
ಬೆಂಗಳೂರು(ನ.01): ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸಪ್ನ ಬುಕ್ ಹೌಸ್ ನವೆಂಬರ್ ತಿಂಗಳಲ್ಲಿ ಖರೀದಿಸುವ ಪುಸ್ತಕಗಳ ಮೇಲೆ ಶೇ.10-20 ರಿಯಾಯಿತಿ ಜೊತೆಗೆ ಪುಸ್ತಕ ಪ್ರಿಯರಿಗೆ ಕೆಲವು ವಿಶೇಷ ಕೊಡುಗೆ ನೀಡಲಿದೆ.
ಪುಸ್ತಕ ಪ್ರಿಯರಿಗೆ ಸಪ್ನ ಬುಕ್ ಹೌಸ್‌ನ ರಾಜ್ಯದ ಎಲ್ಲ ಶಾಖೆಗಳಲ್ಲಿ ನ. 1-30 ರವರೆಗೆ ಈ ವಿಶೇಷ ರಿಯಾಯಿತಿ ದೊರೆಯಲಿದೆ. ಜೊತೆಗೆ ಒಟ್ಟು 200 ಮೌಲ್ಯದ ಪುಸ್ತಕಗಳ ಖರೀದಿಸುವವರಿಗೆ ಸಪ್ನ ಸದಸ್ಯತ್ವ ಕಾರ್ಡ್ ದೊರೆಯಲಿದೆ. ಈ ಕಾರ್ಡ್ ಪಡೆದವರು ಒಂದು ವರ್ಷ ಪೂರ್ತಿ ಸಪ್ನದ ಯಾವ ಶಾಖೆಯಲ್ಲಾದರೂ ಶೇ.10 ರಷ್ಟು ರಿಯಾಯಿತಿ ದರದಲ್ಲಿ ಪುಸ್ತಕ ಕೊಳ್ಳಬಹುದು.
ಸಪ್ನಾಬುಕ್ ಹೌಸ್ : ಭಾರೀ ಡಿಸ್ಕೌಂಟ್
ವಿಶೇಷ ಪುಸ್ತಕ ಪ್ರದರ್ಶನ ವಿಭಾಗದಲ್ಲಿನ ಜನಪ್ರಿಯ ಕೃತಿಗಳಿಗೆ ಶೇ.15 ರಷ್ಟು ಮತ್ತು ನವೆಂಬರ್ ತಿಂಗಳಲ್ಲಿ ಸಪ್ನ ಪ್ರಕಟಿಸುವ ಎಲ್ಲ ಕನ್ನಡ ಪುಸ್ತಕಗಳ ಮೇಲೆ ಶೇ.20 ರಷ್ಟು ವಿಶೇಷ ರಿಯಾಯಿತಿ ನೀಡುವುದಾಗಿ ಪ್ರಕಟಣೆ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ