
ವರದಿ: ಲಿಂಗೇಶ್ ಮರಕಲೆ, ಏಷ್ಯಾನೆಟ್ ಸುವರ್ಣ ನ್ಯೂಸ್, ಬೀದರ್
ಬೀದರ್ (ಸೆ.30): 2024 ಲೋಕಸಭೆ ಚುನಾವಣೆಯಲ್ಲಿ ಬೀದರ್ ಕ್ಷೇತ್ರದಿಂದ ಚುನಾವಣೆ ಕಣಕ್ಕಿಳಿಯಲು ಶ್ರೀ ಡಾ.ಶಂಭುಲಿಂಗ ಶಿವಾಚಾರ್ಯ ಸ್ವಾಮಿಜಿಗಳು ಅಪೇಕ್ಷೆ ವ್ಯಕ್ತಪಡಿಸಿದಾರೆ. ಈಗಾಗಲೇ ಬೀದರ್ ಲೋಕಸಭೆ ಕ್ಷೇತ್ರದ ಸಂಸದ, ಕೇಂದ್ರ ಸಚಿವ ಭಗವಂತ ಖೂಬಾ ಅವರ ವಿರುದ್ಧ ಸ್ವಪಕ್ಷದವರಿಂದಲೇ ವಿರೋಧದ ನಡುವೆ ಆಕಾಂಕ್ಷಿಗಳ ಪಟ್ಟಿ ಕೂಡ ಹೆಚ್ಚಾಗುತ್ತಿದೆ,. ಬಿಜೆಪಿ ಪಕ್ಷ ಒಂದು ವೇಳೆ ಅಭ್ಯರ್ಥಿ ಬದಲಾಯಿವುದೇ ಆದಲ್ಲಿ ನಾನು ಕೂಡ ಬಿಜೆಪಿ ಪ್ರಭಲ ಟಿಕೆಟ್ ಆಕಾಂಕ್ಷಿಯಾಗಿದ್ದೆನೆಂದು ಹಾವಗಿ ಮಠದ ಶ್ರೀ ಡಾ.ಶಂಭುಲಿಂಗ ಸ್ವಾಮಿಗಳು ಹೇಳಿದಾರೆ..
ಔರಾದ್ ತಾಲೂಕಿನ ಡೊಂಗಾವ್ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು ಸನಾತನ ಧರ್ಮಕ್ಕಾಗಿ ಮಠಾಧಿಶರು ರಾಜಕೀಯಕ್ಕೆ ಬರಬೇಕಾದ ಅನಿವಾರ್ಯ ಇದೆ,.. ಈಗಾಗಲೇ ತಮಿಳುನಾಡಿನ ಸಿಎಂ ಎಂ.ಕೆ.ಸ್ಟಾಲಿನ್ ಮಗ ಉದಯನಿಧಿ ಸ್ಟಾಲಿನ್ ಸನತಾನದ ಧರ್ಮ ಢೆಂಘಿ, ಎಚ್ಐವಿ ಅಂತೆಲ್ಲ ಅಂದಿದ್ದು ಎಲ್ಲರಿಗೂ ಗೊತ್ತಿದೆ,. ಕೋಟ್ಯಾಂತರ ಜನ ಇರುವ ನಮ್ಮ ಸನಾತನ ಧರ್ಮಕ್ಕೆ ಈ ರೀತಿ ಪ್ರಸಂಗ ಬಂದಾಗ ನಾವು ರಾಜಕೀಯಕ್ಮೆ ಬರಬೇಕಾಗುತ್ತದೆ,.. ಹಿಂದೂ ಧರ್ಮವನ್ನ ಹಾಳು ಮಾಡಲು ಅನೇಕರು ಪ್ರಯತ್ನ ಮಾಡುತ್ತಿದ್ದಾರೆ ಅಂತಹವರನ್ನ ಸದೆಬಡಿಯಬೇಕಾದರೇ ನಾವು ಕಾವಿಧಾರಿಗಳು ರಾಜಕೀಯಕ್ಕೆ ಬರಬೇಕಾಗಿದೆ,.
ದೇಶ ಉಳಿಯಬೇಕಾದರೇ ಸರ್ವರನ್ನ ಸಮಾನವಾಗಿ ಕಾಣುವ ಸನಾತನ ಧರ್ಮ ಉಳಿಯಬೇಕಾಗಿದೆ ಹೀಗಾಗಿ ಧರ್ಮದ ಉಳಿವಿಗಾಗಿ ಮಠಾಧೀಶರು ರಾಜಕೀಯಕ್ಕೆ ಬರುವುದು ಅನಿವಾರ್ಯವಾಗಿದೆ ಎಂದ ಸ್ವಾಮಿಜಿ,,. ಈಗಾಗಲೇ ಕೇಂದ್ರದ ಹಲವು ನಾಯಕರು, ಆರ್ಎಸ್ಎಸ್ ಮುಖಂಡರು, ವಿಎಚ್ಪಿ ಸೇರಿದಂತೆ ಹಲವರಿಗೆ ಭೇಟಿ ಮಾಡಲಾಗಿದೆ ಎಲ್ಲರೂ ನಮಗೆ ಒಳ್ಳೆಯ ರೆಸ್ಪಾನ್ ಮಾಡುತ್ತಿದ್ದಾರೆಂದರು,.
ಭಗವಂತ ಖೂಬಾಗೆ ವಿರೋಧ ಮಾಡೋದಿಲ್ಲ: ಭಗವಂತ ಖೂಬಾ ಅವರು ನಮ್ಮವರೆ ಇದಾರೆ ಅವರಿಗೆ ಟಿಕೆಟ್ ಸಿಗಲಿಲ್ಲ ಅಂದ್ರೆ ನಮಗೆ ಸಿಗಬೇಕೆಂದು ಬಿಜೆಪಿ ಹೈಕಮಾಂಡ್ಗೆ ಕೇಳಿಕೊಳ್ಳುತ್ತೇವೆ,. ಇನ್ನು ಟಿಕೆಟ್ ಸಿಗದೇ ಇರುವ ಪಕ್ಷದಲ್ಲಿ ಬಿಜೆಪಿ ಬಿಟ್ಟರೇ ನಾವು ಬೇರೆ ಪಕ್ಷಕ್ಕೆ ಬೆಂಬಲ ಕೊಡುವುದಿಲ್ಲ ಯೋಗಿ ಆದಿತ್ಯನಾಥ ಅವರ ಮಾದರಿಯಲ್ಲಿ ಅಭಿವೃದ್ಧಿ ಮಾಡಬೇಕೆಂಬ ಅಪೇಕ್ಷೆ ಇದೆ, ನಮಗೆ ಅವಕಾಶ ಕೊಟ್ಟಿದರೇ ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಮಾಡುತ್ತೆವೆಂದು ಶಿವಾನಂದ ಶಿವಾಚಾರ್ಯರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀ ಡಾ.ಶಂಭುಲಿಂಗ ಶಿವಾಚಾರ್ಯ ಸ್ವಾಮಿಜಿಗಳಿಗೆ ಗಡಿ ಗೌಡಗಾಂವ್ ಸ್ವಾಮಿಜಿ, ಚನ್ನಮಲ್ಲ ಸ್ವಾಮಿಜಿ ಹುಡುಗಿ, ಸಿದ್ದಲಿಂಗ ಶಿವಾಚಾರ್ಯ ಚಿಟ್ಟಾ ಸೇರಿದಂತೆ ಹಲವರು ಸಾಥ್ ನೀಡಿದರು,. ಇನ್ನು ಜಿಲ್ಲೆಯ ಅನೇಕ ಮಠಾಧಿಶರು ಇವರಿಗೆ ಬೆಂಬಲಿಸುವುದಾಗಿ ಸೂಚಿಸಿದಾರೆಂದು ಹೇಳಿದ ಸ್ವಾಮಿಜಿ ಮುಂದಿನ ದಿನಗಳಲ್ಲಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ಮೋದಿ ಅವರಿಗೂ ಭೇಟಿ ಮಾಡಿ ಲೋಕಸಭೆ ಟಿಕೆಟ್ ಕೇಳುವುದಾಗಿ ಹೇಳಿದರು,
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ