ಕನ್ನಡಪರ ಹೋರಾಟಗಾರರ ಮನೆ ಮೇಲೆ ರಾತ್ರೋರಾತ್ರಿ ಸರ್ಚ್ ವಾರಂಟ್; ಗೃಹ ಸಚಿವ ಪರಮೇಶ್ವರ ಹೇಳಿದ್ದೇನು?

Published : Jan 02, 2024, 11:41 AM IST
ಕನ್ನಡಪರ ಹೋರಾಟಗಾರರ ಮನೆ ಮೇಲೆ ರಾತ್ರೋರಾತ್ರಿ ಸರ್ಚ್ ವಾರಂಟ್; ಗೃಹ ಸಚಿವ ಪರಮೇಶ್ವರ ಹೇಳಿದ್ದೇನು?

ಸಾರಾಂಶ

ಕನ್ನಡಪರ ಹೋರಾಟಗಾರರ ಮೇಲೆ ರಾತ್ರೋರಾತ್ರಿ ಪೊಲೀಸರು ಸರ್ಚ್ ವಾರೆಂಟ್ ಮಾಡಿಲ್ಲ. ಯಾರ ಮೇಲೆ ಕೇಸ್ ಮಾಡಿದ್ದಾರೋ ಅಂಥವರ ಮನೆ ಸರ್ಚ್ ಮಾಡಿದ್ದಾರೆ. ಇನ್ನೊಸೆಂಟ್ ಜನ್ರು  ಯಾರಿದ್ದಾರೆ ಅವರನ್ನ ಟಚ್ ಮಾಡಿಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟನೆ ನೀಡಿದರು.

ಬೆಂಗಳೂರು (ಜ.2): ಕನ್ನಡಪರ ಹೋರಾಟಗಾರರ ಮೇಲೆ ರಾತ್ರೋರಾತ್ರಿ ಪೊಲೀಸರು ಸರ್ಚ್ ವಾರೆಂಟ್ ಮಾಡಿಲ್ಲ. ಯಾರ ಮೇಲೆ ಕೇಸ್ ಮಾಡಿದ್ದಾರೋ ಅಂಥವರ ಮನೆ ಸರ್ಚ್ ಮಾಡಿದ್ದಾರೆ. ಇನ್ನೊಸೆಂಟ್ ಜನ್ರು  ಯಾರಿದ್ದಾರೆ ಅವರನ್ನ ಟಚ್ ಮಾಡಿಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟನೆ ನೀಡಿದರು.

ಕನ್ನಡ ಹೋರಾಟಗಾರರ ಮನೆ ಮೇಲೆ ಪೊಲೀಸರು ರಾತ್ರೋರಾತ್ರಿ ದಾಳಿ ಮಾಡುತ್ತಿರುವ ಆರೋಪ ಸಂಬಂಧ ಮಾಧ್ಯಮ ಪ್ರತಿನಿಧಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,  ಕರ್ನಾಟಕದ ಪೊಲೀಸರು ಇನ್ನೂ ಆ ರೀತಿ ವರ್ತನೆ ಮಾಡಿಲ್ಲ. ಯಾರಿಗೆ ಕೇಸ್ ಆಗಿರುತ್ತೆ ಅವರನ್ನು ವಿಚಾರಣೆಗೆ ಬನ್ನಿ ಅಂತ‌ ಕರೆದು ಹೋಗಿದ್ದಾರೆ ಅಷ್ಟೇ ಎಂದರು.

ಡಿಕೆಶಿ ಮನೆಗೆ ಬಿಜೆಪಿ ಶಾಸಕ ಎಸ್‌ಟಿ ಸೋಮಶೇಖರ್ ಭೇಟಿ; ಪದೇಪದೆ ಭೇಟಿಗೆ ಕಾರಣ ಇಲ್ಲಿದೆ ನೋಡಿ

ಡಿಕೆ ಶಿವಕುಮಾರ್‌ಗೆ ಸಿಬಿಐ ನೋಟಿಸ್ ಕೊಟ್ಟಿರುವುದು ಅದು ಅವರ ವೈಯಕ್ತಿಕ ವಿಚಾರ. ಸರ್ಕಾರ ಏನು ಮಾಡಬಹುದು ಅಂತ ಕ್ಯಾಬಿನೆಟ್ ತೀರ್ಮಾನ ಮಾಡಿದೆ. ಬಿಎಸ್‌ವೈ ಮೌಖಿಕವಾಗಿ ಸೂಚಿಸಿ ಸಿಬಿಐಗೆ ಕೊಟ್ಟಿದ್ದರು. ನಮ್ಮ ಸರ್ಕಾರ ಬಂದಾಗ ನಾವು ಕೇಸ್ ಹಿಂಪಡೆಯಲು ತೀರ್ಮಾನ ಮಾಡಿ ಹಿಂಪಡೆದಿದ್ದೆವು. ವಾಪಸ್ ತೆಗೆದುಕೊಂಡ ಬಳಿಕ ಯಾರಾದ್ರೂ ಕೇಸ್ ನೋಡಬೇಕಲ್ವಾ? ಅದಕ್ಕೆ ಲೋಕಾಯುಕ್ತಕ್ಕೆ ಕೊಡಬೇಕು ಅಂತ ನಮ್ಮ‌ಸರ್ಕಾರ ಆದೇಶ ಮಾಡಿದೆ

CBI ಹಾಗೂ ಲೋಕಾಯುಕ್ತ ಅವರು ಏನು ಕ್ರಮ ತಗೊಬೇಕೊ‌ ತಗೊತಾರೆ. ಸರ್ಕಾರ ಮಾಡುವ ಕೆಲಸ ಏನಿದೆ ಅದನ್ನ ಮಾಡಿದೆ. ಲೋಕಾಯುಕ್ತ ಹಾಗೂ ಸಿಬಿಐ ಕಮ್ಯುನಿಕೇಟ್ ಮಾಡಿಕೊಳ್ಳಬೇಕು. ಅದರ ರೆಕಾರ್ಡ್ಸ್ ಎಲ್ಲಾ CBI ಬಳಿ ಇರುತ್ತೆ. ಲೀಗಲ್ ವಿಚಾರಗಳ ಬಗ್ಗೆ ನನಗೆ ಹೆಚ್ಚು ಮಾಹಿತಿ ಇಲ್ಲ ಮುಂದೆ ನೋಡೋಣ ಏನಾಗುತ್ತದೆ ಅಂತಾ ಸದ್ಯ ಮಾಹಿತಿ ಇಲ್ಲ ಎಂದರು.

ಸಚಿವ ಮಧು ಚೆಕ್‌ ಬೌನ್ಸ್‌ ಪ್ರಕರಣ ಮರೆಸಲು ತಮ್ಮನ ಅರೆಸ್ಟ್‌: ಸಂಸದ ಪ್ರತಾಪ್‌ ಸಿಂಹ

ಇನ್ನು ಹುಬ್ಬಳ್ಳಿಯಲ್ಲಿ ಹಿಂದೂ ಸಂಘಟನೆಯವರ ಬಂಧನ ವಿಚಾರ ಪ್ರಸ್ತಾಪಿಸಿ ಮಾತನಾಡಿದ ಗೃಹಸಚಿವರು,  ಈ ಹಿಂದೆ ಬಿಜೆಪಿಯವರು ಸರ್ಕಾರ ನಡೆಸಿದ್ದಾರೆ. ಯಡಿಯೂರಪ್ಪನವರೂ ಸರ್ಕಾರ ನಡೆಸಿದ್ದಾರೆ. ಸ್ಪೆಸಿಫಿಕ್ ಆಗಿ ಅದೊಂದೇ ಕೇಸ್ ಆಗಿಲ್ಲ. ಎಲ್ಲ ಕೇಸ್‌ಗಳನ್ನೂ ರಿವ್ಯೂ ಮಾಡುವಾಗ ಇದೂ ಆಗಿದೆ. ಸುಮ್ನೆ ರಾಜಕೀಯ ಉದ್ದೇಶದಿಂದ ಟೀಕೆ ಮಾಡಬಾರದು. ನೆಲದ ಕಾನೂನಿನ ಪ್ರಕಾರ ಮಾಡಿದ್ದಾರೆ. ಬಾಕಿ ಉಳಿದ ಅರೆಸ್ಟ್ ಆದವರು ಹಿಂದೂಗಳಲ್ವಾ? ಅವರಿಗೊಂದು ನ್ಯಾಯ ಇವರಿಗೊಂದು ನ್ಯಾಯವಾ? ಕಾನೂನು ಪ್ರಕಾರ ಏನು ಆಗುತ್ತದೆಯೋ ಆಗುತ್ತದೆ. ಇದು ಕೇವಲ ಹುಬ್ಬಳ್ಳಿಯಲ್ಲಿ ಮಾತ್ರವಲ್ಲ, ಎಲ್ಲ ಕಡೆಯೂ ಹಳೆಯ ಕೇಸ್ ರಿವ್ಯೂ ಮಾಡ್ತಿದ್ದೇವೆ. ಈ ಕಡೆಯಾದರೂ ನ್ಯಾಯ ಆಗಬೇಕು ಅಥವಾ ಆ ಕಡೆಯಾದರೂ ಆಗಬೇಕು. ಕಾನೂನು ಪ್ರಕಾರ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಅಯೋಧ್ಯೆ ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ಬಂಧನ ಆಗಿದ್ದು ಕಾಕತಾಳೀಯ ಅಷ್ಟೇ ಎಂದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

20 ವರ್ಷಗಳ ಹಿಂದೆ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದ ವೃದ್ಧ ದಂಪತಿಯನ್ನ ಒಂದುಗೂಡಿಸಿದ ಲೋಕ ಅದಾಲತ್!
ಮೋನಿಕಾ ಜೊತೆ ಪೊಲೀಸಪ್ಪನ ಅಕ್ರಮ ಸಂಬಂಧ ಕೇಸ್‌ಗೆ ಟ್ವಿಸ್ಟ್, ಕಿಚುಕಿಚುಮಾ ಎಂದ ರೀಲ್ಸ್ ರಾಣಿ