ರಾಜ್ಯದಲ್ಲಿ ಇಂದು ಕೊರೋನಾ ಸೋಂಕಿತರಿಗಿಂತ ಗುಣಮುಖರಾದವರ ಸಂಖ್ಯೆಲ್ಲಿ ಸತತ 17ನೇ ದಿನವೂ ಏರಿಕೆಯಾಗಿದೆ. ಇದರಿಂದ ಕೊಂಚ ನೆಮ್ಮದಿ ತಂದಿದೆ.
ಬೆಂಗಳೂರು, (ಅ.31): ಕಳೆದ ಹದಿನೈದು ದಿನಗಳಿಂದ ರಾಜ್ಯದಲ್ಲಿ ಹೊಸ ಕೊರೋನಾ ಸೊಂಕಿನ ಪ್ರಮಾಣದಲ್ಲಿ ಇಳಿಮುಖವಾಗಿದ್ದು, ಇದು ಉತ್ತಮ ಬೆಳವಣಿಗೆಯಾಗಿದೆ.
ಇಂದು (ಶನಿವಾರ) 3014 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದ್ದರೆ, 7468 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
undefined
3 ನೇ ಹಂತದ ಪರೀಕ್ಷೆಗೆ ಬ್ರೇಕ್; ವರ್ಷಾಂತ್ಯದೊಳಗೆ ಕೊರೋನಾ ಲಸಿಕೆ ಡೌಟು?
ಇನ್ನು 7468 ಕೇಸ್‌ನೊಂದಿಗೆ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 823412ಕ್ಕೆ ಏರಿಕೆಯಾಗಿದೆ. ಈ ಪೈಕಿ ಇದುವರೆಗೆ 757208 ಸೋಂಕಿತರು ಗುಣಮುಖರಾಗಿದ್ದು, ಸದ್ಯ 55017 ಸಕ್ರಿಯ ಪ್ರಕರಣಗಳಿವೆ.
ಸಾವಿನ ಪ್ರಮಾಣದಲ್ಲೂ ಇಳಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 28 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಸಾವನ್ನಪ್ಪಿದವರ ಸಂಖ್ಯೆ 11168 ಮಂದಿ.
ಜಿಲ್ಲಾವಾರು ಕೊರೋನಾ ಅಂಕಿ-ಸಂಖ್ಯೆ
ಬಾಗಲಕೋಟೆಯಲ್ಲಿ 24, ಬಳ್ಳಾರಿ 70, ಬೆಳಗಾವಿ 35, ಬೆಂಗಳೂರು ಗ್ರಾಮಾಂತರ 44, ಬೆಂಗಳೂರು ನಗರ 1621, ಬೀದರ್ 3, ಚಾಮರಾಜನಗರ 28, ಚಿಕ್ಕಬಳ್ಳಾಪುರ 33, ಚಿತ್ರದುರ್ಗ 59, ದಕ್ಷಿಣ ಕನ್ನಡ 95, ದಾವಣಗೆರೆ 47, ಧಾರವಾಡ 27, ಗದಗ 23, ಹಾಸನ 173, ಹಾವೇರಿ 29, ಕಲಬುರಗಿ37 , ಕೊಡಗು17 , ಕೋಲಾರ 47, ಕೊಪ್ಪಳ08, ಮಂಡ್ಯ 89, ಮೈಸೂರು 161, ರಾಯಚೂರು 16, ರಾಮನಗರ 12, ಶಿವಮೊಗ್ಗ 18, ತುಮಕೂರು 53, ಉಡುಪಿ 49, ಉತ್ತರ ಕನ್ನಡ 24, ವಿಜಯಪುರ 122,ಯಾದಗಿರಿಯಲ್ಲಿ 20ಪ್ರಕರಣಗಳು ಪತ್ತೆಯಾಗಿವೆ.