಟಿದೆ. ದಿಲ್ಲಿಯಲ್ಲಿ ಪಾಸಿಟಿವಿಟಿ ಶೇ.8.37ಕ್ಕೆ ಜಿಗಿತ:ದಿಲ್ಲಿಯಲ್ಲಿ ಮಂಗಳವಾರ ಮತ್ತೆ 5481 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. 3 ಮಂದಿ ಬಲಿಯಾಗಿದ್ದಾರೆ. ಪಾಸಿಟಿವಿಟಿ ದರ ಶೇ.8.37ಕ್ಕೆ ಜಿಗಿದಿದೆ. ದೆಹಲಿಯಲ್ಲಿ ದಾಖಲಾದ 7 ತಿಂಗಳ ಗರಿಷ್ಠ ಕೇಸ್ ಮತ್ತು ಗರಿಷ್ಠ ಪಾಸಿಟಿವಿಟಿ ದರವಿದು.
ಮಹಾರಾಷ್ಟ್ರದಲ್ಲಿ ಕೋವಿಡ್ ಸ್ಫೋಟ:ಮಹಾರಾಷ್ಟ್ರದಲ್ಲೂ 75 ಒಮಿಕ್ರೋನ್ ಸೇರಿ 18,466 ಹೊಸ ಕೋವಿಡ್ ಪ್ರಕರಣ ದೃಢಪಟ್ಟಿವೆ. ಸೋಮವಾರಕ್ಕಿಂತ 6306 ಹೆಚ್ಚು ಕೇಸ್‌ಗಳು ಪತ್ತೆಯಾಗಿವೆ. ಇದರಲ್ಲಿ ಮುಂಬೈ ಪಾಲು 10,860 ಕೇಸ್. ಒಂದೇ ದಿನದಲ್ಲಿ ಮುಂಬೈನಲ್ಲಿ ಸೋಂಕಿನ ಪ್ರಮಾಣ ಶೇ.34ರಷ್ಟುಹೆಚ್ಚಿದೆ. ಬಂಗಾಳದಲ್ಲಿ 9073 ಕೇಸು:ಪ.ಬಂಗಾಳದಲ್ಲಿ 9073 ಕೇಸ್‌ಗಳು ಪತ್ತೆಯಾಗಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 25,475ಕ್ಕೆ ಏರಿದೆ.ಕೇರಳದಲ್ಲಿ ಸೋಂಕು ರಣಕೇಕೆ:ಕಳೆದೆರಡು ವಾರಗಳಿಂದ 3000ಕ್ಕಿಂತ ಕಡಿಮೆ ಸೋಂಕು ದಾಖಲಾಗಿದ್ದ ಕೇರಳದಲ್ಲಿ ಮಂಗಳವಾರ 3640 ಮಂದಿಗೆ ಸೋಂಕು ದೃಢಪಟ್ಟಿದೆ. 453 ಮಂದಿ (ಹಳೇ ಸಾವು ಸೇರಿಸಿ ಕೋವಿಡ್‌ಗೆ ಬಲಿಯಾಗಿದ್ದಾರೆ.