Chikkamagaluru: ಕಾಫಿನಾಡ ಪಶ್ಚಿಮಘಟ್ಟ ಕಾಡಿನಲ್ಲಿ ಸೀಕ್ರೆಟ್ ರಿಯಲ್ ಎಸ್ಟೇಟ್ ದಂಧೆ!

Published : Jan 08, 2024, 08:21 PM IST
Chikkamagaluru: ಕಾಫಿನಾಡ ಪಶ್ಚಿಮಘಟ್ಟ ಕಾಡಿನಲ್ಲಿ ಸೀಕ್ರೆಟ್ ರಿಯಲ್ ಎಸ್ಟೇಟ್ ದಂಧೆ!

ಸಾರಾಂಶ

ಪಶ್ಚಿಮ ಘಟ್ಟಗಳ ವ್ಯಾಪ್ತಿಯ ಸೂಕ್ಷ್ಮ ಪ್ರದೇಶದಲ್ಲಿ ಜನರಿಗೆ ರಸ್ತೆ ನಿರ್ಮಾಣ ಮಾಡೋದಕ್ಕೆ ಅನುಮತಿ ನೀಡದ ಅರಣ್ಯ ಇಲಾಖೆ ಕಣ್ತಪ್ಪಿಸಿ ಖಾಸಗಿ ಕಂಪನಿಗಳು ಲೇಔಟ್ ನಿರ್ಮಿಸಿ ರಿಯಲ್ ಎಸ್ಟೇಟ್ ದಂಧೆಗೆ ಇಳಿದಿರೋ ಘಟನೆ ಚಿಕ್ಕಮಗಳೂರು ತಾಲೂಕಿನ ಮುತ್ತೋಡಿ ಅರಣ್ಯ ವ್ಯಾಪ್ತಿಯ ಮೇಲಿನ ಹುಲುವತ್ತಿ ಗ್ರಾಮದಲ್ಲಿ ನಡೆದಿದೆ.   

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಜ.08): ಪಶ್ಚಿಮ ಘಟ್ಟಗಳ ವ್ಯಾಪ್ತಿಯ ಸೂಕ್ಷ್ಮ ಪ್ರದೇಶದಲ್ಲಿ ಜನರಿಗೆ ರಸ್ತೆ ನಿರ್ಮಾಣ ಮಾಡೋದಕ್ಕೆ ಅನುಮತಿ ನೀಡದ ಅರಣ್ಯ ಇಲಾಖೆ ಕಣ್ತಪ್ಪಿಸಿ ಖಾಸಗಿ ಕಂಪನಿಗಳು ಲೇಔಟ್ ನಿರ್ಮಿಸಿ ರಿಯಲ್ ಎಸ್ಟೇಟ್ ದಂಧೆಗೆ ಇಳಿದಿರೋ ಘಟನೆ ಚಿಕ್ಕಮಗಳೂರು ತಾಲೂಕಿನ ಮುತ್ತೋಡಿ ಅರಣ್ಯ ವ್ಯಾಪ್ತಿಯ ಮೇಲಿನ ಹುಲುವತ್ತಿ ಗ್ರಾಮದಲ್ಲಿ ನಡೆದಿದೆ. ಜಾಗರ ಹೋಬಳಿಯ ಮೇಲಿನ ಹುಲುವತ್ತಿ ಹಾಗೂ ಗೊಣಕಲ್ ಗ್ರಾಮದಲ್ಲಿ 242 ಎಕರೆ ಭೂಮಿಯನ್ನ ಪರಿವರ್ತನೆ ಮಾಡಿಸಿ ಖಾಸಗಿ ಕಂಪನಿಗಳು ರಿಯಲ್ ಎಸ್ಟೇಟ್ ದಂಧೆಗೆ ಇಳಿದಿವೆ.ವನ್ಯಜೀವಿ ಕಾಯ್ದೆ ಅಂಶಗಳನ್ನ ಗಾಳಿಗೆ ತೂರಿ ಕಾಡಂಚಿನಲ್ಲಿ ರಾಜಾರೋಷವಾಗಿ ಖಾಸಗಿಯಾಗಿ ವಿಲ್ಲಾಗಳನ್ನ ನಿರ್ಮಾಣ ಮಾಡಿ ಮಾರಾಟ ಮಾಡಲು ಮುಂದಾಗಿದ್ದು ಜಾಹೀರಾತು ಕೂಡ ನೀಡಿದ್ದಾರೆ.

ಸೂಕ್ಷ್ಮ ವಲಯ ಪ್ರದೇಶದಲ್ಲಿ ಲೇಔಟ್ ನಿರ್ಮಿಸಿ ರಿಯಲ್ ಎಸ್ಟೇಟ್ ದಂಧೆ: ಜಿಲ್ಲಾಡಳಿತ ಹಾಗೂ ಸರ್ಕಾರದ ಯಾವೊಂದು ಇಲಾಖೆಗಳ ಅನುಮತಿ ಪಡೆಯದೆ ಹುಲಿ ಹಾಗೂ ವನ್ಯಜೀವಿ ಸಂರಕ್ಷಿತ ಪ್ರದೇಶದಲ್ಲಿ ಕಾಫಿ ಪ್ಲಾಂಟೇಶನ್ ಹೆಸರಲ್ಲಿ ಕದ್ದು ಮುಚ್ಚಿ ರಿಯಲ್ ಎಸ್ಟೇಟ್ ದಂಧೆ ಎಗ್ಗಿಲ್ಲದೆ ನಡೆಯುತ್ತಿರೋದು ಅಚ್ಚರಿ ಮೂಡಿಸಿದೆ. ಆನೆ, ಹುಲಿ, ಚಿರತೆ ಸೇರಿದಂತೆ ನೂರಾರು ವನ್ಯ ಜೀವಿಗಳು ವಾಸಿಸುವ ಪಶ್ಚಿಮ ಘಟ್ಟವನ್ನು ರಿಯಲ್ ಎಸ್ಟೇಟ್ ದಂಧೆಗೆ ಬಳಕೆ ಮಾಡಿಕೊಂಡಿರುವುದು ದಂಧೆಕೋರರಿಗೆ ಸರ್ಕಾರ ಹಾಗೂ ಕಾನೂನಯ ಭಯ ಇಲ್ಲವೆಂಬಂತಾಗಿದೆ. ಕಾಡಿನ ಮಧ್ಯೆ ಇಷ್ಟೆಲ್ಲಾ ನಡೆದ್ರು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೂ ಬರಲೇ ಇಲ್ವಾ ಎಂಬ ಪ್ರಶ್ನೆ ಮೂಡಿದೆ. ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪಶ್ಚಿಮ ಘಟ್ಟ ವ್ಯಾಪ್ತಿಯ ಭದ್ರಾ ಹುಲಿ ಕಾಡಲ್ಲಿ ರಿಯಲ್ ಎಸ್ಟೇಟ್ ಕಾಲಿಟ್ಟಿದ್ದಾದರೂ ಹೇಗೆ ಅನ್ನೋದು ನಿಜಕ್ಕೂ ಆಶ್ಚರ್ಯ ಮೂಡಿಸಿದೆ. .

ಬಿಜೆಪಿ ವರಿಷ್ಠರ ಎದುರು ಇಲ್ಲಿನ ಅಡ್ಜಸ್ಟ್‌ಮೆಂಟ್‌ ಎಲ್ಲ ಹೇಳಿದ್ದೇನೆ: ಶಾಸಕ ಬಸನಗೌಡ ಯತ್ನಾಳ

7 ದಿನದ ಗಡುವು ನೀಡಿ 6 ಜನರಿಗೆ ಡಿಸಿ ನೋಟೀಸ್: ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪಶ್ಚಿಮ ಘಟ್ಟ ವ್ಯಾಪ್ತಿಯ ಭದ್ರಾ ಹುಲಿ ಕಾಡಲ್ಲಿ ರಿಯಲ್ ಎಸ್ಟೇಟ್ ಕಾಲಿಟ್ಟಿದ್ದಾದರೂ ಹೇಗೆ ನಿಜಕ್ಕೂ ಆಶ್ಚರ್ಯ. ಸದ್ಯ ತಡವಾಗಿ ಆದರೂ  ಎಚ್ಚೆತ್ತಿರೋ ಜಿಲ್ಲಾಡಳಿತ ಸಂಬಂಧ ಪಟ್ಟ ಖಾಸಗಿ ಕಂಪನಿಗಳ ಆರು ಜನರಿಗೆ ನೋಟಿಸ್ ನೀಡಿದೆ. ಇತ್ತಾ ಮಾಲಿನ್ಯ ನಿಯಂತ್ರಣ ಮಂಡಳಿಯೂ ಮಂಡಳಿಯೂ ರಿಯಲ್ ಎಸ್ಟೇಟ್ ಗೆ ಪರವಾನಗಿ ನೀಡದಂತೆ ಜಿಲ್ಲಾಡಳಿತಕ್ಕೆ ದೂರು ನೀಡಿದೆ. ..ಒಟ್ಟಾರೆ ಪಶ್ಚಿಮ ಘಟ್ಟ ವ್ಯಾಪ್ತಿಯ ಸಣ್ಣಪುಟ್ಟ ಗ್ರಾಮಗಳನ್ನು ಒಕ್ಕಲೆಬ್ಬಿಸಿ ಬೇರಡೆಗೆ ಸ್ಥಳಾಂತರ ಮಾಡುವ ಸರ್ಕಾರ ಬೃಹತ್ ಖಾಸಗಿ ಕಂಪನಿಗಳಿಗೆ ರಿಯಲ್ ಎಸ್ಟೇಟ್ ಮನೆಗೆ ಬಗ್ಗಿರುವುದು ನಿಜಕ್ಕೂ ದುರಂತ.. ಇನ್ನಾದ್ರೂ ಈ ಅಕ್ರಮ ಸೀಕ್ರೆಟ್ ಲೇಔಟ್ ನಿರ್ಮಾಣಕ್ಕೆ ಕಡಿವಾಣ ಸರ್ಕಾರ ಆಗುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡಿಕೆಸು ಹೆಸರಿನಲ್ಲಿ ಕೋಟ್ಯಂತರ ವಂಚನೆ ಪ್ರಕರಣ.. 'ಬಂಗಾರಿ' ಕೇಸ್‌ನಲ್ಲಿ ನಟ ಧರ್ಮಗೆ ಧ್ವನಿ ಪರೀಕ್ಷೆ?
ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ