ಕೆಳಗೆ ಬಿದ್ದ ಮೊಬೈಲ್ ತೆಗೆದುಕೊಳ್ಳಲು ಮೆಟ್ರೋ ಟ್ರ್ಯಾಕ್ ಗೆ ಜಿಗಿದ ಮಹಿಳೆ! ಸಿಬ್ಬಂದಿ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ!

By Ravi Janekal  |  First Published Jan 2, 2024, 10:37 AM IST

ಕೆಳಗೆ ಬಿದ್ದ ಮೊಬೈಲ್ ತೆಗೆದುಕೊಳ್ಳಲು ಮಹಿಳೆಯೊಬ್ಬರು ಟ್ರ್ಯಾಕ್ ಮೇಲೆ ಜಿಗಿದ ಘಟನೆ ಇಂದಿರಾನಗರ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. ನಿನ್ನೆ ಸಂಜೆ 6.40ರ  ಇಂದಿರಾನಗರ ಮೆಟ್ರೋ ಸ್ಟೇಷನ್ ನಲ್ಲಿ ನಡೆದಿದ್ದ ಘಟನೆ‌‌. ಮಹಿಳೆ ಟ್ರಾಕ್ಗೆ ಜಿಗಿಯುತ್ತಿದ್ದಂಗೆ ಕೂಡಲೇ ವಿದ್ಯುತ್ ಸಂಪರ್ಕ ತೆಗೆದಿದ್ದ ಮೆಟ್ರೋ ಸಿಬ್ಬಂದಿ. ಮಹಿಳೆಯಿಂದಾಗಿ 15 ನಿಮಿಷ ಮೆಟ್ರೋ ಸಂಚಾರ ಸ್ಥಗಿತಗೊಳಿಸಿ ಪ್ರಯಾಣಿಕರು ಪರದಾಡುವಂತಾಯಿತು.


ಬೆಂಗಳೂರು (ಜ.2): ಕೆಳಗೆ ಬಿದ್ದ ಮೊಬೈಲ್ ತೆಗೆದುಕೊಳ್ಳಲು ಮಹಿಳೆಯೊಬ್ಬರು ಟ್ರ್ಯಾಕ್ ಮೇಲೆ ಜಿಗಿದ ಘಟನೆ ಇಂದಿರಾನಗರ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ.

ನಿನ್ನೆ ಸಂಜೆ 6.40ರ  ಇಂದಿರಾನಗರ ಮೆಟ್ರೋ ಸ್ಟೇಷನ್ ನಲ್ಲಿ ನಡೆದಿದ್ದ ಘಟನೆ‌‌. ಮಹಿಳೆ ಟ್ರಾಕ್ಗೆ ಜಿಗಿಯುತ್ತಿದ್ದಂಗೆ ಕೂಡಲೇ ವಿದ್ಯುತ್ ಸಂಪರ್ಕ ತೆಗೆದಿದ್ದ ಮೆಟ್ರೋ ಸಿಬ್ಬಂದಿ. ಮಹಿಳೆಯಿಂದಾಗಿ 15 ನಿಮಿಷ ಮೆಟ್ರೋ ಸಂಚಾರ ಸ್ಥಗಿತಗೊಳಿಸಿ ಪ್ರಯಾಣಿಕರು ಪರದಾಡುವಂತಾಯಿತು.

Tap to resize

Latest Videos

ಏನಿದು ಘಟನೆ?

ಇಂದಿರಾನಗರ ಮೆಟ್ರೋ ನಿಲ್ದಾಣ(Indira nagar metro) ದ ಪ್ಲಾಟ್‌ಫಾರ್ಮ್ 1ರಲ್ಲಿ ರೈಲಿಗಾಗಿ ಕಾದು ನಿಂತಿದ್ದ ಮಹಿಳೆ. ಆಕಸ್ಮಿಕವಾಗಿ ತನ್ನ ಮೊಬೈಲ್ ಅನ್ನು ರೈಲು ಹಳಿಗಳ ಮೇಲೆ ಬೀಳಿಸಿದ್ದಾರೆ. ಈ ವೇಳೆ ಮೊಬೈಲ್ ತೆಗೆದುಕೊಳ್ಳಲು ರೈಲ್ವೆ ಟ್ರ್ಯಾಕ್ ಮೇಲೆ ಜಿಗಿದಿದ್ದಾಳೆ. ಇದನ್ನು ಗಮನಿಸಿದ ಮೆಟ್ರೋ ಸಿಬ್ಬಂದಿ ತಕ್ಷಣ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಿದ್ದಾರೆ.  ಬಳಿಕ ಮಹಿಳೆಯನ್ನು ಮೇಲಕ್ಕೆಳೆದುಕೊಂಡಿರುವ ಸಿಬ್ಬಂದಿ. ಇದರ ಪರಿಣಾಮವಾಗಿ ಪೀಕ್ ಅವರ್ ನಲ್ಲಿ 15 ನಿಮಿಷಗಳ ಕಾಲ ರೈಲು ಸಂಚಾರ ಸ್ಥಗಿತಗೊಳ್ಳಲು ಕಾರಣವಾಯಿತು. ಇದು ಪರ್ಪಲ್ ಲೈನ್‌ನಲ್ಲಿ ಪ್ರಯಾಣಿಸುವ ಸಾವಿರಾರು ಪ್ರಯಾಣಿಕರು ಪರದಾಡುವಂತಾಯಿತು.

 

ವರ್ಷಾಚರಣೆ: ಬೆಂಗ್ಳೂರಲ್ಲಿ ಮಧ್ಯರಾತ್ರಿ 1.30ರವರೆಗೂ ಮೆಟ್ರೋ ರೈಲು

ಬಿಎಂಆರ್‌ಸಿಲ್ ನಿರ್ದೇಶಕ ಹೇಳೋದೇನು?

ಘಟನೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್‌ನ ಕಾರ್ಯಾಚರಣೆ ಮತ್ತು ನಿರ್ವಹಣೆಯ ಕಾರ್ಯನಿರ್ವಾಹಕ ನಿರ್ದೇಶಕ ಎ ಎಸ್ ಶಂಕರ್, ಇಂದಿರಾನಗರ ಮೆಟ್ರೋ ಸ್ಟೇಷನ್ ಪ್ಲಾಟ್‌ಫಾರ್ಮ್ 1 ರಲ್ಲಿ ಬೈಯಪ್ಪನಹಳ್ಳಿ ಕಡೆಗೆ ಹೋಗುತ್ತಿದ್ದ ಮಹಿಳೆಯೊಬ್ಬರು ಸಂಜೆ 6.40 ರ ಸುಮಾರಿಗೆ ತಮ್ಮ ಫೋನ್ ಅನ್ನು ಹಳಿ ಮೇಲೆ ಕೈ ತಪ್ಪಿ ಬೀಳಿಸಿಕೊಂಡಿದ್ದಾರೆ. ರೈಲು ಬರುವ ಮೊದಲು ಅದನ್ನು ತೆಗೆದುಕೊಳ್ಳಲು ನಿರ್ಧರಿಸಿ ಟ್ರಾಕ್ ಮೇಲೆ ಹಾರಿದ್ದಾರೆ. ಆದರೆ ಹಿಂತಿರುಗಲು ಮೇಲೆ ಬರಲು ಸಾಧ್ಯವಾಗಲಿಲ್ಲ, ಮತ್ತು ಇತರ ಪ್ರಯಾಣಿಕರು ಅವಳನ್ನು ಪ್ಲಾಟ್‌ಫಾರ್ಮ್‌ಗೆ ಹಿಂತಿರುಗಲು ಸಹಾಯ ಮಾಡಬೇಕಾಯಿತು. ಪ್ಲಾಟ್‌ಫಾರ್ಮ್‌ನಲ್ಲಿರುವ ಮೆಟ್ರೋ ಅಧಿಕಾರಿಯೊಬ್ಬರು ತುರ್ತು ಟ್ರಿಪ್ ವ್ಯವಸ್ಥೆಯನ್ನು ಒತ್ತಿ ಟ್ರ್ಯಾಕ್‌ಗಳಿಗೆ ಸರಬರಾಜಾಗುತ್ತಿದ್ದ ವಿದ್ಯುತ್ ಸ್ಥಗಿತಗೊಳಿಸಿದ್ದಾರೆ.

ನಮ್ಮ ಮೆಟ್ರೋಗೆ ನಿರೀಕ್ಷೆಯಷ್ಟು ಪ್ರಯಾಣಿಕರು ಬರುತ್ತಲೇ ಇಲ್ಲ: ಬೋಗಿ ಕೊರತೆ ಕಾರಣ?

ಇಂದಿರಾನಗರ ಠಾಣೆಯಲ್ಲಿ ಉಂಟಾದ ಗಲಾಟೆಯಲ್ಲಿ ಮಹಿಳೆ ಜಾರಿಕೊಳ್ಳುವಲ್ಲಿ ಯಶಸ್ವಿಯಾದರು. ಆದರೆ ಸಿಸಿಟಿವಿಯಲ್ಲಿ ಮಹಿಳೆಯ ಗುರುತು ಚಲನವಲನ ಸೆರೆಹಿಡಿದಿದೆ. ಭವಿಷ್ಯದಲ್ಲಿ ನಮ್ಮ ಯಾವುದೇ ನಿಲ್ದಾಣಕ್ಕೆ ಬಂದರೂ ಆಕೆ ಸಿಕ್ಕಿಬೀಳುತ್ತಾಳೆ ಎಂದು ತಿಳಿಸಿದ್ದಾರೆ.

click me!