
ಬೆಳಗಾವಿ: ಮಗುವಿನ ಕಾಲಿನ ಮೇಲೆ ಸರ್ಕಾರಿ ಬಸ್ ಹರಿದ ಪರಿಣಾಮ ಮಗು ಗಂಭೀರ ಗಾಯಗೊಂಡಂತಹ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಓಡೋಡಿ ಬಂದು ಬಸ್ ಹತ್ತಿ ಸೀಟು ಹಿಡಿಯುವ ರಭಸದಲ್ಲಿ ತಾಯಿಯ ಕೈಯಿಂದ ಮಗು ಆಯತಪ್ಪಿ ಕೆಳಗೆ ಬಿದ್ದಿದೆ. ಇದೇ ವೇಳೆ ಬಸ್‌ನ ಚಕ್ರಗಳು ಮಗುವಿನ ಕಾಲಿನ ಮೇಲೆ ಹರಿದಿದ್ದು, ಮಗು ಘಟನೆಯಲ್ಲಿ ಗಂಭೀರ ಗಾಯಗೊಂಡಿದೆ.
ಸವದತ್ತಿ ಬಸ್ ನಿಲ್ದಾಣದಲ್ಲಿ ಈ ಆಘಾತಕಾರಿ ಘಟನೆ
ಬೆಳಗಾವಿ ಜಿಲ್ಲೆಯ ಸವದತ್ತಿ ಬಸ್ ನಿಲ್ದಾಣದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಶಕ್ತಿ ಯೋಜನೆಯ ಪರಿಣಾಮ ಬಸ್‌ಗಳು ಸದಾಕಾಲ ತುಂಬಿ ತುಳುಕುತ್ತಿದ್ದು, ಬಸ್‌ನಲ್ಲಿ ಒಂದು ಸೀಟು ಹಿಡಿಯುವುದೇ ದೊಡ್ಡ ಸಾಹಸವಾಗಿದೆ. ಇದೇ ಕಾರಣಕ್ಕೆ ತಾಯಿ ಮಗುವನ್ನು ಹಿಡಿದುಕೊಂಡು ಓಡಿ ಓಡಿ ಬಂದು ಬಸ್ ಹತ್ತುವ ರಭಸದಲ್ಲಿ ಮಗು ತಾಯಿಯ ಕೈಯಿಂದ ಕೆಳಗೆ ಬಿದ್ದಿದ್ದು, ಇದೇ ವೇಳೆ ಬಸ್ ಚಕ್ರಗಳು ಮಗುವಿನ ಮೇಲೆ ಹರಿದಿದ್ದು, ಪರಿಣಾಮ ಮಗು ತೀವ್ರವಾಗಿ ಗಾಯಗೊಂಡಿದೆ. ಈ ಬಸ್ ಸವದತ್ತಿಯಿಂದ ಬೆಳವಾಡಿ ಕಡೆ ಹೊರಟಿತ್ತು.
ಇದನ್ನೂ ಓದಿ: ಮಂಡ್ಯ ಕುರುಬರ ಸಂಘದಲ್ಲಿ ಹೈಡ್ರಾಮಾ: ಕುರುಬರ ಸಂಘದ ಜಿಲ್ಲಾಧ್ಯಕ್ಷ, ಸಿದ್ದು ಆಪ್ತನಿಗೆ ಮಸಿ ಎರಚಿ ಆಕ್ರೋಶ
ಕೆಳಗೆ ಬಿದ್ದ ಮಗು ಬಸ್ಸಿನ ಮುಂದಿನ ಚಕ್ರದಡಿ ಸಿಲುಕಿದೆ. ಏಕಾಏಕಿ ಬಸ್ಸು ಸಂಚರಿಸಿದ ಹಿನ್ನೆಲೆ ಈ ಅನಾಹುತ ಸಂಭವಿಸಿದ್ದು, ಮಗುವಿನ ಕಾಲಿಗೆ ಗಂಭೀರ ಗಾಯಗಳಾಗಿವೆ. ಸವದತ್ತಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬೋಟ್‌ಗೆ ಏರುವ ವೇಳೆ ಪದ್ಮಾ ನದಿಗುರುಳಿದ ಬಸ್ : 25 ಜನರ ದಾರುಣ ಸಾವು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ