ಪತ್ರಕರ್ತ ವಿಶ್ವೇಶ್ವರ ಭಟ್‌, ಸುಜಾತಾಗೆ ಕಸಾಪ ದತ್ತಿ ಪ್ರಶಸ್ತಿ

Published : Feb 17, 2021, 08:19 AM IST
ಪತ್ರಕರ್ತ ವಿಶ್ವೇಶ್ವರ ಭಟ್‌, ಸುಜಾತಾಗೆ ಕಸಾಪ ದತ್ತಿ ಪ್ರಶಸ್ತಿ

ಸಾರಾಂಶ

ಕನ್ನಡ ಸಾಹಿತ್ಯ ಪರಿಷತ್ತು ನೀಡುವ ದತ್ತಿ ಪ್ರಶಸ್ತಿಗೆ  ವಿಶ್ವವಾಣಿ ಪತ್ರಿಕೆ ಸಂಪಾದಕರೂ ಆದ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್‌ ಹಾಗೂ  ಹಿರಿಯ ಲೇಖಕಿ ಡಾ. ಎಚ್‌.ಎಸ್‌.ಸುಜಾತಾ ಆಯ್ಕೆಯಾಗಿದ್ದಾರೆ. 

 ಬೆಂಗಳೂರು (ಫೆ.17):  ಕನ್ನಡ ಸಾಹಿತ್ಯ ಪರಿಷತ್ತು ನೀಡುವ ನಾಗಡಿಕೆರೆ-ಕಿಟ್ಟಪ್ಪಗೌಡ ರುಕ್ಮಿಣಿ ತೀರ್ಥಹಳ್ಳಿ ದತ್ತಿ ಪ್ರಶಸ್ತಿಗೆ ವಿಶ್ವವಾಣಿ ಪತ್ರಿಕೆ ಸಂಪಾದಕರೂ ಆದ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್‌ ಹಾಗೂ ಟಿ.ಗಿರಿಜಾ ಸಾಹಿತ್ಯ ಪ್ರಶಸ್ತಿಗೆ ಹಿರಿಯ ಲೇಖಕಿ ಡಾ. ಎಚ್‌.ಎಸ್‌.ಸುಜಾತಾ ಆಯ್ಕೆಯಾಗಿದ್ದಾರೆ. 

ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್‌ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ವಿಶ್ವೇಶ್ವರ ಭಟ್‌ ಮತ್ತು ಎಚ್‌.ಎಸ್‌.ಸುಜಾತಾ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಟಿ.ಗಿರಿಜಾ ಸಾಹಿತ್ಯ ಪ್ರಶಸ್ತಿ 15 ಸಾವಿರ ನಗದು ಮತ್ತು ನಾಗಡಿಕೆರೆ-ಕಿಟ್ಟಪ್ಪಗೌಡ ರುಕ್ಮಿಣಿ ತೀರ್ಥಹಳ್ಳಿ ದತ್ತಿ ಪ್ರಶಸ್ತಿ 10 ಸಾವಿರ ನಗದು, ಸ್ಮರಣಿಕೆ, ಫಲ ತಾಂಬೂಲ ಒಳಗೊಂಡಿದೆ. 

ಸುಬ್ರಾಯ ಚೊಕ್ಕಾಡಿ ಸೇರಿ 6 ಮಂದಿಗೆ ಮಾಸ್ತಿ ಪ್ರಶಸ್ತಿ 2020

ಆಯ್ಕೆ ಸಮಿತಿ ಸಭೆಯಲ್ಲಿ ಸದಸ್ಯರಾದ ಅರುಂಧತಿ ರಮೇಶ್‌, ಗೌರವ ಕೋಶಾಧ್ಯಕ್ಷ ಪಿ.ಮಲ್ಲಿಕಾರ್ಜುನಪ್ಪ, ಕಸಾಪ ಗೌರವ ಕಾರ್ಯದರ್ಶಿಗಳಾದ ಡಾ.ಪದ್ಮರಾಜ ದಂಡಾವತಿ, ಕೆ.ರಾಜಕುಮಾರ್‌ ಉಪಸ್ಥಿತರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

KSRTC ಪ್ರಯಾಣಿಕರಿಗೆ ಬಿಗ್ ಶಾಕ್! ಇಂಧನ ಬೆಲೆ ಏರಿಕೆ ನೆಪ, ಶೀಘ್ರ ಬಸ್‌ ದರ ಹೆಚ್ಚಳ, ಸಾರಿಗೆ ಸಚಿವ ಮಹತ್ವದ ಸುಳಿವು
80ನೇ ಸ್ವಾತಂತ್ರ್ಯ ದಿನ: 72,000 ಸರ್ಕಾರಿ ನೌಕರಿ, ಉಚಿತ ಕೋಡಿಂಗ್, AI ವಿವಿ ಘೋಷಿಸಿದ ಸಿಎಂ ಡಿ.ಕೆ.ಶಿವಕುಮಾರ್!