ಡಿ.17ರಂದು ಹಾವೇರಿಯಲ್ಲಿ 'ಸಾವರ್ಕರ್ ಸವಿನೆನಪು'ಕಾರ್ಯಕ್ರಮ; ಹರಿದುಬರಲಿದ್ದಾರಾ ಸಹಸ್ರಾರ ರಾಷ್ಟ್ರಭಕ್ತರು?

By Ravi JanekalFirst Published Dec 15, 2023, 2:44 PM IST
Highlights

ಡಿಸೆಂಬರ್ 17 ರಂದು ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ ಸವಿನೆನಪು ಕಾರ್ಯಕ್ರಮ ಇದೆ. ಕಾರ್ಯಕ್ರಮಕ್ಕೆ ಸಾವರ್ಕರ್ ಮೊಮ್ಮಗ ಸತ್ಯಕಿ ಸಾವರ್ಕರ್ ಬರ್ತಾರೆ. ನಮ್ಮ ತಂದೆ ಕೆ.ಎಸ್ ಈಶ್ವರಪ್ಪ ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದಲ್ಲಿ ಸಹಸ್ರಾರು ರಾಷ್ಟ್ರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಪುತ್ರ ಕೆಈ ಕಾಂತೇಶ್ ತಿಳಿಸಿದರು.

ಹಾವೇರಿ (ಡಿ.15): ಡಿಸೆಂಬರ್ 17 ರಂದು ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ ಸವಿನೆನಪು ಕಾರ್ಯಕ್ರಮ ಇದೆ. ಕಾರ್ಯಕ್ರಮಕ್ಕೆ ಸಾವರ್ಕರ್ ಮೊಮ್ಮಗ ಸತ್ಯಕಿ ಸಾವರ್ಕರ್ ಬರ್ತಾರೆ. ನಮ್ಮ ತಂದೆ ಕೆ.ಎಸ್ ಈಶ್ವರಪ್ಪ ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದಲ್ಲಿ ಸಹಸ್ರಾರು ರಾಷ್ಟ್ರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಪುತ್ರ ಕೆಈ ಕಾಂತೇಶ್ ತಿಳಿಸಿದರು.

ಇಂದು ಹಾವೇರಿಗೆ ಆಗಮಿಸಿದ ಕೆಈ ಕಾಂತೇಶ್ ಕಾರ್ಯಕ್ರಮದ ಪೂರ್ವ ಸಿದ್ದತೆ ಪರಿಶೀಲಿಸಿ ವೇದಿಕೆ ನಿರ್ಮಾಣದ ಗುದ್ದಲಿ ಪೂಜೆ ನೆರವೇರಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಲೋಕಸಭಾ ಕ್ಷೇತ್ರದಲ್ಲಿ ಮೊದಲಿನಿಂದ ಓಡಾಡ್ತಿದ್ದೇನೆ ಕ್ಷೇತ್ರದಲ್ಲಿ ಮೋದಿಯವರ ಜನಪ್ರಿಯತೆ ದೊಡ್ಡ ಮಟ್ಟಿಗಿದೆ. ಈ ಜಿಲ್ಲೆಗೆ  ನಮ್ಮ ತಂದೆ ಕೊಟ್ಟ ಯೋಜನೆಗಳುಮ ಯಡಿಯೂರಪ್ಪ, ಬೊಮ್ಮಾಯಿ ಮಾರ್ಗದರ್ಶನ ನನಗಿದೆ, ಮುಂದಿನ ದಿನಗಳಲ್ಲಿ ಎಲ್ಲಾ ಒಳ್ಳೆಯದಾಗಲಿದೆ ಎಂದರು.

ಸುವರ್ಣ ಸೌಧದಲ್ಲಿ ಸಾವರ್ಕರ್ ಫೋಟೋ ಹಾಕಿರೋದು ನನಗೂ ಇಷ್ಟವಿಲ್ಲ: ಶಾಸಕ ಬಸವರಾಜ ರಾಯರೆಡ್ಡಿ

ಪಾರ್ಲಿಮೆಂಟ್ ದಾಳಿ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದೊಂದು ದುರದೃಷ್ಟಕರ ಘಟನೆ. ಪಾರ್ಲಿಮೆಂಟ್‌ನಲ್ಲಿ ದೊಡ್ಡ ಮಟ್ಟದ ಸೆಕ್ಯುರಿಟಿ ಇರುತ್ತೆ ಆದರೂ ಈ ಘಟನೆ ಹೇಗಾಯಿತೋ ಗೊತ್ತಿಲ್ಲ. ಇದು ನಾಚಿಕೆಗೇಡಿನ ಸಂಗತಿ. ಈ ಘಟನೆ ಬಗ್ಗೆ ಸಮಿತಿ ರಚಿಸಿ ತನಿಖೆ ನಡೆಸಲಾಗ್ತಿದೆ ಎಂದರು.

ಸಾವರ್ಕರ್  ಒಬ್ಬ ರಾಷ್ಟ್ರ ಭಕ್ತ, ಸ್ವಾತಂತ್ರ್ಯ ಹೋರಾಟಗಾರ. ಆದರೂ ಕೆಲವರು  ಸಾವರ್ಕರ್ ರಾಷ್ಟ್ರ ದ್ರೋಹಿ ಅಂತಾರೆ. ಸಾವರ್ಕರ್  ಪತಿಥ ಪಾವನ ಅಂತ ಮಂದಿರ ನಿರ್ಮಿಸಿದರು. ಅಲ್ಲಿ ದಲಿತ ಅರ್ಚಕರನ್ನು ನಿಯೋಜಿಸಿದ್ದರು. ದಲಿತರು- ಮೇಲ್ಜಾತಿಯವರಿಗೆ ಸಹಪಂಕ್ತಿ ಭೋಜನ ಏರ್ಪಡಿಸಿದ್ದರು. ದಲಿತ- ಹಿಂದುಳಿದ ಎಲ್ಲಾ ವರ್ಗದವರನ್ನು ಒಗ್ಗೂಡಿಸಿಕೊಂಡು ಹೋಗಿದ್ದರು. ಹೀಗಾಗಿ ರಾಷ್ಟ್ರ ಭಕ್ತನ ನೆನಪಿಸಿಕೊಳ್ಳೋದ್ರಲ್ಲಿ ತಪ್ಪಿಲ್ಲ ಎಂದರು.

 

ಸಾವರ್ಕರ್‌ ಫೋಟೋ ತೆಗೆಸುವ ಪ್ರಿಯಾಂಕ್‌ ಹೇಳಿಕೆಗೆ ಸ್ಪೀಕರ್‌ ಬೇಸರ

click me!