ಕಾವೇರಿ ಹೋರಾಟದಲ್ಲಿ ಭಾಗಿಯಾಗದ್ದಕ್ಕೆ ಕನ್ನಡಿಗರ ಕ್ಷಮೆ ಕೋರಿದ ನಟ ಜಗ್ಗೇಶ; ಹೇಳಿದ್ದೇನು?

Published : Sep 30, 2023, 09:01 PM IST
ಕಾವೇರಿ ಹೋರಾಟದಲ್ಲಿ ಭಾಗಿಯಾಗದ್ದಕ್ಕೆ ಕನ್ನಡಿಗರ ಕ್ಷಮೆ ಕೋರಿದ ನಟ ಜಗ್ಗೇಶ; ಹೇಳಿದ್ದೇನು?

ಸಾರಾಂಶ

ಅನಾರೋಗ್ಯದಿಂದಾಗ ಕಾವೇರಿ ಹೋರಾಟದಲ್ಲಿ ಭಾಗವಹಿಸಲು ಆಗಿಲ್ಲ ಎಂದು ನಟ ಹಾಗೂ ಬಿಜೆಪಿ ರಾಜ್ಯಸಭಾ ಸದಸ್ಯ ಜಗ್ಗೇಶ ಕನ್ನಡಿಗರ ಕ್ಷಮೆ ಕೋರಿದರು.

ಬೆಂಗಳೂರು (ಸೆ.30): ಅನಾರೋಗ್ಯದಿಂದಾಗ ಕಾವೇರಿ ಹೋರಾಟದಲ್ಲಿ ಭಾಗವಹಿಸಲು ಆಗಿಲ್ಲ ಎಂದು ನಟ ಹಾಗೂ ಬಿಜೆಪಿ ರಾಜ್ಯಸಭಾ ಸದಸ್ಯ ಜಗ್ಗೇಶ ಕನ್ನಡಿಗರ ಕ್ಷಮೆ ಕೋರಿದರು.

ಕಾವೇರಿ ಹೋರಾಟದಲ್ಲಿ ಭಾಗವಹಿಸಿಲ್ಲ ಎಂದು ಕೆಲವು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆ ಇಂದು ದಿಢೀರ್ ಸುದ್ದಿಗೋಷ್ಠಿ ನಡೆಸಿದ ಅವರು, ಹೋರಾಟಕ್ಕೆ ಬಂದಿಲ್ಲ ಎಂದಮಾತ್ರಕ್ಕೆ ಸ್ವಾಭಿಮಾನಿಯಲ್ಲ ಅಂತಲ್ಲ. ಮೊದಲು ಕಾವೇರಿ ನದಿಯ ಇತಿಹಾಸ ಎಲ್ಲರೂ ಅರಿತುಕೊಳ್ಳಬೇಕು. ಅಂದು ಮೈಸೂರು ಮಹಾರಾಜರು ಕಾವೇರಿ ನದಿಗೆ ಚೆಕ್ ಪಾಯಿಂಟ್ ನಿರ್ಮಿಸಿದ್ದರು. ಡ್ಯಾಂ ಕಟ್ಟಲು ಮುಂದಾದಾಗ ತಮಿಳರು ತಡೆಯಲು ಬಂದಿದ್ದರು. ಅದೇ ಮೆಟ್ಟೂರು ಡ್ಯಾಂ ಆರು ವರ್ಷದಲ್ಲಿ ಕಟ್ಟಿಕೊಂಡರು. ಅದರೆ ನಮಗೆ 20 ವರ್ಷ ಬೇಕಾಯಿತು. ವಿಪರ್ಯಾಸ ನೋಡಿ ಕಾವೇರಿ ನಮ್ಮವಳು, ಹುಟ್ಟೋದು ಕರ್ನಾಟಕದಲ್ಲೇ, ಹರಿಯೋದು ಕರ್ನಾಟಕದಲ್ಲೇ ಆದರೂ ಹೆಚ್ಚು ಬಳಕೆಯಾಗ್ತಿರೋದು ತಮಿಳನಾಡಿಗೆ ಎಂದು ಬೇಸರ ವ್ಯಕ್ತಪಡಿಸಿದರು.

ನಟ Jaggesh ದಿಢೀರ್ ಆಸ್ಪತ್ರೆಗೆ ದಾಖಲು: ಆತಂಕ ಹುಟ್ಟಿಸಿದ ನವರಸ ನಾಯಕನ ಪೋಟೋಸ್!

ಸೆ.29 ಕನ್ನಡ ಸಂಘಟನೆಗಳು ಕಾವೇರಿ ನೀರಿಗಾಗಿ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದರು. ಕರ್ನಾಟಕ ಬಂದ್‌ಗೆ ಕರ್ನಾಟಕ ಚಲನಚಿತ್ರೋದ್ಯಮದ ಕಲಾವಿದರು ಶಿವರಾಜಕುಮಾರ, ದರ್ಶನ್, ದ್ರುವ ಸರ್ಜ್ ಅನೇಕ ಹಿರಿಯ ಕಲಾವಿದರು, ನಟಿಯರು ಸಾಥ್ ನೀಡಿದ್ದರು. ಆದರೆ ಜಗ್ಗೇಶ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಟ್ವೀಟರ್ ನಲ್ಲಿ ಸಿಟಿ ಸ್ಕ್ಯಾನ್ ಪರೀಕ್ಷೆ ಮಾಡಿಸುವ ಫೋಟೊಗಳನ್ನು ಹಂಚಿಕೊಂಡಿದ್ದರು. ಅಂದು ಈ ಚಿತ್ರಗಳು ಎಲ್ಲೆಡೆ ವೈರಲ್ ಆಗಿತ್ತು. ಕೆಲವರು ಇದೇ ದಿನ ಅನಾರೋಗ್ಯ ಆಗಬೇಕಿತ್ತಾ? ಎಂದರು. ಇನ್ನು ಕೆಲವರು, ಸಿಟಿ ಸ್ಕ್ಯಾನ್‌ಗೆ ಅದರದೇ ಡ್ರೆಸ್ ಕೋಡ್ ಇರುತ್ತೆ ಆದರೆ ಜಗ್ಗೇಶ್ ಅವರು ಉಟ್ಟಬಟ್ಟೆಯಲ್ಲಿ ಸಿಟಿ ಸ್ಕ್ಯಾನ್ ಮಾಡಿಸ್ಕೊಂಡಿದ್ದು ಹೇಗೆ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಇದೀಗ ನಟ ಜಗ್ಗೇಶ್ ಅನಾರೋಗ್ಯದಲ್ಲೂ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.  

ಯುಟ್ಯೂಬ್‌ನಲ್ಲಿ ಮಿಲಿಯನ್ ವೀಕ್ಷಣೆ, 8 ಲಕ್ಷಕ್ಕೆ ಸಿನಿಮಾ ಕೊಟ್ಟಿದ್ದೀನಿ ಡಬಲ್ ಹಣ ಮಾಡ್ಕೊಂಡಿದ್ದಾರೆ: ಜಗ್ಗೇಶ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ
Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ